Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಆಶ್ಚರ್ಯ ಚಕಿತಗೊಳಿಸುವ ಏಲಕ್ಕಿಯ ಅದ್ಭುತ ಪ್ರಯೋಜನಗಳು
ಭಾರತೀಯರ ಅಡುಗೆ ಮನೆಗಳಲ್ಲಿ ಕಾಣಸಿಗುವ ಒಂದು ಅತಿ ಸಾಮಾನ್ಯ ವಸ್ತುವಾಗಿದೆ. ಈ ಏಲಕ್ಕಿಯು ಸಿಹಿತಿಂಡಿ ಮತ್ತು ಖಾರ ಅಥವಾ ಉಪ್ಪು ರುಚಿಯಿರುವ ತಿಂಡಿಗಳ ತಯಾರಿಕೆಯಲ್ಲಿ ಬಳಸಲ್ಪಡುವುದು ಮಾತ್ರವಲ್ಲದೇ, ಏಲಕ್ಕಿಯು ಬಾಯಿಯನ್ನು ಸ್ವಚ್ಚಗೊಳಿಸಿ ತಾಜಾಗೊಳಿಸುವ ಒಂದು ಪ್ರಾಕೃತಿಕ ವಸ್ತುವಾಗಿದೆ. ಇಷ್ಟು ಮಾತ್ರವಲ್ಲದೇ, ಈ ತಿಳಿಹಸಿರು ಬಣ್ಣದ ಕಾಳು ಆರೋಗ್ಯದ ದೃಷ್ಟಿಯಿಂದ ಇನ್ನೂ ಅನೇಕ ಮಹತ್ವಪೂರ್ಣ ಪ್ರಯೋಜನಗಳನ್ನು ಹೊಂದಿದೆ. ಏಲಕ್ಕಿಯ 8 ಪ್ರಮುಖ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ.
ರಕ್ತಹೀನತೆಯ ವಿರುದ್ಧ ಸೆಣಸುತ್ತದೆ
ಏಲಕ್ಕಿಯಲ್ಲಿರುವ ಇತರ ಅತೀ ಮುಖ್ಯ ಘಟಕಗಳೆಂದರೆ ತಾಮ್ರ, ಕಬ್ಬಿಣ, ಹಾಗೂ ಅವಶ್ಯಕ ವಿಟಮಿನ್‌ಗಳಾದ ಸಿ. ಇವೆಲ್ಲವೂ ಕೆಂಪು ರಕ್ತಕಣಗಳ ಉತ್ಪತ್ತಿಗೆ ಹಾಗೂ ಜೀವಕೋಶಗಳಲ್ಲಿನ ಚಯಾಪಚಯ ಕ್ರಿಯೆಗೆ ಅತೀ ಪ್ರಮುಖವಾದವುಗಳಾಗಿದ್ದು, ಇದರ ಜೊತೆಗೆ ಏಲಕ್ಕಿಯಲ್ಲಿರುವ ಕಬ್ಬಿಣದ ಅಂಶವು ರಕ್ತಹಿನತೆಯ ವಿರುದ್ಧ ಹೋರಾಡಲು ಅತೀ ಉಪಯುಕ್ತವಾಗಿದೆ.

ಕಿವಿಮಾತು:
ಉಗುರು ಬೆಚ್ಚಗಿನ ಒಂದು ಲೋಟದಷ್ಟು ಹಾಲಿಗೆ ಒಂದು ಅಥವಾ ಎರಡು ಚಿಟಿಕೆಯಷ್ಟು ಏಲಕ್ಕಿ ಮತ್ತು ಅರಿಶಿನದ ಪುಡಿಯನ್ನು ಸೇರಿಸಿರಿ. ನೀವು ರುಚಿಗಾಗಿ ಇದಕ್ಕೆ ಸ್ವಲ್ಪ ಸಕ್ಕರೆಯನ್ನೂ ಅವಶ್ಯವಿದ್ದಲ್ಲಿ ಸೇರಿಸಿಕೊಳ್ಳಬಹುದು. ಪ್ರತಿರಾತ್ರಿ ಇದನ್ನು, ಆಯಾಸ ಪರಿಹಾರಕ್ಕಾಗಿ ಮತ್ತು ರಕ್ತಹಿನತೆಯ ಲಕ್ಷಣಗಳ ನಿವಾರಣೆಗಾಗಿ ಸೇವಿಸಿರಿ. ಕಪ್ಪು ಏಲಕ್ಕಿಯಲ್ಲಿರುವ ವಿಶೇಷತೆ ಏನೆಂದು ಗೊತ್ತಿದೆಯೇ?
ಹೃದಯದ ಬಡಿತವನ್ನು ನಿಯಮಿತಗೊಳಿಸುತ್ತದೆ
ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮತ್ತು ಮೆಗ್ನೀಷಿಯಂ ನಂತಹ ಖನಿಜಗಳಿಂದ ಪುಸ್ಟೀಕರಿಸಲ್ಪಟ್ಟಿರುವ ಏಲಕ್ಕಿಯು ಅವಶ್ಯಕ ನಿಮ್ಮ ಶರೀರದ ದ್ರವಗಳು, ರಕ್ತ, ಮತ್ತು ಜೀವಕೋಶಗಳಿಗೆ ಪೊಟ್ಯಾಸಿಯಂ ಒಂದು ಬಹು ಮುಖ್ಯ ಘಟಕವಾಗಿದೆ. ಏಲಕ್ಕಿಯು ಈ ಪ್ರಮುಖ ಘಟಕಗಳನ್ನು ಶರೀರಕ್ಕೆ ಯಥೇಚ್ಚವಾಗಿ ಪೂರೈಸುವುದರ ಮೂಲಕ ನಿಮ್ಮ ಹೃದಯದ ಬಡಿತವನ್ನು ನಿಯಮಿತಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.
ಕಿವಿಮಾತು:
ನಿಮ್ಮ ಪ್ರತಿದಿನದ ಭೋಜನಕ್ಕೆ ಏಲಕ್ಕಿಯನ್ನು ಸೇರಿಸಿರಿ ಅಥವಾ ಏಲಕ್ಕಿ ಚಹಾವನ್ನು ಕುಡಿಯುವುದರ ಮೂಲಕ ಅದರ ಅರೋಗ್ಯ ಲಾಭಗಳನ್ನು ಪಡೆಯಿರಿ. ಅಧಿಕ ರಕ್ತದೊತ್ತಡದ ಬಗೆಗಿನ ಗಿಡಮೂಲಿಕೆಗಳ ಪರಿಹಾರಗಳ ಕುರಿತು ಓದಿ ತಿಳಿಯಿರಿ.
ಉಸಿರಿನ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ
ನೀವು ಉಸಿರಿನ ದುರ್ವಾಸನೆಯನ್ನು ಹೊಂದಿದ್ದು ಎಲ್ಲಾ ಉಪಾಯಗಳನ್ನು ಪ್ರಯತ್ನಿಸಿ ವಿಫಲಗೊಂಡವರಾದರೆ, ಒಮ್ಮೆ ಏಲಕ್ಕಿಯನ್ನು ಉಪಯೋಗಿಸಿ ನೋಡಿ. ಈ ಏಲಕ್ಕಿಯ ಒಂದು ಸಣ್ಣ ಕಾಳು, ಸೂಕ್ಷ್ಮಾಣು ಪ್ರತಿಬoಧಕ (antibacterial) ಗುಣಗಳನ್ನು ಹೊಂದಿದೆ, ಅಜೀರ್ಣದ ಕಾರಣದಿಂದಾಗಿ ತಲೆದೋರುವ ಉಸಿರಿನ ದುರ್ವಾಸನೆಯನ್ನು ತಡೆಯುತ್ತದೆ. ತನ್ಮೂಲಕ ಏಲಕ್ಕಿಯು ಉಸಿರಿನ ದುರ್ವಾಸನೆಯ ಸಮಸ್ಯೆಯ ಮೂಲಕ್ಕೆ ಪರಿಹಾರವನ್ನು ಒದಗಿಸುತ್ತದೆ.
ಕಿವಿಮಾತು:
ಪ್ರತೀ ಊಟವಾದ ನಂತರ ಏಲಕ್ಕಿಯ ಕಾಳೊಂದನ್ನು ಜಗಿಯಿರಿ ಅಥವಾ ನೀವು ಪ್ರತೀ ಮುಂಜಾನೆ ಏಲಕ್ಕಿ ಚಹಾವನ್ನು ಸೇವಿಸಿ ತನ್ಮೂಲಕ ನಿಮ್ಮ ಪಚನ ಕ್ರಿಯೆಯನ್ನು ಚುರುಕುಗೊಳಿಸಬಹುದು ಹಾಗೂ ದೇಹದ ವಿಷಪದಾರ್ಥಗಳನ್ನು ಹೊರಹಾಕಬಹುದು. ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸಲು ಬಳಸಲ್ಪಡುವ ಇನ್ನಿತರ ಪ್ರಾಕೃತಿಕ ಪರಿಹಾರಗಳ ಬಗ್ಗೆ ಓದಿ ತಿಳಿಯಿರಿ.
ಜೀರ್ಣ ಪ್ರಕ್ರಿಯನ್ನು ಸುಲಭಗೊಳಿಸುತ್ತದೆ
ಭೋಜನದ ಬಳಿಕ ತೆಗೆದುಕೊಳ್ಳುವ ಬಡೆಸೋಪಿಗೆ ಏಲಕ್ಕಿಯನ್ನು ಅವಶ್ಯವಾಗಿ, ಹೆಚ್ಚುವರಿಯಾಗಿ ಯಾಕೆ ಸೇರಿಸುತ್ತಾರೆ ಎಂದು ನೀವು ಎಂದಾದರೂ ಚಕಿತಗೊoಡಿದ್ದಿರಾ ?! ಏಕೆಂದರೆ, ಏಲಕ್ಕಿಯು ಹೊಟ್ಟೆಯುಬ್ಬರವನ್ನು ನಿವಾರಿಸುವ ಗುಣವನ್ನು ಹೊಂದಿದ್ದು ಇದು ಪಚನ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ, ಹೊಟ್ಟೆಯ ಒಳಗೋಡೆಯ ಉರಿಯನ್ನು ಶಮನಗೊಳಿಸುತ್ತದೆ, ಹಾಗೂ ಹುಳಿತೇಗು ಮತ್ತು ವಾಂತಿಯ ಲಕ್ಷಣಗಳ ವಿರುದ್ಧ ಹೋರಾಡುತ್ತದೆ. ಮಾತ್ರವಲ್ಲದೇ, ಆಯುರ್ವೇದ ಪತ್ಯಪುಸ್ತಕಗಳಲ್ಲಿ ಉಲ್ಲೇಖಿತವಾಗಿರುವಂತೆ, ಏಲಕ್ಕಿಯು ಹೊಟ್ಟೆಯಲ್ಲಿನ ವಾಯು ಹಾಗೂ ನೀರಿನ ಅಂಶ/ಗುಣಗಳನ್ನು ಕಡಿಮೆ ಮಾಡಿ, ಹೊಟ್ಟೆಯು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಪಚನ ಮಾಡುವಂತೆ ಅನುವು ಮಾಡಿಕೊಡುತ್ತದೆ.
ಕಿವಿಮಾತು:
ನೀವು ಅಜೀರ್ಣ ತೊಂದರೆಯಿಂದ ಬಳಲುತ್ತಿರುವಿರಾದರೆ, ಈ ಸಲಹೆಯು ನಿಮಗಾಗಿ. ಸುಮಾರು 2 ರಿಂದ 3 ಕಾಳುಗಳಷ್ಟು ಏಲಕ್ಕಿ, ಒಂದು ಸಣ್ಣ ಶುo ತಿಯ ಚೂರು, ಒಂದಷ್ಟು ಲವಂಗದ ಚೂರುಗಳು, ಮತ್ತು ಸ್ವಲ್ಪ ದನಿಯಾ ಬೀಜಗಳನ್ನು ತೆಗೆದುಕೊಳ್ಳಿರಿ. ಇವುಗಳನ್ನು ಒಟ್ಟಿಗೆ ನುಣ್ಣಗೆ ಪುಡಿ ಮಾಡಿ, ಉಗುರು ಬೆಚ್ಚಗಿನ ನೀರಿನೊಂದಿಗೆ ಈ ಪುಡಿಯನ್ನು ಸೇವಿಸಿರಿ. ಈ ಚೂರ್ಣವು ಅಜೀರ್ಣ, ಹೊಟ್ಟೆಯುಬ್ಬರ ಮತ್ತು ವಾಯು ವಿಕಾರಕ್ಕೆ ತತಕ್ಷಣದ ಪರಿಹಾರವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











