ಮುಟ್ಟಿನ ಸಮಯದಲ್ಲಿ ರನ್ನಿಂಗ್ ಮಾಡಿದರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ಹೆಚ್ಚಿನ ಮಹಿಳೆಯರು ಮುಟ್ಟಾದ ಸಮಯದಲ್ಲಿ ವರ್ಕ್‌ಔಟ್‌ ಮಾಡಬಹುದಾ..? ಜಾಗಿಂಗ್‌ ಮಾಡಬಹುದಾ ಎನ್ನುವ ಗೊಂದಲದಲ್ಲಿರುತ್ತಾರೆ. ಮುಟ್ಟಿನ ಸಮಯದಲ್ಲಿ ವರ್ಕೌಔಟ್‌ ಮಾಡೋದ್ರಿಂದ ಮುಂದೇನಾದ್ರೂ ಪ್ರಾಬ್ಲಂ ಆದ್ರೆ ಎನ್ನುವ ಕ್ವಶ್ಚನ್‌ ಮಾರ್ಕ್‌ ಎಲ್ಲರಲ್ಲೂ ಇರುತ್ತದೆ. ನಿಮ್ಮ ಈ ಎಲ್ಲಾ ಕನ್‌ಫ್ಯೂಶನ್‌ಗೆ ಉತ್ತರ ಬೇಕೆಂದರೆ ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.

running during periods

ಮುಟ್ಟಾದಾಗ ರನ್ನಿಂಗ್‌, ಜಾಗಿಂಗ್‌ ಮಾಡಬಹುದೇ..?

ಹೌದು.. ಖಂಡಿತವಾಗಿಯೂ ಮುಟ್ಟಿನ ಸಮಯದಲ್ಲಿ ಸುರಕ್ಷಿತವಾಗಿ ಓಡುವಂತಹ ಚಟುವಟಿಕೆಗಳನ್ನು ಮಾಡಬಹುದು. ಮುಟ್ಟಿನ ಅವಧಿಯಲ್ಲಿ ಓಡುವುದು ಸೇರಿದಂತೆ ಹಲವು ರೀತಿಯ ದೈಹಿಕ ಚಟುವಟಿಕೆಗಳ ಜೊತೆಗೆ ವ್ಯಾಯಾಮ ಮಾಡುವುದು ವಾಸ್ತವವಾಗಿ ಪಿರಿಯೆಡ್ಸ್‌ ಸಮಯದಲ್ಲಿ ಕಂಡುಬರುವಂತಹ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರತಿದಿನವೂ ನೀವು ಮಾಡುವಂತಹ ಡೈಲಿ ವರ್ಕ್‌ಔಟ್‌ ರುಟೀನ್‌ ಮುಟ್ಟಿನ ಸಮಯದಲ್ಲೂ ಕಂಟಿನ್ಯೂ ಮಾಡಿದ್ರೆ ಮುಟ್ಟಿನ ಜೊತೆಯಲ್ಲಿ ದೇಹದಲ್ಲಾಗುವ ಇತರ ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಉದಾಹರಣೆಗೆ, ಮುಟ್ಟಾದಾಗ ಓಡುವುದು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ನಿಮ್ಮ ಮೂಡ್‌ ಬದಲಾಯಿಸಬಹುದು, ಜೊತೆಗೆ ಮುಟ್ಟಿಗೆ ಸಂಬಂಧಿಸಿದ ಸೆಳೆತ ಮತ್ತು ಬೆನ್ನು ನೋವನ್ನು ನಿವಾರಿಸುತ್ತದೆ.

ಋತುಚಕ್ರದ ಅವಧಿ ಹೀಗಿರುತ್ತೆ..

ಸಾಮಾನ್ಯವಾಗಿ ಋತುಚಕ್ರವು 28 ದಿನಗಳ ಅಂತರದಲ್ಲಿ ಮಹಿಳೆಯ ದೇಹದಲ್ಲಿ ನಡೆಯುವಂತಹ ಸಹಜ ಪ್ರಕ್ರಿಯೆ. ಮುಟ್ಟಾದ 14ನೇ ದಿನದಿಂದ ಅಂಡೋತ್ಪತ್ತಿ ಪ್ರಾರಂಭವಾಗುತ್ತೆ. ಋತುಚಕ್ರದ ಮೊದಲಾರ್ಧವನ್ನು ಫೋಲಿಕ್ಯುಲರ್‌ ಹಂತ ಎಂದು ಕರೆದರೆ ಎರಡನೇ ಹಂತವನ್ನು ಲೂಟಿಯಲ್‌ ಎನ್ನುತ್ತಾರೆ. ಫೋಲಿಕ್ಯುಲರ್‌ ಹಂತವು ಮುಟ್ಟಿನೊಂದಿಗೆ ಪ್ರಾರಂಭವಾಗಿ 14 ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಲ್ಯುಟೆನೈಜಿಂಗ್‌ ಹಾರ್ಮೋನ್‌ ಹೆಚ್ಚಾಗಿ ಅಂಡೋತ್ಪತ್ತಿಯನ್ನು ಪ್ರೇರೇಪಿಸುತ್ತದೆ. ಈ ಸಮಯದಲ್ಲಿ ಪ್ರೊಜೆಸ್ಟೆರಾನ್‌ ಹಾರ್ಮೋನ್‌ ಮಟ್ಟ ಕಡಿಮೆಯಾಗುತ್ತೆ. ಲೂಟಿಯಲ್‌ ಹಂತದಲ್ಲಿ ಪ್ರೊಜೆಸ್ಟೆರಾನ್‌ ಮಟ್ಟ ಹೆಚ್ಚಾಗುತ್ತದೆ. ಅಂಡೋತ್ಪತ್ತಿ ಅವಧಿಯಾದ ಮೇಲೆ ಈಸ್ಟ್ರೋಜೆನ್‌ ಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ಈ ಅವಧಿಯಲ್ಲಿ ಅಂಡಾಣು ಫಲೀಕರಣವಾಗದಿದ್ದರೆ ಎರಡೂ ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗಿ ಲೂಟಿಯಲ್‌ ಹಂತ ಮುಟ್ಟಿನ ಪ್ರಾರಂಭದೊಂದಿಗೆ ಕೊನೆಗೊಮಡು ಮುಟ್ಟು ಆರಂಭವಾಗುತ್ತದೆ.

ಯಾವಾಗ ರನ್ನಿಂಗ್‌ ಮಾಡಬಹುದು..?

ಫೋಲಿಕ್ಯುಲರ್ ಅಥವಾ ಲೂಟಿಯಲ್ ಹಂತದಲ್ಲಿ ಓಡುವುದನ್ನು ಸುರಕ್ಷಿತವಾಗಿ ಮಾಡಬಹುದು. ನೀವು ಲೂಟಿಯಲ್ ಹಂತದಲ್ಲಿ ಹೊರಗೆ ವ್ಯಾಯಾಮ ಮಾಡಲು ಆಯ್ಕೆ ಮಾಡಿದರೆ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ ನಿಮ್ಮ ದೇಹದ ಉಷ್ಣತೆಯು ಹೆಚ್ಚಾಗಬಹುದು. ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ನಿಮ್ಮ ದೇಹವು ಹೆಚ್ಚಿನ ತಾಪಮಾನವನ್ನು ತಲುಪುವವರೆಗೆ ನೀವು ಬೆವರುವುದಿಲ್ಲ. ಆದಾಗ್ಯೂ, ಸ್ಥಿರವಾದ ವ್ಯಾಯಾಮವನ್ನು ಮಾಡುವುದು ಕಾಲಾನಂತರದಲ್ಲಿ ತಾಪಮಾನವನ್ನು ನಿಯಂತ್ರಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ನಿಮ್ಮ ದೇಹದಲ್ಲಾಗುವ ಹಾರ್ಮೋನ್‌ ಏರಿಳಿತಗಳೂ ನಿಮ್ಮ ರನ್ನಿಂಗ್‌ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಈಸ್ಟ್ರೋಜೆನ್‌ ಹಾರ್ಮೋನ್‌ ನಿಮ್ಮ ಚಯಾಪಚಯದ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಈ ಸಮಯದಲ್ಲಿ ರನ್ನಿಂಗ್‌ ಮಾಡುವುದಾದರೆ ನೀವು ಹೆಚ್ಚು ನಾರಿನಂಶ ಹಾಗೂ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು. ಇದು ನಿಮಗೆ ಶಕ್ತಿಯನ್ನು ನೀಡುತ್ತೆ.

ಋತುಚಕ್ರದ ಸಮಯದಲ್ಲಿ ಓಡುವುದರ ಪ್ರಯೋಜನಗಳು

ಪ್ರತಿಯೊಬ್ಬರ ದೇಹಪ್ರಕೃತಿ ಬೇರೇನೆ ಇರುತ್ತೆ. ಮುಟ್ಟಿನ ಅವಧಿಯೂ ಕೂಡಾ ಎಲ್ಲರಿಗೂ ವಿವಿಧ ಅನುಭವಗಳೇ. ಹಾಗಾಗಿ ಓಡುವುದು ಅಥವಾ ಜಾಗಿಂಗ್‌ ಮಾಡುವುದು ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರದು. ನೀವು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ಸೆಳೆತವನ್ನು ಅನುಭವಿಸಿದರೆ ನೀವು ಆ ದಿನ ರನ್ನಿಂಗ್‌ ಸ್ಕಿಪ್‌ ಮಾಡಬಹುದು. ಆದರೂ ನೀವು ರನ್ನಿಂಗ್‌ ಮಾಡಲೇಬೇಕು ಎನ್ನುವುದಾದರೆ ನೀವು ಹೈಡ್ರೇಟ್‌ ಆಗಿದ್ದೀರಿ ಎನ್ನುವುದನ್ನು ನೋಡಿಕೊಳ್ಳಿ.

ಮುಟ್ಟಿನ ಸಮಯದಲ್ಲಿ ಓಡುವುದು ಈ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು.

ಸ್ವಾಭಾವಿಕ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವುದು: ನಿಮ್ಮ ಅವಧಿಯಲ್ಲಿ ಓಡುವುದು ಸ್ವಾಭಾವಿಕವಾಗಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಬಹುದು, ಇದು ನಿಮ್ಮ ಮೂಡ್‌ ಹೆಚ್ಚಿಸುತ್ತದೆ ಮತ್ತು ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಅಸ್ವಸ್ಥತೆಯನ್ನು ಕಡಿಮೆ ಮಾಡುವುದು: ನಿಮ್ಮ ಅವಧಿಯಲ್ಲಿ ಓಡುವುದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ಆಮ್ಲಜನಕದ ಹರಿವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆ ಉಬ್ಬರಿಕೆ ಅಥವಾ ಊತವನ್ನು ಕಡಿಮೆ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ರನ್ನಿಂಗ್‌ ಮಾಡುವುದಾದ್ರೆ ಈ ಟಿಪ್ಸ್‌ ನೆನಪಿರಲಿ

ಹೈಡ್ರೇಟೆಡ್ ಆಗಿರಿ

ರನ್ನಿಂಗ್‌ ಮಾಡುವುದಾದರೆ ನೀವು ಹೈಡ್ರೇಟೆಡ್‌ ಆಗಿರುವುದು ಮುಖ್ಯವಾಗಿದೆ. ನಿಮ್ಮ ಮುಟ್ಟಿ ಅವಧಿಯಲ್ಲಿ ನೀವು ಓಡುತ್ತಿದ್ದರೆ, ದ್ರವಾಹಾರ ವಿಶೇಷವಾಗಿ ಮುಖ್ಯವಾಗಿದೆ. ನಿಮ್ಮ ರನ್ನಿಂಗ್‌ ಸಮಯದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ ನಾಲ್ಕರಿಂದ ಆರು ಔನ್ಸ್ ದ್ರವವನ್ನು ಕುಡಿಯಿರಿ.

ಹೆಚ್ಚು ವಿಶ್ರಾಂತಿ ಮಾಡಿ

ನಿಮ್ಮ ಮುಟ್ಟಿನ ಅವಧಿಯಲ್ಲಿ ಓಡಲು ನೀವು ಆಯ್ಕೆ ಮಾಡಿದರೆ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ಸಾಕಷ್ಟು ನಿದ್ದೆ ಮಾಡಿ ಮತ್ತು ವಾರಕ್ಕೆ ಕನಿಷ್ಠ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳಿ ಇದರಿಂದ ನೀವು ಮತ್ತೆ ಓಡುವ ಮೊದಲು ನಿಮ್ಮ ದೇಹವನ್ನು ರೀಚಾರ್ಜ್ ಮಾಡಬಹುದು.

ಓಟದ ಮುನ್ನ ಸ್ಟ್ರೆಚಿಂಗ್‌ ಮಾಡಿ

ನಿಮ್ಮ ಓಟದ ಮೊದಲು ಡೈನಾಮಿಕ್ ಸ್ಟ್ರೆಚ್‌ಗಳನ್ನು ಮಾಡಿ, ಏಕೆಂದರೆ ಅದು ಕಾರ್ಡಿಯೋ ವ್ಯಾಯಾಮಕ್ಕಾಗಿ ನಿಮ್ಮನ್ನು ಬೆಚ್ಚಗಾಗಿಸಬಹುದು. ಹೆಚ್ಚಿನದಾಗಿ ಸ್ಟ್ರೆಚಿಂಗ್ ಮುಟ್ಟಿನ ಅವಧಿಯ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಮ್ಮೊಂದಿಗೆ ಓಡಲು ಜೊತೆಗಾರರಿರಲಿ

ನಿಮ್ಮ ಮುಟ್ಟಿನ ಅವಧಿಯಲ್ಲಿ ಓಡುತ್ತಿರುವಾಗ ನಿಮ್ಮೊಂದಿಗೆ ಸೇರಲು ಸ್ನೇಹಿತ, ಸಹೋದ್ಯೋಗಿ ಅಥವಾ ಫ್ಯಾಮಿಲಿಯ ಯಾರನ್ನಾದರೂ ಆಹ್ವಾನಿಸಿ. ಇತರ ಜನರೊಂದಿಗೆ ವ್ಯಾಯಾಮ ಮಾಡುವುದು ವಿನೋದ ಮಾತ್ರವಲ್ಲ, ಸಕ್ರಿಯವಾಗಿರಲು ನಿಮ್ಮನ್ನು ಪ್ರೇರೇಪಿಸಬಹುದು.

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ನಿಮ್ಮ ಮುಟ್ಟಿನ ಅವಧಿಯಲ್ಲಿ ಓಡುವಾಗ ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ಹಣ್ಣುಗಳು, ಧಾನ್ಯಗಳು ಮತ್ತು ತರಕಾರಿಗಳಂತಹ ಸಾಕಷ್ಟು ತಾಜಾ, ಸಂಪೂರ್ಣ ಆಹಾರಗಳನ್ನು ಸೇವಿಸಿ. ಅಲ್ಲದೆ, ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ನಿಮ್ಮ ಉಪ್ಪಿನ ಸೇವನೆಯನ್ನು ಸೀಮಿತಗೊಳಿಸುವುದು ಮುಟ್ಟಿನ ಅವಧಿಗಳಲ್ಲಿ ಉಬ್ಬರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಕಂಫರ್ಟೇಬಲ್‌ ಬಟ್ಟೆಗಳನ್ನು ಧರಿಸಿ

ಓಟದ ಮೊದಲು, ಮತ್ತು ನಂತರ ನಿಮ್ಮ ಪ್ಯಾಡ್‌ಗಳನ್ನು ಬದಲಾಯಿಸಿ . ಮಾತ್ರವಲ್ಲ ರನ್ನಿಂಗ್‌ಗೆ ಸಹಾಯಕವಾಗುವಂತೆ ಸೂಕ್ತವಾದ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಮುಟ್ಟಿನ ಅವಧಿಯಲ್ಲಿ ಓಡುವಾಗ ಹೆಚ್ಚು ಆರಾಮದಾಯಕವಾಗಲು ಸಹಾಯ ಮಾಡುತ್ತದೆ.

ಸ್ವಾಭಾವಿಕ ಉಸಿರಾಟ

ನಿಮ್ಮ ಮುಟ್ಟಿನ ಅವಧಿಯಲ್ಲಿ ಓಡುತ್ತಿರುವಾಗ, ಸ್ವಾಭಾವಿಕವಾಗಿ ಉಸಿರಾಡಿ. ಮೂಗಿನ ಮೂಲಕ ಮಾತ್ರ ಉಸಿರಾಡಬೇಡಿ ಏಕೆಂದರೆ ಇದು ನಿಮ್ಮ ಉಸಿರಾಟವನ್ನು ನಿರ್ಬಂಧಿಸಬಹುದು ಮತ್ತು ನೀವು ಉಸಿರಾಡುವ ಆಮ್ಲಜನಕದ ಪ್ರಮಾಣವನ್ನು ಮಿತಿಗೊಳಿಸಬಹುದು. ನಿಮ್ಮ ಬಾಯಿ ಮತ್ತು ಮೂಗು ಎರಡರಿಂದಲೂ ಉಸಿರಾಟ ಮಾಡುವುದರಿಂದ ಅನಿಯಂತ್ರಿತ ಆಮ್ಲಜನಕವನ್ನು ಒದಗಿಸುತ್ತದೆ.

ಅನೇಕರು ಮುಟ್ಟಿನ ಸಮಯದಲ್ಲಿ ವರ್ಕ್‌ಔಟ್‌ ಬಿಟ್ಟುಬಿಡುತ್ತಾರೆ. ವಾಸ್ತವಿಕವಾಗಿ ಮುಟ್ಟಿನ ಸಮಯದಲ್ಲಿ ಮಾಡುವ ರನ್ನಿಂಗ್‌, ಜಾಗಿಂಗ್‌ ನಿಮ್ಮ ಮೂಡ್‌ಸ್ವಿಂಗ್ಸ್‌ ಬದಲಾಯಿಸುತ್ತೆ ಮಾತ್ರವಲ್ಲ ಮುಟ್ಟಿನ ನೋವನ್ನೂ ಕಡಿಮೆ ಮಾಡುತ್ತದೆ. ಆದರೆ ಈ ಅವಧಿಯಲ್ಲಿ ಹೆಚ್ಚು ನೀರು ಕುಡಿಯುವುದನ್ನು ಮರೆಯಬೇಡಿ. ಇದರೊಂದಿಗೆ ಆರೋಗ್ಯಕರ ಆಹಾರವನ್ನೂ ಸೇವಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Benefits of running during your period in Kannada

Do you know running during period good for body read on..
Story first published: Sunday, February 19, 2023, 18:28 [IST]
X
Desktop Bottom Promotion