ಕೊಬ್ಬು ಇಳಿಸುವ ಮುಖ್ಯ 10 ಆಹಾರಗಳು

By Viswanath S

ತಿನ್ನುವಾಗ ಮಿತಿಮೀರಿತಿಂದರೆ ನಿಮ್ಮ ತೂಕವನ್ನು ನೀವು ಹೇಗೆ ನಿಯಂತ್ರಿಸಲು ಸಾಧ್ಯ? ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಬೇಕೆಂದಿದ್ದು, ಅನಾರೋಗ್ಯಕರ ಆಹಾರವನ್ನು ಮಿತಿಮೀರಿ ತಿಂದಾದನಂತರ, ಟ್ರೀಡ್ಮಿದಲ್ ಮೇಲೆ ಓಡಿ ತೂಕವನ್ನು ಇಳಿಸಿಕೊಳ್ಳುತ್ತೀನೆಂದುಕೊಂಡಿದ್ದರೆ ಆ ಆಲೋಚನೆಯನ್ನು ಬಿಟ್ಟುಬಿಡಿ. ಹಾಗೆ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ.

ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ತೂಕ ಇಳಿಸಿಕೊಳ್ಳುವುದು ನಿಮ್ಮ ಗುರಿಯಾಗಿದ್ದರೆ ಅದು ಸಾಧ್ಯವೇ ಇಲ್ಲ. ಮಾರುಕಟ್ಟೆಯಲ್ಲಿ ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬೇಕಾದಷ್ಟು ತಮಾಷೆಗಾಗಿ ಕೆಲವುಸಲ ನಿರ್ದಿಷ್ಟ ಮತ್ತು ಗಂಭೀರ ಭರವಸೆಗಳಿದ್ದರೂ ಅವುಗಳಲ್ಲಿ ಅತ್ಯಂತ ಅಪಾಯಕಾರಿ ಪರಿಣಾಮವಾಗುವುದಂತೂ ಖಂಡಿತ. ವ್ಯಾಯಾಮ ಮತ್ತು ಆಹಾರ ಬದಲಾವಣೆಗಳಿಂದ ತೂಕವನ್ನು ಇಳಿಸಿಕೊಳ್ಳಬಹುದಾದರೂ ಅದರ ಜೊತೆಗೆ ನಿಮ್ಮ ಚಯಾಪಚಯ (ಮೆಟಬಾಲಿಸಮ್) ಕ್ರಿಯೆಯನ್ನು ಉತ್ತೇಜಿಸಬೇಕು. ನಿಮ್ಮ ಚಯಾಪಚಯಕ್ರಿಯೆಯನ್ನು ಆರಂಭಿಸಬೇಕಾದರೆ ನಿಮ್ಮ ನಿಯಮಿತ ಆಹಾರದಲ್ಲಿ ಕೆಲವು ಕೊಬ್ಬು ಕರಗುವ ಆಹಾರಗಳನ್ನು ಸೇರಿಸಿಕೊಳ್ಳಬೇಕು. ಈ ದಿಶೆಯಲ್ಲಿ ಇಂದು ಶ್ರೀಮತಿ ಪ್ರಿಯಾ ಕತ್ಪಾಲ್, ಮುಂಬೈ‍ನ ಪೌಷ್ಟಿಕಾಂಶ ತಜ್ಞರು ನಿಮ್ಮ ತೂಕ ಕರಗುವ ಕಾರ್ಯಕ್ರಮಕ್ಕೆ ಅನುಕೂಲವಾಗಲು ಆಹಾರಗಳ ಪಟ್ಟಿಯನ್ನು ನಿಮ್ಮ ಜೊತೆ ಹೀಗೆ ಹಂಚಿಕೊಂಡಿದ್ದಾರೆ:

# 01. ಕೊಬ್ಬು ಬಿಡುಗಡೆಮಾಡುವ ಆಹಾರ: ಕ್ಯಾಲ್ಸಿಯುಮ್.

# 01. ಕೊಬ್ಬು ಬಿಡುಗಡೆಮಾಡುವ ಆಹಾರ: ಕ್ಯಾಲ್ಸಿಯುಮ್.

ಕ್ಯಾಲ್ಸಿಯುಮ್ ನಿಮಗೆ ಗೊತ್ತಿರುವಹಾಗೆ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯಮಾಡುತ್ತದೆಯಾದರೂ ಕ್ಯಾಲ್ಸಿಯುಮ್ ಹಸಿವಾಗುವುದನ್ನು ತಡೆಯುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗುವುದು. ಡೈರಿ ಉತ್ಪನ್ನಗಳು ಮತ್ತು ಹೆಚ್ಚು ಕ್ಯಾಲ್ಸಿಯುಮ್ ಹೊಂದಿರುವ ಇತರ ಪದಾರ್ಥಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿದ್ದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತವೆ. ಆದ್ದರಿಂದ ನಿಮಗೆ ಕೊಬ್ಬು ಕರಗುವ ಆಹಾರಗಳು ಬೇಕೆಂದಿದ್ದರೆ ಹೆಚ್ಚು ಕ್ಯಾಲ್ಸಿಯುಮ್ ಹೊಂದಿರುವ ಆಹಾರಗಳನ್ನು ಬಳಸಲು ಆರಂಭಮಾಡಿ.

# 2. ಕೊಬ್ಬು ಬಿಡುಗಡೆಮಾಡುವ ಆಹಾರ: ಸೇಬುಹಣ್ಣು.

# 2. ಕೊಬ್ಬು ಬಿಡುಗಡೆಮಾಡುವ ಆಹಾರ: ಸೇಬುಹಣ್ಣು.

"ದಿನಕ್ಕೊಂದು ಸೇಬು ತಿಂದು ವೈದ್ಯರನ್ನು ದೂರವಿಡಿ" ಎಂಬ ಗಾದೆಯಂತೆ ಪ್ರತಿದಿನ ಸೇಬುಹಣ್ಣು ತಿಂದರೆ ನಿಮ್ಮ ಶರೀರದಲ್ಲಿರುವ ಕೊಬ್ಬು ಜೀವಕೋಶಗಳನ್ನು ತಗ್ಗಿಸಲು ಸಹಾಯವಾಗುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಅದ್ಭುತವಾದ ಪೆಕ್ಟಿನ್ ಅಂಶದಿಂದ ನಿಮ್ಮ ಗುರಿಯನ್ನು ಸಾಧಿಸಬಹುದು. ಸಿಪ್ಪೆಯಲ್ಲಿರುವ ಪೆಕ್ಟಿನ್ ನಿಮ್ಮ ಶರೀರದ ಜೀವಕೋಶಗಳಿಗೆ ಕೊಬ್ಬು ಸೇರುವುದನ್ನು ತಡೆಯುವುದಲ್ಲದೆ ಸಿಪ್ಪೆಯಲ್ಲಿರುವ ನೀರುಬಂಧಿಸುವ ಗುಣದಿಂದ ಶರೀರದಲ್ಲಿರುವ ಕೊಬ್ಬನ್ನು ಬಿಡುಗಡೆಮಾಡುತ್ತದೆ.

# 3. ಕೊಬ್ಬು ಬಿಡುಗಡೆಮಾಡುವ ಆಹಾರ: ವಾಲ್ನಟ್ಸ್.

# 3. ಕೊಬ್ಬು ಬಿಡುಗಡೆಮಾಡುವ ಆಹಾರ: ವಾಲ್ನಟ್ಸ್.

ವಾಲ್ನಟ್ಟಿನಲ್ಲಿ ಆರೋಗ್ಯಕರ ಒಮೆಗಾ -3 ಕೊಬ್ಬಿನ ಆಲ್ಫ-ಲಿನೋಲೆನಿಕ್ ಆಮ್ಲ(alpha-linolenic acid) ಮತ್ತು ಮೋನೋ-ಅನ್ಸಾಚುರೇಟೆಡ್(mono-unsaturated) ಕೊಬ್ಬುಗಳಿರುತ್ತವೆ. ವಾಲ್ನಟ್ಟಿನಲ್ಲಿರುವ ಮೋನೋ-ಅನ್ಸಾಚುರೇಟೆಡ್ ಕೊಬ್ಬು ಶರೀರದಲ್ಲಿರುವ ಹೆಚ್ಚಿನಪ್ರಮಾಣದ ಕೊಬ್ಬನ್ನು ಕರಗುವುದಕ್ಕೆ ಸಹಾಯಮಾಡುತ್ತದೆ ಹಾಗೂ ಚಯಾಪಚಯ(ಮೆಟಬಾಲಿಸಂ) ಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ತೂಕವನ್ನು ಕಡಿಮೆಮಾಡಲು ಕೆಲವೇ ವಾಲ್ನಟ್ಗ್ಳಿಂದ ಸಾಧ್ಯವಾಗುತ್ತದೆ. ಇದು ಲಭ್ಯವಿರುವ ಆರೋಗ್ಯಕರ ಬೀಜಗಳಲ್ಲಿ ಒಂದಾಗಿದೆ.

# 4. ಕೊಬ್ಬು ಬಿಡುಗಡೆಮಾಡುವ ಆಹಾರ: ಹುರುಳಿಕಾಯಿ(ಬೀನ್ಸ್).

# 4. ಕೊಬ್ಬು ಬಿಡುಗಡೆಮಾಡುವ ಆಹಾರ: ಹುರುಳಿಕಾಯಿ(ಬೀನ್ಸ್).

ಬೀನ್ಸ್ ನಲ್ಲಿ ಕಡಿಮೆ ಕೊಬ್ಬು, ಕಡಿಮೆ ಗ್ಲೈಸೆಮಿಕ್(ಸಕ್ಕರೆ ಅಂಶ) ಮತ್ತು ಹೆಚ್ಚಿನ ನಾರು ಹಾಗೂ ಪ್ರೋಟೀನ್ ಇರುತ್ತದೆ. ಸಸ್ಯಾಹಾರಿಗಳಿಗೆ ಪ್ರೋಟೀನ್ ಸೇರಬೇಕಾದರೆ ಇದೊಂದು ಅತ್ಯುತ್ತಮ ಆಹಾರ. ಅಲ್ಲದೆ ಬೀನ್ಸ್ ಹೆಚ್ಚಿನ ಚಯಾಪಚಯ ವಾತಾವರಣವನ್ನು ಒದಗಿಸಿ ಕೊಬ್ಬಿನ ಆಮ್ಲಗಳನ್ನು ಬಿಡುಗಡೆ ಮಾಡುವುದರಿಂದ ಅತ್ಯುತ್ತಮ ಕೊಬ್ಬುಕರಗಿಸುವ ಆಹಾರವಾಗಿದೆ.

# 5. ಕೊಬ್ಬು ಬಿಡುಗಡೆಮಾಡುವ ಆಹಾರ: ಶುಂಠಿ.

# 5. ಕೊಬ್ಬು ಬಿಡುಗಡೆಮಾಡುವ ಆಹಾರ: ಶುಂಠಿ.

ಶುಂಠಿಯಲ್ಲಿ ಹಲವಾರು ಅಧ್ಬುತವಾದ ಗುಣಗಳನ್ನು ಹೊಂದಿವೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ ಉರಿಯೂತವನ್ನು ಕಡಿಮೆಮಾಡಿ ರಕ್ತದ ಹರಿವನ್ನು ಹೆಚ್ಚಿಸಿ ಸ್ನಾಯು ಚೇತರಿಕೆಗೆ ಸಹಾಯಕಾರಿಯಾಗಿದೆ. ನೀವು ತೂಕವನ್ನು ಕಡಿಮೆಮಾಡುವವರಿದ್ದರೆ ಶುಂಠಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಕ್ಯಾಲೋರಿ ಮತ್ತು ಕೊಬ್ಬು ಹೆಚ್ಚಿಸಲು ಸಹಾಯಮಾಡುತ್ತದೆ.

# 6. ಕೊಬ್ಬು ಬಿಡುಗಡೆಮಾಡುವ ಆಹಾರ:ಓಟ್ಸ್ ಮೀಲ್

# 6. ಕೊಬ್ಬು ಬಿಡುಗಡೆಮಾಡುವ ಆಹಾರ:ಓಟ್ಸ್ ಮೀಲ್

ಬೆಳಗಿನ ವ್ಯಾಯಾಮದ ನಂತರ ಅಥವಾ ಬೆಳಗಿನ ವಾಕ್ ನಂತರ ನಿಮ್ಮ ಆಹಾರದಲ್ಲಿ ಓಟ್ಸ್ ಮೀಲ್ ಸೇವಿಸಿ. ಓಟ್ಮೀ ಲ್ ಬಹಳ ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕನಿಷ್ಟ ಹಂತದಲ್ಲಿರಿಸಿ ಕೊಬ್ಬನ್ನು ಕರಗಿಸಲು ಸಹಾಯಮಾಡುತ್ತದೆ. ತೂಕ ಕಡಿಮೆಮಾಡಿಕೊಳ್ಳಲು ಬಯಸುವವರು ಇದನ್ನು ಬಳಸಲೇಬೇಕು.

# 7. ಕೊಬ್ಬು ಬಿಡುಗಡೆಮಾಡುವ ಆಹಾರ: ಹಸಿರೆಲೆಯ ಟೀ (ಗ್ರೀನ್ ಟೀ).

# 7. ಕೊಬ್ಬು ಬಿಡುಗಡೆಮಾಡುವ ಆಹಾರ: ಹಸಿರೆಲೆಯ ಟೀ (ಗ್ರೀನ್ ಟೀ).

ಗ್ರೀನ್ ಟೀ‍ಯೊಳಗೆ ಆನ್ಟಿ-ಆಕ್ಸಿಡೆಂಟ್ಸ್ EGCG (Epigallocatechin Gallate) ಇರುವುದರಿಂದ ಆರೋಗ್ಯವಂತ ಜನರಲ್ಲಿ ಚಯಾಪಚಯ ಕ್ರಿಯೆಯಲ್ಲಿ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ಜೊತೆಗೆ ಇದು ಕ್ಯಾನ್ಸರ್ ವಿರೋಧಿ ಮತ್ತು ಕೊಲೆಸ್ಟರಾಲ್ ನಿರ್ವಹಣೆಯ ಗುಣಲಕ್ಷಣಗಳನ್ನು ಹೊಂದಿದೆ.

# 8. ಕೊಬ್ಬು ಬಿಡುಗಡೆಮಾಡುವ ಆಹಾರ: ಖಾರದ ಮೆಣಸು (ಹಾಟ್ ಪೆಪ್ಪರ್).

# 8. ಕೊಬ್ಬು ಬಿಡುಗಡೆಮಾಡುವ ಆಹಾರ: ಖಾರದ ಮೆಣಸು (ಹಾಟ್ ಪೆಪ್ಪರ್).

ಖಾರದ ಮೆಣಸನ್ನು ಸೇವಿಸುವುದರಿಂದ ಊಟಮಾಡಿದ ನಂತರ ಸ್ವಲ್ಪ ಸಮಯದಲ್ಲಿಯಾದರೂ ಬಹಳ ವೇಗವಾಗಿ ಕೊಬ್ಬು ಮತ್ತು ಕ್ಯಾಲೋರಿಯನ್ನು ಕರಗಿಸಲು ಸಹಾಯವಾಗುತ್ತದೆ. ಇದರಲ್ಲಿ ಕ್ಯಾಪ್ಸೈಸಿನ್(capsaicin) ಇರುವುದರಿಂದ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆಮಾಡುವ ಮೂಲಕ ದೇಹಕ್ಕೆ ಅಲ್ಪಾವಧಿಯ ಉತ್ತೇಜನ ನೀಡುತ್ತದೆ. ಇದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕ್ಯಾಲೋರಿ ಮತ್ತು ಕೊಬ್ಬನ್ನು ಕರೆಗಿಸಲು ಸಹಾಯಕಾರಿಯಾಗಿದೆ.

# 9. ಕೊಬ್ಬು ಬಿಡುಗಡೆಮಾಡುವ ಆಹಾರ: ನೀರು.

# 9. ಕೊಬ್ಬು ಬಿಡುಗಡೆಮಾಡುವ ಆಹಾರ: ನೀರು.

ಇದು ಒಂದು ಆಹಾರವಲ್ಲದಿದ್ದರೂ ಸಹಾ ಸಾಕಷ್ಟು ನೀರನ್ನು ಕುಡಿಯುವುದು ಅತ್ಯಗತ್ಯ ಎಂದು ಪೌಷ್ಟಿಕಾಂಶ ತಜ್ಞ ಪ್ರಿಯಾ ಅವರು ಹೇಳುತ್ತಾರೆ. ನೀರು ನಿಮ್ಮ ದೇಹಕ್ಕೆ ಬೇಕಾಗಿರುವ ಅತ್ಯಂತ ಪ್ರಮುಖ ಪದಾರ್ಥಗಳಲ್ಲೊಂದಾಗಿದೆ. ನೀವು ನೀರನ್ನು ಹೆಚ್ಚು ಕುಡಿಯದಿದ್ದರೆ ಕೆಲವೇ ಸಮಯದಲ್ಲಿ ನಿರ್ಜಲೀಕರಣದ ಅನುಭವವಾಗುತ್ತದೆ. ಕೆಲವೊಮ್ಮೆನೀರಡಿಕೆಯಾದಾಗ ಹಸಿವಾಗಿದೆಯೆಂದುಕೊಂಡು ನೀರು ಕುಡಿಯುವುದರ ಬದಲು ಆಹಾರ ತಿಂದುಬಿಡುತ್ತೇವೆ. ಆದ್ದರಿಂದ ಕೊಬ್ಬನ್ನು ಇಳಿಸಲು ಸೂಕ್ತ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಅತಿ ಮುಖ್ಯ.

# 10. ಕೊಬ್ಬು ಬಿಡುಗಡೆಮಾಡುವ ಆಹಾರ: ಮೊಟ್ಟೆಗಳು.

# 10. ಕೊಬ್ಬು ಬಿಡುಗಡೆಮಾಡುವ ಆಹಾರ: ಮೊಟ್ಟೆಗಳು.

ನಮಗೆ ಲಭ್ಯವಿರುವ ಆಹಾರಗಳಲ್ಲಿ ಮೊಟ್ಟೆಗಳು ಕೊಬ್ಬು ಕರಗಿಸಲು ಒಂದು ಉತ್ತಮ ಆಹಾರ. ಮೊಟ್ಟೆಯೊಳಗಿರುವ ಹಳದಿ ಅಂಶ ಕೊಬ್ಬು ಮತ್ತು ಕ್ಯಾಲೊರಿಯನ್ನು ಕರಗಿಸಲು ಬಹಳ ಅತ್ಯಗತ್ಯ. ಆಹಾರ ಪದ್ಧತಿಯ ಕೊಲೆಸ್ಟರಾಲ್ ಮೊಟ್ಟೆಯೊಳಗೆ ಇರುವುದರಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಅಲ್ಲದೆ, ಮೊಟ್ಟೆಯಲ್ಲಿ ಅತ್ಯಗತ್ಯವಾದ ಕೊಬ್ಬಿನ ಅಂಶದ ಆಮ್ಲಗಳು ಮತ್ತು ಪ್ರೋಟೀನ್ ತುಂಬಿರುವುದರಿಂದ ಇದು ಕೊಬ್ಬನ್ನು ಕರಗಿಸುವ ಒಂದು ಮಹಾನ್ ಸಂಯೋಜನೆಯ ಕಾರ್ಯಮಾಡುತ್ತದೆ.

Story first published: Monday, December 2, 2013, 21:59 [IST]
X
Desktop Bottom Promotion