Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ನಿದ್ರಾಹೀನತೆ ಆರೋಗ್ಯ ಸಮಸ್ಯೆಗೆ ಕಾರಣ ಹೇಗೆ?
ತಡರಾತ್ರಿಯವರೆಗೆ ನಿದ್ದೆಗೆಡುವುದು ಇತ್ತೀಚಿಗೆ ಫ್ಯಾಶನ್ ಆಗಿಬಿಟ್ಟಿದೆ. ಬೆಳಗ್ಗಿನ ಸಮಯದ ಸ್ವಲ್ಪ ಕಾಲಾವಕಾಶ ನಿಮಗೆ ಸಾಲುತ್ತದೆ ಹಾಗೂ ಕಚೇರಿಗೆ ಹೋಗುವ ಧಾವಂತದಿಂದ ಕೆಲವು ಗಂಟೆಗಳ ನಿದ್ದೆಯಲ್ಲಿ ಆ ದಿನವನ್ನು ದೂಡುತ್ತೀರಿ. ಕೆಲವೊಮ್ಮೆ ಕಚೇರಿ ಕೆಲಸಗಳೂ ಕೂಡ ನಿದ್ದೆಗೆಡಲು ನಿಮ್ಮನ್ನು ಪ್ರೇರೇಪಿಸುತ್ತವೆ. ಅಂತೂ ಇಂತೂ ನಿದ್ದೆಗೆಟ್ಟು ಬೆಳಗ್ಗಿನ ವೇಳೆಯಲ್ಲಿ ಸ್ವಲ್ಪ ಹೊತ್ತು ಮಲಗುವುದು ಒಂದು ನಿರಂತರ ಪ್ರಕ್ರಿಯೆ ಆಗಿಬಿಟ್ಟಿರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿದ್ದೆ ಮಾತ್ರೆಗಿಂತ ನಿದ್ದೆ ಮಾಡದಿರುವುದೆ ಲೇಸು!
ರಾತ್ರಿಪೂರ್ತಿ ಟೀವಿಯ ಎದುರು ಕುಳಿತುಕೊಂಡು ನಿಮ್ಮಷ್ಟಕ್ಕೆ ಕಾರ್ಯಕ್ರಮದ ಸವಿಯನ್ನು ಸವಿಯುತ್ತಿರುವಿರಿ ಎಂದಾದರೆ, ನಿಮ್ಮ ಈ ದುರಾಭ್ಯಾಸವನ್ನು ಕೂಡಲೇ ಬದಲಾಯಿಸಿ. ಪ್ರತೀ ದಿನ ಮಧ್ಯರಾತ್ರಿಯಾಗದೇ ಮಲಗುವ ಕ್ರಮವನ್ನು ರೂಢಿಸಿಕೊಳ್ಳಲಾಗದವರು, ಹೆಕ್ಟೀಕ್ ಒತ್ತಡದಲ್ಲಿ ಕೆಲಸಮಾಡುವವರು ನಿಮ್ಮ ಬದುಕಿನ ಗುರಿಗಳನ್ನು ಮತ್ತೊಮ್ಮೆ ನೀವು ಆಲೋಚಿಸಬೇಕು. ರಾತ್ರಿ ವೇಳೆ 6 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದು ಒಂದು ಆಯ್ಕೆಯಲ್ಲ. ಸೈದ್ಧಾಂತಿಕವಾಗಿ ಒಂದು ದಿನದಲ್ಲಿ 8 ಗಂಟೆಗಳ ಕಾಲ ನಿದ್ರೆಯನ್ನು ನೀವು ಪಡೆಯುತ್ತೀರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಲಗುವಾಗ ಬ್ರಾ ಧರಿಸದೇ ಇರಲು ಕಾರಣಗಳು
ಪ್ರತೀ ಬಾರಿ ತಡರಾತ್ರಿ ನಿದ್ದೆಮಾಡಿ ಸಿಡಿಯುವ ತಲೆಯೊಂದಿಗೆ ನಿಮ್ಮ ಬೆಳಗನ್ನು ನೀವು ಪ್ರಾರಂಭಿಸುತ್ತೀರಿ ಎಂದಾದರೆ, ನಿಮ್ಮ ಮೆದುಳು ಸಣ್ಣನೆಯ ಆಘಾತದಿಂದ ಬಳಲುತ್ತಿದೆ ಎಂದರ್ಥ. ರಾತ್ರಿ ವೇಳೆಯಲ್ಲಿ ನೀವು ಪಡೆಯುವ ಸೂಕ್ತ ವಿಶ್ರಾಂತಿ ನಿಮ್ಮ ಮೆದುಳಿನ ಸಾಮಾನ್ಯ ಸ್ಥಿತಿಗೆ ಕಾರಣವಾಗುತ್ತದೆ. ನಿಮ್ಮ ಮೆದುಳ ಕೋಶಗಳಿಗೆ ನೀವು ಉಂಟುಮಾಡುತ್ತಿರುವ ಹಾನಿಯನ್ನು ಕುರಿತು ಒಮ್ಮೆ ಆಲೋಚಿಸಿ.
ತಡರಾತ್ರಿ ನಿದ್ದೆ ಮಾಡುವುದು ಮತ್ತು ಸಾಕಷ್ಟು ನಿದ್ದೆ ಇಲ್ಲದಿರುವುದರಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ. ನೀವು ಇದರತ್ತ ಕಣ್ಣುಹಾಯಿಸಲೇಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಹಲ್ಲು ಕಚ್ಚಿದರೆ ಮತ್ತೊಬ್ಬರ ನಿದ್ದೆ ಹಾಳು!

ತೂಕ ಹೆಚ್ಚಳ;
ಕಡಿಮೆ ನಿದ್ರೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ರಾತ್ರಿ ಕನಿಷ್ಟಪಕ್ಷ 6 ಗಂಟೆಗಳ ನಿದ್ದೆಯನ್ನು ನೀವು ಮಾಡಿಲ್ಲದಿದ್ದಲ್ಲಿ, ನಿಮ್ಮ ಚಯಾಪಚಯ ಕ್ರಿಯೆ ಭಗ್ನಗೊಳ್ಳುತ್ತದೆ. ನೀವು ರಾತ್ರಿ ಹೆಚ್ಚು ಹೊತ್ತು ಮಾಡಿದಂತೆ, ಹೆಚ್ಚು ಕೊಬ್ಬಿನ ಆಹಾರಗಳನ್ನು ತಿನ್ನುವ ಬಯಕೆ ಹೆಚ್ಚಾಗುತ್ತದೆ.

ವಾರಾಂತ್ಯದ ರೋಗನಿರೋಧಕ ವ್ಯವಸ್ಥೆ:
ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವ ಬಿಳಿ ರಕ್ತ ಕೋಶಗಳನ್ನು ರಾತ್ರಿಯ ಜಾಗರಣೆ ಭಗ್ನಗೊಳಿಸುತ್ತದೆ. ಆದ್ದರಿಂದ ನಿದ್ದೆಗೆಡುವುದು ಎಂದರೆ ವಾರಾಂತ್ಯದ ರೋಗನಿರೋಧಕವಾಗಿದೆ.

ವಿಳಂಬ ನಿದ್ರಾ ಲಕ್ಷಣಗಳು:
ಪ್ರತೀ ದಿನ ತಡವಾಗಿ ನಿದ್ರೆ ಮಾಡುವವರು ನೀವಾಗಿದ್ದರೆ, ನಿಮಗೆ ಎಂದಿಗೂ ಬೇಗನೇ ನಿದ್ದೆ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ನೀವು ತಲುಪಬಹುದು. ಇದನ್ನು ವಿಳಂಬ ನಿದ್ರಾ ಲಕ್ಷಣಗಳು ಎಂದು ಕರೆಯುತ್ತಾರೆ.

ಹೃದಯ ರೋಗಗಳು;
ತಡವಾಗಿ ನಿದ್ರೆ ಮಾಡುವುದು ನಿಮಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಂದೊಡ್ಡಬಹುದು. ಈ ದಿನಗಳಲ್ಲಿ ತಡವಾಗಿ ನಿದ್ರೆ ಮಾಡುವವರನ್ನು ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದು ಸಾಮಾನ್ಯವಾಗಿದೆ.

ಮಧುಮೇಹ;
ತಡವಾಗಿ ನಿದ್ರೆ ಮಾಡುವುದು ನಿಮ್ಮ ದೇಹದ ಹಾರ್ಮೋನ್ ನಿಯಂತ್ರಣವನ್ನು ಹಾಳುಗೆಡವುತ್ತದೆ. ನಿಮ್ಮ ದೇಹ ಉತ್ಪಾದಿಸುವ ಇನ್ಸುಲಿನ್ ಪ್ರಮಾಣವು ಕಡಿಮೆಯಾದಂತೆ ನಿಮ್ಮನ್ನು ಗ್ಲುಕೋಸ್ ಅಸಹಿಷ್ಣುತರನ್ನಾಗಿ ಮಾಡಬಹುದು. ಇದರ ಫಲಿತಾಂಶವೇ ಮಧುಮೇಹ.

ಸ್ಟ್ರೋಕ್:
ನಾವು ತಡವಾಗಿ ನಿದ್ರೆ ಮಾಡಿದ್ದರೂ ಕೆಲವರು ಬೇಗನೇ ಏಳುಬ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದ್ದರಿಂದ ತಡವಾಗಿ ನಿದ್ರೆ ಮಾಡುವುದು ಕಡಿಮೆ ವಿಶ್ರಾಂತಿಯನ್ನು ನಿಮ್ಮ ದೇಹಕ್ಕೆ ನೀಡುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು ಹಾಕುತ್ತದೆ ಮತ್ತು ಇದರಿಂದ ಹೃದಯ ಬಂಧನಗಳು ಉಂಟಾಗುತ್ತದೆ.

ಅಧಿಕ ರಕ್ತದೊತ್ತಡ:
ನೀವು ಹೆಚ್ಚಿನ ಪ್ರಮಾಣದ ವಿಶ್ರಾಂತಿಯನ್ನು ಪಡೆಯಲಿಲ್ಲ ಎಂದಲ್ಲಿ ದಿನವಿಡೀ ನೀವು ಒತ್ತಡದಿಂದ ಕೂಡಿರುತ್ತೀರಿ.ಇದು ಸಾಮಾನ್ಯವಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ತಲೆನೋವು:
ಪ್ರತೀ ದಿನ ನೀವು ತಡವಾಗಿ ಮಲಗಿ ಬೆಳಗ್ಗೆ ಎದ್ದಾಗ ತಲೆನೋವು ಅಮಲು ಮುಂತಾದ ಅನಾರೋಗ್ಯ ನಿಮ್ಮನ್ನು ಕಾಡುತ್ತಿರುತ್ತದೆ. ನಿದ್ರಾಹೀನತೆಯು ನಿಮ್ಮನ್ನು ಮೆದುಳು ಹಾನಿಯಂತಹ ಮಾರಣಾಂತಿಕ ಅಪಾಯವನ್ನು ತಂದೊಡ್ಡಬಹುದು.

ವಾರಾಂತ್ಯದ ಅನುವರ್ತನಗಳು:
ಹೆಚ್ಚು ಸಮಯದವರೆಗೆ ನಿದ್ರೆ ಬಿಡುವುದು ಮತ್ತು ತಡವಾಗಿ ಮಲಗುವುದು ನಿಮ್ಮ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮ ನೈಸರ್ಗಿಕ ಅನುವರ್ತನ ವ್ಯವಸ್ಥೆಯನ್ನು ಬಲಹೀನಗೊಳಿಸಬಹುದು.

ಕಡಿಮೆಯಾಗುವ ನಿರೀಕ್ಷಿತ ಜೀವಿತಾವಧಿ:
ಈ ಎಲ್ಲಾ ಅಂಶಗಳು ನಿರೀಕ್ಷಿತ ಜೀವಿತಾವಧಿಯನ್ನು ಕಡಿಮೆಗೊಳಿಸಬಹುದು. ನೀವು ಆರೋಗ್ಯಕರ ಜೀವನಶೈಲಿಯನ್ನು ಅನುಕರಿಸದಿದ್ದರೆ. ನಿಮ್ಮ ಜೀವಿತಾವಧಿಯನ್ನು ನೀವು ಸಂಪೂರ್ಣಗೊಳಿಸುವುದಿಲ್ಲ.



Click it and Unblock the Notifications