Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ಸದೃಡ ಆರೋಗ್ಯಕ್ಕೆ ಯೋಗವೊಂದೆ ಯೋಗ್ಯ ಮಾರ್ಗ
ಪ್ರಶ್ನೆ : ನಿಮ್ಮ ಯೋಗ ಶ್ರೀ ರಕ್ಷ ಸಾಧನೆಯ ಬಗ್ಗೆ ಒಂದೆರಡು ಮಾತು, ಇದು ಹೇಗೆ ಇತರೆ ಚಿಕಿತ್ಸೆಗಳಿಂದ ವಿಭಿನ್ನವೆಂದು ತಿಳಿಸುತ್ತೀರ?
ಡಾ.ವಿವೇಕ : ಕಳೆದ ಎರಡು ವರ್ಷಗಳಿಂದ ಸ್ವಾಸ್ತ್ಯ Healthcare and Researchನ ನಿರ್ದೇಶಕನಾಗಿ ಪ್ರಾರಂಭಿಸಿದ ಒಂದು ಸರಳ ಯೋಗ ಚಿಕಿತ್ಸ ಕ್ರಮವೇ "ಯೋಗ ಶ್ರೀ ರಕ್ಷ". ಇದನ್ನು ಪ್ರಾರಂಭಿಸುವುದಕ್ಕೆ ಮುಖ್ಯ ಕಾರಣವೆಂದರೆ ನಾನು ಒಬ್ಬ ವೈದ್ಯನಾಗಿ, ಯೋಗ ಚಿಕಿತ್ಸ ತಜ್ಞನಾಗಿ, ಯೋಗ ಸಂಶೋಧಕನಾಗಿ ಗಮನಿಸಿದ ಅಂಶವೆಂದರೆ, ಈಗಿನ ಸಮಾಜದಲ್ಲಿ ಬಹುತೇಕ ಎಲ್ಲರಲ್ಲೂ ಮಾನಸಿಕ ತಳಮಳ, ಉದ್ವೇಗ, ಆತಂಕ ಮತ್ತು ಭಯ ಹೆಚ್ಚಾಗಿ ಖಾಯಿಲೆಗಳು ಸಹ ಹೆಚ್ಚುತ್ತಿವೆ. ಜೀವನದಲ್ಲಿ ಹೊಂದಾಣಿಕೆ, ಪ್ರೀತಿಯ ಕೊರತೆಯ ಸಮಸ್ಯೆಗಳು ಹೆಚ್ಚುತ್ತಿವೆ. ಆಸ್ಪತ್ರೆ, ನರ್ಸಿಂಗ್ ಹೋಮ್ ಮತ್ತು ಪಾರಂಗತ ತಜ್ಞರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಒಂದು ಚಿಂತೆಮಾಡಬೇಕಾದಂತಹ ವಿಷಯವೆಂದರೆ ವೈದ್ಯರ ಮತ್ತು ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಅಥವಾ ನಿಯಂತ್ರಣಕ್ಕಾದರು ಬರಬೇಕು. ಅದು ಸಾದ್ಯವಾಗುತ್ತಿಲ್ಲ.
ಕಾರಣವೇನಂದರೆ ಜನರ ಜೀವನಶೈಲಿಯಲ್ಲಿನ ಏರು-ಪೇರು, ಮನಸ್ಸಿನ ಆತಂಕ, ಒತ್ತಡ ಮತ್ತು ನೆಮ್ಮದಿಯ ಕೊರತೆ. ಯೋಗ ಸಂಶೋಧನೆಯ ಮೂಲಕ ಕಂಡುಕೊಂಡ ವಿಷಯವೆಂದರೆ, ಇವುಗಳನ್ನು ಪರಿಹರಿಸುವುದಕ್ಕೆ ದೇಹ-ಮನಸ್ಸಿನ ಸಮತೋಲನವನ್ನು ಕಾಯ್ದುಕೊಂಡು ಸದೃಡ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗವೊಂದೆ ಯೋಗ್ಯ ಮಾರ್ಗವೆಂಬುದು ಸಾಬೀತುಗೊಂಡಿದೆ. ನೀವು ಮಾಧ್ಯಮಗಳ ಮೂಲಕ ಗಮನಿಸಿದಾಗ ಈಗ ಯೋಗದ ಬಗ್ಗೆ ಜನರಲ್ಲಿ ಜಾಗೃತಿ ದಿನೇ ದಿನೇ ಹೆಚ್ಚುತ್ತಿದೆ. ತಿಳಿದೊ ತಿಳಿಯದೋ ಸರಿಯಾದ ಯಾ ಸರಿಯಲ್ಲದ ರೀತಿಯಲ್ಲಿ ಯೋಗದ ಮೊರೆ ಹೋಗುತ್ತಿದ್ದಾರೆ.
ಇದಕ್ಕೆ ಕಾರಣವೆಂದರೆ ಮನಶಾಂತಿಯೆಂಬುದು ಯಾವುದೇ ಆಸ್ಪತ್ರೆಯಲ್ಲಿ, ವೈದ್ಯರಲ್ಲಿ ಸಿಗುವುದಿಲ್ಲ, ಅದಕ್ಕೆ ನಾವು ನಮ್ಮ ಮನಸ್ಸನ್ನು ನಮ್ಮ ಉಸಿರಾಟದ ಕಡೆಗೆ ಗಮನಕೊಟ್ಟು, ದೇಹವನ್ನು ಕೇಂದ್ರೀಕರಿಸಿ ದಿನವೂ ಸ್ವಲ್ಪ ಸಮಯ ಯೋಗಾಭ್ಯಾಸ ಮಾಡಿದರೆ ಮನಶಾಂತಿ ನಮಗೆ ಕಟ್ಟಿಟ್ಟ ಬುತ್ತಿ. ನಮ್ಮ ಯೋಗ ಶ್ರೀ ರಕ್ಷಾ ಕ್ರಮದಲ್ಲಿ ಸರಳವಾದ ಅಭ್ಯಾಸ ಕ್ರಮ, ಸರಳ ಉಸಿರಾಟ ಕ್ರಮ, ಸರಳ ಜೀವನಶೈಲಿಯ ಮಹತ್ವ, ಸರಳ ಆಹಾರಕ್ರಮಗಳನ್ನು ಪ್ರತಿಯೊಬ್ಬರಿಗೂ ಹೇಳಿಕೊಡುವುದರ ಮೂಲಕ ಅವರಲ್ಲಿ ಯೋಗ ಚಿಕಿತ್ಸೆಯ ಅಂಶವನ್ನು ಪ್ರತಿದಿನದ ಅಭ್ಯಾಸದಲ್ಲಿ ಅಳವಡಿಸಿಕೊಂಡು ಅದರಲ್ಲಿ ಆಸಕ್ತಿ ಬೆಳೆಯುವಂತೆ ಯೋಗ ಶ್ರೀ ರಕ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದೀವಿ. ಇದರಿಂದ ಅನೇಕ ಜನರಲ್ಲಿ ಆರೋಗ್ಯದಲ್ಲಿ ಸುಧಾರಣೆ, ಯೋಗದಲ್ಲಿ ಜಾಗೃತಿ, ಆರೋಗ್ಯ ರಕ್ಷಣೆಯ ಮಾರ್ಗಗಳಿಂದ ಆರೋಗ್ಯಕರ ಜೀವನವನ್ನು ನಡೆಸಲು ಸಫಲ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











