Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಯುಗಾದಿ ಪಚಡಿ ಇದರ ವಿಶೇಷತೆ ಗೊತ್ತೇ? ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಹೀಗೆಲ್ಲಾ ಗುಣಗಳಿವೆ
ಯುಗಾದಿಗೆ ಬೇವು-ಬೆಲ್ಲ ಎಷ್ಟು ಸ್ಪೆಷಲೋ, ಪಚಡಿ ಕೂಡ ಅಷ್ಟೇ ಸ್ಪೆಷಲ್. ಈ ದಿನ ಹಬ್ಬದ ಅಡುಗೆಯಲ್ಲಿ ಯುಗಾದಿ ಪಚಡಿ ಮಾಡಲಾಗುವುದು.

ಈ ಯುಗಾದಿ ಪಚಡಿ ವಿಶೇಷತೆ ಏನು, ಇದನ್ನು ತಿನ್ನುವುದರಿಂದ ಸಿಗುವ ಆರೋಗ್ಯಕರ ಗುಣಗಳೇನು, ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಯುಗಾದಿ ಪಚಡಿಗೆ ಬೇಕಾಗುವ ಸಾಮಗ್ರಿಗಳು
ಬೇವಿನ ಸೊಪ್ಪು ಮತ್ತು ಹೂಗಳು
ಮಾವಿನಕಾಯಿ
ಬೆಲ್ಲ
ಕಾಳು ಮೆಣಸು
ಉಪ್ಪು
ಈ ಪ್ರಮುಖ ಸಾಮಗ್ರಿ ಬಳಸಿ ಯುಗಾದಿ ಪಚಡಿ ತಯಾರಿಸಲಾಗುವುದು.
ಯುಗಾದಿ ಪಚಡಿ ತಯಾರಿ ಹೇಗೆ?
* 1 ಚಮಚ ಹುಣಸೆಹಣ್ಣನ್ನು ಒಂದು ಚಿಕ್ಕ ಕಪ್ ಬಿಸಿ ನೀರಿನಲ್ಲಿ ಹಾಕಿಡಿ. ನಂತರ ಅದನ್ನು ಕಿವುಚಿ ಹುಣಸೆ ರಸ ತೆಗಿಯಿರಿ.
* ನಂತರ ಮುಕ್ಕಾಲು ಕಪ್ ನೀರು ಸೇರಿಸಿ
* ಬೆಲ್ಲವನ್ನು ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲೆಸಿ.
* ನಂತರ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ ಸೇರಿಸಿ, ಬೇವಿನ ಹೂ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.
* ನಂತರ 1/4 ಚಮಚ ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಸೇವಿಸಿ.
ಯುಗಾದಿ ಪಚಡಿ ಬಳಸುವುದರಿಂದ ದೊರೆಯುವ ಪ್ರಯೋಜನಗಳು
ಈ ಪಚಡಿ ತಿನ್ನುವುದರಿಂದ ಕಹಿಬೇವಿನ ಎಲೆ, ಬೇವಿನ ಸೊಪ್ಪಿನಿಂದ ದೊರೆಯುವ ಪ್ರಯೋಜನಗಳು
* ಇವುಗಳಲ್ಲಿ ಆ್ಯಂಟಿಆಕ್ಸಿಡೆಂಡ್ ಹೆಚ್ಚಾಗಿ ಇರುವುದರಿಂದ ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಇವುಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ.
* ಇವು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ.
* ಉರಿಯೂತದ ಸಮಸ್ಯೆ ಇರುವವರಿಗೆ ಇದು ತುಂಬಾ ಒಳ್ಳೆಯದು.
ಮಾವಿನಕಾಯಿ ಪ್ರಯೋಜನಗಳು
ಮಾವಿನಕಾಯಿ ಸೀಸನಲ್ ಆಹಾರ, ಯಾವುದೇ ಸೀಸನಲ್ ಆಹಾರ ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಿಸಿಲಿನಲ್ಲಿ ಕಾಡುವ ಕಾಯಿಲೆ ತಡೆಗಟ್ಟಲು ಮಾವಿನಕಾಯಿ ಸಹಕಾರಿ. ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಬೆಲ್ಲ
ಬೆಲ್ಲ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬಿಸಿಲಿನಲ್ಲಿ ಬೆಲ್ಲದ ಪಾನೀಯ ತುಂಬಾನೇ ಒಳ್ಳೆಯದು. ಬಿಸಿಲಿನಲ್ಲಿ ಸುಸ್ತನ್ನು ಬೇಗನೆ ನಿವಾರಿಸುತ್ತದೆ.
ಕಾಳು ಮೆಣಸು
ಕಾಳು ಮೆಣಸು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಜೀರ್ಣ, ಖಿನ್ನತೆ, ಕೆಮ್ಮು ಮುಂತಾದ ಕಾಯಿಲೆ ತಡೆಗಟ್ಟುವ ಶಕ್ತಿ ಕರಿಮೆಣಸಿಗೆ ಇದೆ.
ಆದ್ದರಿಂದ ಯುಗಾದಿಯಲ್ಲಿ ತಯಾರಿಸುವ ಪಚಡಿ ತುಂಬಾನೇ ವಿಶೇಷವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications