Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಪತಾಂಜಲಿಯ 'ಕೊರೊನಿಲ್' ಔಷಧ ಬಗ್ಗೆ ತಿಳಿದಿರಬೇಕಾದ ಅಂಶಗಳಿವು
ಒಂದು ಕಡೆ ಭಾರತದಲ್ಲಿ ಕೊರೊನಾ ಆರ್ಭಟಿಸುತ್ತಿದೆ, ಆದರೆ ಕೊರೊನಾ ನಾಶಕ್ಕೆ ಔಷಧಿ ಸಿದ್ಧವಾಗಿದೆ ಎಂದು ಗ್ಲೆನ್ಮಾರ್ಕ್ ಕಂಪನಿ ಹೇಳಿದ ಮೇಲೆ ಜನರಲ್ಲಿ ಸ್ವಲ್ಪ ಭರವಸೆ ಮೂಡಿದೆ. ಇದರ ಜೊತೆಗೆಯೇ ಜೂನ್ 23ಕ್ಕೆ ಪತಾಂಜಲಿ ಕೂಡ ಕೊರೊನಾಗೆ ಔಷಧಿ ನಮ್ಮಲ್ಲಿದೆ ಎಂದು ಅಧಿಕೃತವಾಗಿದೆ ಘೋಷಿಸಿದೆ.

ಯೋಗ ಗುರುವಾಗಿದ್ದ ಬಾಬಾ ರಾಮ್‌ದೇವ್ ಈಗಾಗಲೇ ಪತಾಂಜಲಿ ಬ್ರ್ಯಾಂಡ್‌ಗಳನ್ನು ಉತ್ಪಾದಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಈಗ ಕೋವಿಡ್ 19 ತಡೆಗಟ್ಟಲು ಕೊರೊನಿಲ್ ಔಷಧಿ ತಂದಿರುವುದಾಗಿ ಹೇಳಿದೆ. ಈ ಕೊರೊನಿಲ್ ಮಾತ್ರೆ ಕೊರೊನಾ ತಡೆಗಟ್ಟಲು ಪರಿಣಾಮಕಾರಿಯೇ, ಆಯುಷ್ ಇಲಾಖೆ ಈ ಕುರಿತು ಏನು ಹೇಳಿದೆ ಎಂದು ನೋಡೋಣ ಬನ್ನಿ:

ಕೊರೊನಿಲ್ ಔಷಧಿ
ಕೊರೊನಿಲ್ ಔಷಧಿ ಬಿಡುಗಡೆ ಮಾಡಿದ ಬಾಬಾ ರಾಮ್‌ದೇವ್ ಇದು ಈಗಾಗಲೇ ಮೊದಲನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ ಎಂದು ಹೇಳಿದೆ. ಈ ಔಷಧ ಸೇವಿಸಿ ಈಗಾಗಲೇ ನೂರಕ್ಕೂ ಅಧಿಕ ಕೊರೊನಾ ರೋಗಿಗಳು ಗುಣಮುಖರಾಗದ್ದಾರೆ ಎಂದು ಹೇಳಿದ್ದಾರೆ. ಈ ಔಷಧ ಕುರಿತ ಸಂಶೋಧನೆ 2019 ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗಿತ್ತು ಎಂದು ಹೇಳಿದ್ದಾರೆ.

ಕೊರೊನಿಲ್ ಹೇಗೆ ತೆಗೆದುಕೊಳ್ಳಬೇಕು
ಕೊರೊನಿಲ್ ಔಷಧಿಯನ್ನು ಕೋವಿಡ್ 19 ರೋಗಿಯು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಳ್ಳಬೇಕು. ಈ ಔಷಧ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಕೊರೊನಾವೈರಸ್ ನಾಶವಾಗಿ ರೋಗಿಯು ಗುಣಮುಖವಾಗುವುದು ಎಂದು ಪತಾಂಜಲಿ ಕಂಪನಿ ಹೇಳಿದೆ.

ಕೊರೊನಿಲ್‌ನಲ್ಲಿರುವ ಅಂಶಗಳು
ಆಯುರ್ವೇದ ಔಷಧವಾಗಿರುವ ಕೊರೊನಿಲ್ ಅನ್ನು ಅಶ್ವಗಂಧ, ಅಮೃತಬಳ್ಳಿ, ತುಳಸಿ ಮುಂತಾದ ಗಿಡಮೂಲಿಕೆಗಳನ್ನು ಹಾಕಿ ತಯಾರಿಸಲಾಗಿದೆ.

ಈ ಔಷಧ ಸಂಶೋಧನೆಗೆ ಒಳಪಟ್ಟಿದೆಯೇ?
ಪತಾಂಜಲಿಯಯ ಆಚಾರ್ಯ ಬಾಲಕೃಷ್ಣರವರು ಕೊರೊನಿಲ್ ಔಷಧ ಸಂಶೋಧನೆಗೆ ಒಳಪಟ್ಟಿದೆ ಎಂದು ಹೇಳಿದ್ದಾರೆ. ಕೋವಿಡ್ 19 ಕಾಯಿಲೆ ಬಂದಾಗಲೇ ವಿಜ್ಞಾನಿಗಳನ್ನು ನೇಮಿಸಿ ಸಂಶೋಧನೆ ನಡೆಸಲಾಯಿತು. ರೋಗಿಗಳಿಗೆ ಈ ಔಷಧ ನೀಡಿದಾಗ ಶೇ.100ರಷ್ಟು ಗುಣಮುಖರಾಗಿದ್ದಾರೆ. ಈ ಔಷಧ ತೆಗೆದುಕೊಂಡ ರೋಗಿಗಳು 5-14 ದಿನಗಳಲ್ಲಿ ಗುಣಮುಖರಾಗಿದ್ದಾರೆ. ಆದ್ದರಿಂದ ಈ ಔಷಧಿಗೆ ಕೋವಿಡ್-19 ರೋಗಿಗಳನ್ನು ಗುಣಪಡಿಸುವ ಸಾಮಾರ್ಥ್ಯವಿದೆ ಎಂದು ಹೇಳಿದೆ. ಇದರ ಕುರಿತ ದಾಖಲೆಗಳನ್ನು 4-5 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ಕಂಪನಿ ಹೇಳಿದೆ.

ಆಯುಷ್ ಇಲಾಖೆ ಏನು ಹೇಳಿದೆ?
ಪತಾಂಜಲಿಕೊರೊನಿಲ್ ಔಷಧ ಬಿಡುಗಡೆ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಕೊರೊನಿಲ್ ಔಷಧಿ ಕೋವಿಡ್-19 ರೋಗಿಗಳನ್ನು ಗುಣಪಡಿಸುತ್ತದೆ ಎಂದು ಪ್ರಚಾರ ಮಾಡುವಂತಿಲ್ಲ ಎಂದು ಆಯುಷ್ ಇಲಾಖೆ ಹೇಳಿದೆ. ಕೊರೊನಿಲ್ ಔಷಧ ಕುರಿತು ಹೆಚ್ಚಿನ ಮಾಹಿತಿ ನಮಗಿಲ್ಲ ಎಂದು ಹೇಳಿರುವ ಆಯುಷ್ ಈ ಔಷಧ ಪ್ರಚಾರಕ್ಕೆ ತಡೆಯೊಡ್ಡಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮತ್ತು ಪ್ರಾಣಯಾಮ
ಈ ಔಷಧ ಜೊತೆಗೆ ರೋಗಿಯು ಯೋಗ ಮತ್ತು ಪ್ರಾಣಯಾಮ ಮಾಡಿದರೆ ಬೇಗನೆ ಗುಣಮುಖರಾಗುತ್ತಾರೆ ಎಂದು ಬಾಬಾ ರಾಮ್‌ದೇವ್ ಸಲಹೆ ನೀಡಿದ್ದಾರೆ. ಜನರು ಯೋಗ ಹಾಗೂ ಪ್ರಾಣಯಾಮ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವವರಿಗೆ ಕೋವಿಡ್-19 ಬಾಧಿಸುವುದಿಲ್ಲ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿಯೇ ಕಷಾಯ ಮಾಡಿ ಕುಡಿಯುವಂತೆ ಸಲಹೆ ನೀಡಿರುವ ಬಾಬಾರಾಮ್‌ದೇವ್ ಆ ಕಷಾಯ ಹೇಗೆ ತಯಾರಿಸಬೇಕೆಂದು ಕೂಡ ಹೇಳಿದ್ದಾರೆ.
- ಅರ್ಧ ಚಮಚ ಅರಿಶಿಣ ಪುಡಿ
- 3 ಕರಿಮೆಣಸು/ಕಾಳು ಮೆಣಸು
- 3 ಚಿಟಿಕೆಯಷ್ಟು ಒಣಶುಂಠಿ ಪುಡಿ
- 5-6 ಒಣ ದ್ರಾಕ್ಷಿ
- ಜೇನು
- ಇವುಗಳನ್ನು ಬಿಸಿ ನೀರಿನಲ್ಲಿ ಹಾಕಿ 2-3 ನಿಮಿಷ ಕುದಿಸಬೇಕು.
ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.



Click it and Unblock the Notifications
