Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಮೆಟ್ಟಿಲು ಏರುವ ಅದ್ಭುತ ಪ್ರಯೋಜನಗಳು
ಇಂದಿನ ದಿನಗಳಲ್ಲಿ ಲಿಫ್ಟ್ ಕೆಟ್ಟು ಹೋಗಿದ್ದೆ ಮಾತ್ರ ಹೆಚ್ಚಿನವರು ಮೆಟ್ಟಿಲು ಏರಿಕೊಂಡು ಹೋಗುತ್ತಾರೆ. ಆದರೆ ಲಿಫ್ಟ್ ಬದಲಿಗೆ ಮೆಟ್ಟಿಲುಗಳನ್ನು ಹತ್ತುವುದರಿಂದ ಹಲವಾರು ರೀತಿಯ ಲಾಭಗಳಿವೆ. ಇದು ಇತರ ಎಲ್ಲಾ ವ್ಯಾಯಾಮಗಳಿಗಿಂತ ಪರಿಣಾಮಕಾರಿ ವ್ಯಾಯಾಮ.
ಬೆಳಗ್ಗಿನ ವ್ಯಾಯಾಮದ ಪರಿಣಾಮಕಾರಿ ಪ್ರಯೋಜನಗಳು
ಇತ್ತೀಚಿನ ವರದಿಯ ಪ್ರಕಾರ ಮಟ್ಟಿಲುಗಳನ್ನು ಹತ್ತುವುದರಿಂದ ನೀವು ಕ್ಯಾಲರಿ ದಹಿಸಿ, ಹೃದಯವನ್ನು ಬಲಿಷ್ಠವನ್ನಾಗಿ ಮಾಡಬಹುದು. ಇದು ಜಾಗಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್, ಟೆನಿಸ್ ಅಥವಾ ಇತರ ಯಾವುದೇ ವ್ಯಾಯಾಮಕ್ಕಿಂತಲೂ ಒಳ್ಳೆಯದು. ಮೆಟ್ಟಿಲು ಏರಲು ಆರಂಭಿಸುವ ಮತ್ತು ಅದರ ಲಾಭ ಪಡೆಯುವ.

* ಮೆಟ್ಟಿಲು ಏರುವ ಪರಿಣಾಮವೆಂದರೆ ನಿಮ್ಮ ಹೃದಯ ಮತ್ತು ಶ್ವಾಸಕೋಶವನ್ನು ಸುರಕ್ಷಿತವಾಗಿಡುತ್ತದೆ. ಬಲಿಷ್ಠವಾಗಿರುವ ಶ್ವಾಸಕೋಶದಿಂದ ನೀವು ಹೆಚ್ಚಿನ ಆಕ್ಸಿಜನ್ ಪಡೆಯಬಹುದು ಮತ್ತು ಬಲವಾದ ಹೃದಯವು ಆಮ್ಲಜನಕದಿಂದ ಕೂಡಿರುವ ರಕ್ತವನ್ನು ಸ್ನಾಯುವಿನ ತಂತುಗಳಿಗೆ ತಲುಪಿಸಿ ನಿಮಗೆ ಉತ್ತಮ ಭಾವನೆ ಉಂಟುಮಾಡುತ್ತದೆ.
* ಲಿಫ್ಟ್ ಬಿಟ್ಟು ಮೆಟ್ಟಿಲು ಏರುವುದರಿಂದ ನಿಮ್ಮ ಆರೋಗ್ಯ ಮಾತ್ರವಲ್ಲದೆ ಬೇರೆ ವಿಧದಿಂದಲೂ ನೆರವಾಗುತ್ತದೆ. ಇದು ಸಮಯ ಮತ್ತು ಶಕ್ತಿಯ ಉಳಿತಾಯ ಮಾಡುತ್ತದೆ. ನಿಬಿಡ ಅವಧಿಗಳಲ್ಲಿ ನೀವು ಇರುವ ಮಹಡಿಗೆ ಲಿಫ್ಟ್ ಬರಲು ತುಂಬಾ ಸಮಯ ಬೇಕಾಗುತ್ತದೆ. ಆಗ ನೀವು ಮೆಟ್ಟಿಲು ಏರಿ ಸಮಯ ಉಳಿಸಬಹುದು.
* ಮೆಟ್ಟಿಲು ಏರುವುದರಿಂದ ನೀವು ತೂಕ ಏರಿಕೆ ವಿರುದ್ಧ ಹೋರಾಡಬಹುದು ಮತ್ತು ದೇಹದಲ್ಲಿನ ಕ್ಯಾಲರಿ ದಹಿಸಬಹುದು.
ಕಡಿಮೆ ಕೊಬ್ಬಿನೊಂದಿಗೆ ಫಾಸ್ಟ್ ಫುಡ್ ಅನ್ನು ಸವಿಯುವ ಉಪಾಯಗಳು
* ಮೆಟ್ಟಿಲು ಏರುವುದು ಉಚಿತ ವ್ಯಾಯಾಮ. ಇದಕ್ಕೆ ಯಾರಿಗೂ ಹಣ ನೀಡಬೇಕಿಲ್ಲ ಮತ್ತು ಹಣ ವೆಚ್ಚ ಮಾಡಿ ಸಾಧನ ಖರೀದಿಸಬೇಕೆಂದಿಲ್ಲ. ಮೆಟ್ಟಿಲುಗಳು ಇರುವ ತನಕ ನೀವು ಏರಬಹುದು.
* ಮೆಟ್ಟಿಲು ಏರುವುದರಿಂದ ನಿಮ್ಮ ಜೀವನಕ್ಕೆ ಹೆಚ್ಚಿನ ವರ್ಷ ಸೇರ್ಪಡೆ ಮಾಡುತ್ತದೆ. ಇದು ಗಾಯದ ಅಪಾಯ ಕಡಿಮೆ ಮಾಡುತ್ತದೆ. ಯಾಕೆಂದರೆ ಇದು ಸ್ನಾಯುವಿನ ಶಕ್ತಿ ಮತ್ತು ಬಲ ಹೆಚ್ಚಿಸುತ್ತದೆ. ಇದು ನಿಮ್ಮ ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ ಮತ್ತು ಯಾವುದೇ ರೀತಿಯ ಅನಾರೋಗ್ಯ ನಿಮ್ಮ ದೇಹವನ್ನು ಕಾಡದಂತೆ ತಡೆಯುತ್ತದೆ.
* ಇದು ನಿಮ್ಮ ಕಾಲು ಮತ್ತು ಕುಂಡೆ ಸ್ನಾಯುಗಳ ಬಲ ಹೆಚ್ಚಿಸುತ್ತದೆ.
* ಇದು ನಿಮ್ಮನ್ನು ಒತ್ತಡದಿಂದ ದೂರವಿಡುತ್ತದೆ.
* ಈ ವ್ಯಾಯಾಮದ ಬಳಿಕ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ.
* ವೈದ್ಯರ ಸಲಹೆ ಪಡೆದುಕೊಂಡ ಬಳಿಕ ಗರ್ಭಿಣಿ ಮಹಿಳೆಯರಿಗೆ ಒಳ್ಳೆಯ ವ್ಯಾಯಾಮ.
ತೂಕ ಇಳಿಸಲು ಸಹಕಾರಿ ಈ ಸೂಪರ್ ಫುಡ್‌ಗಳು
* ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಟೈಪ್ 2 ಡಯಾಬಿಟಿಸ್, ದೀರ್ಘಕಾಲಿನ ರೋಗಗಳು ಬರುವ ಅಪಾಯ ಕಡಿಮೆ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications