Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡಯಾಲಿಸಿಸ್ ಬಗ್ಗೆ 6 ತಪ್ಪು ಕಲ್ಪನೆಗಳು: ಮೂತ್ರಪಿಂಡ ತಜ್ಞರಿಂದ ಉಪಯುಕ್ತ ಮಾಹಿತಿ
ಮೂತ್ರಪಿಂಡದ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿದೆ. ಡಯಾಲಿಸಿಸ್ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ.
ಸಿಸ್ಟಮ್ಯಾಟಿಕ್ ಆನಲಿಸಿಸ್ ಫಾರ್ ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2017ರ ಪ್ರಕಾರ 1990-2017ರ ನಡುವೆ ಮೂತ್ರಪಿಂಡದ ವೈಫಲ್ಯದಿಂದ ಸಾವನ್ನಪ್ಪಿರುವ ಸಂಖ್ಯೆ ಸೇ, 38ರಷ್ಟು ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆ ಉಂಟಾದರೆ ಡಯಾಲಿಸಿಸ್ ಮಾಡಬೇಕು.

ಆದರೆ ಈ ಡಯಾಲಿಸಿಸ್ ಬಗ್ಗೆ ತಪ್ಪು ಕಲ್ಪನೆ ಇದೆ, ಇದರ ಬಗ್ಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಖ್ಯಾತ ಮೂತ್ರಪಿಂಡ ತಜ್ಞರಾದ ಡಾ. ಶ್ರೀನಿಧಿ ಚಂದ್ರಶೇಖರ್ ಪ್ರಮುಖವಾದ ಮಾಹಿತಿ ನಮ್ಮ ಓದುಗರ ಜೊತೆ ಹಂಚಿಕೊಂಡಿದ್ದು ಡಯಾಲಿಸಿಸ್ ಕುರಿತು ಇರುವ ತಪ್ಪು ಕಲ್ಪನೆಗಳೇನು ಎಂದು ನೋಡೋಣ:
ತಪ್ಪುಕಲ್ಪನೆ 1: ಮೂತ್ರಪಿಂಡದ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡು ಬರುತ್ತದೆ
ಸತ್ಯಾಂಶ: ಈ ಮೂತ್ರಪಿಂಡದ ಸಮಸ್ಯೆಗೆ ಇದೇ ವಯಸ್ಸು ಎಂಬುವುದು ಇಲ್ಲ, ಎಲ್ಲಾ ವಯಸ್ಸಿನವರಲ್ಲಿಯೂ ಕಂಡು ಬರುವುದು. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (1996-2017) ನಡೆಸಿದ ಅಧ್ಯಯನದ ಪ್ರಕಾರ, ದೀರ್ಘ ಕಾಲದಿಂದ ಮೂತ್ರಪಿಂಡದ ಸಮಸ್ಯೆ ಹೊಂದಿರುವವರ ಸಂಖ್ಯೆ 83.5% ರಷ್ಟು ಹೆಚ್ಚಾಗಿದೆ. ಮೂತ್ರಪಿಂಡದ ಸಮಸ್ಯೆಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ತಪ್ಪುಕಲ್ಪನೆ 2: ಮೂತ್ರಪಿಂಡ ವೈಫಲ್ಯವಾದರೆ ಮೂತ್ರಪಿಂಡದ ಕಸಿ ಮಾಡಿದರೆ ಮಾತ್ರ ಬದುಕಿಳಿಯಲು ಸಾಧ್ಯ
ಮೂತ್ರಪಿಂಡದ ಸಮಸ್ಯೆ ಉಂಟಾದರೆ ಮೂತ್ರ ಪಿಂಡದ ಕಸಿ ಮಾಡದಿದ್ದರೆ ಕಷ್ಟ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ.ಆದರೆ ಮೂತ್ರಪಿಂಡದ ಸಮಸ್ಯೆಗೆ ಮೂತ್ರಪಿಂಡದ ಕಸಿಯೊಂದೇ ಪರಿಹಾರವಲ್ಲ, ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಮೂತ್ರಪಿಂಡದ ಸಮಸ್ಯೆಯಿಂದ ಗುಣಮುಖರಾಗಬಹುದು, ಮೂತ್ರಪಿಂಡದ ಕಸಿ ಎಂಬುವುದು ಚಿಕಿತ್ಸೆಯ ಕೊನೆಯ ಹಂತವಾಗಿದೆ.
ತಪ್ಪುಕಲ್ಪನೆ 3: ಡಯಾಲಿಸಿಸ್ ಮಾಡುವುದರಿಂದ ದೊಡ್ಡ ಪ್ರಯೋಜನವಿಲ್ಲ
ಡಯಾಲಿಸಿಸ್ ಎಂಬುವುದು ಕಿಡ್ನಿ ಸಮಸ್ಯೆಗೆ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿದೆ. ಡಯಾಲಿಸಿಸ್ ಮೂಲಕ ರಕ್ತದಿಂದ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವ ಹೊರ ಹಾಕಲಾಗುವುದು, ಇದರಿಂದ ದೇಹದ ಇತರ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಡಯಾಲಿಸಿಸ್ ರೋಗಿಯ ಜೀವನಮಟ್ಟ ಸುಧಾರಿಸುತ್ತದೆ, ರೋಗಿಯ ಆಯುಸ್ಸು ಹೆಚ್ಚಿಸುತ್ತದೆ.
ತಪ್ಪುಕಲ್ಪನೆ 4: ಡಯಾಲಿಸಿಸ್ ಚಿಕಿತ್ಸೆ ಪಡೆಯುವುದರಿಂದ ರೋಗಿಯ ದೇಹ ಮತ್ತಷ್ಟು ದುರ್ಬಲವಾಗುವುದು
ಡಯಾಲಿಸ್ ಮಾಡಿಸಿ ಬಂದ ದಿನ ರೋಗಿಯಲ್ಲಿ ತುಂಬಾ ನೋವು ಕಂಡು ಬರುವುದು, ಆದರೆ ರೋಗಿ ಚಟುವಟಿಕೆಯಿಂದ ಕೆಲಸ ಕಾರ್ಯ ಮಾಡಿಕೊಂಡಲು ಸಹಾಯವಾಗುವುದು. ಆರ್ಥಿಕವಾಗಿ ಹೊರೆಯಾಗುವುದು ನಿಜ. ಆದರೆ ವ್ಯಕ್ತಿಯ ಬದುಕನ್ನು ಸುಧಾರಣೆ ಮಾಡುತ್ತದೆ. ವ್ಯಕ್ತಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು, ತಾನೇ ದುಡಿಯುವ ಸಾಮರ್ಥ್ಯ ಪಡೆಯುತ್ತಾನೆ, ಇದರಿಂದ ಆರ್ಥಿಕ ಹೊರೆಯಾಗುವುದನ್ನು ಕಡಿಮೆ ಮಾಡುವಲ್ಲಿ ಡಯಾಲಿಸಿಸ್ ಸಹಾಯ ಮಾಡುತ್ತದೆ.
ತಪ್ಪುಕಲ್ಪನೆ 5: ಡಯಾಲಿಸಿಸ್ ಮಾಡುವಾಗ ತುಂಬಾನೇ ನೋವುಂಟಾಗುವುದು
ನಿಜಾಂಶ: ಹಿಮೋಡಯಾಲಿಸಿಸ್ ಚಿಕಿತ್ಸೆ ವೇಳೆ ರೋಗಿಯು ಅಸ್ವಸ್ಥತೆಯನ್ನು ಅನುಭವಿಸಬಹುದು. ಆದರೆ ವ್ಯಕ್ತಿ ಮೂತ್ರಪಿಂಡದ ವೈಫಲ್ಯದಿಂದ ಅನುಭವಿಸುವ ಸಮಸ್ಯೆಗಿಂತ ಇದು ದೊಡ್ಡದ್ದು ಅನಿಸಲ್ಲ. ಅಲ್ಲದೆ . ಪೆರಿಟೋನಿಯಲ್ ಡಯಾಲಿಸಿಸ್ ಮಾಡಿದರೆ ಹೆಚ್ಚು ತೊಂದರೆಯಾಗುವುದಿಲ್ಲ, ಅಲ್ಲದೆ ನೋವು ರಹಿತ ಆಧುನಿಕ ಚಿಕಿತ್ಸಾ ವಿಧಾನ ಬಂದಿದೆ.
ತಪ್ಪುಕಲ್ಪನೆ 6: ಡಯಾಲಿಸಿಸ್ ಒಮ್ಮೆ ಮಾಡಿಸಿದ ಮೇಲೆ ಮಾಡಿಸುತ್ತಲೇ ಇರಬೇಕು
ಇದು ತಪ್ಪು ಕಲ್ಪನೆ, ಕೆಲವೊಮ್ಮೆ ಸೋಂಕು ಉಂಟಾದಾಗ ಅಥವಾ ಔಷಧಿಗಳ ಅಡ್ಡಪರಿಣಾಮದಿಂದ, ಅಪಘಾತದಿಂದ ಮೂತ್ರಪಿಂಡದ ವೈಫಲ್ಯ ಉಂಟಾಗುವುದು, ಆವಾಗ ಕೂಡ ಡಯಾಲಿಸಿಸ್ ಮಾಡಲಾಗುವುದು, ಆದರೆ ಮೂತ್ರಪಿಂಡದ ಕಾರ್ಯದಲ್ಲಿ ಸುಧಾರಣೆ ಕಂಡು ಬಂದರೆ ಡಯಾಲಿಸಿಸ್ ಅಗ್ಯತ ಬೀಳುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
