Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ನಾಟಕದ ಶೇ. 75ರಷ್ಟು ಮಂದಿಗೆ ಬೊಜ್ಜು ಸಮಸ್ಯೆ..! ಆಘಾತಕಾರಿ ವರದಿ ಬಹಿರಂಗ!!
ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ತೂಕ ಹೆಚ್ಚಳ, ಬೊಜ್ಜಿನ ಸಮಸ್ಯೆ ಎಂಬುದು ಬಹಳವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಅದರಲ್ಲೂ ಯುವ ಜನತೆ ಕೂಡ ಇಂತಹ ಸಮಸ್ಯೆಗೆ ಒಳಗಾಗಿರುವುದು ನೋಡಬಹುದು. ಇದಕ್ಕೆ ನಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿಯೇ ಪ್ರಮುಖ ಕಾರಣ ಎಂಬುದನ್ನು ಕೂಡ ನಾವು ನೋಡುತ್ತಿದ್ದೇವೆ. ಸದ್ಯ ಈಗ ಕರ್ನಾಟಕದಲ್ಲಿ ಈ ಬೊಜ್ಜಿನ ಸಮಸ್ಯೆಗೆ ಒಳಗಾದವರ ಕುರಿತಾಗಿ ಆತಂಕಕಾರಿ ಅಂಕಿ ಅಂಶ ಹೊರಬಿದ್ದಿದೆ.
2024 ರಲ್ಲಿ ತಪಾಸಣೆಗೆ ಒಳಗಾದ ಕರ್ನಾಟಕದ ಜನಸಂಖ್ಯೆಯ ಶೇ. 75 ಕ್ಕಿಂತ ಹೆಚ್ಚು ಜನರು ಬೊಜ್ಜು ಅಥವಾ ಅಧಿಕ ತೂಕ ಹೊಂದಿದ್ದಾರೆ ಎಂದು ಹೊಸ ಆರೋಗ್ಯ ವರದಿ ಬಹಿರಂಗಪಡಿಸಿದೆ, ಇದು ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಲ್ಲಿ ಆತಂಕಕಾರಿ ಏರಿಕೆಯನ್ನು ಎತ್ತಿ ತೋರಿಸಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರಿಯಂತೆ ಅಪೋಲೋ ಆಸ್ಪತ್ರೆಗಳ ಆರೋಗ್ಯ 2025 ವರದಿಯ ಪ್ರಕಾರ, ತಪಾಸಣೆಗೆ ಒಳಗಾದವರಲ್ಲಿ ಶೇ.56ರಷ್ಟು ಜನರು ಬೊಜ್ಜು ಎಂದು ರೋಗನಿರ್ಣಯ ಮಾಡಲ್ಪಟ್ಟರೆ, ಇನ್ನೂ ಶೇ. 21ರಷ್ಟು ಜನರು ಅಧಿಕ ತೂಕ ಹೊಂದಿದ್ದಾರೆ ಎಂದು ವರ್ಗೀಕರಿಸಲಾಗಿದೆ. ಹೆಚ್ಚಿನವರು ಕಳಪೆ ಜೀವನ ಶೈಲಿ, ಜಡತ್ವ, ರೋಗ ನಿರ್ಣಯ ಮಾಡುವಲ್ಲಿ ಸೋತಿರುವುದು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ತಪಾಸಣೆಗೆ ಒಳಗಾದ ವ್ಯಕ್ತಿಗಳಲ್ಲಿ ಶೇ. 28 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅವರಲ್ಲಿ ಅರ್ಧದಷ್ಟು ಜನರು ಅಧಿಕ ರಕ್ತದೊತ್ತಡ ಪೂರ್ವ ಎಂದು ವರ್ಗೀಕರಿಸಲಾಗಿದೆ. ಜನಸಂಖ್ಯೆಯ ಶೇ. 20 ರಷ್ಟು ಜನರಲ್ಲಿ ಮಧುಮೇಹ ಕಂಡುಬಂದಿದ್ದು, ಹೆಚ್ಚುವರಿಯಾಗಿ ಶೇ. 25 ರಷ್ಟು ಜನರು ಮಧುಮೇಹ ಪೂರ್ವ ವರ್ಗಕ್ಕೆ ಸೇರಿದ್ದಾರೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.
ಹೆಚ್ಚುವರಿಯಾಗಿ ರಾಜ್ಯದಲ್ಲಿ ಪರೀಕ್ಷೆಗೆ ಒಳಗಾದ ವ್ಯಕ್ತಿಗಳಲ್ಲಿ ಶೇ. 84 ರಷ್ಟು ಜನರು ಕಡಿಮೆ ವಿಟಮಿನ್ ಡಿ ಮಟ್ಟವನ್ನು ಹೊಂದಿರುವುದು ಕೂಡ ತಿಳಿದುಬಂದಿದೆ. ಅಪೊಲೊ ಆಸ್ಪತ್ರೆಗಳ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ, ಭಾರತವು ತಡೆಗಟ್ಟುವ ಆರೋಗ್ಯ ಸಂಸ್ಕೃತಿಯತ್ತ ಬದಲಾಗುವ ಅಗತ್ಯವನ್ನು ಒತ್ ಹೇಳಿದರು. ಆರೋಗ್ಯ ಶಿಕ್ಷಣವು ನಮ್ಮ ಮನೆಗಳು, ಶಾಲೆಗಳಿಂದ ಹಾಗೆ ಕೆಲಸದ ಸ್ಥಳಗಳ ಅವಿಭಾಜ್ಯ ಅಂಗವಾಗಬೇಕಿದೆ. ಆರಂಭಿಕ ಆರೋಗ್ಯ ತಪಾಸಣೆಗಳು ನಡೆಯಬೇಕು ಎಂದು ಆವರು ಹೇಳಿದ್ದಾರೆ.
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಋತುಬಂಧದ ನಂತರದ ಆರೋಗ್ಯ ಅಪಾಯಗಳು ಮತ್ತು ಬಾಲ್ಯದ ಬೊಜ್ಜು ಸೇರಿದಂತೆ ಹಲವು ಇತರ ಆರೋಗ್ಯ ಅಪಾಯಗಳನ್ನು ವರದಿ ಹೊರಹಾಕಿದೆ. ಬಾಲ್ಯದ ಬೊಜ್ಜು ಕೂಡ ಈಗ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.28ರಷ್ಟು ಅಧಿಕ ತೂಕ ಹಾಗೆ ಶೇ. 19ರಷ್ಟು ಮಂದಿ ಅಧಿಕ ರಕ್ತದೊತ್ತಡದ ಲಕ್ಷಣ ತೋರಿಸಿರುವುದು ಸಹ ವರದಿಯಲ್ಲಿ ಉಲ್ಲೇಖವಿದೆ.
ಬೊಜ್ಜು ಸಾಮಾನ್ಯವಾಗಿ ಹೊಟ್ಟೆಯ ಭಾಗ, ತೊಡೆ, ಸೊಂಟ, ತೋಳುಗಳಲ್ಲಿ ಶೇಖರಣೆಯಾಗುತ್ತದೆ. ನಿಮ್ಮ ದೇಹ ಬಳಸದೆ ಬಿಟ್ಟ ಕ್ಯಾಲೋರಿಯೂ ಈ ರೀತಿಯಾಗಿ ಪರಿವರ್ತನೆಯಾಗುತ್ತದೆ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಬಹುದು. ಆದ್ರೆ ಇದು ಅಪಾಯಕಾರಿ ಮಟ್ಟದಲ್ಲಿದ್ದರೆ ಜೀವಕ್ಕೂ ಅಪಾಯ ತಂದೊಡ್ಡಲಿದೆ ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ. ಇದು ಹೃದಯ ಸಮಸ್ಯೆ, ಮಧುಮೇಹಕ್ಕೆ ಕಾರಣವಾಗುವ ಅಪಾಯ ಹೆಚ್ಚಾಗುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಗೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಆಹಾರ, ನಮ್ಮ ಜೀವನ ಶೈಲಿ ಕಾರಣವಾಗಿರುತ್ತದೆ. ನಾವು ಸೇವಿಸುವ ಜಂಕ್ ಫುಡ್ ಮುಖ್ಯ ಕಾರಣ, ಹಾಗೆ ಸಕ್ಕರೆ ಭರಿಸ ಸಂಸ್ಕರಿತ ಆಹಾರಗಳು ಹೊಟ್ಟೆಯಲ್ಲಿ ಅನಗತ್ಯ ಬೊಜ್ಜು ಉಂಟಾಗಲು ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











