Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯನ ಕಿರಣಗಳು ಆರೋಗ್ಯಕ್ಕೆ ಏಕೆ ಅತ್ಯುತ್ತಮ?
ಈ ಭೂಮಿ, ಜೀವನ ಎಲ್ಲವೂ ಸೂರ್ಯನಿಂದಲೇ ನಡೆಯುತ್ತಿದೆ. ಸಕಲ ಸಸ್ಯ, ಜೀವಿಗಳಿಗಳ ಉಳಿವಿಗೆ ಸೂರ್ಯನ ಕಿರಣಗಳು ಅತ್ಯಗತ್ಯವಾಗಿವೆ. ಅಂತೆಯೇ ನಮ್ಮ ಶರೀರಕ್ಕೂ ಸೂರ್ಯನ ಕಿರಣಗಳು ಬೇಕು. ಇದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ. ಉತ್ಪತ್ತಿಯಾಗುತ್ತದೆ. ವಿಟಮಿನ್ ಡಿ ಕೊರತೆಯಿಂದ ಮಕ್ಕಳಲ್ಲಿ ಮೂಳೆಗಳು ಧೃಢವಾಗುವುದು ನಿಧಾನವಾಗುತ್ತದೆ ಅಲ್ಲದೇ ಇನ್ನೂ ಇತರ ಮಾರಕ ರೋಗಗಳು ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ.
ಸೂರ್ಯನ ಬೆಳಕು ಕೇವಲ ವಿಟಮಿನ್ ಡಿ. ಉತ್ಪಾದಿಸಲು ಮಾತ್ರ ಎಂದುಕೊಂಡರೆ ಅದು ತಪ್ಪಾಗುತ್ತದೆ. ಶರೀರವನ್ನು ಸೂರ್ಯನ ಕಿರಣಗಳಿಗೆ, ಅದರಲ್ಲೂ ವಿಶೇಷವಾಗಿ ಉದಯಕಾಲದ ಬಾಲಕಿರಣಗಳನ್ನು ಒಡ್ಡುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಮಧ್ಯಾಹ್ನದ ಪ್ರಖರ ಕಿರಣಗಳು ದೇಹಕ್ಕೆ ಮಾರಕವಾಗಿವೆ. ಇದಕ್ಕೆ ಕಾರಣ ಸೂರ್ಯನ ಕಿರಣಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಕೋನ. ಬೆಳಗ್ಗಿನ ಮತ್ತು ಸಂಜೆಯ ಹೊತ್ತಿನಲ್ಲಿ ಬಲುದೂರದ ವಾತಾವರಣವನ್ನು ಹಾದು ಬರಬೇಕಾದುದರಿಂದ ಹಲವು ಹಾನಿಕಾರಕ ಪ್ರಭೆಯನ್ನು ಕಳೆದುಕೊಂಡು ಹೊಂಬಣ್ಣದಲ್ಲಿ ಆಗಮಿಸಿದ ಕಿರಣ ಆರೋಗ್ಯಕರವಾಗಿದೆ.

ಅದೇ ಮಧ್ಯಾಹ್ನದ ಹೊತ್ತು ಹಾಯುವ ಕಿರಣದ ಎಲ್ಲಾ ಹಾನಿಕರ ಅಂಶಗಳನ್ನು ಸೋಸುವಲ್ಲಿ ವಾತಾವರಣ ಸೋಲುತ್ತದೆ. ಈ ಕಿರಣಗಳಲ್ಲಿರುವ ಅತಿನೇರಳೆ ಮೊದಲಾದ ಪ್ರಭೆಗಳು ಚರ್ಮದ ಕ್ಯಾನ್ಸರ್, ಉಷ್ಣಾಘಾತ (heat stroke) ಹಾಗೂ ಕೆಲವೊಮ್ಮೆ ಸಾವನ್ನೂ ತರುವ ಸಂಭವವಿದೆ. ಸೂರ್ಯನ ಕಿರಣಗಳಿಗೆ ಮೈಯೊಡ್ಡುವ ಮುನ್ನ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು. ಸೂರ್ಯನ ಕಿರಣಗಳ ಬಗ್ಗೆ ಇನ್ನೂ ಹಲವು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ. ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು
ಉತ್ತಮ ನಿದ್ದೆಯನ್ನು ದಯಪಾಲಿಸುತ್ತದೆ
ಆರೋಗ್ಯವಂತ ಶರೀರಕ್ಕೆ ದಿನಕ್ಕೆ ಆರರಿಂದ ಎಂಟು ಘಂಟೆಗಳ ಕಾಲ ತಡೆಯಿಲ್ಲದ ನಿದ್ದೆಯ ಅಗತ್ಯವಿದೆ. ಶಾರೀರಿಕೆ ಚಟುವಟಿಕೆಯನ್ನನುಸರಿಸಿ ಈ ಅವಧಿಯನ್ನು ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಸುಖನಿದ್ದೆಗೆ ನಮ್ಮ ಶರೀರದಲ್ಲಿ ಮೆಲಟೋನಿನ್ ಎಂಬ ರಾಸಾಯನಿಕ ಉತ್ಪತ್ತಿಯಾಗುವುದು ಅಗತ್ಯವಾಗಿದೆ. ಇಡಿಯ ದಿನದಲ್ಲಿ ಸೂರ್ಯನ ಕಿರಣಗಳಿಗೆ ಒಡ್ಡಿದ ದೇಹ ಅಗತ್ಯವಿರುವ ಪ್ರಮಾಣದ ಮೆಲಟೋನಿನ್ ಅನ್ನು ಉತ್ಪಾದಿಸಿಕೊಳ್ಳುತ್ತದೆ. ಒಂದು ವೇಳೆ ಸೂರ್ಯನ ಬೆಳಕಿಗೆ ಒಡ್ಡದೇ ಇದ್ದ ದೇಹದಲ್ಲಿ ಮೆಲಟೋನಿನ್ ಕೊರತೆ ಉಂಟಾಗಿ ನಿದ್ದೆಗೆ ಸಂಚಕಾರ ಬರುತ್ತದೆ. ಅಲ್ಲದೇ ನಿತ್ಯದ ಅಗತ್ಯದ ಮೆಲಟೋನಿನ್ ಅನ್ನು ಅಂದೇ ಉತ್ಪಾದಿಸಿಕೊಳ್ಳಬೇಕಾದುದರಿಂದ ವಾರಕ್ಕೊಂದು ದಿನ ಮಾತ್ರ ಹೊರಗೆ ಬರುತ್ತೇನೆ ಸಾಲದೇ ಎಂಬ ಕುಂಟುನೆವಗಳನ್ನು ದೇಹ ಸ್ವೀಕರಿಸುವುದಿಲ್ಲ.
ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ರಾತ್ರಿಯ ವಿಶ್ರಾಂತಿಯ ಬಳಿಕ ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಹಾಸಿಗೆಯಿಂದೆದ್ದು ಪ್ರಕೃತಿಯಲ್ಲಿ ಓಡಾಡುತ್ತಾ ಉದಯವಾಗುತ್ತಿರುವ ಸೂರ್ಯನ ಕಿರಣಗಳನ್ನು ಸ್ವಾಗತಿಸುವುದು ಅತ್ಯಂತ ಆರೋಗ್ಯಕರ ಚಟುವಟಿಕೆಯಾಗಿದೆ. ಈ ಸಮಯದಲ್ಲಿ ಶರೀರಕ್ಕೆ ಹೆಚ್ಚಿನ ಶಕ್ತಿಯ ಅವಶ್ಯಕತೆಯಿದ್ದು ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಹೆಚ್ಚು ಕರಗಿಸಿಕೊಳ್ಳಬೇಕಾಗಿ ಬರುತ್ತದೆ. ಪರಿಣಾಮವಾಗಿ ತೂಕವನ್ನು ಶೀಘ್ರವಾಗಿ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಮಲಗಿರುವ ದೇಹದಿಂದ ಈ ಪ್ರಮಾಣದ ಕೊಬ್ಬು ಹಾಗೇ ಉಳಿದುಬಿಡುವುದರಿಂದ ತೂಕ ಇನ್ನಷ್ಟು ಹೆಚ್ಚುತ್ತದೆ. ನಿಮ್ಮ ಬಿಎಂಐ (body mass index) ಹಾಗೂ ಮುಂಜಾನೆಯ ನಡಿಗೆಯ ನಡುವೆ ಗಾಢ ಸಂಬಂಧವಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.
ಚಳಿಗಾಲದ ಖಿನ್ನತೆಯಿಂದ ರಕ್ಷಿಸುತ್ತದೆ
ವಾತಾವರಣದ ಮಟ್ಟಿಗೆ ಹೇಳುವುದಾದರೆ ಭಾರತದಲ್ಲಿ ಹುಟ್ಟಿದ ನಾವೇ ಅದೃಷ್ಟವಂತರು. ಏಕೆಂದರೆ ನಮ್ಮ ಹಗಲು ರಾತ್ರಿಗಳು ವರ್ಷದ ಎಲ್ಲಾ ದಿನಗಳಲ್ಲೂ ಸರಿಸುಮಾರು ಹತ್ತರಿಂದ ಹದಿನಾಲ್ಕು ಘಂಟೆಗಳ ಕಾಲ ಮಾತ್ರ ಏರಿಳಿತವಾಗುತ್ತವೆ. ಅದೇ ಭೂಮಿಯ ಧೃವಗಳ ಬಳಿ ಇರುವ ದೇಶಗಳಲ್ಲಿ ಈ ಹಗಲು ಇರುಳಿನ ಅವಧಿಗಳು ಎರಡರಿಂದ ಇಪ್ಪತ್ತೆರಡು ಘಂಟೆಗಳವರೆಗೂ ಏರಿಳಿತವಾಗುತ್ತಿರುತ್ತವೆ. ಉದಾಹರಣೆಗೆ ನಾರ್ವೆ. ಚಳಿಗಾಲದಲ್ಲಿ ಇಲ್ಲಿ ಹಗಲು ಇರುವುದು ಕೇವಲ ನಾಲ್ಕು ಘಂಟೆಗಳು ಮಾತ್ರ. ಉಳಿದಂತೆ ಇಪ್ಪತ್ತು ಘಂಟೆ ರಾತ್ರಿ. ಈ ವ್ಯತ್ಯಾಸಗಳು ನಿವಾಸಿಗಳಿಗೆ ಚಳಿಗಾಲದ ಖಿನ್ನತೆಯ ತೊಂದರೆಯನ್ನು (Winter Depression) ಉಂಟುಮಾಡುತ್ತವೆ. ಸೂರ್ಯೋದಯದ ಕಿರಣಗಳಿಗೆ ಮೈಯೊಡ್ಡುವುದರಿಂದ ಈ ಖಿನ್ನತೆಯಿಂದ ಪಾರಾಗಬಹುದು.
ಮೂಳೆಗಳ ದೃಢತೆ ಹೆಚ್ಚುತ್ತದೆ
ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ವಿಟಮಿನ್ ಡಿ ಮೂಳೆಗಳನ್ನು ದೃಢಗೊಳಿಸುತ್ತದೆ. ಹಾಲು, ಮೊದಲಾದ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳಿಂದ ಲಭ್ಯವಾದ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ವಿಟಮಿನ್ ಡಿ. ಅಗತ್ಯವಿದೆ. ಹಾಲಿನ ಇತರ ಉತ್ಪನ್ನಗಳೂ ಹಾಗೂ ಸಾಲ್ಮನ್ ಮೊದಲಾದ ಮೀನುಗಳಲ್ಲಿಯೂ ವಿಟಮಿನ್ ಡಿ. ಇದೆ. ಆದರೆ ವಿಟಮಿನ್ ಡಿ ಸೂರ್ಯನ ಕಿರಣಗಳಿಂದ ನಮ್ಮ ದೇಹದಲ್ಲಿ ಅತಿ ಸುಲಭವಾಗಿ ಹಾಗೂ ಅಗತ್ಯ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
ದೇಹವನ್ನು ಇತರ ಮಾರಕ ರೋಗಗಳಿಂದ ರಕ್ಷಿಸುತ್ತದೆ
ವಿಟಮಿನ್ ಡಿ. ಕೇವಲ ಮೂಳೆಗಳಿಗೆ ಮಾತ್ರವಲ್ಲದೇ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಕಾಲಕ್ರಮೇಣ ಶಿಥಿಲವಾಗುವ ದೇಹದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಕ್ಯಾನ್ಸರ್ ಬರುವುದನ್ನು ತಡೆಗಟ್ಟಲು ನೈಸರ್ಗಿಕವಾಗಿ ಲಭ್ಯವಾದ ವಿಟಮಿನ್ ಡಿ. ಸಹಕಾರಿಯಾಗಿದೆ. ಇತರ ಆಹಾರ ಮೂಲಗಳಿಂದಲೂ ವಿಟಮಿನ್ ಡಿ ಲಭ್ಯವಾದರೂ ನೈಸರ್ಗಿಕವಾಗಿ ಉತ್ಪತ್ತಿಯಾದ ವಿಟಮಿನ್ ಡಿ ಗೆ ಅವು ಸಾಟಿಯಲ್ಲ.
Autoimmune Disease ಎಂಬ ಕಾಯಿಲೆ ಬರುವುದರಿಂದ ರಕ್ಷಿಸುತ್ತದೆ
ಕೆಲವೊಮ್ಮೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಅಗತ್ಯಕ್ಕಿಂತಲೂ ಹೆಚ್ಚಿನ ಕಾರ್ಯಚಟುವಟಿಕೆ ನಿರ್ವಹಿಸಿ ದೇಹಕ್ಕೆ ಹಲವು ವಿಧದ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಇದೇ ಕಾರಣದಿಂದಾಗಿ ಇದಕ್ಕೆ Autoimmune ಎಂಬ ಅನ್ವರ್ಥನಾಮವಿದೆ. ಇದರಿಂದಾಗಿ ಸುಮಾರು ಎಂಭತ್ತಕ್ಕೂ ಹೆಚ್ಚಿನ ವಿವಿಧ ವ್ಯಾಧಿಗಳು ಕಾಡಬಹುದು. ಇವುಗಳಲ್ಲಿ ಹೆಚ್ಚಿನವು ಚರ್ಮವ್ಯಾಧಿಗಳಾಗಿವೆ. ಸೋರಿಯಾಸಿಸ್ (psoriasis) ಎಂಬ ಹೆಸರಿನ ಒಂದು ವ್ಯಾಧಿ ಸಾಮಾನ್ಯವಾಗಿದ್ದು ಚರ್ಮದ ಮೇಲೆ ಕೆಂಪಾದ ದೊಡ್ಡದೊಡ್ಡ ಮಚ್ಚೆಗಳಂತಿರುವ ಹುರುಪೆಗಳನ್ನು ಮೂಡಿಸುತ್ತದೆ. ಅತೀವ ತುರಿಕೆಯುಳ್ಳ ಈ ಹುರುಪೆಗಳ ಚಿಕಿತ್ಸೆ ಅಷ್ಟು ಸುಲಭವಲ್ಲ. ಕ್ರಮೇಣ ಇವು ಇಡಿಯ ದೇಹವನ್ನೇ ವ್ಯಾಪಿಸಬಹುದು. ಸೂರ್ಯನ ಕಿರಣಗಳಿಗೆ, ಅದರಲ್ಲೂ ಬೆಳಗ್ಗಿನ ಕಿರಣಗಳಿಗೆ ಮೈಯೊಡ್ಡುವುದರಿಂದ ಕಿರಣಗಳಲ್ಲಿರುವ ಆರೋಗ್ಯಕರ ಪ್ರಮಾಣದಲ್ಲಿರುವ ಅಲ್ಟ್ರಾವಾಯೊಲೆಟ್ ಪ್ರಭೆಗಳು ಈ ಸ್ಥಿತಿಗೆ ಬರದಿರುವಂತೆ ದೇಹವನ್ನು ಕಾಪಾಡುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


