Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ವೈರಲ್ ಜ್ವರ ಬಂದರೆ ಮಾತ್ರೆ ಬದಲು ಹೀಗೆ ಮಾಡಿ

ಆದ್ದರಿಂದ ಜ್ವರ ಕಾಣಿಸಿಕೊಂಡ ಸಮಯದಲ್ಲಿ ಅಥವಾ ಮುಂಜಾಗ್ರತಾ ಕ್ರಮವಾಗಿ ಕೆಲವು ನಿಯಮವನ್ನು ಅನುಸರಿಸಿದರೆ ವೈರಲ್ ಜ್ವರದಿಂದ ಬೇಗನೆ ಹೊರಬರಬಹುದು.
ವೈರಲ್ ಜ್ವರದ ನಿವಾರಣೆ ಹೇಗೆ?
* ರಸಂ ಜೊತೆ ಅನ್ನ: ಜ್ವರ ಬಂದ ಸಮಯದಲ್ಲಿ ಬಿಸಿ ಅನ್ನದೊಂದಿಗೆ ಮೆಣಸು, ಜೀರಿಗೆ, ಕೊತ್ತಂಬರಿ ತಿಳಿ ನೀರನ್ನು (ರಸಂ) ಚೆನ್ನಾಗಿ ಮೆತ್ತಗೆ ಮಾಡಿ ತಿಂದರೆ ಗಂಟಲಿನ ನೋವು ಮತ್ತು ಕೆಮ್ಮಿಗೆ ತಕ್ಷಣವೇ ಉಪಶಮನ ದೊರೆಯುತ್ತೆ. ರಾಗಿ ಗಂಜಿ ಕುಡಿಯುವುದರಿಂದಲೂ ವೈರಲ್ ಜ್ವರಕ್ಕೆ ಒಳಗಾದವರು ಬೇಗನೆ ಚೇತರಿಸಿಕೊಳ್ಳುತ್ತಾರೆ.
ಈ ಸಮಯದಲ್ಲಿ ದೇಹದಲ್ಲಿ ಶಕ್ತಿ ಕುಂದಿರುವುದರಿಂದ ಅನ್ನದೊಂದಿಗೆ ಹಾಲು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮೆತ್ತಗೆ ಮಾಡಿ ತಿಂದರೆ ದೇಹಕ್ಕೆ ಅಧಿಕ ಶಕ್ತಿ ದೊರೆಯುತ್ತದೆ. ಇದರಲ್ಲಿ ಕಾರ್ಬೊ ಹೈಡ್ರೇಟ್ ಮತ್ತು ಗ್ಲೂಕೋಸ್ ಅಂಶ ಶಕ್ತಿಯನ್ನು ಅಧಿಕವಾಗಿ ಹೆಚ್ಚಿಸುತ್ತದೆ.
* ಟೀ ಸೇವನೆ: ಟೀ ಸೇವನೆ, ಅದರಲ್ಲೂ ತುಳಸಿ, ಶುಂಠಿ, ಮತ್ತು ಪುದೀನಾ ಅಂಶವಿರುವ ಟೀ ಸೇವನೆ ಈ ಕಾಲಕ್ಕೆ ತುಂಬಾ ಉಪಯುಕ್ತ. ಇವುಗಳಲ್ಲಿ ಔಷಧೀಯ ಅಂಶ ಹೇರಳವಾಗಿರುವುದರಿಂದ ಜ್ವರವನ್ನು ಬೇಗನೆ ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
* ಹಣ್ಣಿನ ಜ್ಯೂಸ್: ಕಿತ್ತಳೆ ಮತ್ತು ನಿಂಬೆ ಜ್ಯೂಸ್ ವೈರಲ್ ಜ್ವರ ತಡೆಯಲು ಸಹಕಾರಿ. ಈ ಸಿಟ್ರಸ್ ಹಣ್ಣುಗಳು ದೇಹವನ್ನು ಶುದ್ಧಗೊಳಿಸಿ ವಿಷಕಾರಿ ಅಂಶವನ್ನು ಹೊರ ದಬ್ಬುತ್ತದೆ. ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ಸೇರಿಸಿ ಕುಡಿದರೆ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗದ ವಿರುದ್ಧ ಹೋರಾಡಲು ನೆರವಾಗುತ್ತದೆ.
* ನೀಲಗಿರಿ ತೈಲ: ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು ಮತ್ತು ನೀರು ಹಾಗು ನೀಲಗಿರಿ ತೈಲ ಬೆರೆಸಿದ ನೀರಿನಿಂದ ಆವಿ ತೆಗೆದುಕೊಳ್ಳುವುದರಿಂದ ಗಂಟಲು ಮತ್ತು ಉಸಿರಾಟ ಹಾಗೂ ಮೂಗಿನ ತೊಂದರೆ ಬೇಗನೆ ನಿವಾರಣೆಯಾಗುತ್ತದೆ.
* ಲಘು ಮತ್ತು ಮಸಾಲೆ ರಹಿತ ಆಹಾರ: ಜ್ವರ ಬಂದಿರುವಾಗ ಹೆಚ್ಚು ಮಸಾಲೆ ಪದಾರ್ಥವನ್ನು ಸೇವಿಸದಿದ್ದರೆ ಒಳಿತು. ದ್ರವಾಹಾರವೇ ಜ್ವರಕ್ಕೆ ಹೆಚ್ಚು ಸೂಕ್ತ. ಹೆಚ್ಚು ಜ್ವರವಿದ್ದರೆ ತಲೆ ಮೇಲೆ ತೇವದ ಬಟ್ಟೆ ಇಟ್ಟು ಮಲಗಿ ರಿಲ್ಯಾಕ್ಸ್ ಆಗಬೇಕು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
