Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹರ್ನಿಯಾ ನೋವು ಕಮ್ಮಿ ಮಾಡುವ ಮನೆಮದ್ದು
ಹರ್ನಿಯಾ ಎನ್ನುವ ಕಾಯಿಲೆ ದೇಹದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ತರುವಂತಹ ಕಾಯಿಲೆ. ಇದು ದೇಹದ ಉದರ ಭಾಗದಲ್ಲಿ ಕಂಡು ಬರುವಂತಹ ಕಾಯಿಲೆ. ಸಾಕಷ್ಟು ಜನರಿಗೆ ಈ ಕಾಯಿಲೆ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ, ಕಿಬ್ಬೊಟ್ಟೆಯಲ್ಲಿ ನೋವು ಕಂಡು ಬಂದಾಗ ಸಾಧಾರಣ ನೋವೆಂದು ನಿರ್ಲಕ್ಷ್ಯ ಮಾಡಿ, ನಂತರ ಸಹಿಸಲು ಅಸಾಧ್ಯವಾದ ಕಾಯಿಲೆ ನೋವು ಬಂದಾಗ ವೈದ್ಯರ ಬಳಿ ಹೋಗುತ್ತಾರೆ. ಈ ಹರ್ನಿಯಾ ಕಾಯಿಲೆಯನ್ನು ಆರಂಭದಲ್ಲಿಯೇ ಗುಣ ಪಡಿಸದಿದ್ದರೆ ಅಪಾಯ.
ಇಂಗ್ಯೂನಲ್(inguinal)ಹರ್ನಿಯಾ ಅನ್ನುವುದು ನಾವು ಹುಟ್ಟುವಾಗಲೇ ಇರುವ ಸಾಧ್ಯತೆ ಇದೆ. ಮತ್ತೆ ಕೆಲವು ಹರ್ನಿಯಾ ನಂತರ ದಿನಗಳಲ್ಲಿ ಕಂಡು ಬರಬಹುದು. ಹರ್ನಿಯಾ ಸಮಸ್ಯೆ ಹಲವಾರು ಕಾರಣಗಳಿಂದ ಬರಬಹುದು. ಅದರಲ್ಲೂ ಅಧಿಕ ತೂಕ, ಶ್ವಾಸಕೋಶದ ತೊಂದರೆ, ಕೆಮ್ಮು ಮತ್ತು ವಂಶಪಾರಂಪರ್ಯ ಹರ್ನಿಯಾ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.
ಹರ್ನಿಯಾವನ್ನು ಗುಣ ಪಡಿಸುವಲ್ಲಿ ಈ ಕೆಳಗಿನ ಮನೆಮದ್ದುಗಳು ಪರಿಣಾಮಕಾರಿಯಾಗಿವೆ.

ಲಿಕೋರೈಸ್(Licorice)
ಇದೊಂದು ಅತ್ಯುತ್ತಮವಾದ ಮನೆ ಮದ್ದಾಗಿದೆ. ಈ ಹರ್ಬ್ಸ್ ಹಾನಿಯಾದ ಸ್ಥಳವನ್ನು ಸರಿ ಪಡಿಸುತ್ತದೆ. ಒಂದು ಚಮಚ ಲಿಕೋರೈಸ್ ಪುಡಿಯನ್ನು ಅರ್ಧ ಕಪ್ ಹಾಲಿಗೆ ಹಾಕಿ ಮಿಕ್ಸ್ ಮಾಡಿ ವಾರಕ್ಕೊಮ್ಮೆ ಕುಡಿಯುವುದು ಒಳ್ಳೆಯದು.

ಶುಂಠಿಯ ಬೇರು
ಶುಂಠಿಯ ಬೇರು ಕೂಡ ಹರ್ನಿಯಾ ಸಮಸ್ಯೆಗೆ ಅತ್ಯುತ್ತಮವಾದ ಮನೆ ಮದ್ದಾಗಿದೆ. ಶುಂಠಿಯ ಬೇರು ಹಾಕಿ ಕುದಿಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದು.
ಅಡ್ಡ ಪರಿಣಾಮ: ಈ ಮನೆಮದ್ದು ಕುಡಿದರೆ ಕೆಲವರಿಗೆ ಬೇಧಿಯಾಗುವುದು.

ಮಜ್ಜಿಗೆ
ಹರ್ನಿಯಾ ಸಮಸ್ಯೆ ಇರುವವರು ದಿನಾ ಮಜ್ಜಿಗೆ ಕುಡಿದರೆ ನೋವು ಕಡಿಮೆಯಾಗಿ ಬೇಗನೆ ಚೇತರಿಸಿಕೊಳ್ಳಬಹುದು, ದಿನದಲ್ಲಿ 3 ಲೋಟ ಮಜ್ಜಿಗೆ ಕುಡಿಯುವುದು ಒಳ್ಳೆಯದು.

ನೀರು
ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿರುವವರು ಅಧಿಕ ನೀರು ಕುಡಿಯಬೇಕು. ಹರ್ನಿಯಾದ ನೋವನ್ನು ಕಮ್ಮಿ ಮಾಡುವಲ್ಲಿ ನೀರು ತುಂಬಾ ಸಹಾಯಕಾರಿಯಾಗಿದೆ.

ಹಣ್ಣುಗಳು
ಬೆಣ್ಣೆ ಹಣ್ಣು, ಪೈನಾಪಲ್ ಈ ಹಣ್ಣುಗಳನ್ನು ತಿಂದರೆ ಒಳ್ಳೆಯದು. ಈ ಎರಡು ಹಣ್ಣುಗಳು ಉರಿಯನ್ನು ಕಮ್ಮಿ ಮಾಡಿ, ಆ ಭಾಗದಲ್ಲಿ ಊದಿಕೊಳ್ಳುವುದನ್ನು ಕಮ್ಮಿ ಮಾಡುತ್ತದೆ.

ಹಸಿರು ತರಕಾರಿಗಳು
ಬ್ರೊಕೋಲಿ, ಕ್ಯಾಬೇಜ್, ಹಾಗಾಲಕಾಯಿ ಈ ಮೂರು ತರಕಾರಿಗಳನ್ನು ತಪ್ಪದೇ ಡಯಟ್ ನಲ್ಲಿ ಸೇರಿಸಿದರೆ ಒಳ್ಳೆಯದು. ಇವುಗಳು ಸ್ನಾಯುಗಳನ್ನು ಬಲಪಡಿಸುತ್ತದೆ.

ಹಾಲು
ಹಾಲು ಉರಿಯನ್ನು ಕಮ್ಮಿ ಮಾಡುತ್ತದೆ. ಬೆಳಗ್ಗೆ ಅರಿಶಿಣ ಹಾಕಿದ ಹಾಲನ್ನು ಕುಡಿಯುವುದು ಒಳ್ಳೆಯದು.

ಗ್ರೀನ್ ಟೀ
ಟೀ ಕುಡಿಯುವ ಅಭ್ಯಾಸವಿದ್ದರೆ ಗ್ರೀನ್ ಟೀ ಕುಡಿಯುವುದು ಒಳ್ಳೆಯದು. ಹರ್ನಿಯಾ ಸಮಸ್ಯೆ ದಿನಾ ಎರಡು ಕಪ್ ಗ್ರೀನ್ ಟೀ ಕುಡಿಯಿರಿ.

ಗೋಧಿಯ ಪದಾರ್ಥಗಳು
ಗೋಧಿಯಿಂದ ತಯಾರಿಸಿದ ಆಹಾರಗಳನ್ನು ತಿನ್ನುವುದು ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ನೋವನ್ನು ಕಮ್ಮಿ ಮಾಡುತ್ತದೆ.



Click it and Unblock the Notifications
