Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮದ್ಯವನ್ನು ಅಪರೂಪಕ್ಕೆ ಕುಡಿದರೂ ಅಪಾಯವಿದೆಯೇ?
ಮದ್ಯಪಾನ ಕೆಲವರಿಗೆ ಚಟ, ಮತ್ತೆ ಕೆಲವರಿಗೆ ಫ್ಯಾಷನ್. ಫ್ರೆಂಡ್ಸ್ ಎಲ್ಲಾ ಸೇರಿ ಆಲ್ಕೋಹಾಲ್ ಕುಡಿಯುವುದು ಫನ್ ಅಷ್ಟೇ ಅನ್ನುವುದು ಇವರ ವಾದವಾಗಿರುತ್ತದೆ. ಮದ್ಯಪಾನ ಚಟವಿರುವವರಿಗೆ ಕಾಯಿಲೆಗಳು ಬೇಗನೆ ಬರುತ್ತದೆ, ಇದನ್ನು ಫ್ಯಾಷನ್ ಗಾಗಿ ಕುಡಿಯುವವರಿಗೂ ಮದ್ಯದ ಕೆಟ್ಟ ಪ್ರಭಾವ ಕ್ರಮೇಣ ಅವರ ಮೇಲೆ ಬೀರದೇ ಇರುವುದಿಲ್ಲ!
ಮದ್ಯಪಾನ ಕುಡಿಯುವವರು ವಯಸ್ಸಾದಂತೆ ಅದನ್ನು ತೆಗೆದುಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುವುದು.
ಮದ್ಯಪಾನ ಮಾಡಿದರೆ ಈ ಕೆಳಗಿನ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ:

ಲಿವರ್ ಗೆ ಹಾನಿಯುಂಟಾಗುತ್ತದೆ
ಮದ್ಯಪಾನ ಮಾಡಿದರೆ ಅದರಲ್ಲಿರುವ ರಾಸಾಯನಿಕಗಳು ಲಿವರ್ ನ ಕಾರ್ಯಕ್ಕೆ ಅಡಚಣೆ ಉಂಟು ಮಾಡುತ್ತದೆ, ಕ್ರಮೇಣ ಲಿವರ್ (ಯಕೃತ್ತ್) ತನ್ನ ಕಾರ್ಯವನ್ನು ನಿಲ್ಲಿಸುತ್ತದೆ.

ಅಧಿಕ ರಕ್ತದೊತ್ತಡ
ಯೌವನದಲ್ಲಿ ಕುಡಿಯುವ ಮದ್ಯ ಸ್ವಲ್ಪ ವಯಸ್ಸಾದಂತೆ ರಕ್ತದೊತ್ತಡ ಸಮಸ್ಯೆಯನ್ನು ತರಬಹುದು. ಇದು ರಕ್ತದೊತ್ತಡ ನಿಯಂತ್ರಣ ಮಾಡುವ ನರವನ್ನು ಹಾನಿ ಮಾಡುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ.

ಒಬೆಸಿಟಿ
ವೋಡ್ಕಾ, ಬೀರ್ ಇವೆಲ್ಲಾ ದೇಹದ ತೂಕವನ್ನು ಹೆಚ್ಚಿಸುತ್ತದೆ. ಒಬೆಸಿಟಿ ಹೆಚ್ಚಾಗುವುದು.

ಹೃದಯ ಸಂಬಂಧಿ ಕಾಯಿಲೆಗಳು
ಒಬೆಸಿಟಿ ಹಾಗೂ ರಕ್ತದೊತ್ತಡ ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗುವುದು.

ರಕ್ತ ಹೀನತೆ
ಮದ್ಯಪಾನ ಕುಡಿಯುವುದರಿಂದ ದೇಹದಲ್ಲಿ ರಕ್ತ ಕಣಗಳು ಕಡಿಮೆಯಾಗುವುದು. ತಲೆಸುತ್ತು, ನಿಶ್ಯಕ್ತಿ ಕಂಡು ಬರುವುದು.

ಖಿನ್ನತೆ
ಮನಸ್ಸಿನ ಬೇಜಾರು ಹೋಗಲಾಡಿಸಲು ಹೆಚ್ಚಿನವರು ಕುಡಿಯುತ್ತಾರೆ, ಆದರೆ ಕುಡಿಯುವ ಅಭ್ಯಾಸದಿಂದ ಮನಸ್ಸಿನ ಖಿನ್ನತೆ ಮತ್ತಷ್ಟು ಹೆಚ್ಚಾಗುತ್ತದೆ.

ಸಂಧಿ ನೋವು
ಮದ್ಯಪಾನ ಚವಿದ್ದವರಿಗೆ ಮೈಕೈ ನೋವು , ಸಂಧಿ ನೋವು ಕಂಡುಬರುವುದು, ತುಂಬಾ ಕುಡಿಯುವವರಿಗೆ ಒಂದು ದಿನ ಕುಡಿಯದಿದ್ದರೂ ಕೈ , ಕಾಲುಗಳಲ್ಲಿ ನಡುಕ ಬಂದು ಬಿಡುತ್ತದೆ.

ನರಗಳಿಗೆ ಹಾನಿಯುಂಟಾಗುತ್ತದೆ
ನರಗಳು ಆರೋಗ್ಯವಾಗಿದ್ದರೆ ದೇಹ ಆರೋಗ್ಯವಾಗಿರಲು ಸಾಧ್ಯ. ನರಗಳು ಬಲವಾಗಿರಲು ನಾವು ಪೌಷ್ಠಿಕ ಆಹಾರ ತಿನ್ನುತ್ತೇವೆ. ಆದರೆ ಮದ್ಯ ನರಗಳಿಗೆ ಹಾನಿಯುಂಟು ಮಾಡುತ್ತದೆ.
ಮದ್ಯ ಕುಡಿಯುವುದರಿಂದ, ದುಡ್ಡು, ಆರೋಗ್ಯ ನಷ್ಟವಾಗುವುದಲ್ಲದೇ ಮತ್ಯಾವುದೇ ಪ್ರಯೋಜನವಿಲ್ಲ



Click it and Unblock the Notifications
