Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಆಕಳಿಕೆ, ತೂಕಡಿಕೆ ಇನ್ನು ಬಹಳ ದೂರ...

ಅವಳು ಬಳಸಿದ ನಿದ್ದೆ ಓಡಿಸುವ ಮ್ಯಾಜಿಕ್ ಸೂತ್ರಗಳನ್ನು ನೀವು ಒಮ್ಮೆ ಪ್ರಯೋಗಿಸಿ ನೋಡಬಹುದು.
ಓದುತ್ತಿರುವಾಗ ಸಾಕಷ್ಟು ನಿದ್ದೆಯ ಬಾಧೆ ಕೆಲವರಿಗೆ. ಅದರಲ್ಲೂ ತಮ್ಮ ಆಸಕ್ತಿಯ ವಿಷಯವನ್ನೇ ಓದುತ್ತಿದ್ದರೂ ನಿದ್ದೆಯ ಭೂತ ಆವರಿಸಿ ಬಿಡುತ್ತದೆ. ಅದರಲ್ಲೂಹಾಡ ಹಗಲಲ್ಲೆ ಬಂದು ತೊಂದರೆ ಕೊಡುವ ನಿದ್ದೆಯನ್ನು ಓಡಿಸಲು ಹೀಗೆ ಮಾಡಿ.
1. ಓದುತ್ತಿರುವಾಗ ಪಕ್ಕದಲ್ಲಿ ಒಂದು ಸ್ಟೀಲ್ (ಹೆಚ್ಚು ಶಬ್ದ ಮಾಡುವಂತದ್ದು) ಪಾತ್ರೆ ಅಥವಾ ಲೋಟವೊಂದನ್ನು ಹತ್ತಿರ ಇಟ್ಟುಕೊಳ್ಳಿ. ಇನ್ನೇನು ನಿದ್ದೆ ಬರುತ್ತಿದೆ ಎನ್ನುವಾಗ ಅದನೊಮ್ಮೆ ಕೆಳಗೆ ಬೀಳಿಸಿ. ಅದು ಮಾಡುವ ಸದ್ದಿಗೆ ನೀವು ನಿದ್ದೆಯ ಮಬ್ಬಿನಿಂದ ಆಚೆ ಬರಬಹುದು.
2. ತೂಕಡಿಕೆ ಶುರವಾದರೆ ಒಮ್ಮೆ ಪುಸ್ತಕವನ್ನು ಮಡಿಚಿಟ್ಟು ಟೋಮ್ ಎಂಡ್ ಜರಿಯಂತಹ ಆನಿಮೇಟೆಡ್ ಚಿತ್ರವನ್ನು ಹತ್ತು ನಿಮಿಷಗಳ ಕಾಲ ನೋಡಿಬನ್ನಿ ಅಥವಾ ಯಾವುದಾದರೂ ಗೇಮ್ ಆಡಿದರೂ ನಿದ್ದೆ ನಿಮ್ಮಿಂದ ದೂರ ಓಡುವುದರಲ್ಲಿ ಸಂಶಯಲಿಲ್ಲ.
3. ನಿಮ್ಮಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತಹ ಫೋಟೋ ಅಥವಾ ಡೈರಿಗಳಿದ್ದರೆ ನಿದ್ದೆಯಿಂದ ಹೊರಬರುವಲ್ಲಿ ಸಹಾಯಕವಾಗುತ್ತವೆ.
4. ಮೊಬೈಲ್ ಕೂಡಾ ಬೋರಿಂಗ್ ವಿಷಯದಲ್ಲಿ ಸಹಾಯ ಮಾಡಬಹುದು. ಹಾಗಂತ ನೀವೇನು ಕರೆನ್ಸಿ ಖರ್ಚು ಮಾಡಬೇಕಾಗಿಲ್ಲ ಕಸ್ಟಮರ್ ಕೇರ್ ಗೆ ಒಂದು ಕರೆ ಮಾಡಿ ಲೌಡ್ ಸ್ಪೀಕರ್ ಇಟ್ಟು ಕೇಳಿ. ನಿಮ್ಮ ನಿದ್ದೆಯನ್ನು ಅದೇ ಓಡಿಸುತ್ತದೆ. (ತುಂಬಾ ಸಿಲ್ಲಿ ಎನಿಸಿದರೂ ಪ್ರಯೋಜನಕಾರಿಯಾದ ಉಪಾಯವಿದು)
5. ಒಂದು ಕಲರ್ ಬಾಕ್ಸ್ ಜೊತೆಗಿಟ್ಟುಕೊಂಡು ನಿಮ್ಮದೇ ಕಲ್ಪನೆಯಲ್ಲಿ ಚಿತ್ರವನ್ನು ಬಿಡಿಸಿ. ನೋಡುವುದಕ್ಕೂ ಖುಷಿ ಕೊಡುವುದರ ಜೊತೆಗೆ ನಿಮ್ಮ ಸಮಸ್ಯೆಗೂ ಪರಿಹಾರ ದೊರೆತಂತಾಗಿತ್ತದೆ.
ಆಫೀಸ್ ಬೋರ್ :
1. ಆಫೀಸಿನಲ್ಲಿರುವಾಗ ಬೋರ್ ಎನಿಸಿದರೆ ನಿಮಗೆ ಗೋಗಲ್ ಉಪಯೋಗಿಸಲು ಅವಕಾಶಗಳಿದ್ದರೆ ಫನ್ ಅಥವಾ ನಿಮ್ಮ ಆಸಕ್ತಿ ವಿಷಯಕ್ಕೆ ಸಂಬಂಧಪಟ್ಟ ಕ್ವಿಜ್ ಗಳನ್ನು ಆಡಿ, ಜ್ಞಾನದ ಜೊತೆಗೆ ಸಮಯ ಕಳೆಯಲು ಸಹಾಯಕವಾಗುತ್ತದೆ.
2. ಆಫೀಸಿನಲ್ಲಿ / ಕಛೇರಿಯಲ್ಲಿ ಮಾಡಲು ಏನು ಕೆಲಸವಿಲ್ಲದೇ ಬೇಜಾರಾಗುತ್ತಿದ್ದರೆ ನಿಮ್ಮ ಸಹೋದ್ಯೋಗಿ ಮಾಡುತ್ತಿರುವ ಕೆಲಸದ ಬಗ್ಗೆ ಗಮನ ಹರಿಸಿ. ನಿಮ್ಮ ಸಹೋದ್ಯೋಗಿ ಯಾವುದಾದರೂ ವಿಚಾರದಲ್ಲಿ ಪ್ರವೀಣರಾಗಿರಬಹುದು. ಒಳ್ಳೆಯದು ಎನಿಸುವ ವಿಷಯಗಳನ್ನು ಅವರೊಂದಿಗೆ ಸ್ನೇಹದಿಂದ ವರ್ತಿಸಿ ತಿಳಿದುಕೊಳ್ಳಿ. ಇದರಿಂದ ನಿಮ್ಮಲ್ಲಿ ಒಳ್ಳೆಯ ಪ್ರವೃತ್ತಿಯನ್ನು ಬೆಳೆಸುತ್ತದೆ.
ಅಂತೂ ಅಧಿತಿಯ ಉಪಾಯಗಳು ನಿಮ್ಮಗೂ ಸಹಾಯಕವಾಗಲೂಬಹುದು. ಪ್ರಯತ್ನಿಸಿ ನೋಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
