Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
27 ಮಕ್ಕಳಿಗೆ ದಡಾರ ಶಂಕೆ..ಇಬ್ಬರು ಸಾವು..! 8 ಶಾಲೆಗಳು ಬಂದ್..! ದಡಾರ ಹರಡೋದು ಹೇಗೆ?
ದಡಾರ ಈ ರೋಗದ ಹೆಸರು ಕೇಳಿದರೆ ಭಯವಾಗುತ್ತೆ. ಏಕೆಂದರೆ ಒಂದು ಕಾಲದಲ್ಲಿ ದಡಾರ ಬಂತೆಂದರೆ ಸಾವಿನ ಕದ ತಟ್ಟಿದಂತೆ ಎನ್ನಲಾಗಿತ್ತು. ಅದರಲ್ಲೂ ಮಕ್ಕಳಲ್ಲಿ ಕಾಡುವ ಈ ಕಾಯಿಲೆ ಒಂದು ಕಾಲದಲ್ಲಿ ಮಾರಣಾಂತಕವಾಗಿ ಕಾಡಿತ್ತು. ಆದರೆ ವರ್ಷಗಳು ಕಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಾದ ಅಧ್ಯಯನವು ದಡಾರಕ್ಕೆ ಸೂಕ್ತ ಚಿಕಿತ್ಸೆ ಕಂಡುಕೊಂಡಿತು.
ಆದರೆ ಮತ್ತೀಗ ದಡಾರ ಪ್ರಕರಣಗಳು ಆತಂಕ ಹುಟ್ಟಿಸಿವೆ. ಹೌದು ಮಧ್ಯಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಎರಡು ಡಜನ್‌ಗಿಂತಲೂ ಹೆಚ್ಚು ದಡಾರ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ 27 ಮಕ್ಕಳು ದಡಾರ ಸೋಂಕಿಗೆ ಒಳಗಾಗಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದಡಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕು ಹೆಚ್ಚು ಮಕ್ಕಳಿಗೆ ಹರಡದಂತೆ ಮಧ್ಯಪ್ರದೇಶದ ಎಂಟು ಶಾಲೆಗಳನ್ನು ಮುಚ್ಚಲು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮುನ್ನೆಚ್ಚರಿಕೆ ವಹಿಸಿರುವ ಆರೋಗ್ಯ ಇಲಾಖೆ, ಹೆಚ್ಚಿನ ಮಕ್ಕಳಿಗೆ ರೋಗ ಹರಡದಂತೆ ಎಂಟು ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದು, ರೋಗ ಹರಡುವುದನ್ನು ತಡೆಯಲು ಮತ್ತು ಮಕ್ಕಳಿಗೆ ಸಮರ್ಪಕ ಚಿಕಿತ್ಸೆ ನೀಡಲು ವೈದ್ಯಕೀಯ ತಂಡವನ್ನು ಮೈಹರ್‌ಗೆ ಕಳುಹಿಸಲಾಗಿದೆ.
ದಡಾರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣವಾಗಿದೆ. ಈ ಕಾಯಿಲೆ ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ರೋಗವಿರುವ ಬೇರೊಂದು ಮಗುವಿನ ಜೊತೆಗೆ ಇತರ ಮಕ್ಕಳೂ ಬೆರೆಯುವುದರಿಂದ ಈ ರೋಗ ಕೂಡಲೇ ಹರಡುತ್ತದೆ. ವ್ಯಾಕ್ಸಿನೇಷನ್ (ಚುಚ್ಚುಮದ್ದು) ಒಂದೇ ಈ ರೋಗಕ್ಕೆ ಪರಿಹಾರವಾಗಿದ್ದು ಪ್ರಥಮ ವರ್ಷದಲ್ಲಿ ಮಗುವಿಗೆ ಚುಚ್ಚುಮದ್ದನ್ನು ನೀಡಲೇಬೇಕು. ರುಬೆಲ್ಲಾ ಹಾಗೂ ಮಂಪ್ಸ್ ಹೆಸರಿನ ಎರಡು ಲಸಿಕೆಗಳ ಮಿಶ್ರಣವಾಗಿ ಈ ಚುಚ್ಚುಮದ್ದನ್ನು ಮಕ್ಕಳಿಗೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಈ ರೋಗಕ್ಕೆ ಗುರಿಯಾದರು ಎಂದಾದಲ್ಲಿ ಆಕೆ/ಆತ ಜೀವನ ಪರ್ಯಂತ ಈ ರೋಗಕ್ಕಾಗಿ ಪ್ರತಿರಕ್ಷಣೆಯನ್ನು ಪಡೆದುಕೊಳ್ಳಲೇಬೇಕು.
ದಡಾರದಿಂದ ಬಳಲುತ್ತಿರುವ ವ್ಯಕ್ತಿಯು ಕೆಮ್ಮಿದಾಗ ಅಥವಾ ಉಗುಳಿದಾಗ, ವೈರಸ್ ಗಾಳಿಯ ಕಣಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ಹೀಗಾಗಿ ರೋಗವು ಹರಡುತ್ತದೆ. ದಡಾರಕ್ಕೆ ಮುಖ್ಯ ಕಾರಣಗಳು ಬಾಯಿ ಮತ್ತು ಗಂಟಲಿನಲ್ಲಿ ಗುಳ್ಳೆಗಳು, ಅಧಿಕ ಜ್ವರ, ಕೆಮ್ಮು ಮತ್ತು ದೇಹದ ಮೇಲೆ ಕೆಂಪು ದದ್ದುಗಳು. ಭಾರತದಲ್ಲಿ ದಡಾರದ ಅಂಕಿಅಂಶಗಳು ಆಘಾತಕಾರಿಯಾಗಿದೆ. WHO ವರದಿಯ ಪ್ರಕಾರ, 2022 ರಲ್ಲಿ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ದಡಾರ ಪ್ರಕರಣಗಳು ದಾಖಲಾಗಿವೆ.
ದಡಾರ ರೋಗಲಕ್ಷಣಗಳು
ವೈರಸ್ ದಾಳಿ ಮಾಡಿದ ಏಳರಿಂದ ಹದಿನಾಲ್ಕು ದಿನಗಳಲ್ಲಿ ದಡಾರ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತ್ವಚೆಯಲ್ಲಿ ಸಣ್ಣ ವೃತ್ತಾಕಾರದ ಮಾದರಿಯಲ್ಲಿ ಕೆಂಪು ಗುಳ್ಳೆಗಳು ಉಂಟಾಗುತ್ತವೆ. ಇದು ಮೊದಲಿಗೆ ಗುಲಾಬಿ ಬಣ್ಣದಲ್ಲಿದ್ದು ನಂತರ ಸಮಯ ಕಳೆದಂತೆ ಗಾಢ ಕೆಂಪು ಬಣ್ಣಕ್ಕೆ ಇದು ತಿರುಗುತ್ತದೆ. ಈ ಕೆಂಪು ಗುಳ್ಳೆಗಳು ಮೊದಲು ಮುಖದ ಎರಡೂ ಬದಿಗಳಲ್ಲಿ ಕಾಣಿಸಿಕೊಳ್ಳುತ್ತವೆ ನಂತರ ಕುತ್ತಿಗೆಯ ಭಾಗ ಹಾಗೂ ನಿಧಾನಕ್ಕೆ ದೇಹವನ್ನು ವ್ಯಾಪಿಸಿಕೊಳ್ಳುತ್ತದೆ. ದಡಾರದ ಇನ್ನೊಂದು ರೋಗ ಲಕ್ಷಣವೆಂದರೆ ತೀವ್ರ ಜ್ವರ ಕಾಣಿಸಿಕೊಳ್ಳುವುದು ಇದು 104 ಡಿಗ್ರಿಯನ್ನು ತಲುಪುವ ಸಾಧ್ಯತೆ ಕೂಡ ಇರುತ್ತದೆ. ಸುರಿಯುತ್ತಿರುವ ಮೂಗು, ನೋಯುತ್ತಿರುವ ಗಂಟಲು, ನಿರಂತರ ಒಣ ಕೆಮ್ಮು, ಕಣ್ಣುಗಳ ಕೆಂಪು ಹಾಗೂ ನೀರು ಸುರಿಯುವುದು, ಹಸಿವು ಇಲ್ಲದಿರುವುದು ಭೇದಿ, ವಾಂತಿ ಮತ್ತು ಡಿಲೀರಿಯಂ ತೀವ್ರ ಸಂದರ್ಭಗಳಲ್ಲಿ ಉಂಟಾಗುತ್ತದೆ.
ದಡಾರಕ್ಕೆ ಪರಿಹಾರಗಳು
ಹುಣಸೇ ಹಣ್ಣಿನ ಬೀಜಗಳು ಮತ್ತು ಅರಿಶಿನ
ದಡಾರವನ್ನು ಹೋಗಲಾಡಿಸಲು ಹುಣಸೇ ಹಣ್ಣಿನ ಬೀಜಗಳು ಮತ್ತು ಅರಶಿನ ಅತ್ಯುತ್ತಮವಾಗಿದೆ. ಹುಣಸೇ ಹಣ್ಣಿನ ಬೀಜಗಳನ್ನು ಕುಟ್ಟಿ ಹುಡಿಮಾಡಿಟ್ಟುಕೊಳ್ಳಿ ನಂತರ ಸಮಪ್ರಮಾಣದಲ್ಲಿ ಹುಡಿ ಮಾಡಿದ ಬೀಜಗಳು ಮತ್ತು ಅರಿಶಿನವನ್ನು ತೆಗೆದುಕೊಳ್ಳಿ ಈ ಮಿಶ್ರಣವನ್ನು 350 ಗ್ರಾಮ್‌ನಿಂದ 425 ಗ್ರಾಮ್‌ವರೆಗೆ ನಿತ್ಯವೂ ಮೂರು ಹೊತ್ತು ರೋಗಿಗೆ ನೀಡಬೇಕು.
ಬೆಳ್ಳುಳ್ಳಿ
ದಡಾರದ ಶಮನಕ್ಕಾಗಿ ಬೆಳ್ಳುಳ್ಳಿ ಕೂಡ ಅತ್ಯುತ್ತಮವಾದುದಾಗಿದೆ. ಬೆಳ್ಳುಳ್ಳಿಯ ಹುಡಿ ಸಿದ್ಧಮಾಡಿ ಇದನ್ನು ಜೇನಿನೊಂದಿಗೆ ಸೇರಿಸಿ ನಂತರ ರೋಗಿಗೆ ಇದನ್ನು ನಿತ್ಯವೂ ನೀಡಿ.
ಲಿಂಬೆ ರಸ
ದಡಾರಕ್ಕೆ ನೈಸರ್ಗಿಕ ಪರಿಹಾರವನ್ನು ಒದಗಿಸಲು ಲಿಂಬೆ ರಸ ಸೂಕ್ತವಾದುದಾಗಿದೆ. 15-25 ಎಮ್‌ಎಲ್‌ನಷ್ಟು ಲಿಂಬೆ ರಸವನ್ನು ತೆಗೆದುಕೊಂಡು ನೀರಿನೊಂದಿಗೆ ಬೆರೆಸಿ ತೆಗೆದುಕೊಳ್ಳಬೇಕು. ಇದೂ ಕೂಡ ದಡಾರಕ್ಕೆ ಶೀಘ್ರ ಪರಿಹಾರವನ್ನು ಒದಗಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









