Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Weight Loss Tips: ವ್ಯಾಯಾಮ ಮಾಡುವ ಮೊದಲು ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭಗಳಿದ್ಯಾ?
ತೂಕ ಇಳಿಸೋದಕ್ಕೆ ವ್ಯಾಯಾಮ ಮಾತ್ರ ಮುಖ್ಯವಲ್ಲ. ಇದರ ಜೊತೆಗೆ ನಾವು ಎಂತಹ ಆಹಾರವನ್ನು ಸೇವನೆ ಮಾಡುತ್ತೀವಿ ಅನ್ನೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ವ್ಯಾಯಾಮದ ಮುನ್ನ ಹಾಗೂ ವ್ಯಾಯಾಮದ ನಂತರ ಇಂತಹದ್ದೇ ಆಹಾರಗಳನ್ನು ಸೇವಿಸಬೇಕು ಎನ್ನುವ ನಿಯಮಗಳಿದೆ. ಅದ್ರಲ್ಲೂ ಮುಖ್ಯವಾಗಿ ಉಪ್ಪು ನಮ್ಮ ತೂಕ ಇಳಿಸೋದಕ್ಕೆ ಸಹಾಯ ಮಾಡುತ್ತಂತೆ. ಅಷ್ಟಕ್ಕು ಉಪ್ಪು ತೂಕ ಇಳಿಸೋದಕ್ಕೆ ಯಾವ ರೀತಿ ಸಹಾಯಕವಾಗಲಿದೆ ಅನ್ನೋದನ್ನು ತಿಳಿಯೋಣ.
ಉಪ್ಪು ತೂಕ ಇಳಿಸಲು ಸಹಾಯ ಮಾಡೋದು ಹೇಗೆ?
ವ್ಯಾಯಾಮ ಮಾಡೋದಕ್ಕಿಂತಲೂ ಮೊದಲು ಕೆಲವು ಆಹಾರಗಳನ್ನು ಸೇವಿಸೋದ್ರಿಂದ ಇದು ನಾವು ಮಾಡುವ ವ್ಯಾಯಾಮದ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ. ಅಧ್ಯಯನಗಳ ಪ್ರಕಾರ ರನ್ನಿಂಗ್ ಮಾಡುವ ಮೊದಲು ಬಾಳೆಹಣ್ಣು, ಬಾದಾಮಿ ಮತ್ತು ಇತರ ಪದಾರ್ಥಗಳನ್ನು ಸೇವನೆ ಮಾಡೋದ್ರಿಂದ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ. ಆದರೆ ನಿಮಗೊತ್ತಾ ಉಪ್ಪು ಕೂಡ ವ್ಯಾಯಾಮ ಮಾಡಲು ಹೆಚ್ಚಿನ ಶಕ್ತಿ ನೀಡುತ್ತದೆ. ವ್ಯಾಯಾಮಕ್ಕಿಂತಲೂ ಮೊದಲು ಕೊಂಚ ಉಪ್ಪಿನಾಂಶ ಸೇವನೆ ಮಾಡೋದ್ರಿಂದ ತೂಕ ಇಳಿಸಲು ಸಹಾಯ ಮಾಡುತ್ತಂತೆ.

ಹೈಡ್ರೇಶನ್ ಮಟ್ಟವನ್ನು ಸುಧಾರಿಸುತ್ತದೆ
ತೀವ್ರವಾದ ವ್ಯಾಯಾಮ ಮಾಡೋದ್ರಿಂದ ನಿರ್ಜಲೀಕರಣಗೊಳ್ಳುತ್ತೇವೆ. ಬೆವರು, ಮೂತ್ರ ಮತ್ತು ಇತರ ಶಾರೀರಿಕ ದ್ರವಗಳ ಮೂಲಕ ನೀರಿನ ಜೊತೆಗೆ ಉಪ್ಪನಾಂಶವನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ನೀರಿನಲ್ಲಿ ಕೊಂಚ ಉಪ್ಪು ಸೇರಿಸಿ ಕುಡಿಯೋದ್ರಿಂದ ದೇಹದಲ್ಲಿ ಉಪ್ಪಿನಾಂಶ ಹಾಗೆಯೇ ಇರುತ್ತದೆ. ದೈಹಿಕ ದ್ರವಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಎನರ್ಜಿ ಹೆಚ್ಚಾಗುತ್ತದೆ
ವ್ಯಾಯಾಮ ಮಾಡುವಾಗ ನೀರಿಗೆ ಉಪ್ಪನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಏಕೆಂದರೆ ಇದು ದೇಹದಾದ್ಯಂತ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ನೀರಿಗೆ ಉಪ್ಪುನ್ನು ಸೇರಿಸಿ ಕುಡಿಯೋದ್ರಿಂದ ವ್ಯಾಯಾಮ ಮಾಡಲು ಹೆಚ್ಚಿನ ಶಕ್ತಿ ಒದಗಿಸುತ್ತದೆ.
ಸಹಿಷ್ಣುತೆ ಹೆಚ್ಚಾಗುತ್ತದೆ
ದೇಹದಲ್ಲಿ ಉಪ್ಪಿನಾಂಶವಿದ್ದರೆ ವ್ಯಾಯಾಮ ಮಾಡುವಾಗ ದೇಹ ಹೆಚ್ಚು ಶ್ರಮ ವಹಿಸಬೇಕಾದ ಅವಶ್ಯಕತೆಯಿಲ್ಲ. ತೀವ್ರವಾದ ವ್ಯಾಯಾಮಕ್ಕಾಗಿ ಹೆಚ್ಚಿನ ದೈಹಿಕ ಸಹಿಷ್ಣುತೆಯನ್ನು ಹೊಂದಿರುತ್ತದೆ. ಬಹಳಷ್ಟು ಕ್ರೀಡಾಪಟುಗಳು ತಮ್ಮ ಆಟದ ಪ್ರದರ್ಶನಕ್ಕೂ ಮೊದಲು ಸೋಡಿಯಂ ಅನ್ನು ಸೇವಿಸುತ್ತಾರೆ. ಏಕೆಂದರೆ ಇದು ದೇಹದಲ್ಲಿ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ.
ಸ್ನಾಯು ಸೆಳೆತವನ್ನು ತಡೆಯುತ್ತದೆ
ವ್ಯಾಯಾಮದ ಸಮಯದಲ್ಲಿ ಹೆಚ್ಚಿದ ರಕ್ತನ ಹರಿವಿನಿಂದಾಗಿ ಸ್ನಾಯು ಸೆಳೆತ ಮತ್ತು ಕೀಲು ನೋವು ಇರುತ್ತದೆ. ಇದಕ್ಕೆ ಜೈವಿಕ ಕಾರಣವೆಂದರೆ ನಿರ್ಜಲೀಕರಣ ಮತ್ತು ದೇಹದಲ್ಲಿ ಉಪ್ಪಿನ ಕೊರತೆಯು ಸ್ನಾಯುಗಳ ಅಂತರಕೋಶದ ಅಂತರವನ್ನು ಸಂಕುಚಿತಗೊಳಿಸುತ್ತದೆ. ನರ ತುದಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ನೋವು ಉಂಟಾಗುತ್ತದೆ. ಹೀಗಾಗಿ ವ್ಯಾಯಾಮಕ್ಕೂ ಮೊದಲು ನೀರಿನೊಂದಿಗೆ ಉಪ್ಪು ಸೇವಿಸಿದರೆ ಉತ್ತಮ.
ವ್ಯಾಯಾಮಕ್ಕೂ ಮೊದಲು ಕೊಂಚ ಉಪ್ಪು ಸೇವಿಸುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

