Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದ ಸಮಸ್ಯೆ ರೋಗವಾಗುವ ಮುನ್ನ ಗುಣಪಡಿಸಿ
ಜೀವನಶೈಲಿಯಲ್ಲಿ ಸಮತೋಲನ ಕಾಪಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಈ ಸಮತೋಲನವನ್ನು ಸರಿಯಾಗಿ ಮಾಡಿಕೊಳ್ಳದೇ ಇರುವುದರಿಂದಲೇ ಅನೇಕರು ಬೇರೆ ಬೇರೆ ರೀತಿಯ ಕಾಯಿಲೆಗೆ ತುತ್ತಾಗುತ್ತಾರೆ. ಭಾರತದ ಅತೀ ಹಳೆಯ ಚಿಕಿತ್ಸಾ ವಿಧಾನ ಅಂತಾನೇ ಹೆಸರು ಪಡೆದುಕೊಂಡಿರುವ ಅಯುರ್ವೇದದ ಪ್ರಕಾರ ಪ್ರತಿಯೊಬ್ಬ ಮನುಷ್ಯನೂ ಅವನದೇ ರೀತಿಯಲ್ಲಿ ತನ್ನ ದೇಹದ ಸಮತೋಲನ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನ ಆರೋಗ್ಯವು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಮೇಲೆ ನಿಂತಿದೆ.
ಮನುಷ್ಯನ ದೇಹದ ಸಮಸ್ಯೆ ಅದು ರೋಗವಾಗಿ ಬದಲಾಗುವುದಕ್ಕೆ ಮೊದಲೇ ಅದನ್ನು ಪರಿಹರಿಸಲು ಆರ್ಯುವೇದದಲ್ಲಿ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಈ ಕಾಯಿಲೆ ಉಂಟಾಗುತ್ತದೆ. ಇದರಿಂದ ಕಿಡ್ನಿ ಸಮಸ್ಯೆ, ಹೃದಯದ ತೊಂದರೆ, ನರದ ಸಮಸ್ಯೆ ಹಾಗೂ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳಬಹುದು. ಇವತ್ತಿನ ಮಕ್ಕಳಲ್ಲಿ ಕೂಡಾ ಸಕ್ಕರೆ ಕಾಯಿಲೆ ಸಮಸ್ಯೆ ಕಾಣಿಸಿಕೊಳ್ಳತೊಡಗಿದೆ.

ಅದಲ್ಲದೆ ಈಗೀನ ಜನರ ಜೀವನಶೈಲಿಯಲ್ಲಿ ರಕ್ತದ ಒತ್ತಡ ಅಥವಾ ರಕ್ತದ ಅಧಿಕ ಒತ್ತಡ ಸಾಮಾನ್ಯವಾಗಿದೆ. ಆಯುರ್ವೇದದ ಪ್ರಕಾರ, ಇದು ದೋಷಗಳ ಅಸಮತೋಲನದಿಂದ ಕಾಣಿಸಿಕೊಳ್ಳುವ ಸಮಸ್ಯೆ.
ಇನ್ನೂ ಹಾರ್ಮೋನ್ ಸಮಸ್ಯೆಯಿಂದ ನರಳುತ್ತಿರುವವರ ಸಂಖ್ಯೆಯಂತೂ ಹೆಚ್ಚಾಗುತ್ತಿದೆ. ಸಾಮಾನ್ಯವಾದ ಚರ್ಮದ ಸಮಸ್ಯೆಗಳು ಅಂದರೆ, ಮೊಡವೆ, ಕಲೆಗಳು, ಸೋರಿಯಾಸಿಸ್, ಇಸುಬು. ಇನ್ನು ಕೂದಲಿನ ಸಮಸ್ಯೆಗಳಾದ ಕೂದಲುದುರುವಿಕೆ, ಹೊಟ್ಟು, ಬೋಳಾಗುವುದು ಮುಂತಾದವು. ಇದರ ಜೊತೆಗೆ ಸ್ಥೂಲಕಾಯದ ಸಮಸ್ಯೆ, ಪಿಸಿಓಡಿ ಸಮಸ್ಯೆ ಮತ್ತು ಅಲರ್ಜಿಗಳು ಹಾರ್ಮೋನ್ ನ ತೊಂದರೆಯಿಂದ ಕಾಣಿಸಿಕೊಳ್ಳುತ್ತವೆ.
ಈ ರೀತಿಯ ಸಮಸ್ಯೆಗಳಿಗೆ ಆರ್ಯುವೇದದ ಮುಖಾಂತರ ಪ್ರಾರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ಈ ಮೇಲಿನ ಸಮಸ್ಯೆಗಳಲ್ಲದೆ ಬೆನ್ನು ನೋವು, ಸೊಂಟ ನೋವಿನ ಸಮಸ್ಯೆ ಹೆಚ್ಚಿನ ಜನರಲ್ಲಿ ಕಂಡು ಬರುತ್ತಿದೆ.
ಇದರ ಕುರಿತು ಬೆಂಗಳೂರಿನ ಅರ್ಥ್ ಹೆಲ್ತ್ ಸೆಂಟರ್ ನ ವೈದ್ಯ ಡಾ ಪ್ರಶಾಂತ್ ಆಚಾರ್ಯರವರು "ಬೆನ್ನುನೋವು ಯಾವುದೇ ಕಾರಣದಿಂದ ಬರಬಹುದು ಭಾರ ಎತ್ತುವುದು, ಸರಿಯಾಗಿರದ ಭಂಗಿಯಿಂದ, ಸೆಳೆತದಿಂದ, ಹೈಹೀಲ್ಡ್ ಚಪ್ಪಲಿ ಧರಿಸುವುದರಿಂದ, ಕೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡುವುದರಿಂದ ಜೊತೆಗೆ ಅತಿಯಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದರಿಂದ ಬೆನ್ನು ನೋವು ಬರುವ ಸಾಧ್ಯತೆ ಇದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಬೆನ್ನಿನಲ್ಲಿ ನೋವು, ಜುಮ್ಮೆನಿಸುವಿಕೆ, ಮರಗಟ್ಟುವ ಅನುಭವಗಳನ್ನು ಹೊಂದುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ಅರ್ಥ್‌ನಲ್ಲಿ ಪಂಚಕರ್ಮ ಮತ್ತು ವಿವಿಧ ಔಷಧ ಕೊಡುವ ಮೂಲಕ ಚಿಕಿತ್ಸೆ ನೀಡಲಾಗುವುದು ಅದಲ್ಲದೆ ಹಾರ್ಮೋನ್ ಗಳ ಅಸಮತೋಲನ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಈ ರೀತಿಯ ಸಮಸ್ಯೆಗಳಿಗೂ ಆರ್ಯುವೇದ ಚಿಕಿತ್ಸೆ ನೀಡುತ್ತೇವೆ, ಮನುಷ್ಯನ ದೇಹದ ಸಮಸ್ಯೆ ಅದು ರೋಗವಾಗಿ ಬದಲಾಗುವುದಕ್ಕೆ ಮೊದಲೇ ಅದನ್ನು ಪರಿಹರಿಸಲು ಅರ್ಥ್ ಆಯುರ್ವೇದಿಕ್ ಸೆಂಟರ್ ತುಂಬಾ ಶ್ರಮ ವಹಿಸುತ್ತಿದೆ" ಎಂದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











