Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತುಂಬಾ ಸುಸ್ತಾದರೆ ತಕ್ಷಣದ ಪರಿಹಾರ ಇಲ್ಲಿದೆ

ಇಂತಹ ಸಮಯದಲ್ಲಿ, ತಕ್ಷಣವೇ ದೇಹಕ್ಕೆ ಶಕ್ತಿ ನೀಡುವ ಕೆಲವು ಆಹಾರ ಸೇವಿಸಿದರೆ, ಸುಸ್ತನ್ನು ತಡೆದು, ಚೈತನ್ಯದಿಂದ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ. ಆ ಆಹಾರಗಳು ಯಾವುದು ಎಂದು ಇಲ್ಲಿ ತಿಳಿಯಿರಿ.
ತಕ್ಷಣವೇ ಸುಸ್ತು ನೀಗಿಸುವ 5 ಆಹಾರಗಳು:
* ನಿಂಬೆ ಪಾನಕ: ನಿಂಬೆ ಪಾನಕ ಕೇವಲ ಮಧ್ಯಾಹ್ನದ ಸೋಮಾರಿತನ ನೀಗಿಸಲು ಮಾತ್ರವಲ್ಲ, ಅತಿಬೇಗನೆ ಶಕ್ತಿ ಪಡೆಯುವ ಸುಲಭ ವಿಧಾನ ಕೂಡ. ಪಾನಕದಲ್ಲಿ ಕರಗಿದ ರೂಪದಲ್ಲಿರುವ ಗ್ಲೂಕೋಸ್ ಯಾವುದೇ ಜೀರ್ಣಕ್ರಿಯೆ ಅವಶ್ಯಕತೆಯಿಲ್ಲದೆ ನೇರವಾಗಿ ರಕ್ತದಲ್ಲಿ ಸೇರಿಕೊಂಡು ಶಕ್ತಿ ನೀಡುತ್ತದೆ. ಇದರ ಉಪ್ಪಿನಂಶ, ದೇಹ ಬೆವರಿನ ಮೂಲಕ ಕಳೆದುಕೊಂಡ ಮಿನರಲ್ ಒದಗಿಸುತ್ತದೆ. ವಿಟಮಿನ್ ಸಿ ದೇಹಕ್ಕೆ ಶಕ್ತಿ ನೀಡುತ್ತದೆ.
* ಬಾಳೆಹಣ್ಣು: ಬಾಳೆಹಣ್ಣು ಸುಸ್ತನ್ನು ನೀಗಿಸುವ ಅತಿ ಪರಿಣಾಮಕಾರಿ ಹಣ್ಣು. ಇದರಲ್ಲಿನ ಸಕ್ಕರೆ ಮತ್ತು ಕಾರ್ಬೊಹೈಡ್ರೇಡ್ ಅಂಶ ದೇಹಕ್ಕೆ ಚೈತನ್ಯ ನೀಡುತ್ತದೆ. ರಕ್ತಕ್ಕೆ ಕಬ್ಬಿಣಾಂಶ ನೀಡುತ್ತದೆ. ಹೀಮೊಗ್ಲೋಬಿನ್ ಅಂಶ ಹೆಚ್ಚಿದ್ದಷ್ಟು ಆಮ್ಲಜನಕ ಹೆಚ್ಚುತ್ತದೆ ಮತ್ತು ಇದರಿಂದ ಶಕ್ತಿಯೂ ದೊರಕುತ್ತದೆ.
* ಚೀಸ್: ದೇಹದಲ್ಲಿ ಶಕ್ತಿದಾಯಕ ಹಾರ್ಮೋನ್ ಬಿಡುಗಡೆಮಾಡುವಲ್ಲಿ ಚೀಸ್ ಹೆಚ್ಚು ಸಹಾಯಕ. ಇದು ಸೋಮಾರಿತನ ನೀಗಿಸಿ ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರುವಂತೆ ನೋಡಿಕೊಳ್ಳುತ್ತದೆ.
* ಸ್ಟ್ರಾಬೆರಿ: ನಿಮಗೆ ತಕ್ಷಣವೇ ಶಕ್ತಿ ದೊರೆಯಬೇಕೆಂದರೆ ಸ್ಟ್ರಾಬೆರಿ ಉತ್ತಮ ಆಯ್ಕೆ. ಸ್ಟ್ರಾಬೆರಿಯಲ್ಲಿ ಹೆಚ್ಚಿನ ನಾರಿನಂಶ, ವಿಟಮಿನ್ ಸಿ, ಆಂಟಿಯಾಕ್ಸಿಡಂಟ್ ಇರುವುದರಿಂದ ಜೀವಕೋಶಗಳನ್ನು ಶುದ್ಧಗೊಳಿಸಿ ಪುನಶ್ಚೇತನಗೊಳಿಸುತ್ತದೆ.
* ಗ್ರೀನ್ ಟೀ: ನಿಮ್ಮ ನರಮಂಡಲಕ್ಕೆ ಗ್ರೀನ್ ಟೀ ಸೇವನೆ ಅತ್ಯುತ್ತಮ ರಿಲ್ಯಾಕ್ಸ್ ನೀಡುತ್ತದೆ. ಬಳಲಿಕೆ ನೀಗಿಸಿ ಏಕಾಗ್ರತೆ ಹೆಚ್ಚಿಸುತ್ತದೆ. ಬೇರೆ ಟೀ, ಕಾಫಿಗೆ ಹೋಲಿಸಿದರೆ ಗ್ರೀನ್ ಟೀನಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ, ಇದರ ಸೇವನೆ ತಕ್ಷಣವೇ ಚೈತನ್ಯ ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
