Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಎಬೋಲಾ ಸೋಂಕಿನಿಂದ ದೂರವಿರಲು ಎಂಟು ಸಲಹೆಗಳು
ಎಬೋಲಾ ಎಂಬುದು ಮೂಲತಃ ಪ್ರಾಣಿಗಳಲ್ಲಿ ಕಂಡು ಬರುವ ಒಂದು ಬಗೆಯ ವೈರಸ್. ಯಾವಾಗ ಮನುಷ್ಯರು ಇದರ ಸಂಪರ್ಕಕ್ಕೆ ಬರುತ್ತಾರೋ, ಆಗ ಎಬೋಲಾವು ಕಾಣಿಸಿಕೊಳ್ಳುತ್ತದೆ. ಈ ಬಗೆಯ ಜ್ವರವು 1976ರಿಂದ ಹಲವಾರು ಬಾರಿ ಕಾಣಿಸಿಕೊಂಡಿದೆ. ಈ ವೈರಸ್ ಹೆಚ್ಚಾಗಿ ಆಫ್ರಿಕಾದ ನಿತ್ಯ ಹರಿದ್ವರ್ಣದ ಮಳೆಕಾಡುಗಳಲ್ಲಿ ಕಂಡು ಬರುತ್ತದೆ.
ಮಾರಕ ವೈರಸ್ ನಿಂದ ಬರುವ ಎಬೋಲಾ ಸೋಂಕು ಆರೋಗ್ಯದಲ್ಲಿ ಉದಾಸೀನತೆ ತೋರಿಸಿದರೆ ಸುಲಭವಾಗಿ ಆಕ್ರಮಿಸಿಕೊಂಡುಬಿಡುತ್ತದೆ. ಸೋಂಕನ್ನು ತಡೆಗಟ್ಟಲು ಪರಿಣಾಮಕಾರಿ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಮೂಲಕ ಮಾತ್ರ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಸಾಧ್ಯ ಎನ್ನಲಾಗಿದೆ. ಎಬೋಲಾ ಸೋಂಕನ್ನು ತಡೆಗಟ್ಟಲು ಈ ಕೆಳಗೆ ತಜ್ಞರು ನೀಡಿರುವ ಕೆಲವು ಸಲಹೆಗಳನ್ನು ನೀಡಲಾಗಿದೆ.
ಎಚ್ಚರ; ಮಾರಕ ಎಬೋಲಾ ಜ್ವರದ ಲಕ್ಷಣಗಳೇನು?

ಎಬೋಲಾದ ಬಗ್ಗೆ ತಿಳಿದುಕೊಳ್ಳಿ
ಎಬೋಲಾದ ಲಕ್ಷಣಗಳನ್ನು ತಿಳಿದುಕೊಂಡು ಅದನ್ನು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ರೋಗ ತಡೆಗಟ್ಟಲು ಮೊದಲ ಹೆಜ್ಜೆ. ಈ ಮಾಹಿತಿಯನ್ನು ಪಶ್ಚಿಮ ಆಫ್ರಿಕಾಕ್ಕೆ ಪ್ರಯಾಣ ಮಾಡುವವರು ಮತ್ತು ಅಲ್ಲಿಂದ ಹಿಂತಿರುಗುವವರು ತಿಳಿದುಕೊಳ್ಳಲೇ ಬೇಕು.

ನೈರ್ಮಲ್ಯ ಕಾಪಾಡುವುದು
ಮೂಲಭೂತ ನೈರ್ಮಲ್ಯ ಕಾಪಾಡಿಕೊಳ್ಳುವುದು ಎಬೋಲಾ ತಡೆಗಟ್ಟಲು ಮಾಡಬೇಕಾದ ಮೊದಲ ಹೆಜ್ಜೆ. ಯಾವ ರೀತಿ ವೈರಸ್ ಆಕ್ರಮಿಸುತ್ತದೆ ಎಂಬುದು ಇಂದಿಗೂ ಚರ್ಚೆಗೆ ಒಳಗಾದ ಪ್ರಶ್ನೆ ಆದರೆ ಕಣ್ಣು ಮತ್ತು ಚರ್ಮದ ಮೂಲಕ ವೈರಸ್ ದೇಹ ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ. ಆದಾಗ್ಯೂ ಆಹಾರ ಮತ್ತು ನೀರು ಕೂಡ ಕಾರಣವಾಗಬಹುದು. ಆದ್ದರಿಂದ ಆಗಾಗ ಕೈ ತೊಳೆದುಕೊಳ್ಳುವುದು, ಆಹಾರ ತೆಗೆದುಕೊಳ್ಳುವ ಮುನ್ನ ಕೈ ತೊಳೆದುಕೊಳ್ಳುವುದು, ಬಾಯಿಯನ್ನು ಮುಚ್ಚಿಕೊಂಡಿರುವುದು ಇವೆಲ್ಲ ವೈರಸ್ ಹರಡದಂತೆ ಮತ್ತು ದೇಹಕ್ಕೆ ಸೇರದಂತೆ ತಡೆಗಟ್ಟುತ್ತವೆ.

ದೇಹದ ದ್ರವಗಳು ಮತ್ತು ರಕ್ತದ ಜೊತೆಗೆ ಸಂಪರ್ಕವನ್ನು ತಪ್ಪಿಸಿ
ಎಬೋಲಾ ವೈರಸ್ ರಕ್ತ, ಎಂಜಲು, ಬೆವರು, ಮೂತ್ರ, ಸೊಂಕಿರುವ ವ್ಯಕ್ತಿಯ ವಾಂತಿಯಿಂದ ಕೂಡ ಹರಡುತ್ತದೆ. ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಸೋಂಕಿತ ಸೂಜಿ ಮತ್ತು ಪ್ರಥಮ ಚಿಕಿತ್ಸೆ ಮಾಡುವಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

ಗಾಯಕ್ಕೆ ಚಿಕಿತ್ಸೆ ನೀಡಿ
ತೆರೆದ ಗಾಯ ಮತ್ತು ಕಜ್ಜಿಗಳು ವೈರಸ್ ಒಳಹೋಗಲು ದಾರಿ ಮಾಡಿಕೊಡಬಹುದು. ಅದ್ದರಿಂದ ಸಣ್ಣ ಗಾಯಗಳು ಇನ್ನಿತರ ರಕ್ತಬರುವ ಗಾಯಗಳನ್ನು ಚಿಕಿತ್ಸೆಯ ನಂತರ ಕವರ್ ಮಾಡಿ ಇಡಬೇಕು.

ಜನಜಂಗುಳಿಯಿಂದ ದೂರವಿರಿ
ನೇರ ಸಂಪರ್ಕದಿಂದ ಸೋಂಕುಗಳು ಬೇಗ ತಗುಲುತ್ತವೆ. ಆದ್ದರಿಂದ ಎಬೋಲಾ ಸೋಂಕು ತಗುಲಿರುವವರು ಇತರ ಆರೋಗ್ಯವಂತರಿಂದ ದೂರವಿರಬೇಕು.

ರಕ್ಷಣಾತ್ಮಕ ಕವಚ ಬಳಸಿ
ವೈದ್ಯಕೀಯ ಸಿಬಂದಿಗಳು ಮತ್ತು ಕಾರ್ಯಕರ್ತರಿಗೆ ಎಬೋಲಾ ವೈರಸ್ ನಿಂದ ದೂರವಿರಲು ಗ್ಲೋವ್ಸ್, ಮಾಸ್ಕ್ಸ್ ಇವುಗಳನ್ನು ಖಡ್ಡಾಯವಾಗಿ ಬಳಸಬೇಕು. ಪಶ್ಚಿಮ ಆಫ್ರಿಕಾದ ಭಾಗದಲ್ಲಿರುವ ಆರೋಗ್ಯವಂತ ಜನರು ಕೂಡ ಗ್ಲೋವ್ಸ್ ಮತ್ತು ಮಾಸ್ಕ್ ಬಳಸುವುದು ಸೂಕ್ತ.

ಸರಿಯಾಗಿ ಬೇಯಿಸದ ಮಾಂಸ ಸೇವಿಸಬೇಡಿ
ಈ ಸೋಂಕು ಪ್ರಾಣಿಗಳಿಂದ ಕೂಡ ಮನುಷ್ಯರಿಗೆ ಹರಡುತ್ತದೆ ಎನ್ನಲಾಗಿದೆ. ಜೊತೆಗೆ ಬಾವುಲಿಯು ಎಬೋಲಾಕ್ಕೆ ಮೂಲ ಕಾರಣ ಎಂದು ಕೂಡ ಹೇಳಲಾಗುತ್ತದೆ. ಇದು ಇತರ ಪ್ರಾಣಿಗಳಿಗೂ ಹರಡುತ್ತದೆ ಆದ್ದರಿಂದ ಬೇಯಿಸದ ಮಾಂಸ ಸೇವನೆಯನ್ನು ಮಾಡಬೇಡಿ.

ಅನಗತ್ಯ ಪ್ರಯಾಣದಿಂದ ದೂರವಿರಿ
ದೆಹಲಿಯ ರಾಕ್ ಲ್ಯಾಂಡ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ ರತನ್ ಕುಮಾರ್ ವೈಶ್ ಅವರ ಸಲಹೆಯಂತೆ ವೈರಸ್ ಇರುವ ಜಾಗಗಳಿಗೆ ಪ್ರಯಾಣವನ್ನು ಬೆಳಸದಿರುವುದು ಸೂಕ್ತ.



Click it and Unblock the Notifications