Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಈ ರೀತಿಯ ಮರೆವು ತರುವುದು ಅಪಾಯ!

ಈ ರೀತಿಯ ಮರೆವಿನ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಕೆಲವರಿಗೆ ಚಿಕ್ಕ ಪ್ರಾಯದಲ್ಲಿಯೇ ಕಂಡು ಬರುವುದು. ಈ ಕೆಳಗಿನಂತೆ ಉಂಟಾಗುತ್ತಿದ್ದರೆ ಅವು ಅಲ್ಜೈಮರ್ಸ್ ಕಾಯಿಲೆಯ ಲಕ್ಷಣಗಳಾಗಿವೆ.
1. ದಿನದಿಂದ ದಿನಕ್ಕೆ ಮರೆವು ಹೆಚ್ಚಾಗುವುದು. ಇಟ್ಟ ವಸ್ತುಗಳು ತಕ್ಷಣ ನೆನೆಪಿಗೆ ಬರದಿರುವುದು, ಎಲ್ಲಿಗೋ ಹೊರಟಿರುತ್ತೇವೆ, ಆದರೆ ಮಧ್ಯ ದಾರಿಯವರೆಗೆ ಬಂದ ಮೇಲೆ ಎಲ್ಲಿಗೆ ಹೋಗಬೇಕೆನ್ನುವುದು ಮರೆತು ಹೋಗುವುದು.
2. ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದಿರುವುದು. ತುಂಬಾ ಪರಿಚಿತರ ಹೆಸರು ಮೆರೆತು ಹೋಗುವುದು. ಗೊತ್ತಿರುವ ಕೆಲಸವನ್ನು ಮರೆಯುವುದು, ದಿನಾ ಓಡಾಡುವ ರೋಡ್ ನಲ್ಲಿ ಕೆಲವೊಮ್ಮೆ ದಾರಿ ಮರೆತು ಹೋಗುವುದು, ಡ್ರೈವಿಂಗ್ ಮಾಡುವಾಗ ಅದೇ ರಸ್ತೆಯಲ್ಲಿ ಅನೇಕ ಬಾರಿ ಹೋಗಿದ್ದರೂ ಕೂಡ ಆ ರಸ್ತೆಯಲ್ಲಿ ಚಾಲನೆ ಮಾಡುವಾಗ ಚಾಲನೆ ತಪ್ಪುವುದು, ದಿನಾ ಆಡುತ್ತಿರುವ ಆಟದ ನಿಯಮಗಳು ಮರೆತು ಹೋಗುವುದು.
3. ಈ ಕಾಯಿಲೆಯಿಂದ ದೃಷ್ಟಿ ಸಮಸ್ಯೆ ಕಂಡು ಬರುವುದು. ಓದಲು ಅಥವಾ ದೂರದಲ್ಲಿರುವ ವಸ್ತುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೂಮಿನಲ್ಲಿರುವ ಕನ್ನಡಿಯಲ್ಲಿ ತಮ್ಮದೇ ಪ್ರತಿಬಿಂಬ ನೋಡಿ ಬೇರೆ ಯಾರೊ ಇದ್ದಾರೆ ಎಂದು ಭಾವಿಸುವುದು ಇವೆಲ್ಲಾ ಈ ಕಾಯಿಲೆಯ ಲಕ್ಷಣವಾಗಿದೆ.
4. ಈ ರೀತಿ ಕಾಯಿಲೆ ಬಂದವರು ಮಾತನಾಡುತ್ತಿರುವಾಗಲೇ ತಕ್ಷಣ ಮಾತು ನಿಲ್ಲಿಸುತ್ತಾರೆ, ನಂತರ ಮಾತನ್ನು ಹೇಗೆ ಮುಂದುವರೆಸಬೇಕೆಂದು ಮರೆತು ಹೋಗಿ ತಲೆಯಲ್ಲಿ ಏನೂ ಹೊಳೆಯದೆ ಖಾಲಿ ಆದಂತೆ ಅನಿಸುತ್ತದೆ.
5. ಈ ರೀತಿ ಕಾಯಿಲೆ ಬಂದರೆ ಯಾವುದೇ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಏಕೆಂದರೆ ಆಲೋಚನೆ ಶಕ್ತಿ ಕಡಿಮೆಯಾಗಿ ಮರೆವು ಜಾಸ್ತಿ ಆಗುತ್ತದೆ.
6. ಈ ರೀತಿ ಕಾಯಿಲೆ ಉಂಟಾದರೆ ನಿಧಾನಕ್ಕೆ ತಮ್ಮ ಹವ್ಯಾಸ, ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ಹವ್ಯಾಸದ ಬಗ್ಗೆ ನೆನಪು ಇರುವುದಿಲ್ಲ.
7. ಈ ಕಾಯಿಲೆ ಬಂದರೆ ಮನಸ್ಸಿನಲ್ಲಿ ಗೊಂದಲ, ಸಂಶಯ, ಖಿನ್ನತೆ ಕಾಣಿಸಿಕೊಳ್ಳುತ್ತದೆ. ಮನೆಯವರ ಜೊತೆಗೆ, ಕೆಲಸದ ಜಾಗದಲ್ಲಿ, ಸ್ನೇಹಿತರ ಜೊತೆ ಬೆರೆಯಲು ಇಷ್ಟಪಡುವುದಿಲ್ಲ. ಅಲ್ಲದೆ ಮನಸ್ಸಿನಲ್ಲಿ ಅಭದ್ರತೆ ಭಾವನೆ ಉಂಟಾಗುತ್ತದೆ.
ಈ ರೀತಿಯ ಕಾಯಿಲೆಯನ್ನು ಮೊದಲನೇ ಹಂತದಲ್ಲಿ ಗುರುತಿಸಿದರೆ, ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆದು, ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅಭ್ಯಾಸಗಳನ್ನು ಮಾಡಿದರೆ ನೆನಪಿನ ಶಕ್ತಿಯನ್ನು ಉಳಿಸಿಕೊಳ್ಳಬಹುದು.
ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಯಲು ಮುಂದೆ ನೋಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
