Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸಮತೂಕದ ದೇಹಕ್ಕಾಗಿ ಈ ಆಹಾರ ಸಾಮಾಗ್ರಿಗಳು

ಚಕ್ಕೆ: ಟೀ, ತಿಂಡಿ, ಸಾರು ತಯಾರಿಸುವಾಗ ಚಕ್ಕೆ ಹಾಕಿ ತಯಾರಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಚಕ್ಕೆ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಾಯ ಮಾಡುವುದರ ಜೊತೆಗೆ ಹೃದಯ ಸ್ವಾಸ್ಥ್ಯಕ್ಕೆ ಒಳ್ಳೆಯದು.
ಕೊತ್ತಂಬರಿ: ಕೊತ್ತಂಬರಿಯಲ್ಲಿ ಖನಿಜಂಶ ಮತ್ತು ವಿಟಮಿನ್ ಗಳು ಅಧಿಕವಿರುವುದರಿಂದ ಅಡುಗೆಯ ರುಚಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.
ಗೋಧಿ: ಗೋಧಿಯಲ್ಲಿ ಅಧಿಕ ಪೋಷಕಾಂಶ ಮತ್ತು ಕಡಿಮೆ ಕ್ಯಾಲೋರಿ ಇರುವುದರಿಂದ ರಾತ್ರಿ ಅನ್ನದ ಬದಲು ಚಪ್ಪಾತಿ ತಿಂದರೆ ತೆಳ್ಳಗಾಗಬಹುದು. ಚಪ್ಪಾತಿ ತಿಂದರೆ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಜೇನು: ಟೀಗೆ ಸಕ್ಕರೆಯನ್ನು ಬಳಸುವುದಕ್ಕಿಂತ ಜೇನನ್ನು ಬಳಸುವುದು ಒಳ್ಳೆಯದು. ದೇಹದ ತೂಕ ಕಡಿಮೆ ಮಾಡ ಬಯಸುವವರು ಗ್ರೀನ್ ಟೀಗೆ 2 ಚಮಚ ಜೇನು ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು.
ಕೆಂಪಕ್ಕಿ ಅನ್ನ: ಕೆಂಪಕ್ಕಿಯಲ್ಲಿ ಬಿಳಿ ಅಕ್ಕಿಗಿಂತ ಅಧಿಕ ಪೋಷಕಾಂಶ ಮತ್ತು ನಾರಿನಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಂಪಕ್ಕಿ ತಿಂದರೆ ದೇಹದ ತೂಕ ಹೆಚ್ಚಾಗುವುದಿಲ್ಲ.
ಮಸಾಲೆ ಪುಡಿ: ಕಾಳು ಮೆಣಸಿನ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಚಕ್ಕೆ, ಲವಂಗ, ಮೆಂತೆ ಪುಡಿ ಇವುಗಳನ್ನು ಮಿಶ್ರ ಮಾಡಿ ಪುಡಿ ಮಾಡಿಟ್ಟು ಇದನ್ನು ಸಾರಿಗೆ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.
ಮೊಸರು: ಹೆಚ್ಚಿನವರು ಮೊಸರು ತಿಂದರೆ ದಪ್ಪಗಾಗುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಕೊಬ್ಬಿನಂಶ ತೆಗೆದ ಮೊಸರು ತಿಂದರೆ ತಪ್ಪಗಾಗುವುದಿಲ್ಲ, ಆರೋಗ್ಯಕ್ಕೂ ಒಳ್ಳೆಯದು.
ತಾಜಾ ಹಣ್ಣು: ಕೆಲವು ಹಣ್ಣುಗಳು ದೇಹದ ತೂಕವನ್ನು ಹೆಚ್ಚು ಮಾಡುತ್ತದೆ. ಆದರೆ ಪೀಚ್, ಬೆರ್ರಿ, ಕಿತ್ತಳೆ , ಮೂಸಂಬಿ, ಸೇಬು, ಕಿವಿ ಈ ರೀತಿಯ ಹಣ್ಣುಗಳನ್ನು ತಿನ್ನಬೇಕು.
ಸೊಪ್ಪು: ಹಸಿರು ಸೊಪ್ಪು ಮತ್ತು ತರಕಾರಿ ಆರೋಗ್ಯಕ್ಕೆ ಒಳ್ಳೆಯದು.
ಓಟ್ಸ್: ಓಟ್ಸ್ ಅನ್ನು ಒಂದು ತಿಂಗಳವರೆಗೆ ತಿಂದರೆ ದೇಹದ ತುಕ ಕಡಿಮೆಯಾಗುವುದರ ಜೊತೆಗೆ ದೇಹದಲ್ಲಿ ಚೈತನ್ಯ ಕಂಡು ಬರುತ್ತದೆ.
ಹಾಲು: ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ದಿನದಲ್ಲಿ 2 ಲೋಟ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.
ಮೊಟ್ಟೆ: ಮೊಟ್ಟೆಯಲ್ಲಿ ಪ್ರೊಟೀನ್ ಅಂಶವಿದ್ದು ದಿನಕ್ಕೆ ಒಂದು ಮೊಟ್ಟೆ ತಿನ್ನುವುದು ಒಳ್ಳೆಯದು. ದಪ್ಪಗಾಗುತ್ತೇವೆ ಎಂಬ ಭಯವಿರುವವರು ಅದರ ಹಳದಿ ಭಾಗವನ್ನು ತಿನ್ನದೆ, ಬಿಳಿ ಬಾಗವನ್ನು ಮಾತ್ರ ತಿನ್ನಬೇಕು.
ಎಣ್ಣೆ: ಕಡಿಮೆ ಕೊಲೆಸ್ಟ್ರಾಲ್ ಇರುವ ಎಣ್ಣೆಯನ್ನು ಅಡುಗೆಗೆ ಬಳಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
