Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೇಹದಲ್ಲಿ ಈ ಬದಲಾವಣೆಗಳು ಕಂಡು ಬರ್ತಿದ್ಯಾ? ಹಾಗಾದ್ರೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂದರ್ಥ
ಜನರಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗೋದು ಸಹಜ. ಹಾಗಂತ ಇದನ್ನು ಕಡೆಗಣಿಸೋದಕ್ಕೆ ಆಗೋದಿಲ್ಲ. ಯಾಕಂದ್ರೆ ಮುಂದೆ ಇದು ಭವಿಷ್ಯದಲ್ಲಿ ಮಹಾ ಅಪಾಯವನ್ನೇ ತಂದೊಡ್ಡಬಹುದು.
ಕೆಲವೊಂದು ಆಹಾರ ಕ್ರಮಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರೆ ಕ್ಯಾಲ್ಸಿಯಂ ಕೊರತೆ ನಮ್ಮನ್ನು ಕಾಡೋದಿಲ್ಲ. ಹಾಗಾದ್ರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆಗಿದೆ ಎಂದು ಗೊತ್ತಾಗೋದು ಹೇಗೆ? ದೇಹದಲ್ಲಿ ಆಗುವ ಯಾವೆಲ್ಲಾ ಬದಲಾವಣೆಗಳಿಂದ ನಮಗೆ ಕ್ಯಾಲ್ಸಿಯಂ ಕೊರತೆ ಆಗಿದೆ ಎಂದು ಗೊತ್ತಾಗುತ್ತೆ? ಈ ಬಗ್ಗೆ ತಿಳಿಯೋಣ.

1. ಅಸಹಜ ಹೃದಯದ ಬಡಿತ
ಅನಿಯಮಿತ ಹೃದಯ ಬಡಿತವು ಹೈಪೋಕಾಲ್ಸೆಮಿಯಾದ ವಿಶಿಷ್ಟ ಲಕ್ಷಣವಾಗಿದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಕೂಡ ಇದೆ. ಕ್ಯಾಲ್ಸಿಯಂ ಕೊರತೆಯು ಹೃದಯದ ಸ್ನಾಯುಗಳಿಗೆ ತೊಂದರೆಯನ್ನುಂಟು ಮಾಡೋದ್ರಲ್ಲಿ ಅನುಮಾನವಿಲ್ಲ. ಹೃದಯದ ಕೋಶಗಳಿಗೆ ಸಾಕಷ್ಟು ಕ್ಯಾಲ್ಸಿಯಂ ಸಿಗದಿದ್ದರೆ ಅದು ಕೆಲಸ ಮಾಡೋದನ್ನು ನಿಲ್ಲಿಸುತ್ತದೆ.
2. ಸ್ನಾಯು ಸೆಳೆತ
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಲ್ಲಿ ಮುಖ್ಯವಾದುದು ಸ್ನಾಯು ಸೆಳೆತ. ಕ್ಯಾಲ್ಸಿಯಂ ಸ್ನಾಯುಗಳನ್ನು ಸಂಕುಚಿತಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯಿರುವ ಸ್ನಾಯುಗಳು ಮೊದಲಿನಂತೆ ಆರೋಗ್ಯವಾಗಿ ಇರೋದಕ್ಕೆ ಸಾಧ್ಯವಾಗೋದಿಲ್ಲ. ಕ್ಯಾಲ್ಸಿಯಂ ಕೊರತೆಯಿಂದ ನೋವು, ಸೆಳೆತ, ಮತ್ತು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗಬಹುದು.
3. ಮೆದುಳಿಗೆ ತೊಂದರೆ ಉಂಟು ಮಾಡುತ್ತದೆ
ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡಲು ಮೆದುಳಿನ ಕೋಶಗಳಿಗೆ ಅತ್ಯುತ್ತಮ ಕ್ಯಾಲ್ಸಿಯಂನ ಅವಶ್ಯಕತೆಯಿದೆ. ಹೈಪೋಕಾಲ್ಸೆಮಿಯಾವು ಮೆದುಳನ್ನು ಅತಿಯಾಗಿ ಪ್ರಚೋದಿಸಬಹುದು ಮತ್ತು ಇದು ಮೆದುಳು ರೋಗಗ್ರಸ್ಥವಾಗೋದಕ್ಕೆ ಪ್ರಚೋದಿಸುತ್ತದೆ.
4. ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ
ಹೈಪೋಕಾಲ್ಸೆಮಿಯಾದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಕೈ ಮತ್ತು ಪಾದಗಳ ತುದಿಗಳಲ್ಲಿ ಜುಮ್ಮೆನ್ನುವುದು. ಒಂದು ವೇಳೆ ಕ್ಯಾಲ್ಸಿಯಂನ ತೀವ್ರ ಕೊರತೆಯಾದರೆ ಮರಗಟ್ಟುವಿಕೆಗೆ ಉಂಟಾಗುವ ಸಾಧ್ಯತೆಯು ಇರುತ್ತದೆ. ನಿಮ್ಮ ದೇಹದ ಪ್ರತಿಯೊಂದು ನರಕೋಶಕ್ಕೂ ಕ್ಯಾಲ್ಸಿಯಂ ಅಗತ್ಯವಿದೆ. ಕ್ಯಾಲ್ಸಿಯಂ ತುಂಬಾ ಕಡಿಮೆಯಾದಾಗ ನರ ಕೋಶಗಳು ಸಂವೇದನೆ ಉಂಟಾಗುತ್ತದೆ.
5. ಹಲ್ಲಿನ ಕ್ಷಯ ಮತ್ತು ಒಸಡು ಕಾಯಿಲೆ ಉಂಟಾಗುತ್ತದೆ
ಕ್ಯಾಲ್ಸಿಯಂ ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ. ಆಹಾರ, ಪಾನೀಯಗಳು ಮತ್ತು ಬಾಯಿಯ ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿನ ಖನಿಜಗಳನ್ನು ನಾಶಪಡಿಸಬಹುದು. ಮತ್ತು ಹಲ್ಲು ಹುಳುಕಾಗುವುದು ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಖನಿಜ ನಷ್ಟವನ್ನು ತಡೆಗಟ್ಟಲು ಸಾಕಷ್ಟು ಕ್ಯಾಲ್ಸಿಯಂನ ಅವಶ್ಯಕತೆಯಿದೆ. ಹೀಗಾಗಿ ಹಲ್ಲು ಹುಳುಕಾಗೋದು ಅಥವಾ ವಸಡಿನಲ್ಲಿ ಸಮಸ್ಯೆಗಳು ಕಂಡು ಬಂದರೆ ಕ್ಯಾಲ್ಸಿಯಂ ಮಟ್ಟ ಕಡಿಮೆ ಇದೆ ಎಂದರ್ಥ.
6. ಒಣ ತ್ವಚೆ
ಒಣ ತ್ವಚೆ ಅಥವಾ ನೆತ್ತಿಯ ಚರ್ಮ ಒಣಗೋದು ಹೈಪೋಕಾಲ್ಸೆಮಿಯಾದ ಲಕ್ಷಣವಾಗಿರಬಹುದು. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ಚರ್ಮದ ಪಿ ಹೆಚ್ ಅನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ತುಂಬಾ ಕಡಿಮೆಯಾದಾಗ, ಚರ್ಮವು ತೇವಾಂಶ ಮತ್ತು ಆರೋಗ್ಯಕರ ಪಿಹೆಚ್ ಅನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ.
7. ದಿಗ್ಭ್ರಮೆ ಹಾಗೂ ನೆನಪಿನ ಶಕ್ತಿ ಕಳೆದುಕೊಳ್ಳುವುದು
ಗೊಂದಲ, ದಿಗ್ಭ್ರಮೆ ಮತ್ತು ನೆನಪಿನ ಶಕ್ತಿ ಕಳೆದು ಕೊಳ್ಳುವುದು ಇವೆಲ್ಲವೂ ಹೈಪೋಕಾಲ್ಸೆಮಿಯಾದ ಲಕ್ಷಣಗಳಾಗಿರಬಹುದು. ನರ ಮತ್ತು ಮೆದುಳಿನ ಕೋಶಗಳು ಕ್ಯಾಲ್ಸಿಯಂ ಅನ್ನು ಅವಲಂಬಿಸಿರುತ್ತದೆ. ನರ ಕೋಶಗಳನ್ನು ಪ್ರವೇಶಿಸುವ ಕ್ಯಾಲ್ಸಿಯಂ ನರಪ್ರೇಕ್ಷಕಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಕ್ಯಾಲ್ಸಿಯಂನ ಕೊರತೆ ಉಂಟಾದರೆ ಮೆದುಳಿನ ಚಟುವಟಿಕೆಯಲ್ಲಿ ಬದಲಾವಣೆಗಳು ಉಂಟಾಗುತ್ತದೆ.
ಮನುಷ್ಯರ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದ್ರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ. ಹೀಗಾಗಿ ಹಣ್ಣು, ತರಕಾರಿ, ಹಾಲನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಯಾವುದೇ ರೀತಿ ತೊಂದರೆ ಆಗೋದಿಲ್ಲ. ಒಂದು ವೇಳೆ ಅತೀ ಹೆಚ್ಚಿನ ಕ್ಯಾಲ್ಸಿಯಂ ಸಮಸ್ಯೆ ಇದ್ರೆ ವೈದ್ಯರನ್ನು ಸಂಪರ್ಕಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



