Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
ಕೆಲವೊಂದು ಆಹಾರಗಳನ್ನು ಒಟ್ಟಿಗೆ ತಿನ್ನಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಅವುಗಳು ಆರೋಗ್ಯಕರವಾದ ಆಹಾರಗಳೇ ಆಗಿದ್ದರೂ ಒಟ್ಟಿಗೆ ಸೇವಿಸಿದಾಗ ಅದರಿಂದ ಫುಡ್ ಪಾಯಿಸನ್ ಅಥವಾ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಉದಾಹರಣೆಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ಜೊತೆಗೆ ಸೇವಿಸಬಾರದು. ಈ ಎರಡನ್ನು ಒಟ್ಟಿಗೆ ತಿಂದಾಗ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಕೆಲವೊಂದು ಆಹಾರಗಳು ಡೆಡ್ಲಿ ಕಾಂಬಿನೇಷನ್‌ನ ಆಹಾರಗಳಾಗಿವೆ, ಅವುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ ಉಂಟಾಗುವುದು.
ಈ ಲೇಖನದಲ್ಲಿ ಕೆಲವೊಂದು ಡೆಡ್ಲಿಕಾಂಬಿನೇಷನ್ ಆಹಾರಗಳ ಬಗ್ಗೆ ಹೇಳಿದ್ದೇವೆ, ಯಾವುದೇ ಕಾರಣಕ್ಕೆ ಇಂಥ ಆಹಾರಗಳನ್ನು ಸೇವಿಸಲೇಬೇಡಿ:

1. ಹಣ್ಣುಗಳು + ನೀರು
ಕೆಲವರು ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿಯುತ್ತಾರೆ. ಆದರೆ ಹಾಗೆ ಮಾಡಬೇಡಿ, ಏಕೆಂದರೆ ಜೀರ್ಣಕ್ರಿಯೆಗೆ ತೊಮದರೆ ಉಂಟಾಗುವುದು.
ಕಲ್ಲಂಗಡಿ, ಕರ್ಬೂಜ, ಸೌತೆಕಾಯಿ, ಅನಾನಸ್, ಕಿತ್ತಳೆ ಇವುಗಳಲ್ಲಿ ಶೇ. 95ರಷ್ಟು ನೀರಿನಂಶವಿರುತ್ತದೆ, ಆದ್ದರಿಂದ ಇವುಗಳನ್ನು ತಿಂದ ಬಳಿಕ ನೀರು ಕುಡಿದರೆ ಹೊಟ್ಟೆ ಉಬ್ಬುವ ತೊಂದರೆ ಉಂಟಾಗುವುದು.

2. ಜೇನು + ತುಪ್ಪ
ಆಯುರ್ವೇದವು ಜೇನು ಹಾಗೂ ತುಪ್ಪ ಜೊತೆಗೆ ಸೇವಿಸಬೇಡಿ ಎಂದು ಹೇಳುತ್ತದೆ. ಜೇನು ದೇಹವನ್ನು ಬೆಚ್ಚಗಾಗಿಸುತ್ತೆ, ತುಪ್ಪ ಅಥವಾ ದೇಹವನ್ನು ತಂಪಾಗಿಸುತ್ತೆ, ಈ ಎರಡು ಆಹಾರ ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತದೆ.

3. ಮೀನು +ಮೊಸರು/ಹಾಲು
ಮೀನಿನ ಆಹಾರ ಸೇವಿಸಿದ ಬಳಿಕ ಸ್ವಲ್ಪ ಹೊತ್ತಿನವರೆಗೆ ಹಾಲು ಅಥವಾ ಮೊಸರು ಕುಡಿಯದಿರುವುದು ಒಳ್ಳೆಯದು.
ಆಯುರ್ವೇದದ ಪ್ರಕಾರ ನಮ್ಮ ದೇಹವು ಸತ್ತ್ವ, ರಜ, ತಾಮ ಗುಣಗಳಿಂದ ಮಾಡಲ್ಪಟ್ಟಿರುತ್ತದೆ. ಮೀನಿನ ಜೊತೆ ಮೊಸರು ಅಥವಾ ಹಾಲು ಸೇವಿಸಿದಾಗ ದೇಹದ ತಮಸ ಗುಣದಲ್ಲಿ ವ್ಯತ್ಯಾಸ ಉಂಟಾಗಿ ಬೇಧಿ, ಹೊಟ್ಟೆ ಉಬ್ಬುವುದು, ಅಜೀರ್ಣ ಈ ಬಗೆಯ ಸಮಸ್ಯೆ ಕಂಡು ಬರುವುದು.

4. ಜೇನು + ಕುದಿಯುವ ನೀರು
ಕುದಿಯುವ ನೀರಿಗೆ ಜೇನು ಹಾಕಿ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಈ ಎರಡು ಕಾಂಬಿನೇಷನ್ ಒಳ್ಳೆಯದಲ್ಲ. ಈ ಎರಡನ್ನು ಮಿಶ್ರ ಮಾಡಿ ಸೇವಿಸಿದಾಗ ಇದು HMF ಲೆವಲ್ ಅಥವಾ ಹೈಡ್ರಾಕ್ಸಿಮಿಥೈಲ್ ಫರ್ಫುರಾಲ್ಡಿಹೈಡ್ ಹೆಚ್ಚಿಸುತ್ತೆ, ಇದರಿಂದ ಕಶ್ಮಲ ಹೆಚ್ಚಾಗುವುದು.

5. ದ್ರವ ಹಾಗೂ ಘನ ಆಹಾರ
ಪಿಜ್ಜಾ, ಬರ್ಗರ್ ಮುಂತಾದ ಆಹಾರ ಸೇವಿಸುವಾಗ ಸ್ಮೂತಿ, ತಾಜಾ ಜ್ಯೂಸ್ ಇವುಗಳನ್ನು ಕುಡಿಯುವುದು. ದ್ರವಾಹಾರ ಬೇಗನೆ ಜೀರ್ಣವಾದರೆ, ಘನಾಹಾರ ನಿಧಾನಕ್ಕೆ ಜೀರ್ಣವಾಗುವುದು. ಎರಡನ್ನೂ ಜೊತೆಗೆ ಸೇವಿಸಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುವುದು.

6. ಮದ್ಯ+ ಪ್ಯಾರಾಸಿಟಮೋಲ್
ಈ ಎರಡನ್ನು ಒಟ್ಟಿಗೆ ಸೇವಿಸುವುದು ತುಂಬಾನೇ ಅಪಾಯಕಾರಿ. ಯಾವುದಾದರು ನೋವು ನಿವಾರಕ ಅಥವಾ ಪ್ಯಾರಾಸಿಟಮೋಲ್ ಅನ್ನು ಸೇವಿಸಿದಾಗ ಮದ್ಯ ಸೇವಿಸಿದರೆ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು.

7. ಮಾಂಸಾಹಾರ ಮತ್ತು ಹಾಲಿನ ಉತ್ಪನ್ನಗಳು
ಮಾಂಸಾಹಾರ ಸೇವಿಸಿ ಬಳಿಕ ಹಾಲು ಹಾಕಿದ ಟೀ ಕುಡಿಯಬೇಡಿ. ಇವೆರಡನ್ನು ಜೊತೆಗೆ ಸೇವಿಸಿದರೆ ದೇಹದಲ್ಲಿ ಅಗ್ನ ತತ್ತ್ವದ ಅಸಮತೋಲನ ಉಂಟಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುವುದು.

8. ಆಹಾರ ಬೇಯಿಸುವಾಗ ಜೇನು ಹಾಕುವುದು
ಜೇನನ್ನು ಬಿಸಿ ಮಾಡಬಾರದು, ಆಹಾರವನ್ನು ಬೇಯಿಸುವಾಗ ಜೇನು ಹಾಕಿ ಬೇಯಿಸಿದರೆ ಅಂಥ ಆಹಾರ ಸೇವಿಸಿದಾಗ ಆರೋಗ್ಯ ಸಮಸ್ಯೆ ಉಂಟಾಗುವುದು.

9. ಹಾಲು ಮತ್ತು ಸಿಟ್ರಸ್ ಆಹಾರ
ಹಾಲು ಹಾಗೂ ಸಿಟ್ರಸ್ ಆಹಾರ ಸೇವಿಸಬೇಡಿ, ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವುದು.

10. ಟೀ + ಮೊಸರು
ಒಸರನ್ನ ತಿಂದ ತಕ್ಷಣ ಹಾಲು ಹಾಕಿದ ಟೀ ಕುಡಿಯಬೇಡಿ, ಈ ಎರಡು ಒಟ್ಟಿಗೆ ಸೇವಿಸಿದರೆ ಚಯಪಚಯ ಕ್ರಿಯೆ ನಿಧಾನವಾಗುವುದು. ಇದರಿಂದ ಹೊಟ್ಟೆ ಉಬ್ಬಿದಂತೆ ಅನಿಸುವುದು.

11. ಹಣ್ಣುಗಳು + ಮೊಸರು
ಹಣ್ಣುಗಳಲ್ಲಿ ಅಸಿಡಿಕ್ (ಆಮ್ಲ) ಇರುತ್ತದೆ, ಮೊಸರು ತಿಂದಾಗ ಅದರಲ್ಲಿರುವ ಅಸಿಡಿಕ್ ಅಂಶ ಸೇರಿ ಅಸಿಡಿಟಿ ಹೆಚ್ಚುವುದು. ಇವುಗಳನ್ನು ಜೀರ್ಣ ಮಾಡಬೇಕದಾದರೆ ದೇಹಕ್ಕೆ ಡಬಲ್ ವರ್ಕ್ ಆಗುತ್ತೆ, ಆದ್ದರಿಂದ ಇವೆರಡನ್ನು ಒಟ್ಟಿಗೆ ಸೇವಿಸಬೇಡಿ.
ಏನು ಮಾಡಬೇಕು? ಏನು ಮಾಡಬಾರದು?
ಏನು ಮಾಡಬೇಕು
* ಆಹಾರದ ಸಮತೋಲನ ಕಾಪಾಡಿ, ಇಂಥ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ.
* ಆಹಾರದ ಜೊತೆ ನೀರು ಕುಇಡಯಬೇಡಿ, ಆಹಾರ ಸೇವಿಸಿ ಅರ್ಧ ಗಂಟೆಯಾದ ಬಳಿಕ ನೀರು ಕುಡಿಯಿರಿ.
ಏನು ಮಾಡಬಾರದು?
* ಆಲೂಗಡ್ಡೆ ಮತ್ತು ಮಾಂಸಾಹಾರ ಜೊತೆಗೆ ಸೇವಿಸಬೇಡಿ.
* ಬೀನ್ಸ್‌ನೊಂದಿಗೆ ಹಣ್ಣುಗಳು ಹಾಗೂ ಹಾಲನ್ನು ಸೇವಿಸಬೇಡ.
* ಮದ್ಯ ಜೊತೆಗೆ ಸಿಟ್ರಸ್ ಆಹಾರ ಸೇವಿಸಬೇಡಿ.



Click it and Unblock the Notifications
