Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಮುಟ್ಟಿನ ನೋವು ನಿವಾರಣೆಗೆ 13 ಮನೆಮದ್ದು
ಸಾಮಾನ್ಯವಾಗಿ ಎಲ್ಲಾ ಹುಡುಗಿಯರೂ ಅವರ ಜೀವನವನ್ನು ಸಂತೋಷವಾಗಿ ಅನುಭವಿಸುತ್ತಾ ಕಾಲ ಕಳೆಯುತ್ತಾರೆ. ಕಡಲ ತೀರದ ಉದ್ದಕ್ಕೂ ಖುಷಿಯಲ್ಲಿ ತಿರುಗಾಡುವುದು, ತನಗೆ ಬೇಕಾದ ವಸ್ತುಗಳ ಖರೀದಿ, ಜೊತೆಗೆ ಕಾಫಿ ಹೀರುವುದು ಹೀಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ಆಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಆದರೆ ತಿಂಗಳಿನ ಕೆಲವು ದಿನ ಆಕೆ ತನ್ನ ಈ ಹುರುಪನ್ನು ಕಳೆದುಕೊಳ್ಳುತ್ತಾಳೆ!
ಆಕೆ ಸಹಜವಾಗಿಯೇ ತನ್ನ ಚಟುವಟಿಕೆಗಳನ್ನು ಕಡಿಮೆಗೊಳಿಸುವುದು ಆಕೆ ಮುಟ್ಟಿನ ದಿನಗಳಲ್ಲಿ. ಆಕೆಯಲ್ಲಿ ತಿಂಗಳೂ ಉಂಟಾಗುವ ಈ ಋತುಚಕ್ರ ಕೆಲವು ಸಮಯದಲ್ಲಿ ಅನಿಯಮಿತ ಮತ್ತು ಅನಿರೀಕ್ಷಿತವಾಗಿದ್ದು ತಿಂಗಳ 2 ವಾರಗಳ ನಂತರ ಯಾವುದೇ ಮಧ್ಯಂತರದಲ್ಲಿ ಸಂಭವಿಸಬಹುದು. ನೈಸರ್ಗಿಕವಾಗಿ 3 ದಿನಗಳಲ್ಲಿ ನಡೆಯಬೇಕಾಗಿರುವ ಈ ಕ್ರಿಯೆ ಆಕೆಯಲ್ಲಿ 7 ದಿನಗಳವರೆಗೆ ಮುಂದುವರೆಯಬಹುದು. ಇದರಿಂದಾಗಿ ಕೆಲವು ಹುಡುಗಿಯರು ಅಸಾಧ್ಯ, ಅಸಹನೀಯ ಹೊಟ್ಟೆನೋವನ್ನು ಸಹ ಅನುಭವಿಸುತ್ತಾರೆ.
ಮುಟ್ಟಿನ ಸಮಯದಲ್ಲಿ ಹೊಟ್ಟೆ ಸೆಳೆತಕ್ಕೆ ಕಾರಣ, ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನುಗಳ ಒಂದು ಗುಂಪು ಗರ್ಭಾಶಯದ ಪದರ ಸುಲಿಯುವ (ಗರ್ಭಾಶಯದ ಸುತ್ತಲಿನ ಭಾಗಕ್ಕೆ ಹೊಡೆದುಕೊಳ್ಳುವ ಪ್ರಕ್ರಿಯೆ) ಕ್ರಿಯೆ. ಆದ್ದರಿಂದಲೇ ಪ್ರೋಸ್ಟಗ್ಲಾಂಡಿನ್ ಮತ್ತು ನೋವು ಉತ್ತಮ ಸ್ನೇಹಿತರಂತೆ ಒಟ್ಟಿಗೆ ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೇ ಪ್ರೋಸ್ಟಗ್ಲಾಂಡಿನ್, ಹೆರಿಗೆಯ ಸಮಯದಲ್ಲಿನ ನೋವಿಗೂ ಕಾರಣವಾಗಿದೆ. ಇದಲ್ಲದೆ, ಗರ್ಭಕೋಶದಿಂದ ರಕ್ತ ವಿಭಜನೆಯಾಗಿ, ಮುಟ್ಟು/ ಋತುಚಕ್ರ ಉಂಟಾಗುತ್ತದೆ.
ಇಲ್ಲಿ, ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ತಡೆಯಲು ಕೆಲವು ಮನೆಮದ್ದುಗಳನ್ನು ಹೇಳಲಾಗಿದೆ.
ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?

ಹಾಲು:
ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ನೋವಿನ ವಿರುದ್ಧ ಹೋರಾಡಿ ನಿಮಗೆ ನೋವಿನಿಂದ ಶಮನ ನೀಡುವುದರಿಂದ ನಿಮ್ಮ ಉಪಹಾರದ ಜೊತೆಗೆ ಒಂದು ಲೋಟ ಹಾಲನ್ನು ಸೇವಿಸುವುದು ಉತ್ತಮ. ನಿಮಗೆ ಹಾಲು ಇಷ್ಟವಾಗದಿದ್ದಲ್ಲಿ ಕೆಲವು ಕ್ಯಾಲ್ಸಿಯಂ ಮಾತ್ರೆಗಳನ್ನು ಮುಟ್ಟಿನ ಸಂದರ್ಭದಲ್ಲಿ ನೋವು ನಿವಾರಕವಾಗಿ ಸೇವಿಸಬಹುದು.

ಪಪ್ಪಾಯಿ:
ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ಕ್ಯಾರೆಟ್:
ಕ್ಯಾರೆಟ್ ಗಳು ಕೇವಲ ನಿಮ್ಮ ಕಣ್ಣುಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅವು ನಿಮ್ಮ ಮುಟ್ಟಿನ ಸಮಯದ ನೋವು ನೀವು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿವೆ. ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗಲು ವೈದ್ಯರು ಇಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ.

ಅಲೋವೆರಾ:
ಅಲೋವೆರಾ ಎಲ್ಲಾ ದೇಹದ ಖಾಯಿಲೆಗಳಿಗೆ ಉಪಶಮನ ನೀಡುವಂತೆ ಮುಟ್ಟಿನ ನೋವನ್ನೂ ಸಹ ನಿಯಂತ್ರಿಸಬಲ್ಲದು! ಅಲೋ ವೆರಾ ರಸವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಸರಳವಾಗಿ ಮತ್ತು ನೋವುರಹಿತ ರಕ್ತದ ಹರಿವು ಉಂಟಾಗಲು ಸಹಾಯಕವಾಗುತ್ತದೆ.

ಲ್ಯಾವೆಂಡರ್:
ಲ್ಯಾವೆಂಡರ್, ಅದರ ಶಾಂತಗೊಳಿಸುವ ಮತ್ತು ಆಪ್ಯಾಯಮಾನವಾದ ಗುಣಗಳಿಂದ ಹೆಸರುವಾಸಿಯಾಗಿದೆ. ಮುಟ್ಟಿನ ಸಮಯದಲ್ಲಿ ನೋವು ಉಂಟಾದಲ್ಲಿ, ಹೊಟ್ಟೆಗೆ ಲ್ಯಾವೆಂಡರ್ ತೈಲ ಲೇಪಿಸುವುದರಿಂದ ಕೇವಲ 10-15 ನಿಮಿಷಗಳಲ್ಲಿ ನೋವು ಕಡಿಮೆಯಾಗುತ್ತದೆ.

ತುಳಸಿ:
ತುಳಸಿ ಪ್ರಬಲ ನೋವುನಿವಾರಕ ಕೆಫಿಕ್ ಆಮ್ಲ ಒಳಗೊಂಡಿರುವುದರಿಂದ ನೀವು ಮುಟ್ಟಿನ ನೋವು ಕಾಣಿಸಿಕೊಂಡ ಸಮಯದಲ್ಲಿ ತುಳಸಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮಸಾಲೆಗಳಲ್ಲಿ ಅದನ್ನು ಬಳಸಿ ಅಥವಾ ನಿಮ್ಮ ಹರ್ಬಲ್ ಚಹಾದೊಂದಿಗೆ ತುಳಸಿಯನ್ನು ಸೇರಿಸಿ , ಮತ್ತು ಇದು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವೇ ನೋಡಿ!

ಬಿಸಿ ನೀರಿನ ಸ್ನಾನ:
ಹೊಟ್ಟೆ ಮತ್ತು ಕಿಬ್ಬೊಟ್ಟೆಯ ಪ್ರದೇಶದಲ್ಲಿ ಬಿಸಿ ನೀರಿನ ಸ್ನಾನವನ್ನು ಮಾಡಿ. ಇದು ಮುಟ್ಟಿನ ರಕ್ತದ ಹರಿವನ್ನು ನಿಯಂತ್ರಿಸಿ ಮುಟ್ಟಿನ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಶುಂಠಿ:
ಶುಂಠಿ ಋತುಚಕ್ರದ ಸಮಯದಲ್ಲಿ ಒಂದು ನೋವು ನಿವಾರಕ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಜೊತೆಗೆ, ಇದು ನಿಮ್ಮ ಅನಿಯಮಿತ ಋತುಚಕ್ರವನ್ನು ನಿಯಮಿತವಾಗಿ ನಡೆಯಲು ಸಹಾಯಮಾಡುತ್ತದೆ. ಪರಿಣಾಮಕಾರಿ ಪ್ರಯೋಜನಗಳನ್ನು ಕಾಣಲು ಚಹಾ ಶುಂಠಿ ಸೇವಿಸುವುದು ಉತ್ತಮ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕಬ್ಬಿಣದ ಮಟ್ಟ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮ ಮುಟ್ಟನ್ನು ನೋವು ರಹಿತವನ್ನಾಗಿ ಮಾಡುವಲ್ಲಿ ಪರಿಣಾಮಕಾರಿಯಾಗಿ ಸಹಾಯಮಾಡುತ್ತದೆ. ಆದ್ದರಿಂದ, ಸಿಟ್ರಸ್ ಹಣ್ಣುಗಳು ತಿನ್ನುವುದು ಅಥವಾ ಅವುಗಳ ರಸವನ್ನು ಸೇವಿಸುವುದು ಒಳ್ಳೆಯದು.

ಜೀರಿಗೆ:
ಮೊದಲೇ ಹೇಳಿದಂತೆ ಗರ್ಭಕೋಶದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ದಾಗ, ಜೀರಿಗೆ ಗರ್ಭಕೋಶದಲ್ಲಿ ರಕ್ತ ಚಲಾವಣೆಯನ್ನು ಸುಧಾರಿಸುತ್ತದೆ. ನೀರಿಗೆ ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ಮುಟ್ಟಿನ ನೋವು ಸಹಜವಾಗಿ ಕಡಿಮೆಯಾಗುತ್ತದೆ.

ವ್ಯಾಯಾಮ:
ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಜವಾಗಿಯೂ ಮುಖ್ಯವಾದ ಅಂಶ. ಅನೇಕ ಮಹಿಳೆಯರು ಅವರು ಉತ್ಸಾಹವನ್ನು ಕಳೆದುಕೊಂಡಾಗ (ವಿಶೇಷವಾಗಿ ಋತುಚಕ್ರದ ಸಮಯದಲ್ಲಿ) ವ್ಯಾಯಾಮ ಮಾಡುವುದನ್ನು ಬಿಟ್ಟುಬಿಡುತ್ತಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪು ವಿಧಾನವಾಗಿದೆ. ವ್ಯಾಯಾಮ. ನಿಮ್ಮ ದೇಹದಲ್ಲಿ ಸುಲಭವಾಗಿ ರಕ್ತದ ಹರಿವು ಉಂಟಾಗುವಂತೆ ಮಾಡಿ ನೋವಿನಿಂದ ನಿವಾರಣೆ ನೀಡುತ್ತದೆ.

ಪೋಷಕಾಂಶಗಳು:
ನೀವು ಸಮತೋಲನ ಆಹಾರದ ಸೇವನೆ ಸೇವಿಸದೇ ನಿಮ್ಮ ದೇಹದಲ್ಲಿ ಅಪೌಷ್ಟಿಕತೆ ಉಂಟಾಗಿ ಕೆಲವೊಮ್ಮೆ ಮುಟ್ಟಿನ ಸಮಯದ ನೋವು ಉಂಟಾಗಲು ಕಾರಣವಾಗಬಹುದು. ನೀವು ಜೀವಸತ್ವ ಬಿ6 ಸಮೃದ್ಧವಾಗಿರುವ ನೋವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುವ ಕಂದು ಅಕ್ಕಿಯನ್ನು ಸೇವನೆ ಮಾಡಬಹುದು. ಅಲ್ಲದೆ ಮ್ಯಾಂಗನೀಸ್ ಹೇರಳವಾಗಿರುವ ವಾಲ್ನಟ್ಸ್ (ಅಕ್ರೋಡ) ಮತ್ತು ಕುಂಬಳಕಾಯಿ ಬೀಜಗಳನ್ನು ಸೇವಿಸಿ ಮುಟ್ಟಿನ ನೋವನ್ನು ಕಡಿಮೆಗೊಳಿಸಬಹುದು.

ಜಿಡ್ಡಿನ ಆಹಾರ ಸೇವಿಸದಿರಿ (junk Food):
ಮುಟ್ಟಿನ ಸಂದರ್ಭದಲ್ಲಿ, ನಿಮ್ಮ ಆಹಾರ ಮೇಲೆ ನಿಗಾ ಇಡುವುದು ಅತ್ಯಂತ ಅಗತ್ಯ. ಬರ್ಗರ್, ಪಾಸ್ತಾದಂತಹ ಕೊಬ್ಬಿನ ಮತ್ತು ಜಿಡ್ಡಿನ ಆಹಾರಗಳ ಸೇವನೆಯನ್ನು ಮಾಡದಂತೆ ನಿಮ್ಮನ್ನು ನೀವು ನಿರ್ಬಂಧಿಸಿಕೊಳ್ಳಬೇಕು. ಜೊತೆಗೆ, ನೀವು ತಂಪಾದ ಪಾನೀಯಗಳಂತಹ ಕಾರ್ಬೊನೇಟೆಡ್ ಪಾನೀಯಗಳು, ಮದ್ಯಪಾನಗಳಿಂದಲೂ ಸಹ ದೂರವುಳಿಯಬೇಕು.



Click it and Unblock the Notifications