Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಆರೋಗ್ಯಕರವಾಗಿ ಸಣ್ಣಗಾಗಲು ಈ ಸಲಹೆಗಳನ್ನು ಪಾಲಿಸಿ
ದಪ್ಪ ಇರುವ ಯಾರಿಗೆ ತಾನೆ ತೂಕ ಕಳೆದುಕೊಳ್ಳಲು ಇಷ್ಟವಾಗುವುದಿಲ್ಲ. ಒಬೆಸಿಟಿ ಇರುವವರು ಡಯಟ್, ಜಿಮ್‌ಗೆ ಹೋಗುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ದೇಹದಲ್ಲಿ ಅಂದುಕೊಂಡ ಬದಲಾವಣೆ ಆಗದೇ ಇರಬಹುದು. ಆದರೂ ಅದು ಶಾಶ್ವತವಾಗಿರುವದಿಲ್ಲ. ಹಲವರಿಗೆ ಕೆಲವೊಮ್ಮೆ ದೇಹದ ತೂಕ ಇಳಿಸಿಕೊಳ್ಳುವುದಾಗಲಿ, ಸದೃಢ ಮೈಕಟ್ಟು ಬೆಳೆಸಿಕೊಳ್ಳೋದು ಕಷ್ಟ ಅನ್ನಿಸಿಬಿಡುತ್ತದೆ. ಆದರೆ ಅಸಾಧ್ಯವಾದುದು ಯಾವುದೂ ಇಲ್ಲ ಅಲ್ಲವೇ.

ನೀವೂ ಆರೋಗ್ಯಕರ, ಸದೃಢ ಮೈಕಟ್ಟನ್ನು ಬೆಳೆಸಿಕೊಳ್ಳಲು ಕೆಲವು ಸಿಂಪಲ್ ಹಾಗೂ ಬಹಳ ಪರಿಣಾಮಕಾರಿ ಸಲಹೆಗಳಿವೆ, ನೀವೂ ಸಲಹೆ ಪಾಲಿಸಿದ್ದೇ ಆದರೆ ಖಂಡಿತವಾಗಿಯೂ ಆರೋಗ್ಯಕರವಾಗಿ ನಿಮ್ಮ ತೂಕ ಇಳಿಸಿಕೊಳ್ಳಬಹುದು:

ಮೊದಲು ಚಿಕ್ಕ ಚಿಕ್ಕ ಗುರಿಗಳತ್ತ ಗಮನ ಹರಿಸಿ
ಪ್ರಾರಂಭದಲ್ಲೇ ದೊಡ್ಡ ಗುರಿಯನ್ನು ಸಾಧಿಸಲು ಹೊರಡುವುದು ಕಷ್ಟವಾಗಬಹುದು. ಅದಕ್ಕಾಗಿ ದೊಡ್ಡ ಗುರಿಯನ್ನೇ ಸಣ್ಣ ಸಣ್ಣ ನಿರ್ದಿಷ್ಟ ಮತ್ತು ವಾಸ್ತವಿಕ ಗುರಿಗಳಾಗಿ ವಿಂಗಡಿಸಿ. ಉದಾಹರಣೆಗೆ ಒಂದು ತಿಂಗಳಲ್ಲಿ ಇಂತಿಷ್ಟು ತೂಕವನ್ನು ಕಳೆದುಕೊಳ್ಳಬೇಕೆಂದು ನಿರ್ಧರಿಸಿದಲ್ಲಿ. ಒಂದು ವಾರದಲ್ಲಿ ಇಷ್ಟು ತೂಕ ಕಳೆದುಕೊಳ್ಳಬೇಕು ಎನ್ನುವ ಗುರಿ ಹೊಂದಿಸಿಕೊಳ್ಳಿ. ಇದೇ ರೀತಿಯಾಗಿ ಪ್ರತಿ ವಾರ ಅಥವಾ ಪ್ರತಿ ತಿಂಗಳು ಸಮಂಜಸವಾದ ಗುರಿ ರಚಿಸುವ ಮೂಲಕ ವರ್ಕೌಟ್ ಅಥವಾ ಡಯಟ್ ಪ್ರಾರಂಭಿಸಿ.

ಫೋನ್ ಬದಿಗಿಟ್ಟು ಆಹಾರ ಸೇವಿಸಿ
ಹೆಚ್ಚು ಸಮಯ ಪೋನ್ ಸ್ಕ್ರಾಲ್ ಮಾಡುತ್ತಲೇ ಸಮಯ ಕಳೆಯುವ ನಿಮ್ಮ ದೇಹ ಕಣ್ಣಿಗೆ ಮತ್ತು ಮನಸ್ಸಿಗೆ ವಿಶ್ರಾಂತಿ ಬಯಸುತ್ತದೆ. ಅದರಲ್ಲೂ ಟಿವಿ ನೋಡುತ್ತಾ, ಫೋನ್ ನೋಡುತ್ತಾ ಅಥವಾ ಕೆಲಸ ಮಾಡುತ್ತಾ ತಿನ್ನುತ್ತಿದ್ದರೆ, ಸೇವಿಸುವ ಆಹಾರದ ಪ್ರಮಾಣವೂ ನಿಮಗರಿವಿಲ್ಲದೆಯೇ ಹೆಚ್ಚಾಗಿರುತ್ತದೆ. ಏಕಾಂಗಿಯಾಗಿ ತಿನ್ನುವುದಕ್ಕಿಂತ ಹೆಚ್ಚಾಗಿ ಇತರರೊಂದಿಗೆ ಆಹಾರವನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತದೆ ಈ ಅಧ್ಯಯನ. ಅಲ್ಲದೇ ಇತರರೊಂದಿಗೆ ಒಟ್ಟಿಗೆ ಆಹಾರ ಸೇವಿಸುವ ವ್ಯಕ್ತಿಗಳಿಗಿಂತ ಒಂಟಿಯಾಗಿರುವ ಜನರು ದಿನಕ್ಕೆ ಕಡಿಮೆ ಪ್ರಮಾಣದ ತರಕಾರಿಗಳನ್ನು ತಿನ್ನುತ್ತಾರೆ.

ಪ್ರತಿಬಾರಿ ನಿಮ್ಮ ಫೋಟೋ ತೆಗೆಯಿರಿ
ಸ್ವಪ್ರೇರಣೆಯನ್ನು ತಂದುಕೊಳ್ಳಲು ಉತ್ತಮ ಮಾರ್ಗವೆಂದರೆ ಫೋಟೋ ತೆಗೆದುಕೊಳ್ಳುವುದು. ವಿಶೇಷವಾಗಿ ಆರಂಭದಲ್ಲಿ ಫೋಟೋ ತೆಗೆಯಿರಿ. ಅದಾದ ನಂತರ ವರ್ಕೌಟ್ ಅಥವಾ ಡಯಟ್ ಪ್ರಾರಂಭಿಸಿದ ನಂತರ ನಿಮ್ಮ ದೇಹದಲ್ಲಿ ಕೆಲವೊಂದು ವಾರ, ತಿಂಗಳುಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಮರುಚೈತನ್ಯ ಪಡೆದುಕೊಳ್ಳಲು ನಿಮ್ಮ ವೈಟ್ ಲಾಸ್ ಜರ್ನಿಯ ಆರಂಭದ ಫೋಟೋಗಳನ್ನು ನೋಡಿ. ಇದನ್ನು ಮುಂದುವರಿಸಲು ಪ್ರತಿ 8 ರಿಂದ 12 ವಾರಗಳಿಗೊಮ್ಮೆ ನಿಮ್ಮ ಫೋಟೋ ತೆಗೆಯಿರಿ.

ನಿಮ್ಮ ಫಿಟ್ನೆಸ್ ಗುರಿಗಳ ಬಗ್ಗೆ ಆತ್ಮೀಯರೊಂದಿಗೂ ಮಾತನಾಡಿ
ಪ್ರೀತಿಪಾತ್ರರು, ನಿಕಟ ಸ್ನೇಹಿತರು ಮತ್ತು ನಿಮ್ಮಂತೆಯೇ ಫಿಟ್ ಆಗಿರಲು ಪ್ರಯತ್ನಿಸುತ್ತಿರುವವರೊಂದಿಗೆ ನಿಮ್ಮ ಗುರಿಗಳನ್ನು ಹಂಚಿಕೊಳ್ಳುವುದು ಅದ್ಭುತ ಮಾರ್ಗವಾಗಿದೆ. ನೀವು ನಿಮ್ಮ ಡಯಟ್, ಫಿಟ್ನೆಸ್‌ನಲ್ಲಿ ಗುರಿ ಸಾಧಿಸಲು ಪ್ರೇರಣೆ ಮತ್ತು ಬೆಂಬಲ ನೀಡುತ್ತಾರೆ. ನಿಮ್ಮ ಪ್ರಗತಿಯನ್ನು ಗಮನಿಸಲು ಪ್ರಾರಂಭಿಸಿದಾಗ ಅವರ ಸಕಾರಾತ್ಮಕ ಕಾಮೆಂಟ್‌ಗಳು ನಿಮ್ಮನ್ನು ಇನ್ನಷ್ಟು ಮುಂದುವರಿಸಲು ಪ್ರೋತ್ಸಾಹಿಸುತ್ತವೆ. ನಿಮ್ಮನ್ನು ಹುರಿದುಂಬಿಸಲು ನಿಮ್ಮ ಸ್ನೇಹಿತ ಕೂಡ ನಿಮ್ಮೊಂದಿಗೆ ಬದಲಾವಣೆಯಲ್ಲಿ ಸೇರಿಕೊಳ್ಳಬಹುದು.

ನೀವು ಸೇವಿಸುವ ಆಹಾರದ ಮೇಲೆ ಗಮನ ಹರಿಸಿ
ತೂಕ ಕಳೆದುಕೊಳ್ಳುವ ಸಮಯದಲ್ಲಿ ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಅಳೆದುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ನಿಮ್ಮ ಆಹಾರ ಸೇವನೆಯ ಪ್ರಮಾಣದ ಭಾಗ ಅಳೆಯಿರಿ. ಹೆಚ್ಚೂ ತಿನ್ನಬಾರದು, ಕಡಿಮೆಯೂ ತಿನ್ನಬಾರದು ಎನ್ನುವುದನ್ನು ನೆನಪಿನಲ್ಲಿಡಿ. ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀವು ತೆಗೆದುಕೊಳ್ಳಲೇಬೇಕಾಗುತ್ತದೆ. ನೀವು ಸೇವಿಸುವ ಆಹಾರದ ಬಗ್ಗೆ ನಿಮಗೆ ಸಂಶಯಗಳಿದ್ದಲ್ಲಿ ಪೌಷ್ಟಿಕತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

ನೆನಪಿಡಿ
ಯಾವುದೇ ಆಗಲಿ ಒಂದೇ ಬಾರಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹಂತ ಹಂತವಾಗಿ ಮುಂದುವರಿಯಬೇಕೇ ಹೊರತು, ಒಮ್ಮೆಲೇ ತೂಕ ಇಳಿಸಿಕೊಂಡರೆ ಅಥವಾ ಒಂದು ವಾರದಲ್ಲಿ ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ತೂಕವನ್ನು ಕಳೆದುಕೊಂಡರೆ ಅಸ್ವಸ್ಥತೆಗೆ ಒಳಗಾಗಬಹುದು. ನಿಮ್ಮ ದೇಹದ ತೂಕ ಎಷ್ಟಿರಬೇಕೋ ಅಷ್ಟೇ ತೂಕದ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ದೇಹದ ಬಗ್ಗೆ ಇರುವ ಕೀಳರಿಮೆ ಬಿಟ್ಟು ಬಿಡಿ, ನನ್ನಿಂದಾಗದು ಎನ್ನುವ ಮಾತನ್ನು ಮರೆತು, ಉತ್ತಮ ಆರೋಗ್ಯಕರ ಜೀವನಶೈಲಿಗಾಗಿ ಡಯಟ್, ಫಿಟ್‌ನೆಸ್ ಕಾಪಾಡಿಕೊಳ್ಳಿ.



Click it and Unblock the Notifications