Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೈಪರ್ ಕೊಲೆಸ್ಟ್ರಾಲೇಮಿಯಾ ತಡೆಗಟ್ಟುವುದು ಹೇಗೆ?
ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳ ಕೆಟ್ಟ ಕೊಡುಗೆಗಳ ಪೈಕಿ ಹೈಪರ್ ಕೊಲೆಸ್ಟರಾಲೇಮಿಯಾ ಕೂಡಾ ಒಂದು. ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಪ್ರಮಾಣಕ್ಕಿಂತ ಅಧಿಕ ಪ್ರಮಾಣದಲ್ಲಿ ಶೇಖರವಾಗುವ ಮೂಲಕ ಈ ಸಮಸ್ಯೆ ತಲೆದೋರುತ್ತದೆ.ಸಾಮಾನ್ಯವಾಗಿ 200 ಮಿಲಿಗ್ರಾಂ ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಇರಬೇಕಾದ ಕೊಲೆಸ್ಟ್ರಾಲ್ 240 ಮಿಲಿಗ್ರಾಂ ಗಡಿ ದಾಟಿರುತ್ತದೆ.
ಇದರಿಂದ ಎದೆನೋವು, ಹೃದಯಾಘಾತಗಳೂ ಸಂಭವಿಸುವ ಅಪಾಯವಿದೆ. ಸರಳ ಜೀವನ ಶೈಲಿ ಅನುಸರಿಸುವುದರಿಂದ ಇದನ್ನು ತಡೆಗಟ್ಟಬಹುದಾಗಿದೆ.

ಸೂಚನೆಗಳು:
1. ಕೊಬ್ಬಿನ ಪ್ರಮಾಣ ಕಡಿಮೆ ಇರುವ ತಾಜಾ ತರಕಾರಿಗಳು, ಧಾನ್ಯಗಳು, ಹಣ್ಣು, ಕೋಳಿ ಮಾಂಸಗಳನ್ನು ಸೇವಿಸಿ. ಈ ಆಹಾರಗಳು ದೇಹಕ್ಕೆ ಅಗತ್ಯವಿರುವ ಕೊಬ್ಬಿನ ಅಂಶದೊಂದಿಗೆ ಸಮತೋಲನ ಸಾಧಿಸಲು ನೆರವಾಗುತ್ತವೆ ಎನ್ನುತ್ತಾರೆ ಅಮೇರಿಕನ್ ಹಾರ್ಟ್ ಅಸೋಶಿಯೇಷನ್‌ನ ತಜ್ಞರು. ವಾರಕ್ಕೆ ಕೇವಲ ಎರಡುಭಾರಿ ಮಾತ್ರ ಮೀನಿನ ಆಹಾರ ಸೇವಿಸಿ. ಕೊಬ್ಬು ಇಲ್ಲದ ಡೈರಿ ಉತ್ಪನ್ನಗಳು ಹಾಗೂ ಸ್ಯಾಚುರೇಟೆಡ್ ಆಹಾರಗಳನ್ನು ನಿಯಮಿತತವಾಗಿ ಸೇವಿಸಬಹುದು. ಸಿದ್ಧ ಆಹಾರಗಳನ್ನು ಖರೀದಿಸುವ ಮುನ್ನವೇ ಅವುಗಳ ಪೊಟ್ಟಣದ ಮೇಲೆ ನಮೂದಿಸಿರುವ ಕೊಬ್ಬಿನ ಪ್ರಮಾಣವನ್ನು ಗಮನಿಸಿ. ಕೊಬ್ಬನಂಶ ಕಡಿಮೆ ಇರುವ ಆಹಾರವನ್ನು ಮಾತ್ರ ಸೇವಿಸಿ. ಪೈಬರ್ ಹಾಗೂ ಗ್ರೀನ್ ಸಲಾಡ್ ಸೇವನೆ ಮಿತಿಯಲ್ಲಿರಲಿ.
2. ದೇಹದ ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಕೂಡ ಹೈಪರ್ ಕೊಲೆಸ್ಟರಲೇಮಿಯಾವನ್ನು ತಡೆಯಲು ಪ್ರಮುಖವಾದ ಮಾರ್ಗ. ಕನಿಷ್ಠ ವಾರದಲ್ಲಿ 5 ದಿನಗಳಾದರೂ ದಿನಕ್ಕೆ ಅರ್ಧ ಗಂಟೆಯಂತೆ ಕಾಲ್ನಡಿಗೆ ಮಾಡಿ. ಶ್ರಮ ವಿನಿಯೋಗಿಸುವ ಕೆಲಸ ಮಾಡಿ. ಇವುಗಳಿಂದ ದೇಹದಲ್ಲಿ ಶೆಖರವಾದ ಕೆಟ್ಟ ಕೊಬ್ಬು ಕರಗುತ್ತದೆ. ಈಜುವುದು,ಬೈಕಿಂಗ್, ಏರೋಬಿಕ್ಸ್, ನೃತ್ಯ ಮುಂತಾದವುಗಳಲ್ಲಿ ತೊಡಗಿಕೊಂಡರೆ ಕೊಬ್ಬ ತನ್ನಿಂತಾನೇ ಕರಗಿಹೋಗುತ್ತದೆ. ನಿಮ್ಮ ದಿನಚರಿಯಲ್ಲಿ ಶ್ರಮಕ್ಕೂ ಒಂಚೂರು ಜಾಗ ಕೊಡಿ!
3. ಸಿಗರೇಟ್, ಬೀಡಿ ಸೇದುತ್ತಿದ್ದವರಾದರೆ ಕೂಡಲೇ ನಿಲ್ಲಿಸಿಬಿಡಿ.ಬೇರೆಯವರು ಸಸೇದುತ್ತಿದ್ದರೂ ಆಸ್ಥಳದಲ್ಲಿ ನಿಲ್ಲಬೇಡಿ. ಸಾಧ್ಯವಾದಷ್ಟೂ ಧೂಮಪಾನಿಗಳಿಂದ ದೂರವಿರಲು ಪ್ರಯತ್ನಿಸಿ.
4. ವರ್ಷಕ್ಕೊಮ್ಮೆಯಾದರೂ ನಿಮ್ಮ ರಕ್ತ ಪರೀಕ್ಷೆ ಮಾಡಿಸಿ ಕೊಬ್ಬಿನ ಪ್ರಮಾಣ ತಿಳಿದುಕೊಳ್ಳುತ್ತಾ ಇರಿ.ಈ ವೇಳೆ ವೈದ್ಯರ ಶಿಪಾರಸ್ಸುಗಳನ್ನು ಕಡೆಗಣಿಸಬೇಡಿ. ಹಿಂದಿನ ಸಲ ರಕ್ತ ಪರೀಕ್ಷೆಯ ಫಲಿತಾಂಶಕ್ಕೂ, ಈ ಬಾರಿಯ ಫಲಿತಾಂಶಕ್ಕೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ.
5. ನಿಮ್ಮ ಕುಂಟುಂಬ ವೈದ್ಯರ ಬಳಿ ಈ ಬಗ್ಗೆ ಸಮಾಲೋಚನೆ ನಡೆಸುವುದು ತುಂಬಾ ಒಳ್ಳೆಯದು. ಪ್ರತಿಯೊಬ್ಬರ ಆರೋಗ್ಯ ಇತಿಹಾಸವೂ ಗೊತ್ತಿರುವುದರಿಂದ ಈ ವೈದ್ಯರು ನಿಮ್ಮ ಆರೋಗ್ಯ ಸಮಸ್ಯೆಗೆ ಖಚಿತವಾದ ಪರಿಹಾರ ಸೂಚಿಸುತ್ತಾರೆ. ಈ ಅತಿ ಕೊಬ್ಬಿನ ತೊಂದರೆಯಲ್ಲಿ ಅನುವಂಶೀಯತೆಯ ಪ್ರಮಾಣವೂ ಇರುವುದರಿಂದ ಕುಟುಂಬ ವೈದ್ಯರೊಂದಿಗೆ ಮುಕ್ತವಾಗಿ ಮಾತಾಡುವುದು ಸೂಕ್ತ.
ಸಲಹೆಗಳು ಮತ್ತು ಎಚ್ಚರಿಕೆಗಳು:
ನಿಮ್ಮ ದೇಹಸ್ಥಿತಿಯನ್ನು ಅವಲೋಕಿಸಿ, ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ವೈದ್ಯರು ಮಾತ್ರ ಚಿಕಿತ್ಸೆಯನ್ನು ಶಿಫಾರಸು ಮಾಡಲು ಅರ್ಹರಾಗಿರುತ್ತಾರೆ. ಹಾಗಾಗಿ ವೈದ್ಯರ ಸಲಹೆ ಇಲ್ಲದೇ ಯಾವುದೇ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ. ಇದರಿಂದ ಅಪಾಯಗಳೇ ಹೆಚ್ಚು ಎಂಬುದು ನಿಮ್ಮ ಗಮನದಲ್ಲಿರಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
