Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ರೋಗರುಜಿನ ರಹಿತ ಬದುಕಿಗೆ ನಾಲ್ಕು ಸಲಹೆ

1. ಸ್ವಚ್ಚತೆ: ಕಾಯಿಲೆ ಬರದಂತೆ ತಡೆಯಲು ಮೊದಲು ಇರುವ ಸ್ಥಳ ಮತ್ತು ಮನೆ ಸ್ವಚ್ಚವಾಗಿರ ಬೇಕು. ದೇಹವನ್ನು ಕೂಡ ಶುದ್ಧವಾಗಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಸ್ನಾನ, ಎರಡು ಬಾರಿ ಹಲ್ಲು ಉಜ್ಜುವುದು , ಶುದ್ಧವಾದ ಬಟ್ಟೆ ಧರಿಸುವುದು, ಪ್ರತ್ಯೇಕ ಬಾಚಣಿಕೆ, ಸೋಪು, ಟವಲ್ ಬಳಸುವುದು ಇವೆಲ್ಲವೂ ಇತರರಿಂದ ಕಾಯಿಲೆ ಹರಡದಂತೆ ಹರಡುತ್ತದೆ.
2. ಕಾಯಿಲೆ ಬಂದವರ ಆರೈಕೆ: ಮನೆಯಲ್ಲಿ ಯಾರಿಗಾದರೂ ಜ್ವರ ಬಂದರೆ ಆರೈಕೆ ಮಾಡಬೇಕಾಗುತ್ತದೆ. ಈ ರೀತಿ ಆರೈಕೆ ಮಾಡುವಾಗ ಜ್ವರ ಬಂದವರು ಉಪಯೋಗಿಸಿದ ವಸ್ತುಗಳನ್ನು ಉಪಯೋಗಿಸಬಾರದು. ಅವರು ಕಾಯಿಲೆಯಿಂದ ಸಂಪೂರ್ಣ ಗುಣಮುಖವಾದ ಮೇಲೆ ಅವರ ಬಟ್ಟೆಗಳನ್ನು, ಹೊದಿಕೆಗಳನ್ನು ಸ್ವಚ್ಚವಾಗಿ ತೊಳೆಯಬೇಕು.
3. ಬೀದಿ ಬದಿಯ ಆಹಾರ: ಬೀದಿ ಬದಿಯ ಆಹಾರದಲ್ಲಿ ಹೆಚ್ಚು ದೂಳು ತುಂಬಿರುತ್ತದೆ. ಬಾಯಿ ರುಚಿಗೆ ಪುಟ್ ಪಾತ್ ನಲ್ಲಿ ಮಾರುವ ಆಹಾರ ತಿಂದರೆ ಕಾಯಿಲೆ ಬರುವುದು ತಪ್ಪಿದ್ದಲ್ಲ. ಪಾನಿಪುರಿ, ಗೋಬಿ ಹೀಗೆ ಬಾಯಿ ರುಚಿಯ ಆಹಾರದ ಬದಲು ಜ್ಯೂಸ್ ಮತ್ತು ಮನೆ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
4. ವಿಶ್ರಾಂತಿ: ಒಂದು ವೇಳೆ ಕಾಯಿಲೆ ಬಿದ್ದರೆ ಅದು ಹೆಚ್ಚಾಗದ್ದಂತೆ ತಡೆಯಲು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ ಕಾಯಿಲೆ ಸಂಪರ್ಣ ಗುಣಮುಖವಾಗುವವರಿಗೆ ವಿಶ್ರಾತಿ ತೆಗೆಯಬೇಕು. ವಿಶ್ರಾಂತಿ ವೇಳೆಯಲ್ಲಿ ಇಷ್ಟವಾದ ಸಂಗೀತ ಕೇಳಿ.
ಕೆಲವೊಂದು ರೋಗಗಳು ಶೀಘ್ರವೇ ಒಬ್ಬರಿಂದ -ಒಬ್ಬರಿಗೆ ಹರಡುವುದು. ಅಂತಹ ರೋಗಗಳು ನೆರೆಹೊರೆಯವರಲ್ಲಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾಯಿಲೆ ಬರುವವರೆಗೆ ಕಾಯಬಾರದು. ಇದರಿಂದ ನಿಮಗೇ ಹಾನಿ.
ಕೆಲವೊಂದು ಕಾಯಿಲೆಗಳು ನಿರ್ಧಿಷ್ಟ ಸಮಯದಲ್ಲಿ ಕಾಣಿಸಿಕೊಳ್ಳುವುದು. ಉದಾಹರಣೆಗೆ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಬೇಸಿಗೆಯಲ್ಲಿ ಸಿಡುಬು ಹೀಗೆ ಕಾಲಕ್ಕೆ ಅನುಗುಣವಾಗಿ ದೇಹದ ಆರೈಕೆ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
