Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡಲು 6 ಪ್ರಮುಖ ಕಾರಣಗಳು
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ಚೆನ್ನಾಗಿರುವ ಆಹಾರವನ್ನು ಸೇವಿಸಿ ಉತ್ತಮವಾದ ದೈಹಿಕ ವ್ಯಾಯಾಮವನ್ನು ಅನುಸರಿಸಿಕೊಂಡು ನಮ್ಮ ದೇಹವನ್ನು ಸುಸ್ಥಿಯಲ್ಲಿಡಬೇಕು. ಇನ್ನು ಆರೋಗ್ಯಕರ ಆಹಾರದಂತೆ ನಮ್ಮ ಜೀವನಕ್ಕೆ ಅತೀ ಅವಶ್ಯಕ ದೈಹಿಕ ವ್ಯಾಯಾಮವಾಗಿದೆ.
ವ್ಯಾಯಾಮವು ದೈಹಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಾನಸಿಕ ಸುದೃಢತೆಯನ್ನು ಉತ್ತಮಗೊಳಿಸುತ್ತದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಆಧುನಿಕವಾಗಿ ಎಷ್ಟೇ ನಿಪುಣರಾಗಿದ್ದರೂ ಆರೋಗ್ಯದ ಬಗೆಗಿನ ಕೆಲವೊಂದು ಸರಳ ಸೂತ್ರಗಳನ್ನು ನಾವು ಪಾಲಿಸಬೇಕಾದ್ದು ಅಗತ್ಯವಾಗಿದೆ.
ನೀವು ದಿನವು ನಿಮ್ಮ ದಿನ ಅಧಿಕೃತವಾಗಿ ಪ್ರಾರಂಭವಾಗುವುದಕ್ಕೂ ವ್ಯಾಯಾಮ ಮಾಡಬೇಕು ಎನ್ನುವುದಕ್ಕೆ 8 ಕಾರಣಗಳನ್ನು ಕೊಡಬಲ್ಲೆವು. ಆದರೆ ಕೆಲವರು ದಿನದಲ್ಲಿ ಯಾವ ಸಮಯದಲ್ಲಿ ಎಷ್ಟು ಹೊತ್ತು ವ್ಯಾಯಾಮ ಮಾಡುತ್ತೇವೆ ಎನ್ನುವುದು ನಮ್ಮ ಮೇಲೆ ಯಾವ ರೀತಿಯ ಬದಲಾವಣೆಗಳೂ ಆಗುವುದಿಲ್ಲ ಎಂದೇ ಹೇಳುತ್ತಾರೆ. ಅವರ ಪ್ರಕಾರ, ನೀವು ಬೆಳಗ್ಗೆ 7 ಗಂಟೆಗೆ ಅಥವಾ ಸಂಜೆ 7 ಗಂಟೆಗೆ ಯಾವುದೇ ಸಮಯದಲ್ಲಿ ತರಬೇತಿಯನ್ನು ತೆಗೆದುಕೊಂಡರೂ ಯಾವುದೇ ವ್ಯತ್ಯಾಸಗಳಾಗುವುದಿಲ್ಲ. ಆದರೆ, ಫಿಟ್ನೆಸ್ ತಜ್ಞರು ಬೆಳಿಗ್ಗೆ ತರಬೇತಿ ತೆಗೆದುಕೊಳ್ಳುವುದು ಅನುಕೂಲ ಎಂದು ಹೇಳುತ್ತಾರೆ.
ನಿಮ್ಮ ದೇಹದಲ್ಲಿ ಸ್ಥಿರತೆ ನಿರ್ಮಿಸುವ ಮತ್ತು ಸದೃಢತೆಯನ್ನು ಹೊಂದುವುದಕ್ಕೂ ಮೊದಲು ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವ 8 ಪ್ರಮುಖ ಕಾರಣಗಳು ಇಲ್ಲಿವೆ.

ನಿಮ್ಮ ಚಯಾಪಚಯ ಕ್ರಿಯೆಗೆ ಸಹಾಯಕ
ಬೆಳಗಿನ ಸಮಯದಲ್ಲಿ ವ್ಯಾಯಾಮ ತರಬೇತಿ ಪಡೆಯುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಲಭಮಾಡುತ್ತದೆ. ಈ ರೀತಿಯಲ್ಲಿ, ನಿಮ್ಮ ಚಯಾಪಚಯ ಕೆಲಸ ಹೆಚ್ಚುತ್ತದೆ ಮತ್ತು ಹೆಚ್ಚು ಕ್ಯಾಲೊರಿಯೂ ಕರಗುತ್ತದೆ. ನಿಮ್ಮ ದೇಹ ವಿಶ್ರಾಂತಿಯಲ್ಲಿದ್ದರೂ ನಿಮ್ಮಲ್ಲಿ ಕ್ಯಾಲೋರಿಯ ಅಂಶ ಅಧಿಕವಾಗಿರುವುದಿಲ್ಲ ನೀವು ಇಡೀ ದಿನ ಮೇಜಿನ ಮೇಲೆಯೇ ಕುಳಿತುಕೊಳ್ಳುತ್ತಿರಿ ಆದ್ದರಿಂದ ನಿಮ್ಮ ದೇಹಕ್ಕೆ ಆದಷ್ಟು ಚಾಲನೆಯನ್ನು ನೀಡಲು ಬೆಳಗಿನ ಹೊತ್ತಿನ ವ್ಯಾಯಾಮ ತುಂಬಾ ಅಗತ್ಯ.

ನಿಮಗೆ ಶಕ್ತಿಯ ಕೊಡುಗೆ
ಬೆಳಿಗೆ ವ್ಯಾಯಾಮ ಮಾಡುವುದರಿಂದ ದಿನದಲ್ಲಿ ನಿಮಗೆ ಅಧಿಕ ಶಕ್ತಿ ದೊರೆಯುತ್ತದೆ ನೀವು ದಿನ ಪೂರ್ತಿ ಬೇರೆ ಬೇರೆ ಕಾರಣಗಳಿಂದ ಆಯಾಸವನ್ನು ಅನುಭವಿಸುತ್ತಿದ್ದರೆ ಮೊದಲು ಬೆಳಿಗ್ಗೆ ಸಮಯದಲ್ಲಿ ಜಿಮ್ ಹೋಗಲು ಪ್ರಯತ್ನಿಸಿ. ಹಾಗೆ ನೀವು ಸಾಮಾನ್ಯವಾಗಿ ಹೀಗೆ ಮಾಡುವುದರಿಂದ ಎಂಡೋರ್ಫಿನ್ ಬಿಡುಗಡೆ ಮತ್ತು ಇತರ ಹಾರ್ಮೋನುಗಳು ಬಿಡುಗಡೆಯಾಗಿ ನಿಮ್ಮ ಆಯಾಸ ನಿವಾರಣೆಗೆ ಸಹಾಯಕವಾಗುತ್ತದೆ.

ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ
ಅಧ್ಯಯನಗಳು ಹೇಳುವ ಹಾಗೆ, ವ್ಯಾಯಾಮ ಗಮನಾರ್ಹವಾಗಿ ಮಾನಸಿಕ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಬೆಳಗಿನ ಸಮಯದ ತರಬೇತಿ ನಿಮ್ಮ ತಲೆಯಲ್ಲಿರುವ ಚಿಂತೆಯನ್ನು ತೆರವುಗೊಳಿಸುತ್ತದೆ ಮತ್ತು ನೀವು ಮನಸ್ಸಿನ ಆರೋಗ್ಯಕರ ಚೌಕಟ್ಟಿನಲ್ಲಿರುವಂತೆ ಮಾಡುತ್ತದೆ. ನಿಮ್ಮ ದಿನ ಅಧಿಕೃತವಾಗಿ ವ್ಯಾಯಾಮ ಮಾಡುವ ಮೂಲಕವೇ ಆರಂಭವಾದರೆ ಇದರಿಂದ ನಿಮ್ಮ ಹಿಂದಿನ ದಿನದ ಒತ್ತಡಗಳನ್ನು ನಾಶ ಮಾಡಿ ನಿಮ್ಮಲ್ಲಿ ತಾಜಾ ದೃಷ್ಟಿಕೋನವನ್ನು ಪ್ರತಿ ದಿನ ಹೊಂದಲು ಅನುವು ಮಾಡಿಕೊಡುತ್ತದೆ. ನಿಮ್ಮ ಹೊಸ ದಿನ ಅವಧಿಯಲ್ಲಿ ಅಸಮಾಧಾನ ಹೊಂದುವ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯ ಮಾಡುತ್ತದೆ .

ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ
ಅನೇಕರಿಗೆ ಬೆಳಗಿನ ವ್ಯಾಯಾಮ ದಿನವಿಡೀ ಹಸಿವನ್ನು ನಿಯಂತ್ರಿಸಲು ಪ್ರವೃತ್ತಿಯಾಗಿದೆ. ಇಂತಹ ಜನರು ಕಡಿಮೆ ತಿನ್ನುವುದು ಮಾತ್ರವಲ್ಲ, ( ಚಟುವಟಿಕೆಗೆ ಪ್ರತಿಯಾಗಿ ಎಂಡೋರ್ಫಿನ್ ಬಿಡುಗಡೆ ಹಸಿವು ಕುಗ್ಗಿಸಲು ಕಾರಣವಾಗುತ್ತದೆ ) ಅವರು ಆರೋಗ್ಯಕರ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವ್ಯಾಯಾಮ ನಿಮ್ಮ ಊಟದ ಕ್ರಮಗಳೂ ಸರಿಯಾಗಿ ಹಸಿವಿನ ನಿಯಂತ್ರಣ ಮಾಡಬಹುದು.

ಮಾನಸಿಕ ಅರಿವು ಹೆಚ್ಚಿಸುತ್ತದೆ
ನಿಮ್ಮ ಜೀವನದಲ್ಲಿ ಯಾವುದೇ ಸವಾಲುಗಳನ್ನೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಲು ವ್ಯಾಯಾಮವೂ ಅಗತ್ಯ. ನಿಮ್ಮ ದಿನ ಆರಂಭವಾಗುವುದಕ್ಕೆ ಮೊದಲು ನೀವು ತರಬೇತಿಯನ್ನು ಪಡೆದರೆ ನಿಮ್ಮ ದಿನದ ಕೆಲಸಗಳಲ್ಲಿ ಬರುವ ತೊಡಕುಗಳನ್ನು ನಿರ್ವಹಿಸಲು ಮಾನಸಿಕವಾಗಿ ಸಿದ್ಧರಾಗಬಹುದು. ವಾಸ್ತವವಾಗಿ, ವ್ಯಾಯಾಮ ನಂತರ ನಂತರ ನಿಮ್ಮ ಮಾನಸಿಕ ತೀಕ್ಷ್ಣತೆಯನ್ನು 4ರಿಂದ 10 ಗಂಟೆಗಳಿಗೆ ಹೆಚ್ಚಿಸುತ್ತದೆ. ಇದು ಮೆದುಳಿಗೆ ಆಮ್ಲಜನಕವನ್ನು ಒದಗಿಸಿ ರಕ್ತದ ಹರಿವನ್ನು ಹೆಚ್ಚಿಸಲೂ ಕೂಡ ಕಾರಣವಾಗಿದೆ.

ಉತ್ತಮ ನಿದ್ದೆ
ವರ್ಕ್ಔಟ್ ನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮವಾಗಿ ನಿದ್ದೆ ಮಾಡಲು ಸಹಾಯವಾಗುತ್ತದೆ. ನಿಮ್ಮ ದೇಹ ಇದು ಮನಗುವ ಸಮಯ ಎಂಬುದನ್ನು ಎಚ್ಚರಿಸುವಂತೆ ನಿಮಗೆ ಬೆಳಗಿನ ಕೆಲಸಕ್ಕೆ ಹೋಗುವ ಅನಿವಾರ್ಯತೆಯನ್ನು ಕೂಡ ನಿಮ್ಮ ದೇಹ ಅರ್ಥ ಮಾಡಿಕೊಂಡು, ನೀವು ಬೆಳಿಗ್ಗೆ ಸುಲಭವಾಗಿ ಏಳುವಂತೆ ಮಾಡುತ್ತದೆ. ಆದರೆ ನೀವು ಸರಿಯಾಗಿ ವಿಶ್ರಾಂತಿ ಪಡೆಯದಿದ್ದರೆ, ಸದೃಢತೆ ಕಾಯ್ದುಕೊಳ್ಳಲು ಮತ್ತು ನಿಮ್ಮ ಹೃದಯದ ಕಾರ್ಯ ಸುಧಾರಿಸುವುದು ಕಷ್ಟ.



Click it and Unblock the Notifications