Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಇಂಟರ್‌ಮಿಟೆಂಟ್ Vs ಅಲ್ಪ ಆಹಾರ 6 ಬಾರಿ ಸೇವನೆ: ತೂಕ ಇಳಿಕೆಗೆ ಯಾವುದು ಬೆಸ್ಟ್?
ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೀರಾ? ಬೊಜ್ಜು ಕರಗಬೇಕೆಂದು ಇಂಟರ್‌ಮಿಟೆಂಟ್ ಅಥವಾ ಸ್ವಲ್ಪ ತಿನ್ನುವ ಆಹಾರಕ್ರಮ ಪಾಲಿಸುತ್ತಿದ್ದೀರಾ? ಎರಡರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ, ಏಕೆ ಎಂದು ನೋಡೋಣ ಬನ್ನಿ:

ಮೊದಲಿಗೆ ಇಂಟರ್‌ಮಿಟೆಂಟ್ ಫಾಸ್ಟಿಂಗ್(ಉಪವಾಸ) ಎಂದರೇನು?
ಇಂಟರ್‌ಮಿಟೆಂಟ್ ಫಾಸ್ಟಿಂಗ್‌ನಲ್ಲಿ ಒಂದು ಊಟದಿಂದ ಮತ್ತೊಂದು ಊಟಕ್ಕೆ 16 ಗಂಟೆ ಗ್ಯಾಪ್ ನೀಡುವುದು. ಕೆಲವರು 48 ಗಂಟೆ ಕೂಡ ಉಪವಾಸ ಮಾಡುವವರಿದ್ದಾರೆ.
ಇಂಟರ್‌ಮಿಂಟೆಂಟ್ ಫಾಸ್ಟಿಂಗ್‌ನಿಂದ ದೊರೆಯುವ ಪ್ರಯೋಜನಗಳೇನು?
ಈ ಬಗೆಯ ಉಪವಾಸ ಮಾಡುವುದರಿಂದ ಮೈ ತೂಕ ಕಡಿಮೆಯಾಗುವುದು ಅಲ್ಲದೆ ಅನೇಕ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟುತ್ತದೆ ಹಾಗೂ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು.
ಇಂಟರ್‌ಮಿಟೆಂಟ್ ಫಾಸ್ಟಿಂಗ್ ಅಡ್ಡಪರಿಣಾಮಗಳೇನು?
ಇಂಟರ್‌ಮಿಟೆಂಟ್ ಫಾಸ್ಟಿಂಗ್ ಎಲ್ಲರಿಗೆ ಮಾಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ದೀರ್ಗ ಸಮಯದವರೆಗೆ ಹಸಿವಿನಿಂದ ಇರುವುದು ಸುಲಭವಲ್ಲ, ಅದಕ್ಕೆ ಡೆಡಿಕೇಷನ್ ಬೇಕಾಗುವುದು. ಅಲ್ಲದೆ ದೀರ್ಘ ಸಮಯ ಹಸಿವಿನಿಂದ ಇರುವುದರಿಂದ ನಂತರ ಊಟ ಮಾಡುವಾಗ ಅಧಿಕ ತಿನ್ನುವ ಅಪಾಯವೂ ಇದೆ.
ಆಹಾರವನ್ನು ಲಘು ಆಹಾರವಾಗಿ 6 ಬಾರಿ ತಿನ್ನುವುದು
ಮೈ ತೂಕ ಕಡಿಮೆ ಮಾಡಲು ಆಹಾರವನ್ನು ಸ್ವಲ್ಪ- ಸ್ವಲ್ಪವೆಂಬಂತೆ 6 ಬಾರಿ ಆಹಾರ ಸೇವಿಸುವುದು ಒಳ್ಳೆಯದು. ಮೂರು ಹೊತ್ತು ತಿನ್ನುವ ಬದಲಿಗೆ 6 ಬಾರಿ ತಿನ್ನುವುದು ತುಂಬಾನೇ ಪರಿಣಾಮಕಾರಿ ಎಂಬುವುದು ಸಾಬೀತಾಗಿದೆ. ಉದಾಹರಣೆಗೆ ನೀವು 3 ದೋಸೆ ತಿನ್ನುವವರಾದರೆ ಅದನ್ನು ಒಂದೂವರೆ ದೋಸೆಗೆ ಇಳಿಸಿ, ನಂತರ ಸ್ವಲ್ಪ ಹೊತ್ತು ಬಿಟ್ಟಮೇಲೆ ಸ್ವಲ್ಪ ಹಣ್ಣು ಅಥವಾ ತರಕಾರಿ ತಿನ್ನಿ. ಹೀಗೆ ಮಧ್ಯಾಹ್ನ, ರಾತ್ರಿ ಊಟದಲ್ಲಿ ಡಿವೈಡ್ ಮಾಡಿ. ನೀವು ಬೇಕಾದರೆ 3 ಹೊತ್ತು ಆರೋಗ್ಯಕರ ಸ್ನ್ಯಾಕ್ಸ್ ಹಾಗೂ ಆಹಾರದ ಡಯಟ್ ಚಾರ್ಟ್ ಫಾಲೋ ಮಾಡಿ. ಈ ರೀತಿ ಮಾಡುವುದರಿಂದ ಡಯಟ್ ಫಾಲೋ ಮಾಡಲು ಸುಲಭವಾಗುವುದು.
ಆಹಾರವನ್ನು ಸ್ವಲ್ಪ ತಿನ್ನುವುದರಿಂದ ದೊರೆಯುವ ಪ್ರಯೋಜನಗಳು
* ಈ ರೀತಿಯ ಆಹಾರಕ್ರಮ ಪಾಲಿಸುವುದರಿಂದ ಹಸಿವು ಉಂಟಾಗುವುದಿಲ್ಲ. 3 ಗಂಟೆ ಗ್ಯಾಪ್‌ನಲ್ಲಿ ಆಹಾರ ಸೇವಿಸಿ. ಅಲ್ಲದೆ ಆಗಾಗ ಆಹಾರ ಸೇವಿಸುವುದರಿಂದ ಸುಸ್ತು ಅನಿಸುವುದಿಲ್ಲ.
* ಮೈ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.
ಅಡ್ಡಪರಿಣಾಮಗಳೇನು?
ನೀವು ಸರಿಯಾಗಿ ಪ್ಲ್ಯಾನ್ ಮಾಡಬೇಕು, ನೀವು ಸ್ವಲ್ಪ ಹೆಚ್ಚು ತಿಂದರೂ ನಿಮ್ಮ ತೂಕ ಇಳಿಕೆಯ ಗುರಿ ಉಲ್ಟಾ ಹೊಡೆಯುವುದು. ಆದ್ದರಿಂದ ನೀವು ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸುತ್ತೀರಿ ಅದು ಮುಖ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಆಹಾರ ರುಚಿಯಾಗಿದೆ ಎಂದು ನೀವು ಹೆಚ್ಚು ತಿನ್ನುವ ಅಪಾಯವಿದೆ.
ಇಂಟರ್‌ಮಿಟೆಂಟ್ Vs ಅಲ್ಪ ಪ್ರಮಾಣದ ಆಹಾರ 6 ಹೊತ್ತು ಸೇವಿಸುವುದು
ಎರಡರಲ್ಲೂ ತೂಕ ಇಳಿಕೆಗೆ ಪರಿಣಾಮಕಾರಿ ವಿಧಾನ ಯಾವುದೆಂದು ನೋಡುವುದಾದರೆ ಆಹಾರವನ್ನು ಸ್ವಲ್ಪ-ಸ್ವಲ್ಪ ಎಂಬಂತೆ ಹೆಚ್ಚು ಬಾರಿ ಸೇವಿಸುವುದು ಹೆಚ್ಚು ಪರಿಣಾಮಕಾರಿ, ಏಕೆಂದರೆ ಇಣಟರ್‌ಮಿಟೆಂಟ್ ಫಾಸ್ಟಿಂಗ್‌ನಲ್ಲಿ ತುಂಬಾ ಹೊತ್ತು ಆಹಾರವನ್ನು ಸೇವಿಸಿದೆ ಇರುವುದರಿಂದ ನಿಮಗೆ ಸುಸ್ತು, ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗದೇ ಇರುವುದು, ವ್ಯಾಯಾಮ ಮಾಡುವಾಗ ಬೇಗ ಸುಸ್ತಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು. ಆದ್ದರಿಂದ ತುಕ ಇಳಿಕೆಗೆ ಆಹಾರವನ್ನು ಸ್ವಲ್ಪ-ಸ್ವಲ್ಪವೆಂಬಂತೆ 6 ಬಾರಿ ತೆಗೆದುಕೊಳ್ಳುವುದು ಒಳ್ಳೆಯದು, ಇದರಿಂದ ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
