Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದೀರಾ?
ದೇಹದ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ಕೊಬ್ಬಿನಾಂಶವೇ ಕೊಲೆಸ್ಟ್ರಾಲ್. ಇದು ಹಾರ್ಮೋನ್‌ನ ಉತ್ಪಾದನೆ ಮತ್ತು ಅಂಗಗಳ ಚಟುವಟಿಕೆಗೆ ಕಾರಣವಾಗಿದೆ. ಇದರಿಂದ ದೇಹದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಕೊಲೆಸ್ಟ್ರಾಲ್ ಬೇಕಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ 30 ಹರೆಯದ ಬಳಿಕ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ಈ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಕೊಬ್ಬು ಇಳಿಸುವ ಮುಖ್ಯ 10 ಆಹಾರಗಳು
ಹಾಗಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೆಲವೊಂದು ಆಹಾರಗಳಿವೆ, ಅವುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ಇರುವವರು ಔಷಧಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಈ ಕೆಳಗಿನ ಆಹಾರಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.
ದಿನನಿತ್ಯದ ಜೀವನದಲ್ಲಿ ಸೇವಿಸುವ ಆಹಾರಗಳೆಲ್ಲವೂ ಆರೋಗ್ಯಯುಕ್ತವಾಗಿದ್ದರೆ ಮಾತ್ರ ನಾವು ದಿನವೂ ನಮ್ಮ ಜೀವನಕ್ರಮದಿಂದ ಉಂಟಾಗುವ ಹಲವು ರೋಗಗಳಿಂದ ದೂರವಿರಬಹುದು. ಆದ್ದರಿಂದ ನೀವು ಸೇವಿಸುವ ದಿನನಿತ್ಯದ ಆಹಾರ ನಿಮ್ಮ ಉತ್ತಮ ಆಯ್ಕೆಯಾಗಿರಲಿ ಹಾಗೂ ಆರೋಗ್ಯಕರವಾಗಿರಲಿ.
ಕೊಲೆಸ್ಟ್ರಾಲ್ ಇರುವವರು ಔಷಧಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಈ ಕೆಳಗಿನ ಆಹಾರಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.

ಬೆಂಡೆಕಾಯಿ:
ಮಧುಮೇಹಿಗಳು ಮತ್ತು ಕೊಲೆಸ್ಟ್ರಾಲ್ ಇರುವವರು ಬೆಂಡೆಕಾಯಿಯನ್ನು ತಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಕಾಯಿಲೆ ಹೆಚ್ಚಾಗದಂತೆ ತಡೆಯಬಹುದು.

ರೆಡ್ ವೈನ್:
ರೆಡ್ ವೈನ್ ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಯುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಚಾಕಲೇಟ್:
ಡಾರ್ಕ್ ಚಾಕಲೇಟ್ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

ಬೀನ್ಸ್ :
ಬೀನ್ಸ್ ನಲ್ಲಿ ನಾರಿನಂಶ ಅಧಿಕವಿರುವುದರಿಂದ ಇದನ್ನು ಬೇಯಿಸಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡಬಹುದು.

ಕರಿ ಮೆಣಸು:
ಕರಿ ಮೆಣಸು ಕೂಡ ಬೆಳ್ಳುಳ್ಳಿಯಷ್ಟೇ ಪ್ರಯೋಜನಕಾರಿ.

ಮಾರ್ಗ್ರೈನ್:
ಮಾರ್ಗ್ರೈನ್ ಕ್ಯಾಲೋರಿ ಕಡಿಮೆ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತ ಪರಿಚಲನೆ ಸರಿಯಾಗಿ ನಡೆಯಲು ಇದನ್ನು ತಿನ್ನುವುದು ಒಳ್ಳೆಯದು.

ಬೆಳ್ಳುಳ್ಳಿ:
ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬೇಡದ ಕೊಬ್ಬಿನಂಶವನ್ನು ಬೇಗನೆ ಕರಗಿಸುತ್ತದೆ. ದಿನಾ ಬೆಳಗ್ಗೆ ಒಂದು ಎಸಳು ಬೆಳ್ಳುಳ್ಳಿ ತಿನ್ನಿ, ಒಳ್ಳೆಯದು.

ಸೋಯಾ ಉತ್ಪನ್ನ:
ಹಾಲಿನ ಬದಲು ಸೋಯಾ ಹಾಲು ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.

ಸೊಪ್ಪು
ಸೊಪ್ಪನ್ನು ಹೆಚ್ಚಾಗಿ ತಿನ್ನಿ. ಸೊಪ್ಪು ದೇಹದಲ್ಲಿ ಕಬ್ಬಿಣದಂಶ ಹೆಚ್ಚು ರಕ್ತ ಕಣಗಳ ಉತ್ಪತ್ತಿಯನ್ನು ಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುತ್ತದೆ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಇರುವ ಹಣ್ಣುಗಳು ಒಟ್ಟು ಮೊತ್ತ ಆರೋಗ್ಯದ ರಕ್ಷಣೆಗೆ ಅವಶ್ಯಕ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ.

ರಾಗಿ ತುಂಬಾ ಒಳ್ಳೆಯದು:
ಕೊಲೆಸ್ಟ್ರಾಲ್ ಕಡಿಮೆ ಮಾಡಲು ರಾಗಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ತುಂಬಿ, ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.

ಓಟ್ಸ್:
ಓಟ್ಸ್ ಕೇವಲ ಸ್ಲಿಮ್ ಫಿಗರ್ ನೀಡುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಈರುಳ್ಳಿ:
ಈರುಳ್ಳಿಯನ್ನು ಹೆಚ್ಚಾಗಿಯೇ ತಿನ್ನಿ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಟೀ:
ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಹಾಲು ಹಾಕಿದ ಟೀ ಬದಲು ಬ್ಲ್ಯಾಕ್ ಟೀ ಕುಡಿಯವುದು ಒಳ್ಳೆಯದು.

ನಟ್ಸ್:
ಆರೋಗ್ಯಕರ ಸ್ನ್ಯಾಕ್ಸ್ ತಿನ್ನಬೇಕು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮುಟ್ಟಲೇಬಾರದು. ನಟ್ಸ್, ಬಾದಾಮಿ ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸಬಹುದು.

ಸೇಬು:
ಸೇಬಿನಲ್ಲಿ ಪೆಕ್ಟಿನ್ ಎಂಬ ಅಂಶವಿದ್ದು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಮೀನು:
ಮೀನಿನಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು, ಇದನ್ನು ತಿಂದಾಗ ದೇಹದಲ್ಲಿ ಒಳ್ಳೆಯ ಕೊಬ್ಬಿನಂಶ ಹೆಚ್ಚಾಗಿ ಕೆಟ್ಟ ಕೊಬ್ಬಿನಂಶ ಕಡಿಮೆಯಾಗುವುದು.

ಬದನೆಕಾಯಿ:
ಕೊಲೆಸ್ಟ್ರಾಲ್ ಇರುವವರು ತಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಬದನೆಕಾಯಿಯ ಸಾರು ತಿನ್ನುವುದು ಒಳ್ಳೆಯದು( ಪಲ್ಯ ತಿನ್ನಬೇಡಿ).

ಬಾರ್ಲಿ:
ಬಾರ್ಲಿಯಲ್ಲಿ ನಾರಿನಂಶ ಅತ್ಯಧಿಕವಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

ಆಲಿವ್ ಎಣ್ಣೆ :
ಈ ತೈಲ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ . ಇದು ಉತ್ತಮ ಕೊಲೆಸ್ಟ್ರಾರಾಲ್ ಮಟ್ಟವನ್ನು ಕಡಿಮೆ ಮಾಡದೆ,ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (triglycerides) ಗಳನ್ನು ಕಡಿಮೆ ಮಾಡುವ ಮೊನೊ ಬಹು ಅಪರ್ಯಾಪ್ತ ಮೇದಸ್ಸಿನ ಆಮ್ಲಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಅಡಿಗೆಯಲ್ಲಿ ಬೇರೆ ಎಣ್ಣೆಗಳ ಬದಲಿಗೆ ಆಲೀವ್ ಎಣ್ಣೆಯನ್ನೇ ಬಳಸುವುದು ಉತ್ತಮ.

ಪಾಲಾಕ್ ಸೊಪ್ಪು,
ಕ್ಯಾನ್ಸರ್ , ಹೃದ್ರೋಗ ಹಾಗೂ ಆಸ್ಟಿಯೊಪೊರೋಸಿಸ್‌ನ್ನು ದೂರವಿಡುವ ಸುಮಾರು 13 ಸುಮಾರು ಫ್ಲೇವನಾಯ್ಡ್ ಸಂಯುಕ್ತಗಳನ್ನು ಹೊಂದಿದೆ ಎಂದು ನಂಬಲಾಗಿದೆ .ದಿನದಲ್ಲಿ ಸೇವಿಸುವ ಅರ್ಧ ಕಪ್ ಈ ಲ್ಯೂಟೀನ್ ಭರಿತ ಆಹಾರಹೃದಯಾಘಾತ ವಿರುದ್ಧ ನಮಗೆ ಕಾವಲಾಗಿ ನಿಲ್ಲುತ್ತದೆ.

ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು:
ಅಧಿಕ ತೂಕವಿರುವವರು, ಒಬೆಸಿಟಿ ಸಮಸ್ಯೆ ಇರುವವರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಕೊಲೆಸ್ಟ್ರಾಲ್ ಮಾತ್ರವಲ್ಲ ಇತರ ಸಮಸ್ಯೆ ಕೂಡ ಕಂಡು ಬರಬಹುದು. ಆದ್ದರಿಂದ ನಿಮ್ಮ ದೇಹದ ತೂಕ ಸರಿಯಾಗಿರುವಂತೆ ನೋಡಿಕೊಳ್ಳಿ.

ಮದ್ಯ:
ಮದ್ಯ ಬದಲು ವೈನ್, ಬೀರ್ ಇವುಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಮದ್ಯ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋಗುತ್ತದೆ.

ಎಣ್ಣೆಯಲ್ಲಿ ಕರಿದ ತಿಂಡಿಗಳು:
ಎಣ್ಣೆಯಲ್ಲಿ ಕರಿದ ತಿಂಡಿಗಳು ತಿನ್ನಲು ರುಚಿಕರವಾಗಿರುತ್ತದೆ. ಆದರೆ ಎಣ್ಣೆಯಲ್ಲಿ ಕರಿದಂತಹ ತಿಂಡಿಗಳನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಆರೋಗ್ಯದ ದೃಷ್ಟಿಯಿಂದ ಬಾಯಿ ರುಚಿಗೆ ಸ್ವಲ್ಪ ಕಡಿವಾಣ ಹಾಕಬೇಕಾಗುತ್ತದೆ.

ವ್ಯಾಯಾಮ:
ಕೆಲವರು ನಾನೇನು ದಪ್ಪವಿಲ್ಲ, ನಾನೇಕೆ ವ್ಯಾಯಾಮ ಮಾಡಬೇಕು ಅನ್ನುವುದನ್ನು ನೀವು ಕೇಳಿರಬಹುದು. ದಪ್ಪವಿರಲಿ ಸಣ್ಣಗಿರಲಿ ವ್ಯಾಯಾಮ ಮಾಡಿದರೆ ದೇಹವು ಗಟ್ಟಿಮುಟ್ಟಾಗುತ್ತದೆ ಹಾಗೂ ದೇಹದಲ್ಲಿ ಅಧಿಕ ಕೊಬ್ಬಿನಂಶ ನಿಲ್ಲದಂತೆ ನೋಡಿಕೊಳ್ಳುತ್ತದೆ. ಪ್ರತಿದಿನ 30 ನಿಮಿಷ ಕಾಲ ವ್ಯಾಯಾಮ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ.

ತಂಬಾಕು:
ತಂಬಾಕು ಸೇವನೆ ಹಾಗೂ ಧೂಮಪಾನ ಅಭ್ಯಾಸವು ಬಾಯಿ ಹಾಗೂ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ತಂಬಾಕಿನಲ್ಲಿರುವ ಕಾರ್ಬನ್ ಮಾನೋಕ್ಷೈಡ್ ಅಂಶವು ದೇಹದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚು ಮಾಡುತ್ತದೆ.

ತಿನ್ನುವ ಕ್ರಮ:
ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, 3-5 ಬಾರಿ ತರಕಾರಿಗಳು, 2-4 ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ.

ಸರಿಯಾದ ಪ್ರಮಾಣದಲ್ಲಿ ತಿನ್ನಿ:
ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಕೇವಲ ಪಥ್ಯಾಹಾರಗಳನ್ನು ಸೇರಿಸುವುದು ಅಥವಾ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಮಾತ್ರ ಸಾಲುವುದಿಲ್ಲ. ಇದರ ಜೊತೆಗೆ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದೂ ಕೂಡ ಮುಖ್ಯವಾಗುತ್ತದೆ. ಆಹಾರ ಪದಾರ್ಥಗಳನ್ನು ತಿನ್ನುವ ಮುಂಚೆ ಆಯಾ ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೇವಿಸಬೇಕು.

ಮೀನು ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವ ಮಾಂಸವನ್ನು ಸೇವಿಸಿ:
ಕೊಲೆಸ್ಟ್ರಾಲ್ ನಿಯಂತ್ರಿಸುವ ಪಥ್ಯದಲ್ಲಿ ಮೀನಿನ ಪದಾರ್ಥಗಳು ಸೇರಿದ್ದರೆ ಒಳ್ಳೆಯದು. ಕಾಡ್, ಸಲ್ಮಾನ್ ಮತ್ತು ಟ್ಯುನಾದಂತ ಮೀನುಗಳು ಒಮೆಗಾ 3 ಫ್ಯಾಟಿ ಆಸಿಡ್ಸ್ ಗಳನ್ನು ಹೆಚ್ಚೆಚ್ಚು ಹೊಂದಿರುತ್ತವೆ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪೋಷಕಾಂಶಗಳು ಹೇರಳವಾಗಿವೆ.ಮಾಂಸಾಹಾರದಿಂದ ದೂರವುಳಿಯಲು ಸಾಧ್ಯವಿಲ್ಲದವರು ತೆಳುವಾದ ಮಾಂಸಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು. ಚರ್ಮ ಹೊರತಾದ ಮಾಂಸಾಹಾರ ಇತ್ಯಾದಿ.

ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ತಿನ್ನಿ:
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳು ಇಚ್ಚಿಸುವವರ ಪಥ್ಯದಲ್ಲಿ ಕ್ಯಾಬೇಜ್, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು. ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ. ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ.

ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ:
ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಅಥವಾ ನಿಯಂತ್ರಿಸಲು ಬ್ರೆಡ್ ನಂತಹ ಹೆಚ್ಚೆಚ್ಚು ನಾರಿನಂಶವರಿಉವ ಪದಾರ್ಥಗಳನ್ನೇ ಸೇವಿಸಿ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯ, ಬೇಳೆ ಕಾಳುಗಳನ್ನು ಸೇವಿಸಿ. ಇವುಗಳು ಕೇವಲ ಕೊಲೆಸ್ಟ್ರಾಲ್ ಮಾತ್ರ ಕಡಿಮೆ ಮಾಡುವುದಿಲ್ಲ. ಬದಲಿಗೆ, ನಿಮ್ಮ ದೇಹದ ಕ್ಯಾಲೋರಿಯನ್ನೂ ಕಡಿಮೆಗೊಳಿಸುತ್ತವೆ. ದೇಹದಲ್ಲಿರುವ ಹೆಚ್ಚಿನ ಕ್ಯಾಲೋರಿ ನೈಸರ್ಗಿಕವಾಗಿ ಕೊಬ್ಬಿನಂಶವಾಗಿ ಮಾರ್ಪಡುತ್ತದೆ. ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಷ್ಟೂ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವ ಸಾಧ್ಯತೆ ಇರುತ್ತದೆ.

ಶೀತಲೀಕರಣದಲ್ಲಿ ಇಟ್ಟ ಆಹಾರ ಒಳ್ಳೆಯದಲ್ಲ:
ಬಹಳ ದಿನಗಳವರೆಗೆ ಕಾಯ್ದಿರಿಸುವಂತೆ ತಯಾರಿಸಿದ ಆಹಾರಗಳಲ್ಲಿ ಮತ್ತು ಹೆಚ್ಚು ಕೊಬ್ಬಿನಂಶವಿರುವ ಮಾಂಸಾಹಾರಗಳಲ್ಲಿ ಆಹಾರಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಸ್ಯಾಚುರೇಟೆಡ್ ತರಕಾರಿ ಕೊಬ್ಬುಗಳನ್ನೂ ದೂರವಿಡಬೇಕು. ಇವುಗಳೂ ಕೂಡ ದೇಹದಲ್ಲಿ ಕೆಟ್ಟ ರೀತಿಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ.

ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರ ತಿನ್ನಬೇಡಿ:
ಕೊಲೆಸ್ಟ್ರಾಲ್ ಉತ್ಪಾದನೆಯಾಗುವುದು ಸ್ಯಾಚುರೇಟೆಡ್ ಕೊಬ್ಬಿನಂಶದಿಂದ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉತ್ತಮವಾದ ಪಥ್ಯವೆಂದರೆ ಸಾಧ್ಯವಿದ್ದಷ್ಟು ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳನ್ನು ದೂರವಿರಿಸಿ ಮತ್ತು ಸಾಧ್ಯವಿದ್ದರೆ ಸಂಪೂರ್ಣವಾಗಿ ಅಂತ ಕೊಬ್ಬಿನ ಪದಾರ್ಥಗಳನ್ನು ಹೊರಗಿಟ್ಟುಬಿಡಿ. ಕೆಲವೊಂದು ಸಂದರ್ಭಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸಂಪೂರ್ಣ ತಿನ್ನದಿರಲು ಸಾಧ್ಯವಿಲ್ಲದಿದ್ದರೆ ಅಂಥ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.

ಕಪ್ಪುದ್ರಾಕ್ಷಿ:
ಪ್ರತಿದಿನ ಬೆಳಗ್ಗೆ ಒಂದು ಲೋಟ ಕಪ್ಪು ದ್ರಾಕ್ಷಿಯ ಜ್ಯಸ್ ಕುಡಿಯುತ್ತಾ ಬಂದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ಗ್ರೀನ್ ಟೀ ಕೂಡ ತುಂಬಾ ಒಳ್ಳೆಯದು.

ಟೊಮೆಟೊ:
ಟೊಮೆಟೊದಲ್ಲಿ ಲೈಕೋಪೆನೆ, ಚಿಟಮಿನ್ ಸಿ ಮತ್ತು ನಾರಿನಂಶವಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಳ್ಳುಳ್ಳಿ:
ದಿನದಲ್ಲಿ 2-3 ಎಸಳು ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಹಾಗೂ ಹೃದಯ ಸ್ವಾಸ್ಥ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಇದು ದೇಹದ ಬೊಜ್ಜನ್ನು ಕರಗಿಸುವಲ್ಲಿ ಕೂಡ ಸಹಕಾರಿಯಾಗಿದೆ.

ಬೆಂಡೆಕಾಯಿ:
ಬೆಂಡೆಕಾಯಿಯಲ್ಲಿ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾ ಸಹಕಾರಿಯಾಗಿದೆ.

ಫಿಶ್ ಆಯಿಲ್:
ಮೀನಿನಲ್ಲಿ ಒಮೆಗಾ 3 ಎಂಬೊಳ್ಳೆಯ ಕೊಲೆಸ್ಟ್ರಾಲ್ ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ವಾರದಲ್ಲಿನ ಎರಡು ಭಾರಿ ಮೀನು ತಿನ್ನುವುದು, ಫಿಶ್ ಆಯಿಲ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.

ಬೆಣ್ಣೆ ಹಣ್ಣು :
ಬೆಣ್ಣೆ ಹಣ್ಣು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಲ್ಲಿ ಬೆಣ್ಣೆ ಹಣ್ಣು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಬೀಟಾ ಸೈಟೊಸ್ಟಿರೋಲ್ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಓಟ್ಸ್:
ಓಟ್ಸ್ ನಲ್ಲಿ ಬೀಟಾ ಗ್ಲೂಕೋನ್ ಇದ್ದು ಇದು ದೇಹವು ಬೇಡದ ಕೊಲೆಸ್ಟ್ರಾಲ್ ನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುವುದು.



Click it and Unblock the Notifications