Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ನಿಮ್ಮ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬೇಕೇ?
ಸ್ವಚ್ಛತೆ ಎಂಬುದು ನಮ್ಮೊಂದಿಗೆ ಬೆಳೆದು ಬಂದಿರುವ ಪ್ರಕ್ರಿಯೆ. ಮನೆಯಿರಲಿ, ಕಚೇರಿಯಿರಲಿ, ಬಸ್ ನಿಲ್ದಾಣವಾಗಿರಲಿ ಎಲ್ಲಿ ಹೋದರೂ ಸ್ವಚ್ಛತೆ ನಮ್ಮಲ್ಲಿರಬೇಕು. ಆದರೆ ನಾವೆಷ್ಟೂ ಸ್ವಚ್ಛವಿದ್ದರೂ ನಮಗೆ ತಿಳಿಯದೆಯೇ ನಾವು ಮುಜುಗರಕ್ಕೆ ಒಳಗಾಗುವ ಪ್ರಸಂಗಗಳು ಉಂಟಾಗುತ್ತವೆ. ನಾವು ಅದನ್ನು ನಿಯಂತ್ರಿಸಿದಷ್ಟೂ ನಮಗೆ ಅದು ಮುಳುವಾಗುತ್ತದೆ.
ಇದಕ್ಕಾಗಿ ನಾವು ಎಷ್ಟೇ ನಿಯಂತ್ರಣಗಳನ್ನು ಸ್ವಚ್ಛತೆಗಳನ್ನು ಮಾಡಿಕೊಂಡರೂ ಮತ್ತೊಬ್ಬರಿಗೆ ನಮ್ಮ ಮೇಲೆ ಅಸಹ್ಯ ಉಂಟಾಗುವಂತೆ ಇದು ಕಾರ್ಯಪ್ರವೃತ್ತಿಸುತ್ತದೆ. ಹಾಗಿದ್ದರೆ ಈ ಬಾಯಿ ದುರ್ಗಂಧ ಉಂಟಾಗಲು ಕಾರಣಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಚರ್ಚಿಸೋಣ.
ಬಾಯಿ ದುರ್ವಾಸನೆಗೆ ಕೆಲ ಅಚ್ಚರಿಯ ಕಾರಣಗಳು!

ನಿಮ್ಮ ಬಾಯಿ ಒಣಗಿರುವ ಸಂದರ್ಭದಲ್ಲಿ:
ನಿಮ್ಮ ಬಾಯಿ ಒಣಗಿರುವ ಸಂದರ್ಭದಲ್ಲಿ ಬಾಯಿ ದುರ್ಗಂಧ ಹೆಚ್ಚಾಗಿರುತ್ತದೆ. ನಿಮ್ಮ ಬಾಯಿಯ ಮೂಲಕ ನೀವು ಉಸಿರಾಡುವುದು, ಬಾಯಿ ತೆರೆದು ನಿದ್ದೆ ಮಾಡುವುದು, ಮತ್ತು ನೀವು ಹೆಚ್ಚು ಗೊರಕೆ ಹೊಡೆಯುವರಾಗಿದ್ದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಮೂಗಿನ ಹೊಳ್ಳೆಗಳನ್ನು ಉಸಿರಾಡಲು ಬಳಸಿ.

ಸರಿಯಾದ ಬಾಯಿ ಮುಕ್ಕಳಿಸುವಿಕೆ:
ನಿಮ್ಮ ಬಾಯಿ ಮುಕ್ಕಳಿಸುವುದು ಸರಿಯಾಗದಿದ್ದರೆ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಉತ್ತಮ ಗುಣಮಟ್ಟದ ಮೌತ್‌ವಾಶ್ ಅನ್ನು ಬಳಸಿ. ಹೆಚ್ಚು ಆಲ್ಕೋಹಾಲ್ ಇರುವ ಮೌತ್‌ವಾಶ್‌ಗಳು ನಿಮ್ಮ ಬಾಯಿಯನ್ನು ಒಣಗಿಸಿ ದುರ್ಗಂಧ ಉಂಟಾಗಲು ಕಾರಣವಾಗುತ್ತವೆ.

ನೆಗಡಿ:
ನಿಮಗೆ ನೆಗಡಿಯಾಗಿದ್ದರೆ ನೀವು ಬಾಯಿಯಿಂದ ಉಸಿರಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ. ನಿಮಗೆ ಜ್ವರವಿದ್ದಾಗ ಕೂಡ ನಿಮ್ಮ ಬಾಯಿ ದುರ್ಗಂಧ ಬೀರುತ್ತದೆ.

ನಿಮ್ಮ ಉಪಹಾರ:
ನಿಮ್ಮ ಬೆಳಗ್ಗಿನ ಉಪಹಾರವನ್ನು ನೀವು ಸರಿಯಾದ ಪ್ರಮಾಣದಲ್ಲಿ ಆರೋಗ್ಯಯುತವಾಗಿ ಸೇವಿಸುತ್ತಿರುವಿರಾ ಎಂಬುದನ್ನು ನೋಡಿ. ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್ ಸರಿಯಾಗಿರದಿದ್ದರೂ ಈ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬ್ರೇಕ್‌ಫಾಸ್ಟ್ ಕಡೆಗೆ ನಿಮ್ಮ ಗಮನವಿರಲಿ.

ಕಡಿಮೆ ಕಾರ್ಬೋ ಡೈಯೆಟ್:
ನಾವು ಈ ದಿನಗಳಲ್ಲಿ ತೂಕ ಇಳಿಸುವ ಆತುರದಲ್ಲಿರುವುದರಿಂದ ಸರಿಯಾದ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅನ್ನು ತೆಗೆದುಕೊಳ್ಳುತ್ತಿಲ್ಲ. ಇದು ಕೂಡ ಬಾಯಿ ವಾಸನೆಗೆ ಕಾರಣವಾಗಿದೆ.

ಆಲ್ಕೋಹಾಲ್:
ನಿಮಗೆ ಆಲ್ಕೋಹಾಲ್ ಕುಡಿಯುವ ಅಭ್ಯಾಸವಿದ್ದಲ್ಲಿ ಕೂಡ ಬಾಯಿಯ ಕೆಟ್ಟ ವಾಸನೆ ನಿಮ್ಮನ್ನು ಕಾಡುತ್ತದೆ. ಆಲ್ಕೋಹಾಲ್ ಬಾಯಿಯನ್ನು ಒಣಗಿಸಿ ಬ್ಯಾಕ್ಟೀರಿಯಾಕ್ಕೆ ದಾರಿ ಮಾಡಿಕೊಡುತ್ತದೆ.

ನೀವು ಏನನ್ನು ಸೇವಿಸುತ್ತೀರಿ:
ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಶುಂಠಿ ಮತ್ತು ಬೆಳ್ಳುಳ್ಳಿ ಬೆರೆತ ಆಹಾರ ತಿನ್ನಲು ರುಚಿಯಾಗಿರುತ್ತದೆ ಆದರೆ ಇವುಗಳನ್ನೇ ಹೆಚ್ಚು ತಿನ್ನುವುದು ಬಾಯಿಯ ವಾಸನೆಗೆ ಕಾರಣವಾಗುತ್ತದೆ.

ನೀರು ಕುಡಿಯುವುದು ತಪ್ಪಿಸದಿರಿ:
ನೀರು ಸೇವನೆಯನ್ನು ಅತ್ಯಧಿಕವಾಗಿ ನೀವು ಮಾಡಿದಷ್ಟೂ ನಿಮ್ಮ ಬಾಯಿಯ ಕೆಟ್ಟ ವಾಸನೆ ಸಮಸ್ಯೆ ನಿಮ್ಮಿಂದ ದೂರಾಗುತ್ತದೆ. ಬಾಯಿಯನ್ನು ನೀರು ಆಗಾಗ್ಗೆ ಸ್ವಚ್ಛಗೊಳಿಸುತ್ತಿರುತ್ತದೆ ಮತ್ತು ಇದರಿಂದ ನಿಮ್ಮ ಬಾಯಿ ದುರ್ವಾಸನೆಯ ಸಮಸ್ಯೆ ಖಂಡಿತ ದೂರಾಗುತ್ತದೆ.



Click it and Unblock the Notifications
