Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಸಿಲಿನ ಧಗೆ ಹೆಚ್ಚಿರುವಾಗ ಇವುಗಳನ್ನು ತಿನ್ನಬೇಡಿ
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಧಗೆಯನ್ನು ಸಹಿಸಲು ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಉಷ್ಣತೆ ಹೆಚ್ಚಾಗಿದೆ. ಇದರ ನೇರ ಪರಿಣಾಮ ನಮ್ಮ ದೇಹದ ಮೇಲೆ ಬೀಳುತ್ತದೆ. ಕೆಲವು ಕಡೆ ಉಷ್ಣತೆ 40 ಡಿಗ್ರಿಗಿಂತಲೂ ಅಧಿಕವಿದೆ ಎಂದರೆ ಕೇಳಬೇಕೆ? ಬಿಸಿಲಿಗೆ ಹೋಗದೆ ಮನೆಯಲ್ಲೇ ಕೂತರು ಮೈಯಿಂದ ಬೆವರು ಸುರಿಯುತ್ತದೆ. ಕೆಲವರ ಮೈಯಲ್ಲಿ ಬೊಬ್ಬೆಗಳು ಕಂಡು ಬರುತ್ತಿದೆ.
ಪರಿಸರದಲ್ಲಿ ಉಷ್ಣತೆ ಹೆಚ್ಚಾದರೆ ವಾಂತಿ-ಬೇಧಿ, ತಲೆಸುತ್ತು, ನಿದ್ದೆಗೆ ತೊಂದರೆ, ಏಕಾಗ್ರತೆಗೆ ತೊಂದರೆ ಮುಂತಾದ ಸಮಸ್ಯೆಗಳು ಕಂಡು ಬರುವುದು. ಬಿಸಿಲಿನ ತಾಪಮಾನ ಹೆಚ್ಚಾದಂತೆ ನಿಮ್ಮ ಆಹಾರಕ್ರಮದ ಬಗ್ಗೆ ತುಂಬಾ ಗಮನ ಹರಿಸಬೇಕು. ಇಲ್ಲದಿದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಅದರಲ್ಲೂ ಬೇಸಿಗೆ ಕಳಿಯುವವರೆಗೆ ಈ ಕೆಳಗಿನ ಆಹಾರಗಳನ್ನು ತಿನ್ನದಿರುವುದು ಒಳ್ಳೆಯದು:

ಅಧಿಕ ಖಾರ
ಅಧಿಕ ಖಾರದ ಆಹಾರವೇನೋ ಬಾಯಿಗೆ ರುಚಿ, ಆದರೆ ಬಾಯಿರುಚಿಗೆ ಸ್ವಲ್ಪ ಕಾಲ ತಡೆ ಹಾಕುವುದು ಒಳ್ಳೆಯದು. ಅಧಿಕ ಖಾರ ಹೊಟ್ಟೆಯನ್ನು ಸೇರಿದರೆ ಹೊಟ್ಟೆ ನೋವು, ಹೊಟ್ಟೆ ಉರಿ, ಬೇಧಿ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಖಾರ ಇಷ್ಟ ಪಡುವವರಾದರು ಈ ಸಮಯದಲ್ಲಿ ಖಾರವನ್ನು ಕಮ್ಮಿ ಬಳಸುವುದು ಒಳ್ಳೆಯದು.

ಚಪಾತಿ
ಗೋಧಿ ಕೂಡ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಪಾತಿ ಮುಂತಾದ ಗೋಧಿ ಪದಾರ್ಥಗಳನ್ನು ತಿನ್ನುವ ಬದಲು ರಾಗಿಯಿಂದ ಮಾಡಿದ ಪದಾರ್ಥಗಳನ್ನು, ಗಂಜಿ ಇವುಗಳನ್ನು ತಿನ್ನುವುದು ಒಳ್ಳೆಯದು.

ಮಾವಿನ ಹಣ್ಣು
ಬಾಡಿ ಹೀಟ್ ಸಮಸ್ಯೆ ಇರುವವರು ಮಾವಿನ ಹಣ್ಣು ತಿನ್ನದಿರುವುದು ಒಳ್ಳೆಯದು. ಅದರಲ್ಲೂ ಮಕ್ಕಳಲ್ಲಿ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ. ಮೊಡವೆ ಸಮಸ್ಯೆ ಇರುವವರಿಗೆ ಮೊಡವೆ ಹೆಚ್ಚು ಮಾಡುತ್ತದೆ.

ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳಲ್ಲಿ ಕೆಲವು ಬಾಡಿ ಹೀಟ್ ಹೆಚ್ಚು ಮಾಡುತ್ತದೆ. ಈ ಸಮಯದಲ್ಲಿ ಹಾಲು, ಮಜ್ಜಿಗೆ ಕುಡಿದರೆ ಹೊಟ್ಟೆಗೆ ತಂಪು.

ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಜಂಕ್ ಫುಡ್
ಬರ್ಗರ್, ಪಿಜ್ಜಾ, ಫ್ರೆಂಜ್ ಫ್ರೈಸ್, ಎಣ್ಣೆಯಲ್ಲಿ ಕರಿದ ಬಾಯಿ ರುಚಿಯ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು. ಇವುಗಳು ಜೀರ್ಣಕ್ರಿಯೆಗೆ ತೊಂದರೆ ಉಂಟಾಗಿ ಫುಡ್ ಪಾಯಿಸನ್ ಉಂಟಾಗಬಹುದು.

ಐಸ್ ಕ್ರೀಮ್ ಮತ್ತು ತಂಪು ಪಾನೀಯಾಗಳು
ಬಿಸಿಲಿನಲ್ಲಿ ತಂಪು ಪಾನೀಯಾಗಳನ್ನು ಕುಡಿಯಲು, ಐಸ್ ಕ್ರೀಮ್ ತಿನ್ನಲು ಹಿತ ಆನಿಸಿದರೂ ಇವು ಬಾಡಿ ಹೀಟ್ ಹೆಚ್ಚು ಮಾಡುವ ಆಹಾರ ಪದಾರ್ಥಗಳಾಗಿವೆ.

ಕಾಫಿ
ಕಾಫಿ ಕೂಡದ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಬಾಡಿ ಹೀಟ್ ಸಮಸ್ಯೆ ಇರುವವರು ಕಾಫಿಯನ್ನು ಮುಟ್ಟಲೇಬಾರದು.

ಒಣ ಹಣ್ಣುಗಳು
ಒಣ ಹಣ್ಣುಗಳು ತುಂಬಾ ಆರೋಗ್ಯಕರವಾದ ಆಹಾರವಾಗಿದ್ದತೂ ಇವು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇವುಗಳನ್ನು ಮಿತಿಯಲ್ಲಿ ತಿನ್ನಿ. ಗೋಡಂಬಿ ಬೇಗನೆ ದೇಹದ ಉಷ್ಣತೆ ಹೆಚ್ಚಿಸುತ್ತದೆ.

ಚಿಕನ್, ಪ್ರಾನ್, ಏಡಿ
ಚಿಕನ್, ಪ್ರಾನ್, ಏಡಿ ಇವುಗಳು ದೇಹದ ಉಷ್ಣತೆಯನ್ನು ಹೆಚ್ಚಿಸುವ ಆಹಾರಗಳಾದ ಕಾರಣ ಇವುಗಳನ್ನು ತಿನ್ನದಿರುವುದು ಒಳ್ಳೆಯದು. ಪ್ರಾನ್ ತಿಂದರೆ ಕೆಲವರಿಗೆ ತಕ್ಷಣವೇ ಅಲರ್ಜಿ ಉಂಟಾಗುವುದು.

ರೋಸ್ಟ್ ಮಾಡಿದ ಪದಾರ್ಥಗಳು
ತಂದೂರಿಯಂತಹ ರೋಸ್ಟ್ ಮಾಡಿದ ಪದಾರ್ಥಗಳನ್ನು ಬೇಸಿಗೆಯಲ್ಲಿ ತಿನ್ನದಿರುವುದು ಒಳ್ಳೆಯದು. ಇದನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ.



Click it and Unblock the Notifications
