ಸ್ಲಿಮ್ ಆಗಿ ಕಾಣಲು ಇಲ್ಲಿದೆ ಪರಿಣಾಮಕಾರಿ ಸಲಹೆ

ದೇಹದ ತೂಕವನ್ನು ಕಳೆದುಕೊಂಡು ಸಣ್ಣಗಾಗಿ ಅಥವಾ ಸ್ಲಿಮ್ ಆಗಿ ಕಾಣಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ನಿಯಮಿತವಾಗಿ ಆರೋಗ್ಯಯುತ ಆಹಾರವನ್ನು ಸೇವಿಸದಿರುವುದೂ ಕೂಡ ಬೊಜ್ಜು, ತೂಕ ಏರಿಕೆ ಮೊದಲಾದ ದೇಹ ಮಾರ್ಪಾಡುಗಳಿಗೆ ಕಾರಣವಾಗುತ್ತದೆ.

ನಿಮ್ಮ ಡಯೆಟ್‌ನ ನಡುವೆ ಆರೋಗ್ಯಕರವಾದ ಅಂತರವನ್ನು ನೀವು ನಿರ್ವಹಿಸಬೇಕು. ಪೂರ್ಣ ಪ್ರಮಾಣದಲ್ಲಿ ಆಹಾರವನ್ನು ನೀವು ಸೇವಿಸುತ್ತಿರುವಿರಿ ಎಂಬ ಖಾತ್ರಿ ನಿಮಗಿರಬೇಕು. ಆದ್ದರಿಂದಲೇ ನೀವು ಸ್ಲೀಮ್ ಆಗಿ ಕಾಣಲು ನಿಮ್ಮ ಆಹಾರ ಹೇಗಿರಬೇಕು ಎಂಬ ಪಟ್ಟಿಯ ವಿವರವನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅದರ ಪೂರ್ಣ ಪ್ರಯೋಜನವನ್ನು ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಫಿಟ್ ನೆಸ್ ಬಯಸುವವರು ಮಾಡಬಾರದ ಮಿಸ್ಟೇಕ್‌ಗಳು

ದಾಲ್ಚಿನ್ನಿ:

ದಾಲ್ಚಿನ್ನಿ:

ದಾಲ್ಚಿನ್ನಿಯು ತೂಕತಗ್ಗಿಸುವಲ್ಲಿ ಸಹಕರಿಸುವ ಮಸಾಲೆಗಳಲ್ಲಿ ಮುಖ್ಯವಾದುದು. ಮೆಟಬೊಲಿಸಮ್ ಅನ್ನು ಚುರುಕುಗೊಳಿಸಿ ಬೊಜ್ಜನ್ನು ಶೀಘ್ರಗತಿಯಲ್ಲಿ ಕರಗಿಸಲು ಸಹಾಯಕಾರಿಯಾಗಬಲ್ಲದು.

ಶುಂಠಿ:

ಶುಂಠಿ:

ಒಳದೇಹವನ್ನು ಶುದ್ಧೀಕರಿಸುವ ಅತ್ಯುತ್ತಮ ಪದಾರ್ಥ ಶುಂಠಿ. ಜಠರದಲ್ಲಿನ ಆಹಾರದ ತುಣುಕುಗಳನ್ನು ತೆಗೆಯುವಲ್ಲಿ ಹಾಗು ಬೊಜ್ಜು ಸಂಗ್ರಹಗಳನ್ನು ನಿಯಂತ್ರಿಸಿ ತೂಕವನ್ನು ನಿರ್ವಹಿಸುವಲ್ಲಿ ಶುಂಠಿ ಬಹು ಸಹಾಯಕಾರಿ.

ಏಲಕ್ಕಿ:

ಏಲಕ್ಕಿ:

ಏಲಕ್ಕಿಯು ನಿಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸುವಲ್ಲಿ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಅರಿಶಿಣ:

ಅರಿಶಿಣ:

ಹಳದಿ ಮಿಶ್ರಿತ ಕೇಸರಿ ಬಣ್ಣದ ಈ ಮಸಾಲೆಯಲ್ಲಿ ಅನೇಕ ತೂಕ ಇಳಿಸುವ ಗುಣಗಳಿವೆ. ಸ್ಥೂಲದ ಕೋಶಗಳನ್ನು ಕಡಿಮೆ ಮಾಡುವುದರಿಂದ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಅರಿಶಿಣ ಸಹಾಯಕಾರಿ.

ನೆತ್ತೆಲ್ ಎಲೆಗಳು:

ನೆತ್ತೆಲ್ ಎಲೆಗಳು:

ಈ ಎಲೆಯಲ್ಲಿ ಅತಿ ಹೆಚ್ಚು ಪೌಷ್ಟಿಕಾಂಶಗಳಿದ್ದು, ಜೀವಸತ್ವಗಳಾದ ಸಿ ಮತ್ತು ಎ ಜೀವಸತ್ವಗಳಿಂದ ತುಂಬಿವೆ. ಅಲ್ಲದೆ ಇವು ರಕ್ತವನ್ನು ಶುದ್ಧೀಕರಿಸುವದಲ್ಲದೇ ದೇಹದಲ್ಲಿನ ಕೊಬ್ಬನ್ನು ಕರಗಿಸುವಲ್ಲಿ ನೆರವು ಮಾಡುತ್ತವೆ.

ಪೆಪ್ಪರ್:

ಪೆಪ್ಪರ್:

ಈ ಮಸಾಲೆಯು ಕ್ಯಾಪ್ಸೈಸಿನ್ ಎಂಬ ಸಂಯುಕ್ತ ಪದಾರ್ಥವನ್ನು ಒಳಗೊಂಡಿದ್ದು, ಇದು ಹಸಿವನ್ನು ನಿಯಂತ್ರಿಸುವುದರ ಮೂಲಕ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

ಜೀರಿಗೆ:

ಜೀರಿಗೆ:

ಜೀರಿಗೆ ನಿಮ್ಮ ಪಚನ ಪ್ರಕ್ರಿಯೆಯನ್ನು ಉತ್ತಮ ಗೊಳಿಸಿ, ನಿಮ್ಮಲ್ಲಿಯ ಶಕ್ತಿ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕಾರಿ.

ಕರಿಮೆಣಸು:

ಕರಿಮೆಣಸು:

ಪಿಪೆರಿನೆ ಎಂಬ ಸಂಯುಕ್ತವಿರುವ ಈ ಮಸಾಲೆಯನ್ನು ಸಾಮಾನ್ಯವಾಗಿ ನಾವು ಬಳಸುತ್ತೇವೆ. ಅದರಲ್ಲಿನ ಈ ಸಂಯುಕ್ತ ಪದಾರ್ಥವು ನಮ್ಮ ಚಯಾಪಚಯವನ್ನು ಉತ್ತೇಜಿಸುತ್ತದೆ.

ಡ್ಯಾಂಡೆಲಿಯನ್‌ಗಳು:

ಡ್ಯಾಂಡೆಲಿಯನ್‌ಗಳು:

ಈ ಹೂವು ನಮ್ಮ ದೇಹವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.

ಅಗಸೆ ಕಾಳು:

ಅಗಸೆ ಕಾಳು:

ಅಗಸೆಯು ಹಸಿವನ್ನು ನಿಗ್ರಹಿಸಿ ಯಾವಾಗಲೂ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನೀಮ್ಮ ಅತಿಯಾದ ಸೇವನೆ ಕಡಿಮೆಯಾಗಿ, ನಿಮ್ಮ ತೂಕವೂ ಕಡಿಮೆಯಾಗುವುದು

ಸಾಸಿವೆ

ಸಾಸಿವೆ

ತೂಕ ಇಳಿಸುವವರಿಗೆ ಸಾಸಿವೆ ಅತ್ಯುತ್ತಮ ಸಸ್ಯ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಚುರುಕು ಗೊಳಿಸುತ್ತದೆ.

ತೆಂಗಿನಕಾಯಿ ಎಣ್ಣೆ:

ತೆಂಗಿನಕಾಯಿ ಎಣ್ಣೆ:

ತೆಂಗಿನ ಎಣ್ಣೆಯು ನಿಮ್ಮ ಚಯಾಪಚಯದ ವೇಗ ಹೆಚ್ಚಿಸಲು ನೆರವಾಗುವುದು. ಇದರಿಂದ ಶಕ್ತಿ ಬಿಡುಗಡೆಯಾಗುವ ಮೂಲಕ ತೂಕ ನಷ್ಟವಾಗುವುದು.

 ಬಡೇ ಸೋಂಪು:

ಬಡೇ ಸೋಂಪು:

ಈ ಸಣ್ಣ ಬೀಜಗಳು ಜೀರ್ಣಿಸುವಿಕೆಗೆ ಸಹಾಯ ಮಾಡುತ್ತವೆ ಮತ್ತು ಇದರಿಂದ ನಿಮ್ಮ ಹಸಿವನ್ನು ನಿಯಂತ್ರಿಸುತ್ತವೆ. ಜೊತೆಗೆ, ಈ ಬೀಜಗಳು ಯಕೃತ್ತನ್ನು ಶುಚಿಯಾಗಿಡುವಲ್ಲಿಯೂ ಪ್ರಮುಖಪಾತ್ರವಹಿಸುತ್ತವೆ.

ಸೆಲ್ಲಿಯಂ:

ಸೆಲ್ಲಿಯಂ:

ಇದು ತೂಕ ಇಳಿಸಲು ಅತ್ಯಂತ ಸುರಕ್ಷಿತ ಮಾರ್ಗ.ಈ ಕಾಳುಗಳು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆತುಂಬಿರುವಂತೆ ನೋಡಿಕೊಳ್ಳುವದಲ್ಲದೇ ಸಾಮಾನ್ಯ ಶರ್ಕರಗಳ ಹೀರಿಕೆಯ ಗತಿಯನ್ನು ನಿಧಾನಗೊಳಿಸುತ್ತದೆ.

ಬಿಳಿ ಹುರುಳಿ ಸೂಪ್:

ಬಿಳಿ ಹುರುಳಿ ಸೂಪ್:

ಸಕ್ಕರೆ, ಕೊಬ್ಬು ಮತ್ತು ಸೋಡಿಯಂ ಪ್ರಮಾಣವು ಕಡಿಮೆ ಇರುವ, ಈ ಆರೋಗ್ಯಕರ ಸೂಪ್‌ನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನಿಮ್ಮ ತೂಕ ಇಳಿಸುವಲ್ಲಿ ಸಹಾಯ ಮಾಡಬಹುದು.

ಬ್ರೊಕೋಲಿ ಸೂಪ್:

ಬ್ರೊಕೋಲಿ ಸೂಪ್:

ನಿಮಗೆ ಬ್ರೊಕೋಲಿಯನ್ನು ಸೇವಿಸುವುದು ಇಷ್ಟವಾಗದೇ ಇರಬಹುದು. ಆದರೆ ಇದು ನಿಮ್ಮ ತೂಕ ಇಳಿಸುವಲ್ಲಿ ವೇಗವಾಗಿ ಪರಿಣಾಮ ಬೀರುವ ಸೂಪ್.

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಸೂಪ್:

ಕುಂಬಳಕಾಯಿ ಸೂಪ್ ಸೇವಿಸುವುದರಿಂದ, ನೀವು ತ್ವರಿತ ಮತ್ತು ಸುಲಭ ರೀತಿಯಲ್ಲಿ ಅನಗತ್ಯ ಕೊಬ್ಬನ್ನು ದೇಹದಿಂದ ಹೊರಹಾಕಬಹುದು.

ಆಲೂಗಡ್ಡೆ ಸೂಪ್:

ಆಲೂಗಡ್ಡೆ ಸೂಪ್:

ತೂಕ ಇಳಿಸಿಕೊಳ್ಳಲು ಈ ಸೂಪ್‌ನ್ನು ಸೇವಿಸುವುದರ ಮೂಲಕ, ನಿಮಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಗಳನ್ನೂ ನಿಮ್ಮ ದೇಹಕ್ಕೆ ಒದಗಿಸಬಹುದು. ಕಡಿಮೆ ಕೊಬ್ಬನ್ನು ಹೊಂದಿರುವ ಈ ಬಹು ಧಾನ್ಯಗಳಿಂದ ತಯಾರಾದ ಸೂಪ್ ರುಚಿಯಲ್ಲೂ ಅಷ್ಟೇ ಉತ್ತಮವಾದುದು.

 ಕ್ಯಾರೆಟ್ ಸೂಪ್:

ಕ್ಯಾರೆಟ್ ಸೂಪ್:

ಕೊತ್ತಂಬರಿ ಅಲಂಕರಿಸಲ್ಪಟ್ಟ ರುಚಿಕರವಾದ ಕ್ಯಾರೆಟ್ ಸೂಪ್ ಅಂಟು ರಹಿತ ಮತ್ತು ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿದೆ. ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗುವ ಈ ಸೂಪ್ ಆಹಾರ ಪ್ರತಿ 100 ಗ್ರಾಂ ಗೆ ಕೇವಲ 1.2 ಗ್ರಾಂ ಕೊಬ್ಬಿನ ಅಂಶವನ್ನು ಒಳಗೊಂಡಿದೆ .

ಓಟ್‌ಮೀಲ್:

ಓಟ್‌ಮೀಲ್:

ಇದೊಂದು ಪೂರ್ಣ ಪ್ರಮಾಣದ ಧಾನ್ಯವಾಗಿದ್ದು ಕೊಬ್ಬು ಮತ್ತು ಕ್ಯಾಲೋರಿ ಮಿತ ಪ್ರಮಾಣದಲ್ಲಿದೆ. ಇದರ ಸುಗಂಧ ಕೂಡ ನಿಮ್ಮ ಮನಸೆಳೆಯುವಂಥಿದ್ದು ನಿಮ್ಮ ಆಯ್ಕೆಯ ಯಾವುದೇ ಹಣ್ಣು, ಡ್ರೈ ಫ್ರುಟ್ಸ್ ಅನ್ನು ಇದರ ಟೋಪಿಂಗ್‌ಗೆ ಬಳಸಿ ನಿಮಗೆ ಸೇವಿಸಬಹುದು. ಸ್ಟ್ರಾಬೆರಿ, ಬಾಳೆಹಣ್ಣು ಮೊದಲಾದ ಹಣ್ಣುಗಳೂ ಕೂಡ ಇದಕ್ಕೆ ಉತ್ತಮ ರುಚಿಯನ್ನು ನೀಡುತ್ತದೆ. ಡ್ರೈ ಫ್ರುಟ್ಸ್‌ಗಳಾದ ರೈಸನ್ಸ್, ಬಾದಾಮಿ ಸಹ ಓಟ್ಸ್‌ಗೆ ಪರಿಪೂರ್ಣ ರುಚಿಯನ್ನು ನೀಡುತ್ತದೆ.

ಬೇಗಲ್ಸ್:

ಬೇಗಲ್ಸ್:

ನಾರಿನಂಶಗಳಿಂದ ಕೂಡಿದ ಸಿರೆಲ್ಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ತುಂಬಾ ಹಿತಕಾರಿ. ಕೊಬ್ಬಿನಂಶ ಕಡಿಮೆ ಇದ್ದು ನಾರಿನಂಶ ಹೆಚ್ಚು ಸಿರೆಲ್ಸ್‌ನಲ್ಲಿ ಇದೆ. ಕೆನೆರಹಿತ ಹಾಲನ್ನು ಮತ್ತು ರೈಸನ್ಸ್, ಬಾದಾಮಿಯನ್ನು ಮಿಶ್ರ ಮಾಡಿಕೊಂಡು ಸಿರೆಲ್ಸ್ ಅನ್ನು ಸವಿಯಿರಿ.

ಆಮ್ಲೇಟ್:

ಆಮ್ಲೇಟ್:

ಮೊಟ್ಟೆಯು ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ಆಹಾರವಾಗಿದೆ. ಇದರಿಂದ ತಯಾರಿಸಲಾದ ಆಮ್ಲೇಟ್ ಕೂಡ ಕೊಬ್ಬಿನಂಶವನ್ನು ಸೊನ್ನೆ ಪ್ರಮಾಣದಲ್ಲಿ ಒಳಗೊಂಡಿದೆ. 2-3 ಮೊಟ್ಟೆಯನ್ನು ಒಡೆದು ಅದಕ್ಕೆ ಈರುಳ್ಳಿ ಹಾಕಿ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಆಮ್ಲೇಟ್ ತಯಾರಿಸಿ.

ಸಿರೆಲ್ಸ್:

ಸಿರೆಲ್ಸ್:

ನಾರಿನಂಶಗಳಿಂದ ಕೂಡಿದ ಸಿರೆಲ್ಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ತುಂಬಾ ಹಿತಕಾರಿ. ಕೊಬ್ಬಿನಂಶ ಕಡಿಮೆ ಇದ್ದು ನಾರಿನಂಶ ಹೆಚ್ಚು ಸಿರೆಲ್ಸ್‌ನಲ್ಲಿ ಇದೆ. ಕೆನೆರಹಿತ ಹಾಲನ್ನು ಮತ್ತು ರೈಸನ್ಸ್, ಬಾದಾಮಿಯನ್ನು ಮಿಶ್ರ ಮಾಡಿಕೊಂಡು ಸಿರೆಲ್ಸ್ ಅನ್ನು ಸವಿಯಿರಿ.

ಟೋಸ್ಟ್:

ಟೋಸ್ಟ್:

ಡ್ರೈ ಟೋಸ್ಟ್ ಕೂಡ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಒಂದು ಉತ್ತಮ ಆರಂಭವಾಗಿದೆ. ಇದನ್ನು ಇನ್ನೂ ರುಚಿಕಟ್ಟಾಗಿಸಲು ಕೆಲವೊಂದು ಸಾಮಾಗ್ರಿಗಳನ್ನು ನೀವು ಬಳಸಬಹುದು. ಜೇನು ಅಥವಾ ಪೀನಟ್ ಬೆಣ್ಣೆಯನ್ನು ಟೋಸ್ಟ್ ಮೇಲೆ ಸವರಿ ಆರೋಗ್ಯಪೂರ್ಣ ಬ್ರೇಕ್‌ಫಾಸ್ಟ್‌ನಿಂದ ದಿನವನ್ನು ಆರಂಭಿಸಿ.

ಅಳತೆಗೊಂದು ಸ್ಕೇಲ್:

ಅಳತೆಗೊಂದು ಸ್ಕೇಲ್:

ನೀವು ತಿನ್ನುವ ಆಹಾರದ ಪ್ರಮಾಣವನ್ನು ಅಳೆಯುವುದು ಒಳ್ಳೆಯ ಅಭ್ಯಾಸ. ಇದರಿಂದ ಆಹಾರದಲ್ಲಿ ನಿಯಂತ್ರಣ ಸಾಧಿಸಬಹುದು.

ತೂಕ ಹೆಚ್ಚಿಸುವ ಆಹಾರಗಳಿಂದ ದೂರವಿರಿ:

ತೂಕ ಹೆಚ್ಚಿಸುವ ಆಹಾರಗಳಿಂದ ದೂರವಿರಿ:

ನೀವು ಮನೆಯಲ್ಲಿ ಒಬ್ಬರೇ ಇದ್ದರೆ ಇದನ್ನು ಮಾಡುವುದು ಸುಲಭ. ಆದರೆ ಕುಟುಂಬದೊಂದಿಗೆ ಇದ್ದಲ್ಲಿ ಹೆಚ್ಚು ಕ್ಯಾಲೊರಿಗಳು ಮತ್ತು ಕೊಬ್ಬಿನಂಶವಿರುವ ಆಹಾರದಿಂದ ದೂರವುಳಿಯುವುದು ಕಷ್ಟ.

ಆರೋಗ್ಯಕರ ಆಹಾರವನ್ನು ಮೂರುಪಟ್ಟು ಹೆಚ್ಚಿಸಿ:

ಆರೋಗ್ಯಕರ ಆಹಾರವನ್ನು ಮೂರುಪಟ್ಟು ಹೆಚ್ಚಿಸಿ:

ನೀವು ಹೆಲ್ತ್ ಡಯೆಟ್ ಪಾಲಿಸುತ್ತಿದ್ದಲ್ಲಿ ಇದನ್ನು ಮೂರು ಪಟ್ಟು ಹೆಚ್ಚಿಸಿ. ಇದನ್ನು ಅನುಸರಿಸುವುದರಿಂದ ಹೆಚ್ಚು ಆರೋಗ್ಯಕರ ರೀತಿಯಲ್ಲಿ ತೂಕ ತಗ್ಗಿಸಿ ನಿಶ್ಚಿಂತರಾಗಬಹುದು.

ಫ್ರೀಜರ್ ಬಳಸಿ:

ಫ್ರೀಜರ್ ಬಳಸಿ:

ಆರೋಗ್ಯಕರ ಆಹಾರವನ್ನು ಫ್ರೀಜರ್ ನಲ್ಲಿಡಿ. ಇದು ಆರೋಗ್ಯಕರ ಜೀವನ ಶೈಲಿಗೆ ಅತ್ಯಗತ್ಯ.

ಜಂಕ್ ಫುಡ್ ತಿನ್ನಬೇಡಿ:

ಜಂಕ್ ಫುಡ್ ತಿನ್ನಬೇಡಿ:

ಜಂಕ್ ಫುಡ್ ನಿಂದ ದೂರವಿರುವುದರಿಂದ ಹೆಚ್ಚಿನ ಕ್ಯಾಲೊರಿಗಳು ನಿಮ್ಮ ದೇಹ ಸೇರುವುದು ತಪ್ಪುತ್ತದೆ. ನಿಮ್ಮ ಮನೆಯಲ್ಲಿ ಜಂಕ್ ಫುಡ್ ಗೆ ಬದಲಾಗಿ ಆರೋಗ್ಯಕರ ಆಹಾರಕ್ಕೆ ಹೆಚ್ಚಿನ ಸ್ಥಳ ನೀಡಿ. ಇದು ನೀವು ತೂಕ ತಗ್ಗಿಸಲು ನೆರವಾಗುತ್ತದೆ.

ಚಿಕ್ಕ ತಟ್ಟೆಗಳು :

ಚಿಕ್ಕ ತಟ್ಟೆಗಳು :

ಮನೆಯಲ್ಲಿನ ದೊಡ್ಡ ತಟ್ಟೆಗಳಿಗೆ ಬದಲಾಗಿ ಸಣ್ಣ ತಟ್ಟೆಗಳನ್ನು ಬಳಸಿ. ಸಣ್ಣ ತಟ್ಟೆ ಎಂದರೆ ಕಡಿಮೆ ಪ್ರಮಾಣದ ಆಹಾರವನ್ನು ನೀವು ಸೇವಿಸುವಿರಿ.

ಡಾರ್ಕ್ ಚಾಕೋಲೆಟ್‌ಗಳು:

ಡಾರ್ಕ್ ಚಾಕೋಲೆಟ್‌ಗಳು:

ನೀವು ಮನೆಯಲ್ಲಿದ್ದಾಗ ಹೆಚ್ಚು ಆರೋಗ್ಯಕರವಾದ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ಒಣಹಣ್ಣುಗಳು ಮತ್ತು ಡಾರ್ಕ್ ಚಾಕೋಲೆಟ್ ಗಳು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಅಳತೆ ಚಮಚ:

ಅಳತೆ ಚಮಚ:

ನೀವು ತೂಕ ತಗ್ಗಿಸಲು ನಿರ್ಧರಿಸಿದ್ದಲ್ಲಿ ನಿರ್ಧಿಷ್ಟ ಅಳತೆಯ ಚಮಚಗಳನ್ನು ಬಳಸಿ. ಈ ಚಮಚಗಳು ನಿಮಗೆ ಕಡಿಮೆ ತಿನ್ನಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ಸಲಾಡ್:

ಸಲಾಡ್:

ಸಲಾಡ್‌ಗಳನ್ನು ಮಾಡಿ ಏರ್ ಟೈಟ್ ಕನ್ಟೈನರ್ ಗಳಲ್ಲಿಡಿ. ನಿಮಗೆ ಹಸಿವಾದಾಗ ಬೇರೆನನ್ನೋ ತಿನ್ನುವ ಬದಲು ಇವುಗಳನ್ನು ತಿನ್ನಿ.

ಉಪಹಾರ:

ಉಪಹಾರ:

ನೀವು ಬೆಳಗ್ಗೆ ಎದ್ದ ಒಂದು ಘಂಟೆಯೊಳಗಾಗಿ ನಿಮ್ಮ ಉಪಹಾರವನ್ನು ಪೂರೈಸಿರಿ. ಇದು ನೀವು ಮತ್ಸ್ಯಕನ್ಯೆಯ ಮೈಮಾಟವನ್ನು ಹೊಂದಲು ಮತ್ತು ಆರೋಗ್ಯವಾಗಿರಲು ಅತಿ ಮುಖ್ಯವಾಗಿದೆ.

ಆಹಾರ:

ಆಹಾರ:

ದಿನವೊಂದಕ್ಕೆ 5 ರಿಂದ 6 ಸಾರಿ ಸಣ್ಣ ಸಣ್ಣ ಘಟಕಗಳ ರೂಪದಲ್ಲಿ ಆಹಾರವನ್ನು ತೆಗೆದುಕೊಳ್ಳಿರಿ. ಹೀಗೆ ಮಾಡುವುದರಿಂದ ಚರ್ಬಿಯನ್ನು ದೂರವೇ ಇಟ್ಟನ್ತಾಗುತ್ತದೆ.

ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮ:

ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮ:

ನಿಮ್ಮೆಲ್ಲಾ ಕೆಲಸ ಕಾರ್ಯಗಳ ಕೊನೆಯಲ್ಲಿ ಮಾತ್ರವೇ ಹೊಟ್ಟೆಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಬೇಕೇ ವಿನಃ ಕೆಲಸದ ಆರಂಭದಲ್ಲಿ ಅಥವಾ ಮಧ್ಯಂತರದಲ್ಲಿ ಅಲ್ಲ.

ಸೋಡಿಯಂನ ಪ್ರಮಾಣ:

ಸೋಡಿಯಂನ ಪ್ರಮಾಣ:

ನೀವು ಸೇವಿಸುವ ಸೋಡಿಯಂನ ಪ್ರಮಾಣವು ನಿಜಕ್ಕೂ ಕಡಿಮೆ ಪ್ರಮಾಣದಲ್ಲಿರಲಿ ಹಾಗೂ ನಿಮ್ಮ ಆಹಾರಕ್ಕೆ ಯಾವುದೇ ರೀತಿಯಲ್ಲಿ ಹೆಚ್ಚಿನ ಉಪ್ಪನ್ನು ಸೇರಿಸಬೇಡಿರಿ.

ಧಾರಾಳವಾಗಿ ನೀರನ್ನು ಕುಡಿಯಿರಿ:

ಧಾರಾಳವಾಗಿ ನೀರನ್ನು ಕುಡಿಯಿರಿ:

ಪ್ರತಿದಿನ ಮುಂಜಾನೆ ನೀವು ಕನಿಷ್ತ ಪಕ್ಷ ಒಂದು ಲೋಟದಷ್ಟಾದರೂ ನೀರು ಕುಡಿದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಇದರಿಂದ ನಿಮ್ಮ ದೇಹದ ಎಲ್ಲಾ ಜೀವಕೋಶಗಳಿಗೂ ಆಮ್ಲಜನಕ ಮತ್ತು ನೀರಿನ ಲಾಭವು ದೊರೆತು ಅವು ಮರುಜೀವವನ್ನು ಪಡೆಯಲು ಸಹಾಯಕವಾಗುತ್ತದೆ. ಅತಿಯಾಗಿ ನೀರು ಕುಡಿಯುವುದು, ನಿಮಗೆ ಬೇಸರ ತರಿಸುತ್ತದೆ ಎಂದಾದರೆ, ನೀರಿಗೆ ಒಂದು ಸ್ವಲ್ಪ ಲಿಂಬೆ ರಸವನ್ನು ಸೇರಿಸಿರಿ. ಇದರಿಂದ ನೀರು ಹುಳಿಯಾಗಿ ರುಚಿಯಾಗುತ್ತದೆ ಅಲ್ಲದೇ ಲಿoಬೆಹಣ್ಣಿನ ರಸಯುಕ್ತ ನೀರು ತಲೆಸುತ್ತುವಿಕೆ ಮತ್ತು ಆಯಾಸವನ್ನೂ ದೂರ ಮಾಡುತ್ತದೆ.

ಮೆಟ್ಟಿಲುಗಳನ್ನು ಉಪಯೋಗಿಸಿರಿ:

ಮೆಟ್ಟಿಲುಗಳನ್ನು ಉಪಯೋಗಿಸಿರಿ:

ಮಹಡಿಗಳನ್ನೇರಲು ಲಿಫ್ಟ್ ಅನ್ನು ಉಪಯೋಗಿಸುವುದನ್ನು ಬಿಟ್ಟುಬಿಡಿರಿ ಮತ್ತು ಎಲ್ಲೆಡೆಯೂ ಮೆಟ್ಟಿಲುಗಳನ್ನು ಬಳಕೆ ಮಾಡಿ. ಪ್ರತೀ ಮೆಟ್ಟಿಲನ್ನು ಏರುವಾಗಲೂ ಸಹ ನಿಮ್ಮ ಹೊಟ್ಟೆಯ ಭಾಗ ಮತ್ತು ಪೃಷ್ಟ ಭಾಗಗಳೂ ಕೂಡ ಈ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿರಿ. ಇದರಿಂದ ನಿಮ್ಮ ಪೃಷ್ಟ ಭಾಗದ ಸ್ನಾಯುವನ್ನು ಕ್ರಿಯಾಶೀಲವಾಗಿರಿಸಿದoತಾಗುತ್ತದೆ. ನಿಮ್ಮ ಭುಜಗಳ ಕಡೆಗೂ ಗಮನ ಹರಿಸಿರಿ. ಅವು ನಿಮ್ಮ ಪೃಷ್ಟಗಳೊಂದಿಗೆ ಸರಳರೇಖೆಯಲ್ಲಿರಬೇಕೇ ಹೊರತು, ಸಮತೋಲನವನ್ನು ಕಾಪಾಡುವುದಕ್ಕೋಸ್ಕರ ಬಾಗಿರಬಾರದು. ಇದು ವ್ಯಾಯಾಮದ ಅತಿ ಸರಳವಾದ ಒಂದು ವಿಧವಾಗಿದ್ದು, ಇದನ್ನು ಎಲ್ಲಿ ಬೇಕಾದರೂ ಕೈಗೊಳ್ಳಬಹುದು.

ಆರೋಗ್ಯಯುತ ಅಹಾರಕ್ರಮವನ್ನು ಪಾಲಿಸಿರಿ:

ಆರೋಗ್ಯಯುತ ಅಹಾರಕ್ರಮವನ್ನು ಪಾಲಿಸಿರಿ:

ನೀವು ಜಿಮ್ ನಲ್ಲಿ 2 ತಾಸುಗಳನ್ನು ಕಳೆದು ಹೊರಬಂದ ನಂತರ ಜಂಕ್ ಫುಡ್ ಗಳನ್ನು ತಿನ್ನುವವರಾಗಿದ್ದರೆ, ಅಂತ್ಯದಲ್ಲಿ ಅನಿಷ್ಟ ಫಲಿತಾಂಶಗಳು ಉಂಟಾದರೆ, ಬಹುಶಃ ನೀವು ನಂತರ ಯಾವುದೋ ಬೆಡಗಿಯ ಕನಸು ಕಾಣುತ್ತಾ ಅವಳಂತೆ ಆಗಲು ಬಯಸಿದರೆ ಅದಕ್ಕೆ ಅರ್ಥವಿರುವುದಿಲ್ಲ. ಕೇವಲ ವ್ಯಾಯಾಮದಿಂದ ಮಾತ್ರವೇ ಎಲ್ಲವೂ ಸಾಧಿತವಾಗುವುದಿಲ್ಲ. ಯಾಕೆಂದರೆ, ಮಾದಕವಾದ ದೇಹವನ್ನು ಹೊಂದುವ ಕ್ರಿಯೆಯು ನಿಮ್ಮ ಆಹಾರಕ್ರಮದೊoದಿಗೂ ಕೂಡ ತಳುಕು ಹಾಕಿಕೊಂಡಿದೆ. ಆಹಾರವನ್ನೇ ಬಿಟ್ಟುಬಿಡುವ ಅಥವಾ ಸಿಕ್ಕಾಪಟ್ಟೆ ಜಂಕ್ ಆಹಾರಗಳನ್ನು ಸೇವಿಸುವoತಹ ಅತಿರೇಕಗಳನ್ನು ಬಿಟ್ಟುಬಿಡಿರಿ. ಬಾಯಲ್ಲಿ ನೀರೂರಿಸುವoತೆ ಮಾಡುವ ಸ್ಲಿಮ್ ಅಂಡ್ ಫಿಟ್ ದೇಹವನ್ನು ಪಡೆಯಲು ವ್ಯಾಯಾಮದೊಂದಿಗೆ, ನಿಮ್ಮ ಜೀವನಶೈಲಿಯಲ್ಲಿ ಆರೋಗ್ಯಯುತವಾದ ಆಹಾರ ಸೇವನೆಯ ಹವ್ಯಾಸವನ್ನೂ ಕೂಡ ರೂಢಿಸಿಕೊಳ್ಳಬೇಕು.

ನಿಮ್ಮ ಅವಶ್ಯಕತೆಯನ್ನು ಮನಗಾಣಿರಿ:

ನಿಮ್ಮ ಅವಶ್ಯಕತೆಯನ್ನು ಮನಗಾಣಿರಿ:

ದೃಢತೆಯನ್ನು ಹೊಂದಲು ಕೈಗೊಳ್ಳುವ ಯಾವುದೇ ಮಾರ್ಗವನ್ನು ಅನುಸರಿಸುವ ಮೊದಲು ನಿಮ್ಮನ್ನೇ ನೀವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ನಾನು ನಿಜಕ್ಕೂ ದೃಢಕಾಯನಾಗಿದ್ದೇನೆಯೇ? ತೂಕವನ್ನು ಕಳೆದುಕೊಳ್ಳುವ ಅವಶ್ಯಕತೆಯು ನನಗಿದೆಯೇ? ಹೌದಾದರೆ ಎಷ್ಟು ತೂಕವನ್ನು ಕಳೆದುಕೊಳ್ಳಬೇಕು? ದೇಹದ ಯಾವ ಭಾಗ ಅಥವಾ ಸ್ನಾಯುವಿನತ್ತ ಹೆಚ್ಚು ಗಮನಹರಿಸಬೇಕು ? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಉತ್ತರವನ್ನು ಪಡೆದುಕೊoಡಾಗ, ಸ್ಲಿಮ್ ಅಂಡ್ ಫಿಟ್ ಮೈಕಟ್ಟಿಗೆ ಆಹಾರಕ್ರಮದ ಬಗ್ಗೆ ಮತ್ತು ನೀವು ಕೈಗೊಳ್ಳಬೇಕಾಗಿರುವ ವ್ಯಾಯಾಮದ ಬಗ್ಗೆ ಯೋಜನೆಯನ್ನು ರೂಪಿಸಲು ನಿಮಗೆ ಸುಲಭವಾಗುತ್ತದೆ.

ಸಂಭ್ರಮಾಚರಣೆ ಮಾಡಿ:

ಸಂಭ್ರಮಾಚರಣೆ ಮಾಡಿ:

ನೀವು ತೂಕ ಕಳೆದು ಕೊಳ್ಳಲು ಇಡುವ ಪ್ರತಿ ಹೆಜ್ಜೆಗು, ಪ್ರತಿ ಗೆಲುವಿಗು ನಿಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿ. ಹಾಗೆಂದು ಅತಿಯಾಗಿ ತಿನ್ನುವುದೋ ಅಥವಾ ಕುಡಿಯುವುದೋ ಮಾಡಬೇಡಿ. ಬದಲಿಗೆ ಮೈ ಮನಗಳಿಗೆ ಮುದ ನೀಡುವಂತಹ ಒಂದು ಚಟುವಟಿಕೆಯನ್ನು ಮಾಡಿ.

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ:

ರಾತ್ರಿ ಎಂಟು ಗಂಟೆಯ ನಂತರ ಊಟ ಮಾಡಬೇಡಿ:

ಆದಷ್ಟು ರಾತ್ರಿ ಎಂಟು ಗಂಟೆಯ ಒಳಗಾಗಿ ನಿಮ್ಮ ಊಟವನ್ನು ಸೇವಿಸಿ. ಇದರಿಂದ ಸಂಜೆ ಅಂದರೆ ರಾತ್ರಿ ಊಟಕ್ಕಿಂತ ಮೊದಲು ನೀವು ಯಾವುದಾದರು ಕುರುಕಲು ತಿಂಡಿ ತಿನ್ನುವ ಚಟವನ್ನು ನಿಯಂತ್ರಿಸಬಹುದು. ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ಯಾವುದಾದರು ಒಂದು ಹರ್ಬಲ್ ಟೀಯನ್ನು ಸೇವಿಸಿ. ನಂತರ ಹಲ್ಲುಜ್ಜಿ, ಬಾಯಿಯನ್ನು ತೊಳೆಯಿರಿ. ಇದರಿಂದ ನಿಮ್ಮ ತಿನ್ನುವ ಬಯಕೆಗೆ ಕಡಿವಾಣ ಬೀಳುತ್ತದೆ.

ಮಾಂಸಾಹಾರವನ್ನು ತ್ಯಜಿಸಿ:

ಮಾಂಸಾಹಾರವನ್ನು ತ್ಯಜಿಸಿ:

ಆದಷ್ಟು ಸಸ್ಯಾಹಾರವನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಇದರಲ್ಲಿ ಲೆಗ್ಯುಮೆಗಳು ಪ್ರಧಾನ ಪಾತ್ರವನ್ನುವಹಿಸುತ್ತವೆ. ಬೀನ್ ಬರ್ಗರ್, ಲೆಂಟಿಲ್ ಸೂಪ್ ಮತ್ತು ಇನ್ನಿತರ ಲೆಗುಮೆ ಇರುವ ಆಹಾರಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ.

ರೆಡ್ ಸಾಸ್ ತೆಗೆದುಕೊಳ್ಳಿ:

ರೆಡ್ ಸಾಸ್ ತೆಗೆದುಕೊಳ್ಳಿ:

ಕ್ರೀಮ್ ಇರುವ ಇತರ ಸಾಸ್‍ಗಳಿಗಿಂತ ಟೊಮಾಟೊ ಸಾಸ್ ಉತ್ತಮವಾದ ಆಯ್ಕೆಯಾಗಿರುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತವೆ. ಆದರೆ ಸೇವಿಸುವಾಗ ಪ್ರಮಾಣ ಬದ್ಧತೆಯ ಬಗ್ಗೆ ಮಾತ್ರ ಮರೆಯಬೇಡಿ.

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ:

ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸಿ:

ಊಟಕ್ಕೆ ಅರ್ಧ ಗಂಟೆ ಮೊದಲು ಹಣ್ಣನ್ನು ಸೇವಿಸುವುದು ಉತ್ತಮ. ಇದರಿಂದ ಹಣ್ಣುಗಳು ಬೇಗ ಜೀರ್ಣವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಜಠರದಲ್ಲಿರುವ ವಿಷಕಾರಿ ಅಂಶಗಳು ತೊಲಗಿ ಹೋಗುತ್ತವೆ. ಇದರಿಂದಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯು ಲಭಿಸಿ, ನಿಮ್ಮ ತೂಕ ಕಡಿಮೆಯಾಗುತ್ತದೆ.

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ:

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸಬೇಡಿ:

ನಿಮ್ಮ ಆಹಾರವನ್ನು ಅತಿಯಾಗಿ ಬೇಯಿಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ನಿಮ್ಮ ದೇಹಕ್ಕೆ ಕಡಿಮೆ ಪೋಷಕಾಂಶ ಸೇರುತ್ತದೆ. ಆಗ ಇದನ್ನು ಸರಿದೂಗಿಸಿಕೊಳ್ಳಲು ದೇಹವು ಇತರೆ ಕುರುಕಲು ತಿಂಡಿಗಳ ಕಡೆಗೆ ವಾಲಲು ಶುರು ಮಾಡುತ್ತದೆ. ಹಾಗಾಗಿ ಆದಷ್ಟು ಸುಶಿ ಮತ್ತು ಸಲಾಡ್‍ಗಳನ್ನು ಸೇವಿಸಿ. ಹಬೆಯಲ್ಲಿ ಬೇಯಿಸಿದ, ಸುಟ್ಟ ಆಹಾರ ಮತ್ತು ತರಕಾರಿಗಳನ್ನು ಸೇವಿಸಿ. ಮೈಕ್ರೋ ವೇವ್ ಓವೆನ್‍ನಲ್ಲಿ ಆಹಾರಗಳನ್ನು ಬಿಸಿ ಮಾಡುವುದನ್ನು ನಿಯಂತ್ರಿಸಿ.

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ:

ನೀವು ಬಡಿಸಿಕೊಳ್ಳುವ ಆಹಾರದ ಪ್ರಮಾಣವನ್ನು ತಗ್ಗಿಸಿ:

ಮನೆಯಲ್ಲಾಗಲಿ ಅಥವಾ ರೆಸ್ಟೌರೆಂಟ್‍ ಆಗಲಿ ನಮಗೆ ಅಗತ್ಯವಾದ ಆಹಾರ ಪ್ರಮಾಣಕ್ಕಿಂತ ಹೆಚ್ಚಿಗೆ ಬಡಿಸಲು ಅವಕಾಶ ಕೊಡಬೇಡಿ. ಆದಷ್ಟು ಕಡಿಮೆ ಹಾಕಿಸಿಕೊಂಡು ಊಟಮಾಡಿ. ಹೀಗೆ ಶೇ.10% ರಿಂದ 20% ಕಡಿಮೆ ಮಾಡಿದ್ದಾದಲ್ಲಿ ನಿಮ್ಮ ತೂಕ ಸುಲಭವಾಗಿ ಇಳಿದು ಹೋಗುತ್ತದೆ. ಆದಷ್ಟು ಪಲ್ಯ ಮುಂತಾದವುಗಳನ್ನು ಬಟ್ಟಲಿನಲ್ಲಿ ಹಾಕಿಸಿಕೊಳ್ಳಬೇಡಿ. ನಿಮ್ಮ ತಟ್ಟೆಯಲ್ಲಿ ಯಾವುದೇ ತೆರನಾದ ಅಳತೆ ಮಾಡಬಹುದಾದ ವಸ್ತುಗಳು ಇರದಂತೆ ನೋಡಿಕೊಳ್ಳಿ.

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ:

ನಿಮ್ಮ ತಟ್ಟೆಯ ಗಾತ್ರದಲ್ಲಿ ಬದಲಾವಣೆ ತನ್ನಿ:

12 ಇಂಚಿನ ತಟ್ಟೆಯ ಬದಲಿಗೆ 10 ಇಂಚಿನ ತಟ್ಟೆಯನ್ನು ಬಳಸಿ. ಇದರಿಂದ ನಿಮ್ಮ ಆಹಾರ ಸೇವನೆಯ ಪ್ರಮಾಣ ಆಟೊ ಮೆಟಿಕ್ ಆಗಿ ಕಡಿಮೆಯಾಗುವುದನ್ನು ನೀವೇ ಗಮನಿಸುವಿರಿ. ಕಾರ್ನೆಲ್ಸ್ ಬ್ರೈನ್ ವಾನ್‍ಸಿಂಕ್, ಪಿಎಚ್‍ಡಿ ಯವರು ತಮ್ಮ ಅಧ್ಯಯನದಲ್ಲಿ ಈ ಅಂಶವನ್ನು ಕುರಿತು ವಿವರವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ತಟ್ಟೆ ಬಟ್ಟಲುಗಳು ದೊಡ್ಡದಾಗಿದ್ದಷ್ಟು, ಜನರು ಅದಕ್ಕೆ ಹೆಚ್ಚಾಗಿ ಆಹಾರವನ್ನು ಬಡಿಸುತ್ತಾರಂತೆ.

ಮನೆ ಊಟಮಾಡಿ:

ಮನೆ ಊಟಮಾಡಿ:

ವಾರದಲ್ಲಿ ಐದು ದಿನವಾದರು ಮನೆಯಲ್ಲಿಯೇ ಅಡುಗೆ ಮಾಡಿ. ಒಂದು ಗ್ರಾಹಕರ ವರದಿಯ ಸರ್ವೇಯ ಪ್ರಕಾರ " ತೂಕ ಇಳಿಸಿಕೊಳ್ಳುವವರು" ಈ ಅಭ್ಯಾಸದಿಂದ ಯಶಸ್ಸನ್ನು ಕಂಡಿದ್ದಾರಂತೆ. ಜೊತೆಗೆ ಅಡುಗೆ ಕೆಲಸ ಮಾಡುವದು ಒಂದು ವ್ಯಾಯಾಮ ಎಂದು ಭಾವಿಸಿ, ಕೆಲವು ಕ್ಯಾಲೋರಿಗಳು ಕರಗುತ್ತವೆ.

ಯೋಗ ಮಾಡಿ:

ಯೋಗ ಮಾಡಿ:

ತೂಕ ಕಡಿಮೆ ಮಾಡಿಕೊಳ್ಳಲು ಬಯಸುವ ಹೆಂಗಸರಿಗೆ ಯೋಗ ಒಂದು ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗವಾಗಿರುತ್ತವೆ. ಯೋಗವು ಆಹಾರವನ್ನು ಸೇವಿಸುವ ಕ್ರಮಕ್ಕೆ ಒಂದು ಕ್ರಮಬದ್ಧತೆ ತಂದು ಕೊಡುತ್ತದೆ. ಯೋಗವು ಮನಸ್ಸಿನಲ್ಲಿ ಒಂದು ಸ್ಥಿತ ಪ್ರಙ್ಞೆಯ ಮನೋಭಾವವನ್ನು ತಂದು ಕೊಡುವುದರಿಂದ ಆಹಾರವನ್ನು ಜೊ ಯೋಚನೆ ಮಾಡಿ ಸೇವಿಸುತ್ತವೆ. ಜೊತೆಗೆ ಯೋಗದಿಂದ ಪ್ರಶಾಂತವಾದ ಮನಸ್ಥಿತಿ ಸಹ ದೊರೆಯುತ್ತದೆ. ಇದರಿಂದ ಸಹ ನಾವು ಕಂಡಾಪಟ್ಟೆ ತಿನ್ನುವುದು ಕಡಿಮೆಯಾಗುತ್ತದೆ.

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ:

ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಸೇವಿಸಿ:

ಈ ದಿನ ರಾತ್ರಿ ಊಟಕ್ಕೆ ಒಂದು ತರಕಾರಿಯ ಬದಲಿಗೆ ಮೂರು ತರಕಾರಿಯನ್ನು ಬಳಸಿ. ನೀವು ಆರಾಮವಾಗಿ ಆ ಮೂರನ್ನು ತಿನ್ನುತ್ತೀರಿ. ತಿನ್ನುವುದರಲ್ಲಿ ಎಲ್ಲರೂ ವಿವಿಧ ಪ್ರಯೋಗಗಳನ್ನು ಮಾಡಲು ಬಯಸುತ್ತಾರೆ. ಹೆಚ್ಚಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

X
Desktop Bottom Promotion