Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಖುಷಿಗೂ, ಈ ಆಹಾರಗಳಿಗೂ ಇರುವ ಸಂಬಂಧವೇನು?
ಕೆಲವೊಮ್ಮೆ ತುಂಬಾ ಖುಷಿಯಾಗಿರುತ್ತೇವೆ ಅಷ್ಟೊಂದು ಖುಚಿಯಾಗಿರಲು ಕಾರಣವೇನು ಎಂದು ತಿಳಿಯುವುದಿಲ್ಲ. ನಮ್ಮ ಖುಷಿ, ಖಿನ್ನತೆಗೆ ಕೇವಲ ನಮ್ಮ ಮನಸ್ಸು ಮಾತ್ರವಲ್ಲ ದೇಹದದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳು ಕೂಡ ಒಂದು ಕಾರಣ. ಕೆಲವೊಮ್ಮೆ ವಿನಾಕಾರಣ ಮನಸ್ಸು ಭಾರವಾದಂತೆ ಅನಿಸುತ್ತದೆ, ಮನಸ್ಸಿಗೆ ಬೇಜಾರಾಗಲು ಕಾರಣವೇನು ಇರುವುದಿಲ್ಲ, ಆದರೂ ಮೂಡ್ ಆಫ್! ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಬಂದೇ ಬಂದಿರುತ್ತದೆ, ಇದಕ್ಕೆಲ್ಲಾ ಕಾರಣ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳ ವ್ಯತ್ಯಾಸ.
ಸಿರೊಟೋನಿನ್, ಎಂಡ್ರೋಫೈನ್ಸ್, ಡೊಪಮೈನ್ ಮತ್ತು ಇತರ ಹಾರ್ಮೋನುಗಳು ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ. ಈ ಹಾರ್ಮೋನ್ ಗಳು ಕೆಲವೊಂದು ಆಹಾರಗಳನ್ನು ತಿಂದರೆ ಹೆಚ್ಚು ಉತ್ಪತ್ತಿಯಾಗಿ ನೀವು ಖುಷಿ ಖುಷಿಯಾಗಿ ಇರುವಿರಿ. ಏನೋ ಕಾರಣಕ್ಕೆ ಮನಸ್ಸಿಗೆ ನೋವಾಗಿದ್ದರೆ ಈ ಆಹಾರಗಳನ್ನು ತಿಂದರೆ ಸಾಕು, ಮನಸ್ಸು ಹಗುರವಾಗುವುದು. ನಿಮ್ಮ ಮೂಡ್ ಬದಲಾಯಿಸುವ ಆ ಆಹಾರಗಳಾವುವು ಎಂದು ನೋಡೋಣ ಬನ್ನಿ:

1. ಸ್ಟ್ರಾಬೆರಿ
ನರಗಳ ಪ್ರಚೋದನೆಗಳಿಗೆ ಸಹಾಯ ಮಾಡುವ ಪೊಟ್ಯಾಶಿಯಂ ನ ಉತ್ತಮ ಮೂಲ ಇರುವುದು ಸ್ಟ್ರಾಬೆರಿ ಯಲ್ಲಿ. ಮತ್ತು ಇದರಲ್ಲಿರುವ ವಿಟಮಿನ್ ಸಿ ನಿಮ್ಮ ಮನಸ್ಸನ್ನು ಸಮತೋಲನವಾಗಿಡಲು ಸಹಾಯ ಮಾಡುತ್ತದೆ.

2. ಬಾಳೆಹಣ್ಣು
ಇದರಲ್ಲಿಯೂ ಪೊಟ್ಯಾಶಿಯಂ ಹಾಗೂ ಮ್ಯಾಗ್ನೀಶಿಯಂ ಅಂಶ ಅಧಿಕವಾಗಿರುತ್ತದೆ. ಬಾಳೆಹಣ್ಣನ್ನು ತಿಂದಾಗ ಈ ಅಂಶಗಳು ದೇಹದ ರಕ್ತಕಣದಲ್ಲಿ ಸೇರಿ ನಿಮ್ಮನ್ನು ಶಕ್ತಿ (ಎನರ್ಜಿ)ವಂತರನ್ನಾಗಿ ಮಾಡುತ್ತದೆ.

3. ಸೂರ್ಯಕಾಂತಿ ಬೀಜಗಳು
ಇದು ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ನ್ನು ಹೊಂದಿರುತ್ತವೆ. ಈ ಸಂಯುಕ್ತ ಅಂಶಗಳು ನಮಗೆ ತ್ವರಿತ ಹಿತಾನುಭವ ನೀಡುತ್ತವೆ. ಅಲ್ಲದೇ ಅಮೈನೊ ಆಮ್ಲಗಳು ಇದರಲ್ಲಿ ಹೇರಳವಾಗಿವೆ.

4. ಟೊಮೆಟೊ
ಲೈಕೋಪೀನ್ ನನ್ನು ಹೊಂದಿರುವ ಟೊಮೆಟೊ ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾದುದು. ಇದು ಮೆದುಳಿನ ಸಮಸ್ಯೆಗಳನ್ನು ಶೀಘ್ರವಾಗಿ ಕಡಿಮೆಗೊಳಿಸುವುದರಲ್ಲಿ ಸಂಶಯವಿಲ್ಲ.

5. ಮೊಟ್ಟೆಗಳು
ಮೊಟ್ಟೆಗಳು ಝಿಂಕ್, ವಿಟಮಿನ್ ಬಿ, ಅಯೋಡಿನ್, ಒಮೆಗಾ -3 ಕೊಬ್ಬಿನ ಆಮ್ಲಗಳ, ಮತ್ತು ಪ್ರೋಟೀನ್ ಹೊಂದಿರುತ್ತವೆ. ವಿವಿಧ ಪ್ರಮಾಣದಲ್ಲಿ ಮೊಟ್ಟೆಗಳ ಸೇವನೆ ಮೆದುಳಿನ ಚಟುವಟಿಕೆ ಒಳ್ಳೆಯದು ಮತ್ತು ಶಕ್ತಿ ವರ್ಧಕವೂ ಆಗಿದೆ.

7. ಜೇನು
ಜೇನು ಹನಿ, ಇದು ಆರೋಗ್ಯ ಸಮಸ್ಯೆಗಳಿಗೆ ಸಾಮಾನ್ಯ ಪರಿಹಾರ ಒದಗಿಸುತ್ತದೆ. ಹನಿ ಮೆದುಳಿನ ಉರಿಯೂತ ಕಡಿಮೆ ಮಾಡುತ್ತವೆ. ಈ ಖಿನ್ನತೆಯನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ ಮತ್ತು ಮೆದುಳು ಆರೋಗ್ಯಕರವಾಗಿರಲು ಕೂಡಾ ಜೇನು ತುಪ್ಪ ಒಳ್ಳೆಯದು.

7. ತೆಂಗಿನಕಾಯಿ
ತೆಂಗಿನಕಾಯಿ ಮಿಡಿಯಂ ಚೈನ್ (ಮಧ್ಯಮ ಸರಪಳಿ) ಟ್ರೈಗ್ಲಿಸರೈಡ್ ಗಳನ್ನು ಹೊಂದಿದೆ. ಇದು ಉತ್ತಮ ಚಿತ್ತಸ್ಥಿತಿಗಳನ್ನು ನಿರ್ಮಿಸಲು ಮತ್ತು ಮಾನವ ಮಿದುಳಿನ ಸಾಮಾನ್ಯ ಆರೋಗ್ಯಕ್ಕೆ ಒಳ್ಳೆಯದು.

9. ಪ್ರೋಟೀನ್ ಗಳು
ಪ್ರೋಟೀನ್ ಗಳು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಟೈರೋಸಿನ್ ಎಂಬ ಒಂದು ನಿರ್ದಿಷ್ಟ ಅಮಿನೋ ಆಮ್ಲ, ಡೋಪಮೈನ್, ನೋರ್ಪಿನೆಫ್ರೀನ್ ಮತ್ತು ಎಪಿನ್ಫ್ರಿನ್ ತಯಾರಿಸುತ್ತದೆ. ಈ ರಾಸಾಯನಿಕಗಳು ಜಾಗರೂಕತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಆದ್ದರಿಂದ ಮೀನು, ಕೋಳಿ ಮತ್ತು ಮಾಂಸ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕು. ಕಾಳುಗಳು, ಚೀಸ್, ಹಾಲು ಮತ್ತು ಮೊಸರು ತುಂಬಾ ಒಳ್ಳೆಯದು.

10. ಕಾರ್ಬೋಹೈಡ್ರೇಟ್ಸ್
ಕಾರ್ಬೋಹೈಡ್ರೇಟ್ಸ್ ಹಿತಾನುಭವ ನೀಡುವ ಸಿರೊಟೋನಿನ್ ಹಾರ್ಮೋನ್ ಉತ್ಪಾದನೆಗೆ ಸಹಾಯಕಾರಿ. ಕಾರ್ಬೋಹೈಡ್ರೇಟ್ ಪದಾರ್ಥ ಸೇವನೆ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಸಂಪೂರ್ಣ ಗೋಧಿ ಬ್ರೆಡ್, ಅಕ್ಕಿ, ಧಾನ್ಯ, ರೊಟ್ಟಿ, ಬಾಳೆ ಹಣ್ಣು, ಸೇಬು ಇವೆಲ್ಲಾ ಎಂಡ್ರೋಫೈನ್ಸ್ ಹಾರ್ಮೋನ್ ಹೆಚ್ಚಿಸಲು ಸಹಕಾರಿಯಾಗಿದೆ.

11. ಕೆಫೀನ್
ಕೆಲವು ದೋಷಗಳ ಹೊರತಾಗಿಯೂ ಕೆಫೀನ್ ಸೌಮ್ಯವಾದ ಖಿನ್ನತೆಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುತ್ತದೆ. ಕಾಫಿ / ಟೀ ದಿನಕ್ಕೆ ಒಂದು ಕಪ್ ಅಥವಾ ಎರಡು ಕುಡಿಯುವುದು ಸುರಕ್ಷಿತ. ನೆನಪಿಡಿ, ಹೆಚ್ಚು ಕೆಫೀನ್ ನಿಮ್ಮ ಸಿಡುಕಿನ ಸ್ವಭಾವವನ್ನು ಹೆಚ್ಚಿಸಬಹುದು.

ಚಾಕಲೇಟ್
ಚಾಕಲೇಟ್ ತಿಂದರೆ ಎಂಡ್ರೂ ಫೈನ್ಸ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದರಿಂದ ಖುಷಿಯಾಗಿ ಇರುವಿರಿ.



Click it and Unblock the Notifications
