Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೆಚ್ಚು ಶಕ್ತಿ ಬೇಕೆಂದರೆ ಈ ಜ್ಯೂಸ್ ಕುಡಿಯಿರಿ

ಮನೆಯಲ್ಲೇ ತಯಾರಿಸಬಹುದಾದ ಶಕ್ತಿ ವರ್ಧಕ ಪಾನೀಯ:
* ಬಾಳೆಹಣ್ಣಿನ ಜ್ಯೂಸ್: ಬಾಳೆಹಣ್ಣು ತಕ್ಷಣವೇ ಶಕ್ತಿ ಒದಗಿಸುವ ಹಣ್ಣು. ಇದು ಹಲವು ಗಂಟೆಗಳ ಕಾಲ ನಿಮ್ಮನ್ನು ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣಿನ ಜ್ಯೂಸನ್ನು ಸೇವಿಸಿದರೆ ಸುಸ್ತು ಕಡಿಮೆಯಾಗಿ ಶಕ್ತಿ ತುಂಬುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್, ಖನಿಜಾಂಶ, ಪೊಟಾಶಿಯಂ, ಫಾಸ್ಪರಸ್ ಮುಂತಾದ ಅಂಶ ದೈಹಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
* ಆಪಲ್ ಶೇಕ್: ಸೇಬು ಶಕ್ತಿಯುತ ಹಣ್ಣು. ಇದು ನಿಮ್ಮನ್ನು ಚಟುವಟಿಕೆಯಿಂದ ಕೂಡಿರುವಂತೆ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಸೇಬನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಇದಕ್ಕಿಂತ ಒಳ್ಳೆಯ ಶಕ್ತಿವರ್ಧಕ ಪಾನೀಯವಿಲ್ಲ. ತಣ್ಣಗಿನ ಆಪಲ್ ಶೇಕ್ ಮನಸ್ಸು ಮತ್ತು ದೇಹವನ್ನು ರಿಲ್ಯಾಕ್ಸ್ ಆಗಿಸಿ ಇಡೀ ದಿನ ಚೈತನ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.
* ಬಾರ್ಲೆ ಪಾನೀಯ: ಬಾರ್ಲೆಯಲ್ಲಿರುವ ಅಮಿನೊ ಆಸಿಡ್ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕೆಲವು ಹನಿ ಜೇನು ಮತ್ತು ನಿಂಬೆರಸ ಸೇವಿಸಿದರೆ ದೇಹದ ತೂಕ ಕಡಿಮೆಯಾಗುವುದಲ್ಲದೆ ಅಗತ್ಯ ನೀರಿನಂಶವನ್ನು ನೀಡುತ್ತದೆ. ಮೂಳೆ ನೋವು ಇದ್ದರೆ ಇದರೊಂದಿಗೆ ಶುಂಠಿ ಬೆರೆಸಿ ಕುಡಿದರೆ ನೋವು ನಿವಾರಣೆಯಾಗುತ್ತದೆ.
* ನೀರಿನೊಂದಿಗೆ ಜೇನು: ಸ್ವಲ್ಪ ಬಿಸಿ ನೀರಿನಲ್ಲಿ ಕೆಲವು ಹನಿ ಜೇನು ಬೆರೆಸಿ ಕುಡಿದರೆ ತಕ್ಷಣವೇ ಶಕ್ತಿ ಬರುವುದಲ್ಲದೆ ಬೊಜ್ಜನ್ನೂ ಕರಗಿಸುತ್ತದೆ. ಡಯಟ್ ಮಾಡುವವರಿಗೆ ಈ ಪಾನೀಯ ಹೆಚ್ಚು ಸೂಕ್ತ. ಸೋಯಾ ಹಾಲಿನೊಂದಿಗೆ ಜೇನನ್ನು ಬೆರೆಸಿ ಕುಡಿದರೂ ಶಕ್ತಿಯನ್ನು ಪಡೆಯಬಹುದು.
* ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ನಲ್ಲಿ ವಿಟಮಿನ್ ಮತ್ತು ಖನಿಜಾಂಶ ಹೇರಳವಾಗಿದೆ. ಕ್ಯಾರೆಟ್ ಜ್ಯೂಸ್ ದೇಹದ ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಸುಸ್ತನ್ನು ನಿವಾರಿಸುತ್ತದೆ. ಇದರೊಂದಿಗೆ ಮೊಟ್ಟೆ ಹಳದಿ ಭಾಗವನ್ನು ಸೇರಿಸಿ ಕುಡಿದರೆ ಸೋಮಾರಿತನ ನಿವಾರಣೆಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
