Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನಿದ್ದೆ ಬರುವಳು ಕದ್ದು ನಿಮ್ಮ ಬಳಿಗೂ...

ಹೆಚ್ಚಾಗಿ ಮಧ್ಯ ವಯಸ್ಕರಲ್ಲಿ ಕಾಣಿಸುತ್ತಿದ್ದ ನಿದ್ರಾಹೀನತೆ ಈಗ ಹದಿ ಹರೆಯದವರ ನಿದ್ದೆಯನ್ನೂ ಕದಿಯುತ್ತಿದೆ. ಆದರೆ ದೈಹಿಕ ಚಟುವಟಿಕೆಗಳತ್ತ ಸ್ವಲ್ಪ ಗಮನ ಹರಿಸಿದರೆ ನಿದ್ರಾಹೀನತೆಯಿಂದ ಸ್ವಲ್ಪವಾದರೂ ದೂರ ಆಗಬಹುದು.
* ಸ್ಥಿರವಾಗಿರಿ: ದಿನಕ್ಕೆ 7 ಗಂಟೆಯಷ್ಟು ನಿದ್ದೆ ಉತ್ತಮ. ನಿತ್ಯವೂ ಆದಷ್ಟು ಒಂದೇ ಸಮಯಕ್ಕೆ ಏಳುವುದು, ಮಲಗುವುದು ಮಾಡಬೇಕು. ಈ ರೀತಿ ಪ್ರತಿದಿನ ಅನುಸರಿಸುವುದರಿಂದ ದೇಹ ಆ ಸಮಯಕ್ಕೆ ಚೆನ್ನಾಗಿ ಹೊಂದುಕೊಳ್ಳುತ್ತದೆ. ಆತಂಕ ಅನಾವಶ್ಯಕ ಭಯಗಳು ನಿದ್ದೆಯ ಶತ್ರುಗಳು. ಆದ್ದರಿಂದ ಎಲ್ಲ ಒತ್ತಡಗಳನ್ನು ದೂರ ಸರಿಸಿ ಮಲಗಲು ಪ್ರಯತ್ನಿಸಿದರೆ ಒಳ್ಳೆ ನಿದ್ದೆ ನಿಮ್ಮ ಕೈಯಲ್ಲಿ.
* ಮನಸ್ಸನ್ನು ರಿಲಾಕ್ಸ್ ಗೊಳಿಸಿ: ಹಾಸಿಗೆಗೆ ಬೇಗ ಹೋದರೂ ನಿದ್ದೆ ಕಾಣವುದು ಕಷ್ಟ ಅನ್ನೋ ಎಷ್ಟೋ ಮಂದಿ ಇದ್ದಾರೆ. ನಿಮ್ಮ ದೇಹಕ್ಕೆ ದಣಿವಾಗಿ ಮಲಗಲು ಅಣಿಯಾಗುತ್ತಿದ್ದರೂ ಮೆದುಳು ಮನಸ್ಸು ಮಾತ್ರ ರಿಲಾಕ್ಸ್ ಆಗಲು ಬಯಸುತ್ತಿರುತ್ತದೆ. ಮಲಗುವ ಮುನ್ನ ಮುಂದಿನ ದಿನದ ಕೆಲಸಗಳನ್ನು ಪಟ್ಟಿ ಮಾಡಿ ಮನಸ್ಸನ್ನು ಖಾಲಿಯಾಗಿಸಿ ರಿಲಾಕ್ಸ್ ಆಗುವಂತೆ ಮಾಡಬೇಕು. ತೀರಾ ನಿದ್ದೆ ಬರದ ಸಮಯದಲ್ಲಿ ಪೇಪರ್, ಚಿಕ್ಕ ಕತೆಗಳನ್ನು ಒಂದದಿನೈದು ನಿಮಿಷ ಓದಬೇಕು. ಆಗ ನಿದ್ದೆ ತಂತಾನೆ ಕಣ್ಣು ಹತ್ತುತ್ತದೆ.
* ವ್ಯಾಯಾಮದೆಡೆಗೆ ಸಾಗಿ: ದಿನಕ್ಕೆ ಒಂದು ಬಾರಿಯಾದರೂ ವ್ಯಾಯಾಮದ ರೂಢಿಯಿಟ್ಟುಕೊಂಡರೆ ಖಂಡಿತ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಮ ದೊರೆತು ನಿದ್ದೆಗೆ ಸಹಾಯ ಮಾಡುತ್ತದೆ. ಒಳ್ಳೆಯ ಹೃದಯದ ಆರೋಗ್ಯದಿಂದ ಮನಸ್ಸಿಗೆ ಉತ್ಸುಕತೆ ತುಂಬಿ ಒತ್ತಡ ದೂರವಾಗಿ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರೆ ನಿತ್ಯವೂ ನಿಗದಿತ ಸಮಯಕ್ಕೆ ಮಾಡದೆ ಹೋದರೆ ನಿದ್ರಾಹೀನತೆ ತೊಂದರೆ ಕಾಣಿಸಿಕೊಳ್ಳುವ ಸಂಭವವೂ ಇದೆ. ಹಾಸಿಗೆಗೆ ಹೋಗುವ ಸುಮಾರು 3 ಗಂಟೆಗಳ ಮುನ್ನ ವ್ಯಾಯಾಮ ಮಾಡಿದರೆ ಉತ್ತಮ.
* ಚಟಗಳಿಂದ ದೂರವಾಗಿ: ನಿದ್ದೆಯ ಮುನ್ನ ಸಿಗರೇಟ್, ಮದ್ಯ, ಕಾಫಿ ಇಂತಹವುದನ್ನು ಸೇವನೆ ಮಾಡದಿದ್ದರೆ ಉತ್ತಮ. ಅದರಲ್ಲಿನ ನಿಕೋಟಿನ್ ಅಂಶ ನಿದ್ದೆಯನ್ನು ಕೆಡಿಸಿ ಅರ್ಧ ರಾತ್ರಿಗೆ ಎಚ್ಚರ ಮಾಡುತ್ತದೆ. ಒಂದು ಸಂಶೋಧನೆ ಪ್ರಕಾರ ಧೂಮಪಾನಿಗಳು ರಾತ್ರಿ ವೇಳೆ ಆಮ್ಲಜನಕವನ್ನು ಕಡಿಮೆ ಸೇವಿಸುವುದರಿಂದ ಅತಿ ಬೇಗನೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಇದು ಚಿರನಿದ್ದೆಗೆ ಸಾಗಲು ಸಹಾಯ ಮಾಡುತ್ತದೆ.
* ಕತ್ತಲನ್ನು ಪ್ರೀತಿಸಿ: ಇದು ಮಧ್ಯವಯಸ್ಕರಿಗೆ ಮತ್ತು ವೃದ್ದರಿಗೆ ಅತಿ ಮುಖ್ಯವಾದುದು. ರೂಮಿನ ಬಾಗಿಲನ್ನು ಪೂರ್ತಿ ಮುಚ್ಚಿ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಫ್ ಮಾಡಬೇಕು. ಈ ವಸ್ತುಗಳ ಬೆಳಕು ಕತ್ತಲಲ್ಲಿ ಕಣ್ಣಿಗೆ ರಾಚುವುದರಿಂದ ನಿದ್ದೆ ಹತ್ತಲು ಸಾಧ್ಯವಾಗುವುದಿಲ್ಲ. ರೂಂ ನಲ್ಲಿನ ಕತ್ತಲು, ನಿಶ್ಯಬ್ದ ಮತ್ತು ಚಲನ ವಲನಗಳ ಅನುಪಸ್ಥಿತಿ ನಿದ್ದೆಗೆ ಉತ್ತಮ.
* ಗೊರಕೆಗೆ ಪರಿಹಾರ ಕಂಡುಕೊಳ್ಳಿ: ನೀವು ಗೊರಕೆ ಹೊಡೆಯುತ್ತೀರಿ ಎಂದರೆ ಅದು ನಿಮಗೂ ತೊಂದರೆ, ಪಕ್ಕದಲ್ಲಿದ್ದವರಿಗೂ ಸಹ. ಆದ್ದರಿಂದ ಗೊರಕೆಯಿಂದ ದೂರವಾಗಲು ನಿದ್ದೆಗ ಮೊದಲು ಮದ್ಯ ಸೇವನೆ ತ್ಯಜಿಸುವುದು, ಅವಶ್ಯವಿದ್ದರೆ ತೂಕ ಇಳಿಸಿಕೊಳ್ಳುವುದು ಮತ್ತು ಮಗ್ಗುಲಾಗಿ ಮಲಗಿದರೆ ಉತ್ತಮ.
* ಶುದ್ದವಾಗಿರಿ: ಮಲಗುವ ವಾತಾವರಣ ಶುದ್ಧವಾಗಿರಲಿ, ಕ್ರಿಯೇಟಿವ್ ಮತ್ತು ಮೆತ್ತನೆ ಹೊದಿಕೆಗಳು ಹಾಸಿಗೆ ಮೇಲಿರಲಿ. ಇದರಿಂದ ಖಿನ್ನತೆ ಕಡಿಮೆಯಾಗುವುದಲ್ಲದೆ ಮೂಳೆಗಳು ರಿಲಾಕ್ಸ್ ಆಗಿ ಮೂಳೆ ಸಂಬಂಧಿ ರೋಗಗಳಿಗೆ ಪರಿಹಾರ ಒದಗಿಸುತ್ತದೆ.
* ನಿಯಮ ಮೀರಿ: ಯಾವಾಗಲೂ ಒಂದೇ ರೀತಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ವಾರಕ್ಕೆ ಒಂದು ಬಾರಿ ಅಥವಾ ಅಪರೂಪಕ್ಕೊಮ್ಮೆ ಹೆಚ್ಚಾಗಿ ನಿದ್ದೆ ಮಾಡಿ. ವೀಕೆಂಡ್ ನಲ್ಲೋ ಯಾವಾಗಲೋ ಮಧ್ಯಾಹ್ನದ ಹೊತ್ತು ಸ್ವಲ್ಪ ನಿದ್ದೆಗೆ ಜಾರಬಹುದು. ಆದರೆ ಅದೇ ಅಭ್ಯಾಸವಾಗದಂತೆ ಎಚ್ಚರವಹಿಸಿ. ಸಾಧ್ಯವಾದಷ್ಟು ಹೆಚ್ಚು ಮಲಗುವುದರಿಂದ ದೂರವಿರಿ..
* ವೈದ್ಯರ ಸಂಪರ್ಕ: ಏನೇ ಮಾಡಿದರೂ ನಿದ್ದೆಗೆ ಪರಿಹಾರ ದೊರಕುತ್ತಲೇ ಇಲ್ಲ ಎಂಬ ಪಕ್ಷದಲ್ಲಿ ತಪ್ಪದೆ ವೈದ್ಯರನ್ನು ಕಂಡು ತಕ್ಷಣ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications