Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಅಧಿಕ ದಪ್ಪ ತರುವುದು ನಾನಾ ತರಹದ ರೋಗ

ಕೆಳ ಹೊಟ್ಟೆಮತ್ತು ಸೊಂಟದಲ್ಲಿ ತುಂಬಿಕೊಳ್ಳುವ ಈ ಕೊಬ್ಬು ತುಂಬಾ ಚಟುವಟಿಕೆಯಿಂದ ಕೂಡಿದ್ದು ದೇಹದ ಆರೋಗ್ಯಕ್ಕೆ ಬೇಕಾದ ಹಾರ್ಮೋನ್ ಗಳ ಸಮತೋಲವನ್ನು ತಪ್ಪಿಸುತ್ತದೆ.
ಹೊಟ್ಟೆಯ ಅಧಿಕ ದಪ್ಪದಿಂದ ಈ ಕೆಳಗಿನ ತೊಂದರೆಗಳು ಹೆಚ್ಚಾಗಿ ಕಾಣಿಸುಕೊಳ್ಳುತ್ತವೆ.
1.ಹೃದಯದ ಕಾಯಿಲೆಗಳು: ಇದರಿಂದ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆ ಅಂದರೆ ಹೃದಯದ ಸಮಸ್ಯೆ. ಹೊಟ್ಟೆಯಲ್ಲಿ ಕೊಬ್ಬು ಕೊಲೆಸ್ಟ್ರಾಲ್ ಮತ್ತು ಟ್ರಿಗ್ಲಿ ಸಿರೈಡ್ ಈ ಎರಡು ಅಂಶಗಳು ಪಾರ್ಶ್ವವಾಯು ಬರಲು ಕಾರಣ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಕರಳು ಸಕ್ಕರೆ ಅಂಶವನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಆ ಕೊಬ್ಬು ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಹೊಟ್ಟೆ ಮತ್ತು ಸೊಂಟದ ಭಾಗ ದಪ್ಪಗಾಗ ತೊಡುಗುತ್ತದೆ.
ತೂಕ ನಿಯಂತ್ರಣದ ಮಾಹಿತಿ ಜಾಲದ ಪ್ರಕಾರ ಗಂಡಸರ ಸೊಂಟದ ಸುತ್ತಳತೆ 45 ಇಂಚುಗಿಂತ ಜಾಸ್ತಿ ಇರಬಾರದು, ಹೆಂಗಸರ ಸುತ್ತಳತೆ 35 ಇಂಚಿಗಿಂತ ಜಾಸ್ತಿ ಇರಬಾರದು. ಇದಕ್ಕಿಂತ ಜಾಸ್ತಿ ಆಗದಂತೆ ವ್ಯಾಯಾಮವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
2. ಸಕ್ಕರೆ ಕಾಯಿಲೆ: ಇದರಿಂದ ಬರುವ ಮತ್ತೊಂದು ಅಪಾಯಕಾರಿ ಕಾಯಿಲೆ ಅಂದರೆ ಮಧುಮೇಹ. ಈ ಕೊಬ್ಬು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಕಡಿಮೆಮಾಡಿ, ಸಕ್ಕರೆ ಅಂಶವನ್ನು ಅಧಿಕ ಮಾಡಿಸುತ್ತದೆ. ಇದರಿಂದಾಗಿ ಸಕ್ಕರೆ ಕಾಯಿಲೆ ಉಂಟಾಗುತ್ತದೆ.
3. ಸ್ತನ ಕ್ಯಾನ್ಸರ್: ಹೊಟ್ಟೆ ಮತ್ತು ದೇಹದಲ್ಲಿ ಕೊಬ್ಬು ತುಂಬಿ ಕೊಂಡರೆ ಅದು ಅಧಿಕ ಈಸ್ಟ್ರೋಜನ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ಕ್ಯಾನ್ಸರ್ ಬರಲು ಮುಖ್ಯ ಕಾರಣ ಎಂಬುದಾಗಿ ಇತ್ತೀಚಿಕೆಗೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
4. ನರಗಳು: ಈ ರೀತಿಯ ಕೊಬ್ಬು ನರಗಳಲ್ಲಿ ರಕ್ತ ಸಂಚಲನಕ್ಕೆ ಅಡಚಣೆಯನ್ನು ಉಂಟುಮಾಡುತ್ತದೆ. ಇದರ ನರಗಳಲ್ಲಿ ಶಕ್ತಿ ಕುಂದಲಾರಂಭಿಸುತ್ತವೆ. ಇದರಿಂದಾಗಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿ ಅನೇಕ ತೊಂದರೆಗಳನ್ನು ಉಂಟು ಮಾಡುತ್ತದೆ.
ಆದ್ದರಿಂದ ದೇಹದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗದಂತೆ ಆಹಾರಕ್ರಮ, ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
