Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮಾನ್ಸೂನ್‌ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
ಮಾನ್ಸೂನ್ ಎಂದರೆ ರೋಗಗಳು ನಮ್ಮನ್ನು ದಾಳಿ ಮಾಡುವ ಸಮಯ. ಈ ಕಾಲದಲ್ಲಿ ನಾವು ಎಂದಿಗಿಂತಲೂ ಹೆಚ್ಚೇ ಜಾಗ್ರತರಾಗಿರಬೇಕು. ವಾತಾವರಣದ ತೇವಾಂಶ ಅಲ್ಲದೆ ಎಡೆಬಿಡದೆ ಸುರಿಯುವ ಮಳೆಯಿಂದ ಸೂಕ್ಷ್ಮ ಕೀಟಗಳು, ಜೇಡಗಳು, ಕೊಳಕು ನೀರು, ಪಾಚಿ, ನೀರು ಸಂಗ್ರಹಣೆಯಂತಹ ಹಲವಾರು ಸಮಸ್ಯೆಗಳಿವೆ. ಇದರಿಂದ ಬ್ಯಾಕ್ಟಿರಿಯಾ, ಶಿಲೀಂಧ್ರಗಳು ನಮ್ಮ ದೇಹದಲ್ಲಿ ವಾಸಿಸಲು ಅನುಕೂಲಕರ ವಾತಾವರಣ ಇದಾಗಿದೆ.
ಅದರಲ್ಲೂ ಮಾನ್ಸೂನ್‌ನಲ್ಲಿ ಅನೇಕ ಚರ್ಮ ರೋಗಗಳಿಗೆ ತುತ್ತಾಗುವ ಅಪಾಯ ತುಂಬಾ ಹೆಚ್ಚು. ಈ ಮಾನ್ಸೂನ್‌ನಲ್ಲಿ ಕಾಡುವ ಚರ್ಮದ ಸಮಸ್ಯೆಗಳಾವುವು, ಇದನ್ನು ತಡೆಗಟ್ಟುವ ವಿಧಾನ ಯಾವುದು ಮುಂದೆ ನೋಡೋಣ:

ಬ್ಯಾಕ್ಟೀರಿಯಾದ ಸೋಂಕು
ಮಳೆಗಾಲದಲ್ಲಿ ಕೊಳಕು ನೀರು ಮತ್ತು ತೇವಾಂಶದಿಂದ ಚರ್ಮ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿಯೇ, ಮುಖದ ಮೇಲೆ ದದ್ದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ತುರಿಕೆ ಉಂಟಾಗುತ್ತದೆ. ಈ ಸಮಯದಲ್ಲಿ ತುರಿಕೆಯಿಂದ ಉಗುರಿಗೆ ರಕ್ತ ಸೋಕಬಹುದು, ನಂತರ ರಕ್ತವು ಸುತ್ತಮುತ್ತಲಿನ ಪ್ರದೇಶವನ್ನು ಮುಟ್ಟಿದರೆ ಅಲ್ಲಿಯೂ ಸೋಂಕು ಹರಡಬಹುದು. ಸೂಕ್ಷ್ಮವಾದ ರಾಶಸ್‌ಗಳು ದೇಹದ ಅಲ್ಲಲ್ಲಿ ಉಂಟಾಗಬಹುದು. ಆದ್ದರಿಂದ, ಮಳೆಯಲ್ಲಿ ಚರ್ಮ ಅಥವಾ ದೇಹದ ಮೇಲೆ ತೇವಾಂಶ ಹೆಚ್ಚು ಇರಲು ಅನುಮತಿಸಬೇಡಿ.

ಎಸ್ಜಿಮಾ
ಇದನ್ನು ವೈದ್ಯಕೀಯ ಪದದಲ್ಲಿ ಪೊಂಫೋಲಿಕ್ಸ್ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಈ ರೋಗ ಬಹುತೇಕರಿಗೆ ಸಾಮಾನ್ಯವಾಗಿ ಕಾಡುತ್ತದೆ. ಎಸ್ಜಿಮಾ ರೋಗವು ಕೈ, ಕಾಲು ಮತ್ತು ಅಂಗೈಗಳಲ್ಲಿ ಕೆಂಪು ದದ್ದುಗಳು ಹಾಗೂ ಕೆಂಪಾದ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ, ದೇಹದ ರಂಧ್ರಗಳು ಮುಚ್ಚಲು ಪ್ರಾರಂಭಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಿ.

ಫಂಗಲ್ ಸೋಂಕು
ಮಳೆಯಲ್ಲಿ ಶಿಲೀಂಧ್ರಗಳ ಸೋಂಕು ಬಹಳ ಬೇಗ ಹರಡುತ್ತದೆ. ವಿಶೇಷವಾಗಿ ಮಧುಮೇಹ ಹೊಂದಿರುವ ರೋಗಿಗಳಿಗೆ ಇದು ಹೆಚ್ಚು ಕಾಡುತ್ತದೆ. ಫಂಗಲ್ ಸೋಂಕಿನಿಂದ ರಿಂಗ್ವರ್ಮ್ ಸಮಸ್ಯೆ ಪ್ರಾರಂಭವಾಗುತ್ತದೆ. ದೇಹದ ಮೇಲಿನ ತೇವಾಂಶದ ಕಾರಣದಿಂದ ದೇಹದಲ್ಲಿ ಉಂಗುರದಾಕಾರದ ರಿಂಗ್ವರ್ಮ್ ಉಂಟಾಗುತ್ತದೆ, ಇದು ಸಾಮಾನ್ಯಕ್ಕಿಂತ ಹೆಚ್ಚು ತುರಿಕೆ ಉಂಟುಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ತೇವಾಂಶ.

ರೋಗವನ್ನು ತಡೆಗಟ್ಟುವ ಮಾರ್ಗಗಳು
1. ಮಳೆಗಾಲದಲ್ಲಿ ಸೋಂಕನ್ನು ತಡೆಗಟ್ಟಲು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ. ದೇಹದ ತೆರೆದ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಬರುವ ಅಪಾಯ ಹೆಚ್ಚು.
2. ನಿಮ್ಮ ಮುಖ ಮತ್ತು ಕೈಕಾಲುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮದಲ್ಲಿ ತೇವಾಂಶವನ್ನು ಸೃಷ್ಟಿಸುವುದಿಲ್ಲ. ಇದು ಸೋಂಕನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ.
3. ಮಳೆಗಾಲದಲ್ಲಿ ನೀರಿನ ದಾಹ ತೀರಾ ಕಡಿಮೆಯಾದರೂ ನೀರು ಕುಡಿಯುತ್ತಲೇ ಇರಿ. ಹೆಚ್ಚು ನೀರು ಕುಡಿಯುವುದರಿಂದ ಮೂತ್ರದ ಜೊತೆಗೆ ದೇಹದಲ್ಲಿರುವ ಕೊಳೆ ನಿವಾರಣೆಯಾಗುತ್ತದೆ. ಈ ಕಾರಣದಿಂದಾಗಿ, ನೀರು ದೀರ್ಘಕಾಲದವರೆಗೆ ದೇಹದ ಮೇಲೆ ಹೆಪ್ಪುಗಟ್ಟುವುದಿಲ್ಲ.
4. ದೇಹದಲ್ಲಿ ಯಾವುದೇ ಭಾಗದಲ್ಲೂ ತೇವಾಂಶ ಹೆಚ್ಚು ಕಾಲ ಇರದಂತೆ ತಡೆಯಿರಿ. ಒಣಗಿದ ಬಟ್ಟೆಯಿಂದ ತೇವಾಂಶವನ್ನು ಸಂಪೂರ್ಣವಾಗಿ ತೆಗೆಯಿರಿ.
5. ಸಾಧ್ಯವಾದಷ್ಟು ಮಳೆಯಲ್ಲಿ ನೆನೆಯುವುದನ್ನು ತಡೆಯಿರಿ.



Click it and Unblock the Notifications