Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಕ್ಷಯ ರೋಗಕ್ಕೆ ಹೊಸ ಚಿಕಿತ್ಸಾ ವಿಧಾನ ಕೇಂದ್ರ ಸಚಿವಾಲಯ ಘೋಷಣೆ..!!
ಕ್ಷಯ ರೋಗ ಒಂದು ಕಾಲದಲ್ಲಿ ಇಡೀ ಮನುಕುಲವನ್ನೇ ಕಾಡಿದ್ದ ಕಾಯಿಲೆ. ಅದರಲ್ಲೂ ಭಾರತದಲ್ಲಿ ಕ್ಷಯದಿಂದ ಬಳಲಿ ಪ್ರಾಣ ಕಳೆದಿಕೊಂಡವರ ಸಂಖ್ಯೆ ಲಕ್ಷ ಲಕ್ಷವಾಗಿದೆ. ಆದರೆ ಇತ್ತೀಚಿಗೆ ಕ್ಷಯ ರೋಗದ ಕುರಿತಂತೆ ಮೂಡಿರುವ ಜಾಗೃತಿ ಹಾಗೂ ಚಿಕಿತ್ಸೆಯ ಪ್ರತಿಫಲದ ಕಾರಣವಾಗಿ ಗಣನೀಯ ರೀತಿಯಲ್ಲಿ ಕ್ಷಯ ನಿರ್ಮೂಲನೆಯ ಹಂತ ತಲುಪಿದೆ.
ಟಿ ಬಿ ಎಂದು ಕರೆಯಲ್ಪಡುವ ಈ ಕಾಯಿಲೆಯಿಂದಾಗಿ 19ರ ದಶಕದಲ್ಲಿ ಬಹುತೇಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅದರೆ ಈ ರೋಗ ಹರಕುವಿಕೆಯು ಎಷ್ಟರ ಮಟ್ಟಿಗೆ ಹೆಚ್ಚಾಗಿತೆಂದರೆ ಇದರಿಂದ ಸಮಸ್ಯೆಗ ಒಳಗಾದವರಲ್ಲಿ ಬಹುತೇಕ ಮಂದಿ ಆಸ್ಪತ್ರೆ ಸೇರಿದವರು ಮರಳಿ ಗುಣಮುಖರಾಗಿದ್ದು ಬಹಳ ಕಡಿಮೆ.

ಆದ್ರೆ ಈಗ ಕ್ಷಯ ರೋಗವು ನಿರ್ಮೂಹನಾ ಹಂತ ತಲುಪಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಟಿಬಿ ಕುರಿತಂತೆ ಮಹತ್ವದ ಘೋಷಣೆ ಮಾಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಲಕ್ಷಗಟ್ಟಲೆ ಕ್ಷಯ ರೋಗಿಗಳಿಗೆ ಪರಿಹಾರ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಹು ಔಷಧ-ನಿರೋಧಕ ಕ್ಷಯರೋಗ (ಟಿಬಿ) ರೋಗಿಗಳ ಅನುಕೂಲಕ್ಕಾಗಿ ಹೊಸ ಚಿಕಿತ್ಸಾ ಕ್ರಮವನ್ನು ಪರಿಚಯಿಸುವುದಾಗಿ ಘೋಷಿಸಿತ್ತು.
ಈ ಮೊದಲು ಕ್ಷಯ ರೋಗವು ವರ್ಷಗಳ ಕಾಲ ದೇಹದಲ್ಲಿ ಹೊಕ್ಕಿ ನರಳುವಂತೆ ಮಾಡುತ್ತಿತ್ತು, ಆದ್ರೆ ಇನ್ನು ಕೇವಲ 6 ತಿಂಗಳ ಒಳಗೆ ರೋಗಿ ಮುಖಮುಖರಾಗಿವಂತೆ ಮಾಡಲು ಚಿಕಿತ್ಸಾ ಕ್ರಮ ಪರಿಚಯಿಸಿದೆ. ಔಷಧಿಗಳನ್ನು ಖರೀದಿಸಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು ಸಚಿವಾಲಯವು ಸುಮಾರು ಮೂರು ತಿಂಗಳುಗಳನ್ನು ತೆಗೆದುಕೊಳ್ಳುವುದರಿಂದ ಹೊಸ ಚಿಕಿತ್ಸಾ ವಿಧಾನವು ಈ ವರ್ಷದ ಡಿಸೆಂಬರ್ ಒಳಗೆ ಹೊರತರಬಹುದು ಎಂದು ಆರೋಗ್ಯ ಸಚಿವಾಲಯ ಅಂದಾಜಿಸಿದೆ.
BPaLM ಚಿಕಿತ್ಸಾ ವಿಧಾನ ಎಂದು ಕರೆಯಲ್ಪಡುವ ಇದು ನಾಲ್ಕು-ಔಷಧಗಳ ಸಂಯೋಜನೆಯಾಗಿದೆ - ಬೆಡಾಕ್ವಿಲಿನ್, ಪ್ರಿಟೊಮ್ಯಾನಿಡ್, ಲೈನ್‌ಜೊಲಿಡ್ ಮತ್ತು ಮಾಕ್ಸಿಫ್ಲೋಕ್ಸಾಸಿನ್ - ಇದು ಹಿಂದಿನ MDR-TB ಚಿಕಿತ್ಸಾ ವಿಧಾನಕ್ಕಿಂತ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ಚಿಕಿತ್ಸಾ ಆಯ್ಕೆಯನ್ನು ಒದಗಿಸುತ್ತದೆ. ಅಂದರೆ ಟಿಬಿ ಕಾಯಿಲೆಗೆ ತುತ್ತಾದವರಿಗೆ ಅಥವಾ ರೋಗ ಲಕ್ಷಣ ಇದ್ದವರಿಗೆ ಕೇವಲ 6 ತಿಂಗಳ ಚಿಕಿತ್ಸಾ ವಿಧಾನದ ಮೂಲಕ ಗುಣಪಡಿಸುವ ವಿಧಾನವಾಗಿದೆ.
2019 ರಲ್ಲಿ US ಆಹಾರ ಮತ್ತು ಔಷಧ ಆಡಳಿತ (FDA) ಮತ್ತು 2022 ರಲ್ಲಿ WHO ನಿಂದ ಶಿಫಾರಸುಗಳನ್ನು ಪಡೆದಿರುವ BPaL ಚಿಕಿತ್ಸಾ ವಿಧಾನವು ಈಗಾಗಲೇ ದಕ್ಷಿಣ ಆಫ್ರಿಕಾ, ಉಕ್ರೇನ್, ಇಂಡೋನೇಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಫಿಲಿಪೈನ್ಸ್ ಸೇರಿದಂತೆ 70 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿದೆ. ಈ ದೇಶಗಳಲ್ಲಿ ಈ ಚಿಕಿತ್ಸಾ ವಿಧಾನ ಹೆಚ್ಚು ಯಶಸ್ವಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ 2023ರ ವರದಿಯ ಪ್ರಕಾರ ಭಾರತ ಟಿಬಿ ನಿರೋಧಕ ಔಷಧಿಯ ಕೊರತೆ ಅನುಭವಿಸುತ್ತಿದೆ. ವರ್ಷದಲ್ಲಿ ಲಕ್ಷಕ್ಕೂ ಹೆಚ್ಚು ಟಿಬಿ ಪ್ರಕರಣ ವರದಿಯಾಗುತ್ತದೆ. ಕಳೆದ ವರ್ಷ ಸುಮಾರು 66 ಸಾವಿರ ಪ್ರಕರಣಗಳ ವರದಿ ಮಾಡಲಾಗಿದೆ. ಆದರೆ ಹೊರಬಾರದ ಅಥವಾ ವರದಿಯಾಗದ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿದೆ.
ಕ್ಷಯ ರೋಗದ ಲಕ್ಷಣಗಳೇನು?
- ಕ್ಷಯ ರೋಗದ ಲಕ್ಷಣಗಳನ್ನು ಕೆಲವೊಂದು ಸಲ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಹಾಗಾದ್ರೆ ಈ ಕಾಯಿಲೆಯ ಲಕ್ಷಣವೇನು?
- ದೀರ್ಘ ಕಾಲದ ಕೆಮ್ಮು
- ಕಫದಲ್ಲಿ ರಕ್ತ
- ಹಸಿವಾಗದೆ ಇರುವುದು
- ಜ್ವರ
- ಚಳಿ
- ರಾತ್ರಿ ಬೆವರುವುದು
- ಎದೆನೋವು
- ಕಾರಣವಿಲ್ಲದೆ ತೂಕ ಕಡಿಮೆ ಆಗುವುದು
- ಉಸಿರಾಡಲು ಸಮಸ್ಯೆ ಆಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications