Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಕೋವಿಡ್ 19 ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಈ ಪ್ರಶ್ನೆಗಳಿವೆಯೇ?
ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಜನವರಿ 16ರಿಂದ ನೀಡಲು ಪ್ರಾರಂಭಿಸಿದೆ. ಮೇ. 1ರವರೆಗೆ 1,26, 328, 970 ಜನರು ಮೊದಲ ಡೋಸ್ ಪಡೆದಿದ್ದಾರೆ. 21, 390, 165 ಜನರು ಎರಡು ಡೋಸ್ ಪಡೆದುಕೊಂಡಿದ್ದಾರೆ. ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಯಿತು, ನಂತರ 60 ವರ್ಷ ಮೇಲ್ಪಟ್ಟವರಿಗೆ, ಅದಾದ ಬಳಿಕ 3ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲಾಗುತ್ತಿದೆ.
ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬಂದಾಗ ಇದರ ಕುರಿತು ಸಾಕಷ್ಟು ಪ್ರಶ್ನೆಗಳಿದ್ದೆವು, ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬಂದಾಗಲೂ ಜನರಲ್ಲಿ ನಾನಾ ಬಗೆಯ ಪ್ರಶ್ನೆಗಳಿವೆ.
ಜನರಿಗೆ ತಮ್ಮ ಮನಸ್ಸಿನಲ್ಲಿರುವ ಸಂಶಯಕ್ಕೆ ಉತ್ತರ ಸಿಕ್ಕರೆ ಅವರು ಈ ಲಿಸಕೆ ಪಡೆಯುವುದರಲ್ಲಿ ಮತ್ತಷ್ಟು ಮುಂದೆ ಬರುತ್ತಾರೆ. ಇಲ್ಲಿ ಕೊರೊನಾ ಲಸಿಕೆ ಕುರಿತು ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ನೋಡಿ:

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು
ವ್ಯಾಕ್ಸಿನ್‌ನ ಪ್ರಮುಖ ಕಾರ್ಯವೇನು?
ವ್ಯಾಕ್ಸಿನ್ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟುತ್ತೆ ಹಾಗೂ ಬೇಗ ಚೇತರಿಸಿಕೊಳ್ಳುವಂತೆ ಮಾಡುವುದು
ನಾನು ಲಸಿಕೆ ಧರಿಸಿದರೆ ಕೋವಿಡ್ 19, ಬರುವುದೇ ಇಲ್ಲವೇ?
ಇಲ್ಲ
ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲಬಹುದು, ಆದರೆ ಲಸಿಕೆ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತೆ ಹಾಗೂ ಅಪಾಯದ ಮಟ್ಟವನ್ನು ತಗ್ಗಿಸುತ್ತೆ
ಬೇರೆ-ಬೇರೆ ಲಸಿಕೆ ಪಡೆಯಬಹುದೇ?
ಇಲ್ಲ
ಮೊದಲಿಗೆ ನೀವು ಯಾವ ಲಸಿಕೆ ಪಡೆಯುತ್ತೀರೋ ಅದನ್ನೇ ಸೆಕೆಂಡ್ ಡೋಸ್ ಆಗಿ ತೆಗೆದುಕೊಳ್ಳಬೇಕು.

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು
ಕೋವಿಡ್ 19 ಪಾಸಿಟಿವ್ ಇದ್ದರೆ ಲಸಿಕೆ ಪಡೆಯಬಹುದೇ?
ಇಲ್ಲ
ಕೊರೊನಾದಿಂದ ಚೇತರಿಸಿಕೊಂಡ ಮೇಲೆ 4-8 ವಾರಗಳ ಬಳಿಕ ತೆಗೆದುಕೊಳ್ಳಬೇಕು.
ಯಾರು ಲಸಿಕೆ ಪಡೆಯಬಾರದು?
ಯಾರಿಗೆ ಅಲರ್ಜಿ ಸಮಸ್ಯೆಯಿದೆಯೋ ಅಥವಾ ಮೊದಲ ಡೋಸ್ ಪಡೆದ ಬಳಿಕ ಅಲರ್ಜಿ ಉಂಟಾಗಿದೆಯೋ ಅವರು ತೆಗೆದುಕೊಳ್ಳುವಂತಿಲ್ಲ.

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು
ಲಸಿಕೆ ಪಡೆದ ಬಳಿಕ RTPCR/ ಸ್ವ್ಯಾಬ್ ಪರೀಕ್ಷೆಯಲ್ಲಿ ಪಾಸಿಟಿವ್ ಬರುವುದೇ?
ಇಲ್ಲ
ಲಸಿಕೆ ಪಡೆದ ಬಳಿಕ RTPCRನಲ್ಲಿ ವ್ಯತ್ಯಸ್ಥ ಫಲಿತಾಂಶವೇನು ಕಾಣಸುವುದಿಲ್ಲ, ಒಂದು ವೇಳೆ ಪಾಸಿಟಿವ್ ಬಂದಿದ್ದರೆ ಕೊರೊನಾ ಸೋಂಕು ಇರುತ್ತೆ.
ಗರ್ಭಿಣಿ ಅಥವಾ ಎದೆ ಹಾಲುಣಿಸುವ ಮಹಿಳೆ ಲಸಿಕೆ ಪಡೆಯಬಹುದೇ?
ಇಲ್ಲ

ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು
ಮುಟ್ಟಿನ ಸಮಯದಲ್ಲಿ ಲಸಿಕೆ ಪಡೆಯಬಹುದೇ?
ಹೌದು
ಯಾವ ಲಸಿಕೆ ಪಡೆಯುವುದು ಒಳ್ಳೆಯದು?
ಭಾರತದಲ್ಲಿ ಕೊವಾಕ್ಸಿನ್ , ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು ನಿಮಗೆ ಲಭ್ಯವಾಗಿರುವ ಲಸಿಕೆ ಪಡೆಯಬಹುದು.



Click it and Unblock the Notifications
