Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅತಿಯಾದ ಖಿನ್ನತೆಯಿಂದ ಬಳಲುತ್ತಿದ್ದೀರಾ? ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿ
ಪ್ರತಿಯೊಬ್ಬ ವ್ಯಕ್ತಿಯು ಆತನ ಜೀವನದಲ್ಲಿ ಖಿನ್ನತೆಯನ್ನು ಅನುಭವಿಸಿಯೇ ಇರುತ್ತಾನೆ. ಅದ್ರಲ್ಲೂ ಕೆಲವು ವ್ಯಕ್ತಿಗಳು ಅತಿಯಾದ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡವರು ಇರುತ್ತಾರೆ.
ಖಿನ್ನತೆ ಅಥವಾ ಡಿಪ್ರೆಷನ್ ಮನುಷ್ಯನನ್ನು ನಿಧಾನವಾಗಿ ಕೊಲ್ಲುತ್ತದೆ. ಆತ ಈ ಬದುಕು ಬೇಡ ಅನ್ನೋ ಸ್ಥಿತಿಗೆ ತಲುಪಿ ಬಿಡುತ್ತಾನೆ. ಅಷ್ಟೇ ಯಾಕೆ ಆತನಿಂದ ಯಾವುದೇ ಕೆಲಸ ಮಾಡೋದಿಕ್ಕೆ ಆಗೋದಿಲ್ಲ. ದಿನಾಲೂ ಒಂದೇ ವಿಚಾರವನ್ನು ನೆನೆದು ನೆನೆದು ಕೊರಗುತ್ತಾನೆ. ಹಾಗಾದ್ರೆ ಖಿನ್ನತೆಯಿಂದ ಹೊರ ಬರೋದು ಹೇಗೆ? ಹೌದು, ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿದ್ರೆ ಖಂಡಿತ ಖಿನ್ನತೆಯಿಂದ ಹೊರ ಬಂದು ನೀವು ಖುಷಿಯಾಗಿ ಇರಬಹುದು.

1. ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳಿ
ನೀವು ಮೊದಲು ಏಳುತ್ತಿದ್ದ ಸಮಯಕ್ಕೂ ಈಗ ಏಳುತ್ತಿರುವ ಸಮಯಕ್ಕೂ ವ್ಯತ್ಯಾಸ ಇರಬಹುದು. ನೀವು ಖಿನ್ನತೆಯಿಂದ ಬಳಲಿದ ನಂತರ ನಿಮಗೆ ಬೆಡ್‌ನಿಂದ ಎದ್ದೇಳೋದಕ್ಕೂ ಮನಸ್ಸಾಗೋದಿಲ್ಲ. ಹೊರಗಿನ ಪ್ರಪಂಚವನ್ನು ನೋಡೋದಕ್ಕೂ ಇಷ್ಟ ಪಡೋದಿಲ್ಲ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ನಿಮ್ಮ ದಿನಚರಿ ಬದಲಿಸಿ. ನೀವು ಮೊದಲು ಏಳುತ್ತಿದ್ದ ಸಮಯದಲ್ಲೇ ಬೆಳಗ್ಗೆ ಎದ್ದೇಳಿ. ಅದನ್ನೇ ರೂಢಿ ಮಾಡಿಕೊಳ್ಳಿ.
2. ತಮಾಷೆಯ ವಿಚಾರಗಳನ್ನು ಓದಿ
ನೀವು ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಯಾರ ಜೊತೆಗೂ ಏರು ಧ್ವನಿಯಲ್ಲಿ ಮಾತನಾಡೋದಕ್ಕೆ ಹೋಗಬೇಡಿ. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಏನಾದರೂ ತಮಾಷೆಯ ವಿಚಾರಗಳನ್ನು ಓದಿ. ಅಥವಾ ಕಾರ್ಟೂನ್ ನೋಡಿ. ಇಲ್ಲವಾದರೆ ಯಾವುದಾದರೂ ಕಾಮಿಡಿ ವಿಡಿಯೋಗಳನ್ನು ನೋಡಿ ನಿಮ್ಮ ಮನಸ್ಸು ಖುಷಿಯಾಗಿರುತ್ತದೆ.
3. ಚೆನ್ನಾಗಿ ತಯಾರಾಗಿ
ನೀವು ಖಿನ್ನತೆಯಿಂದ ಬಳಲೋದಕ್ಕೆ ಶುರು ಮಾಡಿದಾಗಿನಿಂದ ನಿಮ್ಮ ಸಂಪೂರ್ಣ ದಿನ ಚರಿಯೇ ಬದಲಾಗಿರುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ, ಸ್ನಾನ ಮಾಡಿ. ಚೆನ್ನಾಗಿರುವ ಬಟ್ಟೆ ಧರಿಸಿ. ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ ಪರವಾಗಿಲ್ಲ. ಚೆನ್ನಾಗಿ ಕೂದಲು ಬಾಚಿ, ಹೆಣ್ಣು ಮಕ್ಕಳಾದರೇ ಮುಖದ ಸೌಂದರ್ಯದ ಬಗ್ಗೆ ಗಮನ ಕೊಡಿ. ಆಗ ನಿಮಗೆ ಏನೋ ಒಂಥರಾ ಹೊಸ ಅನುಭವ ಆಗುತ್ತದೆ.
4. ಯೋಗ, ವ್ಯಾಯಾಮ ಮಾಡಿ
ಬೆಳಗ್ಗೆ ಎದ್ದ ತಕ್ಷಣ ಯೋಗ ಅಥವಾ ವ್ಯಾಯಾಮ ಮಾಡಿ. ಆಗ ನಿಮ್ಮ ಮನಸ್ಸು ನೋವನ್ನು ಬಿಟ್ಟು ಬೇರೆಡೆಗೆ ಕೇಂದ್ರೀಕೃತವಾಗುತ್ತದೆ. ಸಾಧ್ಯವಾದರೆ ಹೊರಗಡೆ ವಾಕಿಂಗ್‌ಗೆ ಹೋಗಿ. ಇತರರ ಜೊತೆಗೆ ಬೆರೆಯಿರಿ. ಹೀಗಾದಾಗ ದಿನ ಕಳೆದಂತೆ ನಿಮ್ಮ ನೋವನ್ನು ನೀವು ಮರೆಯುತ್ತೀರಿ.
5. ಚೆನ್ನಾಗಿ ತಿನ್ನಿ
ಸಾಮಾನ್ಯವಾಗಿ ಖಿನ್ನತೆಯಲ್ಲಿದ್ದವರು ಊಟ, ತಿಂಡಿ ಎಲ್ಲವನ್ನೂ ಮರೆಯುತ್ತಾರೆ. ದೇಹದ ಆರೋಗ್ಯಕ್ಕೆ ಆಹಾರವು ತುಂಬಾನೇ ಮುಖ್ಯವಾಗುತ್ತದೆ. ಬೆಳಗ್ಗಿನ ಉಪಹಾರವನ್ನು ಸರಿಯಾಗಿ ಮಾಡಿ. ಹಾಗೂ ಹಸಿವಾದಾಗ ಆಗಾಗ್ಗೆ ತಿನ್ನುತ್ತಿರಿ. ಹಣ್ಣು-ಹಂಪಲು, ಡ್ರೈ ಫ್ರೂಟ್ಸ್ ಇದೆಲ್ಲಾ ನಿಮ್ಮ ಆರೋಗ್ಯಕ್ಕೂ ಉತ್ತಮ. ಇನ್ನೂ ಮಧ್ಯಾಹ್ನ ಹಾಗೂ ರಾತ್ರಿಯ ಊಟವೂ ಕೂಡ ಚೆನ್ನಾಗಿರಲಿ. ನಿಮ್ಮ ದೇಹಕ್ಕೆ ಪೌಷ್ಠಿಕಾಂಶ ಆಹಾರ ಹೋದಷ್ಟು ಒಳ್ಳೆಯದು.
6. ಈ ದಿನದ ಬಗ್ಗೆ ಪ್ಲಾನ್ ಮಾಡಿಕೊಳ್ಳಿ
ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಅನ್ನೋದ್ರ ಬಗ್ಗೆ ಪ್ಲಾನ್ ಮಾಡ್ಕೊಳ್ಳಿ. ಹೀಗೆ ಮಾಡಿದ್ರೆ ಈ ದಿನವನ್ನು ನೀವು ಚೆನ್ನಾಗಿ ಶುರು ಮಾಡಬಹುದು. ನಿಮ್ಮ ಗಮನವೆಲ್ಲಾ ಈ ದಿನದ ಆಗಬೇಕಾದ ಕೆಲಸದ ಕಡೆಗೆ ಹೋದಾಗ ಬೇರ್ಯಾವುದರ ಚಿಂತೆ ನಿಮ್ಮ ಕಾಡೋದಿಲ್ಲ.
ನಮಗಾಗಿ ದೇವರು ಕೊಟ್ಟಿರೋದು ಒಂದೇ ಜೀವನ. ಬದುಕಿರುವಷ್ಟು ದಿನ ಖುಷಿಯಾಗಿರಿ. ಎಷ್ಟು ನೋವಿದ್ದರೂ ಅದನ್ನು ದೈರ್ಯದಿಂದ ಎದುರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


