For Quick Alerts
ALLOW NOTIFICATIONS  
For Daily Alerts

ದೇಶವನ್ನು ಕೊರೊನಾದಿಂದ ರಕ್ಷಿಸಲು ಮೋದಿಯ ಈ ಸಪ್ತ ಸಲಹೆಗಳನ್ನು ಪಾಲಿಸಿ

|

ದೇಶಾದ್ಯಂತ ಕೊರೊನಾ ಮಹಾಮಾರಿ ಆತಂಕದ ವಾತಾವರಣ ಸೃಷ್ಟಿಸಿದೆ. ಕೊರೊನಾ ಬಾಧಿತರ ಸಂಖ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದೇಶಾದ್ಯಂತ ಲಾಕ್‌ಡೌನ್‌ ಮಾಡಿದ್ದಾರೆ. ಈ ಹಿಂದೆ ಏಪ್ರಿಲ್‌ 14ರವರೆಗೆ ಮಾಡಲಾಗಿದ್ದ ಲಾಕ್‌ಡೌನ್‌ ಅನ್ನು ಪ್ರಧಾನಿ ಮೋದಿ ಅವರು ಇಂದು ಮೇ 3ರವರೆಗೆ ವಿಸ್ತರಣೆ ಮಾಡಿ ಆದೇಶಿಸಿದ್ದಾರೆ.

ಅಲ್ಲದೇ ತಮ್ಮ ಭಾಷಣದಲ್ಲಿ ಜನಜೀವನದ ಆರೋಗ್ಯ ಮತ್ತು ಜೀವನಶೈಲಿಗೆ ಸಂಬಂಧಪಟ್ಟಂತೆ ಪ್ರಮುಖವಾಗಿ ಸಪ್ತ ಸಲಹೆ-ಸೂಚನೆಗಳನ್ನು ನೀಡಿದ್ದು, ಇದನ್ನು ದೇಶದ ಪ್ರತಿ ಪ್ರಜೆಯೂ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ. ಏನಿದು ಸಪ್ತ ಸೂತ್ರಗಳು? ಮುಂದೆ ತಿಳಿಯೋಣ.

1. ವಯೋವೃದ್ಧರ ಬಗ್ಗೆ ಕಾಳಜಿ ಇರಲಿ

1. ವಯೋವೃದ್ಧರ ಬಗ್ಗೆ ಕಾಳಜಿ ಇರಲಿ

ಮನೆಯಲ್ಲಿರುವ ವಯೋವೃದ್ಧರ ಬಗ್ಗೆ ನಿಗಾ ಇರಿಸಿ. ಅವರನ್ನು ಹೆಚ್ಚು ಕಾಳಜಿ ಇಂದ ನೋಡಿಕೊಳ್ಳಿ. ಈಗಾಗಲೇ ಮನೆಯಲ್ಲಿ ಅನಾರೋಗ್ಯ ಪೀಡಿತರಿದ್ದರೆ ಅವರ ಬಗ್ಗೆ ಇನ್ನಷ್ಟು ಆರೈಕೆ ಮಾಡಿ. ಯಾವುದೇ ಕಾರಣಕ್ಕೂ ಅವರನ್ನು ಮನೆಯಿಂದ ಹೊರಗೆ ಕಳುಹಿಸುವ ಪ್ರಯತ್ನ ಮಾಡದಿರಿ.

2. ಲಕ್ಷಣ ರೇಖೆ ದಾಟಬೇಡಿ

2. ಲಕ್ಷಣ ರೇಖೆ ದಾಟಬೇಡಿ

ಯಾವುದೇ ಕಾರಣಕ್ಕೂ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರದ ಲಕ್ಷ್ಮಣ ರೇಖೆ ದಾಟಬೇಡಿ. ಇಂತಹ ಸಂದರ್ಭದಲ್ಲಿ ಮನೆಗಿಂತ ಸುರಕ್ಷಿತವಾದ ಸ್ಥಳ ಬೇರೊಂದಿಲ್ಲವಾದ್ದರಿಂದ ಮೋದಿ ಅವರು ಮನೆಯಲ್ಲೇ ಇರಲು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಹಾಗೂ ಮನೆಯ ದಿನಸಿ, ತರಕಾರಿ ಖರೀದಿಸುವ ಸಮಯದಲ್ಲಿ ಕನಿಷ್ಠ ಅಂತರ ಕಾಯ್ದುಕೊಳ್ಳಿ. ಆದಷ್ಟು ಮಾಸ್ಕ್‌ಗಳನ್ನು ಮನೆಯಲ್ಲೆ ತಯಾರಿಸಿ, ಮನೆಯಲ್ಲೇ ತಯಾರಿಸಿದ ಮಾಸ್ಕ್ಗಳನ್ನು ಧರಿಸಿ.

3. ಆಯುಷ್ ಸಲಹೆ ಪಾಲಿಸಿ

3. ಆಯುಷ್ ಸಲಹೆ ಪಾಲಿಸಿ

ಇಂಥಹ ಸಂದರ್ಭದಲ್ಲಿ ಆರೋಗ್ಯವಂತರು ಸಹ ಸಾಕಷ್ಟು ಎಚ್ಚರದಿಂದಿರಬೇಕು. ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮೋದಿ ಸಲಹೆ ನೀಡಿದ್ದಾರೆ. ಇದಕ್ಕಾಗಿ ಆಯುಷ್ ಸಚಿವಾಲಯ ಆಗಾಗ್ಗೆ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸುವಂತೆ ಕರೆ ನೀಡಿದ್ದಾರೆ.

4. ಸೇತು ಆಪ್‌ ಬಳಸಿ

4. ಸೇತು ಆಪ್‌ ಬಳಸಿ

ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿಯೇ ಆರೋಗ್ಯ ಸೇತು ಆಪ್ ಅನ್ನು ಬಿಡುಗಡೆ ಮಾಡಾಗಿದೆ. ಇದನ್ನು ದೇಶದ ಪ್ರತಿ ಪ್ರಜೆಯೂ ಮೊಬೈಲ್‌ಗಳಲ್ಲಿ ಡೌನ್ಡೌಡ್ ಮಾಡಿಕೊಂಡು ಬಳಸಿ ಎಂದಿದ್ದಾರೆ.

5. ಸಹಾಯ ಹಸ್ತ ಚಾಚಿ

5. ಸಹಾಯ ಹಸ್ತ ಚಾಚಿ

ಲಾಕ್‌ಡೌನ್‌ ಪರಿಸ್ಥಿತಿ ದೇಶದ ಸಾಕಷ್ಟು ವರ್ಗದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಲವು ಬಡವರು ನಿರ್ಗತಿಕರಿಗೆ ಆಹಾರ, ವಸತಿ ಇಲ್ಲದಂತಾಗಿದೆ. ಉಳ್ಳವರು, ಕೈಲಾದವರು ಇಂಥವರಿಗೆ ತಮ್ಮ ಸಹಾಯ ಹಸ್ತ ಚಾಚಿ. ಊಟ, ವಸತಿ ಬಗ್ಗೆ ನಿಗಾವಹಿಸಿ, ಎಲ್ಲರೂ ನೆರವಾಗಿ.

6. ಯಾರನ್ನು ಕೆಲಸದಿಂದ ತೆಗೆಯಬೇಡಿ

6. ಯಾರನ್ನು ಕೆಲಸದಿಂದ ತೆಗೆಯಬೇಡಿ

ಕೊರೊನಾ ಮಾಹಾಮಾರಿ ತನ್ನ ಕಬಂಧಬಾಹು ಚಾಚಿ ದೇಶ-ವಿದೇಶಗಳಲ್ಲಿ ವ್ಯಾಪಿಸಿರುವ ಹೊತ್ತಿನಲ್ಲಿ ಎಲ್ಲಾ ಲಾಕ್‌ಡೌನ್‌ ಆಗಿ, ಬಹುತೇಕ ಸರ್ಕಾರಿ ಸೇರಿದಂತೆ ಖಾಸಗಿ ಕಂಪನಿಗಳು ಮುಚ್ಚಿದೆ. ಕೆಲವು ಕಂಪನಿಗಳು ಮಾತ್ರ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಇಂಥಾ ಹೊತ್ತಿನಲ್ಲಿ ಖಾಸಗಿ ಕಂಪನಿಗಳು ಆರ್ಥಿಕತೆಯ ಅಥವಾ ಇನ್ನಾವುದೇ ನೆಪವೊಡ್ಡಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಡಿ ಎಂದು ಮೋದಿ ಸೂಚನೆ ನೀಡಿರುವುದು ಬಹುತೇಕ ಉದ್ಯೋಗಿಗಳಿಗೆ ನೆಮ್ಮದಿ ನೀಡಿದೆ.

7. ನಿಮ್ಮ ಬೆಂಬಲ ಬಹಳ ಮುಖ್ಯ

7. ನಿಮ್ಮ ಬೆಂಬಲ ಬಹಳ ಮುಖ್ಯ

ಒಟ್ಟಾರೆ ಲಾಕ್‌ಡೌನ್‌ ಪ್ರತಿ ಹಂತದಲ್ಲೂ ನಿಮ್ಮ ಬೆಂಬಲ ನಮಗೆ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಕೃಷಿಕರ ಬೆಂಬಲಕ್ಕೆ ನೀವು ಈ ಸಮಯದಲ್ಲಿ ನಿಲ್ಲಬೇಕಿದೆ. ಕೊರೊನಾ ವಾರಿಯರ್ಸ್‌ ಗಳಂತೆ 24/7 ಕಲಸ ಮಾಡುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮುಂತಾದವರಿಗೆ ಗೌರವಿಸಿ, ಅವರ ಕೆಲಸಕ್ಕೆ ಸಮಸ್ಯೆ ತಂದೊಡ್ಡದಂತೆ ಸಹಕರಿಸಿ.

ದೇಶದ ಪ್ರತಿಯೊಬ್ಬ ಪ್ರಜೆಯೂ ಮೇ3 ರವರೆಗೂ ಈ ಸಪ್ತ ನಿಯಮಗಳನ್ನು ಪಾಲಿಸಿ, ರಾಷ್ಟ್ರವನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸಿ, ನೀವು ಜಾಗೃತವಾಗಿರಿ.

English summary

PM Modi: 7 Sutras to Be Followed by Everyone to Fight COVID-19

Here we are discussing about How to protect india from corona. here are the 7 tips from modi. Read more.
X