Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಒಂಟಿತನದಿಂದ ಕ್ಯಾನ್ಸರ್‌ನಂತಹ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎಚ್ಚರ!
ಅನೇಕ ಜನ ಒಂಟಿಯಾಗಿ ಇರೋದಕ್ಕೆ ಇಷ್ಟ ಪಡುತ್ತಾರೆ. ಅವರದ್ದೇ ಆದ ಪ್ರಪಂಚವನ್ನೇ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಒಂಟಿತನ ಒಳ್ಳೆಯದಲ್ಲ. ಇದು ನಮಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಅನೇಕರು ಒಂಟಿತನದಲ್ಲೇ ಖುಷಿಯನ್ನು ಅನುಭವಿಸುತ್ತಾರೆ. ಆದರೆ ಇನ್ನೂ ಕೆಲವರು ಖಿನ್ನತೆ, ದುಃಖ, ನೋವು ಅನುಭವಿಸುತ್ತಾರೆ. ಕಾಡುವ ಒಂಟಿತನದಿಂದ ಹೊರಬರೋದಕ್ಕೂ ಸಾಧ್ಯವಾಗೋದಿಲ್ಲ. ಮತ್ತೊಂದು ವಿಚಾರ ಅಂದ್ರೆ ಈ ಒಂಟಿತನ ನಿಮಗೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾದ್ರೆ ಮನುಷ್ಯ ಒಂಟಿಯಾಗಿದ್ದರೆ ಯಾವೆಲ್ಲಾ ಗಂಭಿರ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ ಅನ್ನೋದನ್ನ ತಿಳಿಯೋಣ.
1. ಕ್ಯಾನ್ಸರ್
ಜನ ಮಾರಕ ಕ್ಯಾನ್ಸರ್ ಹೆಸರು ಕೇಳಿದ್ರೇನೆ ಬೆಚ್ಚಿ ಬೀಳ್ತಾರೆ. ನಿಮಗೊತ್ತಾ ಅತಿಯಾದ ಒಂಟಿತನ ಕ್ಯಾನ್ಸರ್ ಉಂಟಾಗೋದಕ್ಕೂ ಕಾರಣವಾಗಬಹುದಂತೆ. ಒಂಟಿತನದಿಂದಾಗಿ ಒತ್ತಡ ಹೆಚ್ಚಾಗುತ್ತದೆ. ಆಗ ಹಾರ್ಮೋನ್ಗಳಲ್ಲಿ ಬದಲಾವಣೆಗಳು ಉಂಟಾಗುತ್ತದೆ. ಇದರಿಂದಾಗಿ ಕ್ಯಾನ್ಸರ್ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
2. ಖಿನ್ನತೆ ಉಂಟಾಗುತ್ತದೆ
ಖಿನ್ನತೆ ಹೆಚ್ಚಾಗಲು ಒಂಟಿತನವು ಕಾರಣವಾಗಿದೆ. ಖಿನ್ನತೆ ದಿನದಿಂದ ದಿನಕ್ಕೆ ಮನುಷ್ಯನನ್ನು ಕೊಲ್ಲುತ್ತದೆ. ಕೆಲವರಿಗೆ ಬದುಕುವ ಆಸೆಯೂ ಬತ್ತಿ ಹೋಗುತ್ತದೆ. ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆಗ ಮಾಡಿಕೊಂಡ ಅದೆಷ್ಟೋ ಪ್ರಕರಣಗಳನ್ನು ನಾವು ನೋಡಿದ್ದೇವೆ. ಖಿನ್ನತೆಗೆ ಒಳಗಾದವರು ಜೀವನದ ಹಂಗನ್ನೂ ತೊರೆಯುತ್ತಾರೆ.
3. ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ
ಒಂಟಿತನವು ಹಾರ್ಟ್ ಅಟ್ಯಾಕ್‌ನ ಸಾಧ್ಯತೆಯನ್ನು 29 ಪ್ರತಿಷತ ಹೆಚ್ಚು ಮಾಡುತ್ತದೆ. ಇನ್ನೂ ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು 32 ಪ್ರತಿಷತ ಹೆಚ್ಚಿಸುತ್ತದೆ. ಅಧ್ಯಯನಗಳೇ ಈ ಬಗ್ಗೆ ಮಾಹಿತಿಯನ್ನು ನೀಡಿದೆ.
4. ನಿದ್ದೆಗೆ ಅಡ್ಡಿಪಡಿಸುತ್ತದೆ
ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ ಆತನಿಗೆ ಸರಿಯಾದ ಪ್ರಮಾಣದ ನಿದ್ರೆಯ ಅವಶ್ಯಕತೆ ಇದೆ. ಆದರೆ ಒಂಟಿತನಕ್ಕೆ ದಾಸನಾದ ವ್ಯಕ್ತಿಗೆ ರಾತ್ರಿ ಹೊತ್ತು ನಿದ್ದೆ ಬರೋದಿಲ್ಲ. ಚಿಂತೆ, ದು:ಖ, ನೋವುಗಳೇ ಆತನನ್ನು ಆವರಿಸಿರುತ್ತದೆ. ಇಡೀ ದಿನ ಎದ್ದಿರುತ್ತಾನೆ. ಇದು ಆತನ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.
5. ಆತಂಕ ಹೆಚ್ಚಾಗುತ್ತದೆ
ಸಾಮಾಜಿಕ ಆತಂಕದ ಅಸ್ವಸ್ಥತೆ ಹೊಂದಿರುವ ಜನರು ಇತರರ ಜೊತೆಗೆ ಬೆರೆಯಲು, ಮಾತನಾಡಲು ಹೆದರುತ್ತಾರೆ. ಒಂಟಿಯಾಗಿ ಇರೋದೇ ಅಭ್ಯಾಸ ಆಗಿರೋದ್ರಿಂದ ಸಾಮಾಜಿಕವಾಗಿ ಬೆರೆಯೋದು ಅವರಿಗೆ ಗೊತ್ತಿರೋದಿಲ್ಲ. ಮನದ ತುಂಬಾ ಭಯವೇ ಆವರಿಸಿರುತ್ತದೆ.
6. ಡಯಾಬಿಟೀಸ್
ಡಯಾಬಿಟೀಸ್ ಉಂಟಾಗಲು ಒಂಟಿತನವು ಕೂಡ ಒಂದು ಕಾರಣ ಆಗಬಹುದು. ಜೀವನ ಶೈಲಿಯಲ್ಲಿ ತೀವ್ರತರವಾದ ಸಮಸ್ಯೆಯನ್ನು ಹೊಂದಿರುವ ಜನರಲ್ಲಿ ಡಯಾಬಿಟೀಸ್‌ನ ಅಪಾಯಗಳು ಹೆಚ್ಚಾಗಿದೆ.
ಮನುಷ್ಯನಿಗೆ ಒಂಟಿತನ ಕಾಡೋದಿಕ್ಕೆ ಅನೇಕ ಕಾರಣಗಳು ಇರಬಹುದು. ಆದರೆ ನಮಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














