Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಇಂಥಾ ಸಾವು ಯಾರಿಗೂ ಬಾರದಿರಲಿ: ವಿಜ್ಞಾನದ ಪ್ರಕಾರ ತೀವ್ರ ನೋವಿನಿಂದ ಸಾಯುವ ಕ್ಷಣಗಳಿವು..!
ಸಾವು ಅಥವಾ ಮರಣ, ಇದೊಂದು ಹೇಳಿ ಕೇಳಿ ನಡೆಯುವ ಘಟನೆಯಲ್ಲ. ಹುಟ್ಟಿದ ಮನುಷ್ಯನಿಗೆ ಸಾವು ಕಟ್ಟಿಟ್ಟ ಬುತ್ತಿ. ಒಂದಲ್ಲ ಒಂದು ದಿನ ಮನುಷ್ಯ ಸಾಯಲೇ ಬೇಕು. ಈ ಸಾವಿನ ನೋವು ಯಾರು ಕೂಡ ಈ ವರೆಗೆ ಫೀಲ್ ಮಾಡಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಸತ್ತ ಮೇಲೆ ಅಥವಾ ಉಸಿರು ನಿಂತ ಮೇಲೆ ಅವನ ದೇಹಕ್ಕೆ ಚಲನೆಯೇ ಇರೋದಿಲ್ಲ.

ಹೀಗಾಗಿ ಸಾವಿಗೆ ಎಷ್ಟು ನೋವಿದೆ, ಸಾವು ಬಂದಾಗ ಏನು ಆಗುತ್ತೆ ಅನ್ನೋದು ಈಗಲೂ ತಿಳಿಯದಿರುವ ನಿಗೂಢತೆ. ಇನ್ನು ಕೆಲವರು ಸಾವಿನ ಬಳಿಕ ಮತ್ತೊಂದು ಜನ್ಮ ಇದೆ ಎಂದು ಭಾವಿಸುತ್ತಾರೆ. ಅದಕ್ಕೆ ಕೆಲವರು ಪುರಾವೆ ಕೂಡ ನೀಡಿದ್ದಾರೆ. ಈ ವಿಚಾರಗಳು ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಅದೇನೆ ಇದ್ದರೂ ಸಾವು ಎನ್ನುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ತಮ್ಮದೇ ಸಾವಿನ ಬಗ್ಗೆ ಯೋಚಿಸಲು ಜನರು ಹಿಂದೇಟು ಹಾಕುತ್ತಾರೆ.
ಪ್ರೀತಿ ಪಾತ್ರರ ಸಾವಿನ ಬಗ್ಗೆಯೂ ಯಾರು ಕೂಡ ಯೋಚಿಸಲು ಹೋಗುವುದಿಲ್ಲ. ಸಾವೆಂದರೆ ಎಲ್ಲರಿಗೂ ಭಯ. ಇನ್ನು ಸಾವಿನಲ್ಲಿ ಸಹಜ ಸಾವು ಮತ್ತು ಅಸಹಜ ಸಾವು ಅಂತ ಇದೆ. ಸಹಜ ಸಾವು ಅಂದರೆ ವಯಸ್ಸಾದ ಮೇಲೆ ಸಹಜವಾಗಿ ಮರಣ ಹೊಂದುವುದು ಆಗಿದೆ. ಇನ್ನು ಅಸಹಜ ಸಾವು ಎಂದರೆ ಅತೀ ತೀವ್ರ ನೋವಿನಿಂದ ಸಾವನಪ್ಪುವುದು ಎಂಬುವುದು ಆಗಿದೆ. ಹಾಗಾದರೆ ವಿಜ್ಞಾನದ ಪ್ರಕಾರ ತೀವ್ರ ನೋವಿನಿಂದ ಸಾಯುವ ಕ್ಷಣಗಳು ಯಾವುದು ಅಥವಾ ಅತೀ ನೋವು ತರುವ ಸಾವುಗಳು ಯಾವುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ನೀರಿನಲ್ಲಿ ಮುಳುಗಿ ಸಾಯುವುದು!
ನೀವು ಯಾರಾದರೂ ನೀರಿನಲ್ಲಿ ಮುಳುಗಿ ಮತ್ತೆ ಬಚಾವ್ ಆದ ಘಟನೆಯನ್ನು ಅನುಭವಿಸಿದ್ದೀರಾ? ನೀವು ಅನುಭವಿಸಿದ್ದರೆ ಖಂಡಿತವಾಗ್ಲು ಹೇಳ್ತೀರಾ ಈ ಸಾವು ಯಾರಿಗೂ ಉಂಟಾಗಬಾರದು ಎಂದು. ಹೌದು, ನೀರಿನಲ್ಲಿ ಮುಳುಗಿ ಸಾಯುವುದು ಎಂದರೆ ಅತ್ಯಂತ ತೀವ್ರ ನೋವಿನ ಮಾರ್ಗವಾಗಿದೆ. ಹೌದು, ಸೈನ್ಸ್ ಪ್ರಕಾರ ನೀರಿನಲ್ಲಿ ಮುಳುಗಿ ಸಾಯುವುದು ಎಂದರೆ ಅತ್ಯಂತ ನೋವು ತರುವ ಘಟನೆಯಯಾಗಿದೆಯಂತೆ. ಯಾಕೆಂದರೆ ನೀರಿನಲ್ಲಿ ಮುಳುಗಿದಾಗ ಉಸಿರಾಟ ನಡೆಸಲು ಆಗುವುದಿಲ್ಲ. ನೀರಿನೊಳಗೆ ಹೊಟ್ಟೆಯೊಳಗೆ ನೀರು ಹೋಗಿ ಉಸಿರಾಟವೇ ನಿಲ್ಲುತ್ತದೆ. ಶ್ವಾಸಕೋಶದಲ್ಲಿಯೂ ನೋವು ಉಂಟಾಗುತ್ತದೆ. ನೀರಿನಲ್ಲಿ ಮುಳುಗಿದಾಗ ಒಂದು ಬಾರಿ ಬದುಕಿದರೆ ಸಾಕು ಎನ್ನುವ ಚೀರಾಟ, ಅರೆಚಾಟವನ್ನು ಮುಳುಗಿದವರು ಮಾಡುತ್ತಾರೆ. ಉಸಿರು ನಿಂತು ದೇಹ ನೀರಿನೊಳಗೆ ಹೋಗುವುದು ಎಲ್ಲವೂ ಸ್ವಯಂ ಆಗಿ ನೋವು ತರುತ್ತದೆ. ಹೀಗಾಗಿ ನೀರಿನಲ್ಲಿ ಮುಳುಗಿ ಸಾಯುವುದು ಸೈನ್ಸ್ ಪ್ರಕಾರ ಅತ್ಯಂತ ನೋವಿನ ಮಾರ್ಗವಾಗಿದೆ.

ಲೀಥಲ್ ಇಂಜೆಕ್ಷನ್
ಸ್ವಯಂ ಸಾವು ತಂದುಕೊಳ್ಳಲು ಅನೇಕರು ಲೀಥಲ್ ಇಂಜೆಕ್ಷನ್ ಮೊರೆ ಹೋಗುವುದುಂಟು ಸಾವು ತಂದುಕೊಡುವ ಅತ್ಯಂತ ನೋವಿನ ಮಾರ್ಗ ಇದಾಗಿದೆ. ಹೌದು, ಈ ಲೀಥಲ್ ಇಂಜೆಕ್ಷನ್ ಒಂದು ರೀತಿಯ ವಿಷಕಾರಿ ಇಂಜೆಕ್ಷನ್ ಆಗಿದೆ. ವಿಷವನ್ನು ನಮ್ಮ ದೇಹದೊಳಗೆ ಸೇರಿಸಿಕೊಳ್ಳುವುದು ಆಗಿದೆ. ಇದು ಅಂದುಕೊಂಡಂತೆ ಸರಿಯಾಗಿ ನಡೆದರೆ ಐದು ನಿಮಿಷಗಳಲ್ಲಿ ಸಾವನ್ನು ತಂದುಕೊಳ್ಳಬಹುದು. ನೋವಂತು ಇದ್ದೆ ಇರುತ್ತದೆ. ಇನ್ನು ಎಲ್ಲದರೂ ಹೆಚ್ಚು ಕಮ್ಮಿ ಆದರೆ ಅಂದರೆ ಕೆಲವೊಂದು ಬಾರಿ ಹೃದಯ ಸ್ತಂಭನ, ಪಾರ್ಶ್ವವಾಯು ಸಂಭವಿಸಬಹುದು. ಅನೇಕ ಪರಿಣಿತರು ಹೇಳುವ ಪ್ರಕಾರ ಲೀಥಲ್ ಇಂಜೆಕ್ಷನ್ ನ ತೀವ್ರ ತರದ ನೋವು ಸಾಯುವ ಸಂದರ್ಭದಲ್ಲಿ ಉಂಟು ಮಾಡುತ್ತದಂತೆ.

ವಿದ್ಯುತ್ ಪ್ರವಾಹದಿಂದ ಸಾವು!
ಈ ಸಾವು ಕೂಡ ಯಾರಿಗೂ ಬರಬಾರದು ಯಾಕೆಂದರೆ ಇದರ ನೋವು ತೀವ್ರ ವಿಪರೀತವಾಗಿರುತ್ತದೆ. ಸಣ್ಣದಾಗಿ ಕರೆಂಟ್ ಶಾಕ್ ಹೊಡೆದಾಗಲೇ ದೇಹ ಪೂರ್ತಿ ಜುಮ್ ಅನ್ನುವ ಅನುಭವ ಉಂಟಾಗುತ್ತದೆ. ಅದರಲ್ಲೂ ಒಂದು ದಿನ ಈ ನೋವು ಹಾಗೇ ಇರುತ್ತದೆ. ಇನ್ನು ಕರೆಂಟ್ ಹೊಡೆದು ಸಾಯೋದು ಅಂದರೆ ಹೋಹಿಸಲು ಸಾಧ್ಯವಿಲ್ಲ. ಹೌದು, ವಿಪರೀತ ಕರೆಂಟ್ ದೇಹದೊಳಗೆ ಪಾಸ್ ಆದರೆ ನಮ್ಮ ಮೂಳೆಗಳು ತುಂಡಾದ ಅನುಭವ ಆಗುತ್ತದೆ. ರಕ್ತ ಖಾಲಿಯಾದಂತೆ ಭಾಸವಾಗುತ್ತದೆ. ಚರ್ಮಗಳು ಸುಡುತ್ತದೆ. ದೇಹವೇ ಒಂದು ರೀತಿ ಬದಲಾವಣೆ ಆಗುತ್ತದೆ. ಹೀಗಾಗಿ ಇದರ ನೋವನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಹೀಗಾಗಿ ವಿದ್ಯುತ್ ಪ್ರವಾಹಿಸಿ ಸಾಯುವುದು ಎಂದರೆ ಅತ್ಯಂತ ನೋವಿನ ಮಾರ್ಗವಾಗಿದೆ.

ಬೆಂಕಿ ತಗುಲಿ ಸಾಯುವುದು!
ಬೆಂಕಿ ತಗುಲಿ ಸಾಯುವುದು ಅಂದರೆ ಮತ್ತೊಂದು ರೀತಿಯ ಅತ್ಯಂತ ತೀವ್ರ ನೋವಿನ ಮೂಲಕ ಸಾಯುವುದು ಎನ್ನುವುದಾಗಿದೆ. ನಮ್ಮ ದೇಹದ ಸಣ್ಣ ಭಾಗ ಸುಟ್ಟರು ಆ ನೋವನ್ನು ಅರಗಿಸಿಕೊಳ್ಳಲು ನಮಗೆ ಆಗುವುದಿಲ್ಲ. ಅಷ್ಟು ತೀವ್ರ ತರದ ನೋವು ಇರುತ್ತದೆ. ರಾತ್ರಿ ಇಡಿ ಉರಿ ಇರುತ್ತದೆ. ಒಂದು ಬಾರಿ ಯೋಚಿಸಿ ನೋಡಿ ಸಂಪೂರ್ಣವಾಗಿ ನಮ್ಮ ದೇಹ ಸುಟ್ಟು ಸಾವನಪ್ಪಿದರೆ ಹೇಗೆ ಆಗುತ್ತದೆ ಎನ್ನುವುದನ್ನು. ಹೌದು, ನಾವು ವಿಡಿಯೋಗಳಲ್ಲಿ ಗಮನಿಸಿರಬಹುದು. ಬೆಂಕಿ ಬಿದ್ದಾಗ ಆ ಮನುಷ್ಯ ಎಷ್ಟು ನರಳಾಡುತ್ತಾನೆ. ಎಷ್ಟು ವ್ಯಥೆ ಪಟ್ಟುಕೊಳ್ಳುತ್ತಾನೆ ಎನ್ನುವುದನ್ನು. ಧಕ್ಕೆ ಬೆಂಕಿ ಬಿದ್ದಾಗ ದೇಹ ಸಂಪೂರ್ಣವಾಗಿ ಸುಡುತ್ತದೆ. ಕಣ್ಣು, ಮುಖ ಸುಡುತ್ತದೆ. ದೇಹದ ಒಳಗಿನ ಭಾಗಗಳು ಸುಟ್ಟು ಕರಕಲಾಗುತ್ತದೆ. ಉಸಿರೇ ನಿಂತು ಹೋಗುತ್ತದೆ.ಹೀಗಾಗಿ ಈ ಸಾವು ಕೂಡ ಅತ್ಯಂತ ತೀವ್ರ ತರದಲ್ಲಿ ನೋವು ಉಂಟು ಮಾಡುವ ಮಾರ್ಗವಾಗಿದೆ.

ಕ್ಯಾನ್ಸರ್ ಬಂದು ಸಾವು!
ಕ್ಯಾನ್ಸರ್ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದರೂ ಕೂಡ ಇದೊಂದು ಅತ್ಯಂತ ನೋವಿನ ಸಾವಿನ ಮಾರ್ಗವಾಗಿದೆ. ಯಾಕೆಂದರೆ ಇದನ್ನು ಅನುಭವಿಸಿದವರಿಗೆ ಗೊತ್ತು ಇದರ ನೋವು ಎಷ್ಟಿದೆ ಎಂದು. ಯಾಕೆಂದರೆ ಕ್ಯಾನ್ಸರ್ ಯಾವ್ ಸ್ಟೇಜ್ ನಲ್ಲಿದೆ ಎನ್ನುವುದನ್ನು ಕಂಡು ಹುಡುಕಿದ ಬಳಿಕ ಕಿಮೋಥೆರಪಿಯಂತಹ ಚಿಕಿತ್ಸೆ ಆರಂಭವಾಗುತ್ತದೆ. ಇದರ ನೋವೇ ಮನುಷ್ಯನನ್ನು ಸಾಯುವಂತೆ ಮಾಡುತ್ತದೆ ಎಂದು ಹೇಳಿದರು ತಪ್ಪಾಗಲ್ಲ. ಹೌದು, ಥೆರಾಪಿ, ಸರ್ಜರಿಗಳಿಂದ ಸ್ಪೈನಲ್ ಕೋರ್ಡ್, ನರಗಳು, ಮೂಳೆಗಳ ಮೇಲೆ ತೀವ್ರ ತರದ ಪರಿಣಾಮ ಉಂಟುಮಾಡುತ್ತದೆ. ಈ ನೋವುಗಳನ್ನು ಖಂಡಿತಾ ಯಾವ ಮನುಷ್ಯನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಕ್ಯಾನ್ಸರ್ ಅನ್ನುವ ಮಾರಕ ರೋಗದ ಸಾವು ಹೇಳಿ ಮುಗಿಯದ ನೋವಾಗಿದೆ.

ಹೃದಯಾಘಾತ!
ಹೃದಯಾಘಾತ ಅತ್ಯುತ್ತಮ ಸಾವು ಎಂದು ಅನೇಕರು ಹೇಳುತ್ತಾರೆ. ಆದರೆ ಇದು ಕೂಡ ಸಹಜ ಸಾವು ಅಲ್ಲ. ಇದೀಗ ಅನೇಕ ಯುವಕರಿಗೂ ಹೃದಯಾಘಾತದಿಂದ ಸಾವು ಉಂಟಾಗುತ್ತಿದೆ. ಅದೇನೆ ಇದ್ದರೂ ಅನೇಕರಿಗೆ ಹೃದಯಾಘಾತದಿಂದ ತೀವ್ರ ತರದ ನೋವು ಸಂಭವಿಸದೆ ಸಾವನಪ್ಪಿರಬಹುದು. ಆದರೆ ಅನೇಕರಿಗೆ ತೀವ್ರ ತರಹದ ನೋವು ಉಂಟುಮಾಡುತ್ತದೆ. ಎದೆಯಲ್ಲಿ ಎಷ್ಟು ನೋವು ಉಂಟು ಮಾಡುತ್ತದೆ ಎಂದರೆ ಹೃದಯ ಹೊಡೆದೇ ಹೋಯ್ತು ಅನ್ನುವಷ್ಟರ ಮಟ್ಟಿಗೆ ನೋವು ಉಂಟುಮಾಡುತ್ತದೆ. ಅಲ್ಲದೇ ಕಣ್ಣುಗಳು ಹೊರಗೆ ಬೀಳುತ್ತಿರುವ ಅನುಭವ ಕೂಡ ಆಗುತ್ತದೆ. ಈ ಸಾವಿನ ನೋವು ಕೂಡ ಅರಗಿಸಿಕೊಳ್ಳಲು ಸಾಧ್ಯವಿಲ್ಲ.

ಅನಾರೋಗ್ಯದ ಸಾವು!
ಎಲ್ಲಾ ಅನಾರೋಗ್ಯಗಳ ಸಾವು ನಿಜಕ್ಕೂ ತೀವ್ರ ತರದ ನೋವು ಉಂಟು ಮಾಡುತ್ತದೆ. ಜ್ವರದಿಂದ ಸಾವು ಸಂಭವಿಸಿದರೆ, ಬೇರೆ ಯಾವುದಾದರೂ ರೋಗದಿಂದ ಸಾವು ಸಂಭವಿಸಿದರೆ ಆ ನೋವುಗಳು, ಅದಕ್ಕೆ ನೀಡುವ ಚಿಕಿತ್ಸೆಯಿಂದ ಉಂಟಾಗುವ ನೋವುಗಳು ನಿಜಕ್ಕೂ ಯಾವ ನೋವಿಗೂ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ಅನಾರೋಗ್ಯದಿಂದ ಉಂಟಾಗುವ ಸಾವುಗಳು ಕೂಡ ಭಯಾನಕ ನೋವು ಉಂಟು ಮಾಡುತ್ತದೆ.

ಅಪಘಾತದಿಂದ ಸಾವು!
ದೇಹಕ್ಕೆ ಯಾವುದೇ ರೀತಿಯ ಪೆಟ್ಟು ಉಂಟಾದರು ಅದನ್ನು ನಮಗೆ ತಡೆಯಲು ಆಗುವುದಿಲ್ಲ ಯಾಕೆಂದರೆ ಅದರ ನೋವು ಅಷ್ಟಿರುತ್ತದೆ. ಹಾಗೇ ಅಪಘಾತವಾಗಿ ಆ ನೋವಿನಿಂದ ಸಾವನಪ್ಪುವುದು ಅಥವಾ ಉಸಿರು ನಿಲ್ಲುವುದು ಅಂದರೆ ಅದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಈ ಸಾವು ನಮ್ಮ ದೇಹವನ್ನೇ ಜರ್ಜರಿತ ಮಾಡುತ್ತದೆ. ಹೀಗಾಗಿ ಈ ನೋವು ಕೂಡ ಸೈನ್ಸ್ ಪ್ರಕಾರ ಸಾವಿನ ಅತ್ಯಂತ ನೋವಿನ ಮಾರ್ಗವಾಗಿದೆ.



Click it and Unblock the Notifications











