Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಎರಡೂವರೆ ಗಂಟೆ ಏರೋಬಿಕ್ಸ್ ಮಾಡಿದರೆ ಫ್ಯಾಟಿ ಲಿವರ್‌ಗೆ ಹೇಳಬಹುದು ಗುಡ್‌ಬೈ
ಫ್ಯಾಟಿ ಲಿವರ್ ಸಮಸ್ಯೆ ನಿರ್ಲಕ್ಷ್ಯ ಮಾಡುವಂತಿಯೇ ಇಲ್ಲ. ಏಕೆಂದರೆ ಇದರಿಂದ ಲಿವರ್ ಉರಿಯೂತ ಉಂಟಾಗಿ ಲಿವರ್‌ಗೆ ಹಾನಿಯಾಗಬಹುದು. ಲಿವರ್‌ನ ಗಾತ್ರ ಸಹಜ ಸ್ಥಿತಿಗೆ ತರಲು ಏರೋಬಿಕ್ಸ್ ವ್ಯಾಯಾಮ ಸಹಾಯಕಾರಿ ಎಂಬುವುದು ಅಧ್ಯಯನದಿಂದ ಹೇಳಿದೆ.

ಫ್ಯಾಟಿ ಲಿವರ್ ಸಮಸ್ಯೆ ಇರುವವರು ವಾರದಲ್ಲಿ 150 ನಿಮಿಷ ಅಂದರೆ ವಾರದಲ್ಲಿ ಒಟ್ಟು ಎರಡೂವರೆ ಗಂಟೆ ವ್ಯಾಯಾಮ ಮಾಡಿದರೆ ಸಾಕು ಫ್ಯಾಟಿ ಲಿವರ್ ಕಡಿಮೆಯಾಗುವುದು ಎಂದು ಹೇಳಿದೆ.
ಯಾವ ಬಗೆಯ ಏರೋಬಿಕ್ಸ್ ಫ್ಯಾಟಿ ಲಿವರ್ ಸಮಸ್ಯೆ ಹೋಗಲಾಡಿಸಲು ಸಹಕಾರಿ ಎಂದು ನೋಡೋಣ ಬನ್ನಿ:
1. ಬೇರ್ ಕ್ರಾಲ್ಸ್ ( Bear Crawls)
* ಇದು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
* ಚಯಪಚಯ ಕ್ರಿಯೆ ಉತ್ತಮ ಪಡಿಸುತ್ತದೆ
*ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
2. ಬರ್ಪೀಸ್ (Burpees)
ಇದನ್ನು ಮಾಡುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ, ದೇಹದಲ್ಲಿ ಶಕ್ತಿ ಹೆಚ್ಚುವುದು, ದೇಹ ಫ್ಲಕ್ಸಿಬಿಲಿಟಿ ಹೆಚ್ಚಾಗುವುದು, ಹೃದಯ ಸ್ಥಾಸ್ಥ್ಯ ಹೆಚ್ಚುವುದು.
3. ಬಟ್ ಕಿಕ್ಸ್
ಇದನ್ನು ಪ್ರಾರಂಭದಲ್ಲಿಯೇ ಮಾಡಲು ಸಾಧ್ಯವಾಗುವುದಿಲ್ಲ, ದಿನಾ ಮಾಡುತ್ತಾ ಮಾಡುತ್ತಾ ಅಭ್ಯಾಸವಾಗುತ್ತದೆ. ಇದು ಸ್ನಾಯುಗಳನ್ನು ಬಲಪಡಿಸಲು ಸಹಕಾರಿ.
4. ಡ್ಯಾನ್ಸ್'
ನೃತ್ಯ ಮಾಡುವುದರಿಂದ ತೆಳ್ಳಗಾಗುತ್ತೇವೆ, ತೆಳ್ಳಗಾದರೆ ಫ್ಯಾಟಿ ಲಿವರ್ ಸಮಸ್ಯೆ ಕಡಿಮೆಯಾಗುವುದು.
5. ಡಾಂಕಿ ಕಿಕ್ಸ್
ಮೈ ತೂಕ ಕಡಿಮೆಯಾಗಲು ಏರೋಬಿಕ್ಸ್‌ನಲ್ಲಿ ಡಾಂಕಿ ಕಿಕ್ಸ್ ತುಂಬಾ ಸಹಕಾರಿಯಾಗಿದೆ. ಇದನ್ನು ದಿನದಲ್ಲಿ 15-20 ಬಾರಿ ಮಾಡಿ.
6. ಫ್ಲೂಟರ್ ಕಿಕ್ಸ್
ಇದು ಸೊಂಟದ ಭಾಗದ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿ. ಇದನ್ನು ಕೂಡ 18-20 ಬಾರಿ ಮಾಡಿ.
8. ಹೈ ನೀಸ್ ( High Knees)
ಈ ವ್ಯಾಯಾಮ ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು, ಇದನ್ನು 30 ಸೆಕೆಂಡ್ ಮಾಡಿ. ಚಯಪಚಯ ಕ್ರಿಯೆ ಉತ್ತಮವಾದರೆ ಲಿವರ್‌ನ ಆರೋಗ್ಯ ಕೂಡ ಚೆನ್ನಾಗಿ ಆಗುವುದು.
ಇವುಗಳ ಜೊತೆಗೆ
ಜಾಗಿಂಗ್
ಜಂಪಿಂಗ್ ಜಾಕ್ಸ್
ಸ್ಕಿಪ್ಪಿಂಗ್
ಸ್ಟೇರ್ ಟ್ರೈನಿಂಗ್ (ಮೆಟ್ಟಿಲು ಹತ್ತಿ ಇಳಿಯುವುದು)
ಸ್ವಿಮ್ಮಿಂಗ್
* ವಾಕಿಂಗ್
ಇವೆಲ್ಲಾ ತೂಕ ಇಳಿಕೆಗೆ ತುಂಬಾನೇ ಸಹಕಾರಿ.
ಫ್ಯಾಟಿ ಲಿವರ್‌ಗೆ ಏರೋಬಿಕ್ಸ್ ಈ ಕಾರಣಕ್ಕೆ ತುಂಬಾನೇ ಪರಿಣಾಮಕಾರಿ.
* ಏರೋಬಿಕ್ಸ್ ಮಾಡುವಾಗ ಬೇಗನೆ ತೂಕ ಕಡಿಮೆಯಾಗುತ್ತದೆ
* ಇದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು
ಹಾಗಾಗಿ ಮೈ ತೂಕ ಕಡಿಮೆಯಾಗಿ ಲಿವರ್ ಆರೋಗ್ಯ ಉತ್ತಮವಾಗುವುದು, ಫ್ಯಾಟಿ ಲಿವರ್ ಸಮಸ್ಯೆ ದೂರಾಗುವುದು.
ಫ್ಯಾಟಿ ಲಿವರ್ ಸಮಸ್ಯೆ ಇರುವವರು ಇವುಗಳನ್ನು ಸೇವಿಸಲೇಬಾರದು
* ಮದ್ಯಪಾನ
* ಸಕ್ಕರೆ
* ಕರಿದ ಆಹಾರ
* ವೈಟ್ ಬ್ರೆಡ್, ಪಾಸ್ತಾ
* ಅಧಿಕ ಉಪ್ಪಿನಂಶದ ಆಹಾರ (ಚಿಪ್ಸ್.ಉಪ್ಪಿನಕಾಯಿ)
ಯಾವ ಬಗೆಯ ಆಹಾರ ಸೇವನೆ ಒಳ್ಳೆಯದು
* ಕಾಫಿ
* ಸೊಪ್ಪು
* ಬೀನ್ಸ್
* ಮೀನು
* ಓಟ್‌ಮೀಲ್
* ನಟ್ಸ್
* ಅರಿಶಿಣ
* ಸೂರ್ಯಕಾಂತಿ ಬೀಜ
* ಬೆಳ್ಳುಳ್ಳಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


