50 ದಾಟಿದ ಪುರುಷರಿಗೆ ಪೌಷ್ಠಿಕಾಂಶದ ಟಿಪ್ಸ್

By Hemanth P

ವಯಸ್ಸಾದಂತೆ ಒಂದೊಂದೇ ಕಾಯಿಲೆಗಳು ದೇಹವನ್ನು ಮುತ್ತಿಕೊಳ್ಳಲು ಆರಂಭಿಸುತ್ತದೆ. ಅದರಲ್ಲೂ 50 ದಾಟಿದ ಬಳಿಕ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 50ರ ಬಳಿಕ ಆರೋಗ್ಯಕರ ಆಹಾರ ಸೇವನೆಯಿಂದ ಮಾನಸಿಕ ತೀವ್ರತೆ, ಅನಾರೋಗ್ಯ ಹಾಗೂ ರೋಗಗಳ ವಿರುದ್ಧ ಹೋರಾಡುವ ಶಕ್ತಿ, ಅಧಿಕ ಶಕ್ತಿಯ ಮಟ್ಟ, ವೇಗವಾಗಿ ಚೇತರಿಕೆ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಉತ್ತಮ ನಿರ್ವಹಣೆಗೆ ನೆರವಾಗುತ್ತದೆ.

ವಯಸ್ಸಾಗುತ್ತಿದ್ದಂತೆ ಆರೋಗ್ಯಕರ ಆಹಾರ ತಿನ್ನುವುದರಿಂದ ನಾವು ಧನಾತ್ಮಕವಾಗಿ ಕಂಡು ಭಾವನಾತ್ಮಕವಾಗಿ ಸಮತೋಲದಲ್ಲಿರಬಹುದು. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಪುರುಷರಲ್ಲಿ ಪೌಷ್ಠಿಕಾಂಶಗಳ ಬೇಡಿಕೆ ಬದಲಾಗುತ್ತದೆ. ನಿಮಗೆ ವಯಸ್ಸಾಗುತ್ತಿದ್ದಂತೆ ನಿಮ್ಮ ದೇಹದಲ್ಲಿ ಕ್ಯಾಲರಿ ದಹಿಸುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ನೀವು ತಿನ್ನುವ ಆಹಾರ ಪ್ರಮಾಣದಂತೆ ಹಸಿವು ಕೂಡ ಕಡಿಮೆಯಾಗುತ್ತದೆ.

50 ದಾಟಿದ ಪುರುಷರಿಗೆ ಪೌಷ್ಠಿಕಾಂಶದ ಟಿಪ್ಸ್

ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಅನಾರೋಗ್ಯಕ್ಕೀಡಾಗಲು ಕೆಲವು ಕಾರಣಗಳೆಂದರೆ ಧೂಮಪಾನ, ವ್ಯಾಯಾಮ ಮಾಡದೆ ಇರುವುದು ಮತ್ತು ಅನಾರೋಗ್ಯಕರ ಆಹಾರ ಸೇವನೆ. ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದರೆ ಇದನ್ನು ಸರಿಪಡಿಸಬಹುದು. ಅಧಿಕ ಪೌಷ್ಠಿಕಾಂಶಗಳಿರುವ ಆಹಾರವು ನಿಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೆ ಧನಾತ್ಮಕ ಜೀವನಶೈಲಿ ನಿರ್ವಹಿಸಲು ನೆರವಾಗುತ್ತದೆ. ಅನಾರೋಗ್ಯಕರ ಆಹಾರ ಕ್ರಮವು ನಿಮ್ಮ ತೂಕ ಹೆಚ್ಚಿಸಿ ದೀರ್ಘಕಾಲದ ಅನಾರೋಗ್ಯಕ್ಕೀಡುಮಾಡಿ ವಯಸ್ಸಾಗುತ್ತಿರುವ ದೇಹವನ್ನು ಮತ್ತಷ್ಟು ಹೈರಾಣಾಗಿಸುತ್ತದೆ.

ವಯಸ್ಸಾಗುತ್ತಿದ್ದಂತೆ ನಿಮ್ಮ ದೇಹದಲ್ಲಿ ಅನಾರೋಗ್ಯದಿಂದ ಹೊರಬರುವ ಸಾಮರ್ಥ್ಯವು ಕುಂದುತ್ತದೆ. 50ರ ಬಳಿಕ ಫಿಟ್ ಹಾಗೂ ಆರೋಗ್ಯಕರವಾಗಿರುವುದು ಮಹತ್ವದ ಜವಾಬ್ದಾರಿ. ಇದರಿಂದ ಅನಾರೋಗ್ಯ ತಡೆಗಟ್ಟಬಹುದು. ಹಲವಾರು ಬಣ್ಣ ಹಾಗೂ ವಿಧದ ತರಕಾರಿಗಳು ಮತ್ತು ಹಣ್ಣುಗಳು, ಇಡೀ ಧಾನ್ಯಗಳನ್ನು ಸೇವಿಸುವುದು ತುಂಬಾ ಮುಖ್ಯ. ನೀವು ಸಸ್ಯಹಾರಿಯಲ್ಲವೆಂದಾದರೆ ವಾರದಲ್ಲಿ ಎರಡು ಸಲ ತಪ್ಪದೆ ಮೀನು ತಿನ್ನಿ.

1. ಬಿ12 ಸಪ್ಲಿಮೆಂಟ್ ಗಳು
ಬಿ12 ವಿಟಮಿನ್ ಆರೋಗ್ಯಕರ ನರ ಮತ್ತು ರಕ್ತ ಕಣಗಳಿಗೆ ನೆರವಾಗುತ್ತದೆ. ಡಿಎನ್ ಎ ಗೆ ಕೂಡ ಇದು ಮಹತ್ವದ್ದು. ಆಹಾರದ ಪ್ರೋಟೀನ್ ನಲ್ಲಿ ಬಿ12 ಬಂಧಿಯಾಗಿರುತ್ತದೆ ಮತ್ತು ಹೊಟ್ಟೆಯಲ್ಲಿ ಜೀರ್ಣಕ್ರಿಯೆಯ ವೇಳೆ ಪೆಪ್ಸಿನ್ ಮೂಲಕ ಪ್ರೋಟೀನ್ ಇದನ್ನು ಬಿಡುಗಡೆ ಮಾಡುತ್ತದೆ. ಆದಾಗ್ಯೂ ನಮಗೆ ವಯಸ್ಸಾಗುತ್ತಿರುವಂತೆ ಹೊಟ್ಟೆಯಲ್ಲಿನ ಆಮ್ಲ ಕಡಿಮೆಯಾಗುತ್ತದೆ ಮತ್ತು ಬಿ12ನಂತಹ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಮೀನು ಮತ್ತು ಮಾಂಸದಲ್ಲಿ ಬಿ12 ವಿಟಮಿನ್ ಇದೆ. ಸಸ್ಯಹಾರಿಗಳಾಗಿರುವವರು ಅಗತ್ಯವಾಗಿ ಬಿ12 ಸಪ್ಲಿಮೆಂಟ್ ಗಳನ್ನು ಸೇವಿಸಬೇಕು.

2. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ
ಗ್ಯಾಸ್ಟ್ರಿಕ್ ಆ್ಯಸಿಡ್ ಮತ್ತು ಹಾರ್ಮೋನ್ ಬದಲಾವಣೆಗಳಿಂದಾಗಿ ವಿಟಮಿನ್ ಡಿ ಮಟ್ಟ ಮತ್ತು ಕ್ಯಾಲ್ಸಿಯಂ ಹೀರುವಿಕೆಯು 40ರ ಹರೆಯದಲ್ಲೇ ಕಡಿಮೆಯಾಗುತ್ತದೆ. ಇದರಿಂದಾಗಿ 30ರ ಹರೆಯಕ್ಕೆ ಮೊದಲೇ ಸಾಧ್ಯವಾದಷ್ಟು ಮಟ್ಟಿಗೆ ಕ್ಯಾಲ್ಸಿಯಂ ಸೇವನೆ ಮಾಡಬೇಕು. ಸಾರ್ಡೀನ್, ಪಾಲಾಕ್, ಕೋಸುಗಡ್ಡೆ, ಕೇಲ್ ನಂತಹ ಕ್ಯಾಲ್ಸಿಯಂನಿಂದ ಸಮೃದ್ಧವಾವಿರುವ ಆಹಾರಗಳು ಮತ್ತು ಕಡಿಮೆ ಕೊಬ್ಬ ಅಥವಾ ಕೊಬ್ಬು ರಹಿತವಾಗಿರುವ ಹಾಲು ಅಥವಾ ಮೊಸರನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ವಿಳಂಬ ಮಾಡಬೇಡಿ.

3. ಮೀನು
ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾ ಮುಖ್ಯ ಹಾಗೂ ಅತ್ಯಗತ್ಯ. ಒಮೆಗಾ-3 ಕೊಬ್ಬಿನಾಮ್ಲವು ಸಾಲ್ಮೊನ್, ಟ್ಯೂನಾ ಮತ್ತು ಹಲಿಬಟ್ ಹಾಗೂ ಇತರ ಕಡಲಜೀವಿಗಳಾದ ಆಲ್ಗೇ ಮತ್ತು ಕಡಲಕಳೆ ಚಿಪ್ಪುಜೀವಿಯಲ್ಲಿ ಇದು ಕಂಡುಬರುತ್ತದೆ.

4. ಹಣ್ಣುಗಳು
ನಿಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳು ಹಣ್ಣುಗಳಲ್ಲಿ ಇರುವ ಕಾರಣ ಅದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಋತುವಿಗೆ ಅನುಗುಣವಾಗಿ ಹಣ್ಣುಗಳು ಲಭ್ಯವಿರುತ್ತದೆ ಮತ್ತು ಇದು ಜೀರ್ಣಿಸಿಕೊಳ್ಳಲು ಸುಲಭ. 50 ದಾಟಿದ ಬಳಿಕ ಹಣ್ಣುಗಳ ಸೇವನೆ ಅತ್ಯಗತ್ಯ. ಹಣ್ಣುಗಳ ಸೇವನೆಯಿಂದ ಸಕ್ಕರೆ ಅಂಶ ಸೇರುವುದಿಲ್ಲ. ತುಂಬಾ ಸಿಹಿಯಾಗಿರುವ ಹಣ್ಣುಗಳ ಸೇವನೆಯಿಂದ ಸಕ್ಕರೆ ಮಟ್ಟವು ಹೆಚ್ಚಾಗದು.

5. ಜ್ಯೂಸ್
ನೀವು 50ರ ಹರೆಯ ದಾಟಿದ ಬಳಿಕ ಪೌಷ್ಠಿಕಾಂಶಗಳನ್ನು ಒಳಗೊಂಡ ಆಹಾರ ಸೇವನೆ ಹೆಚ್ಚಿಸಬೇಕು. ಕಠಿಣ ಆಹಾರ ಸೇವನೆ ಕಡಿಮೆ ಮಾಡಿ, ಹಣ್ಣಿನ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ಇದು ನಿಮ್ಮ ಜೀರ್ಣಕ್ರಿಯೆ ಸುಲಭವಾಗಿ ಆಗಲು ನೆರವಾಗುತ್ತದೆ ಮತ್ತು ನಿಮ್ಮ ದೇಹವನ್ನು ತೇವಾಂಶದಿಂದ ಇಡುತ್ತದೆ. ಹಣ್ಣಿನ ಜ್ಯೂಸ್ ನ್ನು ನಿಮ್ಮ ದೇಹವು ಬೇಗನೆ ಹೀರಿಕೊಳ್ಳುತ್ತದೆ.

6. ಧಾನ್ಯಗಳು

ಪಾಲಿಶ್ ಮಾಡಿದ ಅಕ್ಕಿ ಮತ್ತು ನಿಯಮಿತ ಹಿಟ್ಟು ಆಹಾರಕ್ಕಿಂತ ಧಾನ್ಯಗಳ ಆಹಾರಗಳನ್ನು ಸೇವಿಸಿ. ಗೋಧಿ ಮತ್ತು ಕಂದುಅಕ್ಕಿಯು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಧಾನ ಹಾಗೂ ನಿಯಮಿತವಾಗಿ ಬಿಡುಗಡೆ ಮಾಡುತ್ತದೆ. ಇದರಿಂದ ಅತಿಯಾಗಿ ತಿನ್ನುವುದು, ಸಕ್ಕರೆ ಮಟ್ಟ ಮತ್ತು ಹಸಿವಾಗದೆ ಇರುವ ಅಪಾಯವನ್ನು ಕಡಿಮೆ ಮಾಡುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Monday, December 23, 2013, 8:01 [IST]
X
Desktop Bottom Promotion