Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಂಪ್ಯೂಟರ್ ಮೆಡಿಟೇಷನ್ ಮಾಡುವುದು ಹೇಗೆ?
ಕಂಪ್ಯೂಟರ್ ಕೆಲಸದ ಮಧ್ಯ ವಿರಾಮ ತೆಗೆದುಕೊಳ್ಳುವಾಗ ಮಾಡುವ ಧ್ಯಾನವು ತ್ವರಿತಗತಿಯಲ್ಲಿ ವಿಶ್ರಾಂತಿ ಪಡೆಯುವ ಮಾರ್ಗವಾಗಿದೆ. ಇವು ತುಂಬಾ ಸರಳವಾದ ಯೋಗ ಚಟುವಟಿಕೆಗಳಾದರೂ ಅವುಗಳಲ್ಲಿನ ಧನಾತ್ಮಕತೆಯಿಂದಾಗಿ ನಿಮ್ಮ ಒಳಗಿನ ಜಾಡ್ಯವನ್ನು ಹೊರಹಾಕಿ.
ನಿಮ್ಮ ಮನಸ್ಸನ್ನು ಧನಾತ್ಮಕತೆಯಿಂದ ಪುನಶ್ಚೇತನಗೊಳಿಸುತ್ತವೆ. ಕೇವಲ ಐದು ನಿಮಿಷಗಳಲ್ಲಿ ಶಾಂತಿ, ಶಕ್ತಿ, ಪ್ರೀತಿ ಮತ್ತು ಸಂತೋಷಗಳು ನಿಮ್ಮದಾಗುತ್ತವೆ

1. ನಿಮ್ಮ ಇಷ್ಟದೇವರ ಪ್ರಾರ್ಥನೆಯಲ್ಲಿ ಶಾಂತತೆಯನ್ನು ಪಡೆಯಿರಿ
2. ಬೆಳಕನ್ನು ಪಸರಿಸಿ ಅಥವಾ ಎಲ್ಲರಿಗೂ ಸಂತೋಷ, ಶಾಂತಿ, ಪ್ರೀತಿಗಳು ಲಭಿಸಲೆಂದು ಪ್ರಾರ್ಥಿಸಿ: ".... (ನಿಮ್ಮ ಹೆಸರು) ನಾನು ಬೆಳಕನ್ನು ಹರಡುತ್ತೇನೆ...ಎಲ್ಲಾ ಜನರು ಸಂತೋಷವಾಗಿರುವಿರಿ ಇಡೀ ಜಗವೇ ಸಂತೋಷವಾಗಿರುವುದು". ಎಂದು ಪ್ರಾರ್ಥಿಸಿ.
3. ಈ ಕಂಪ್ಯೂಟರ್ ಧ್ಯಾನ ಎಲ್ಲಾ ಧರ್ಮೀಯರನ್ನೂ ಗುರಿಯಾಗಿಟ್ಟುಕೊಂಡಿದೆ ಹಾಗೂ ಇದನ್ನು ನಾಸ್ತಿಕರು ಕೂಡ ಆಚರಿಸಬಹುದೆಂಬುದು ತಿಳಿದಿರಲಿ. ನೀವು ನಿಮಗೆ ಹೊಂದಿಕೊಳ್ಳುವಂತಹ ನುಡಿಗಟ್ಟುಗಳನ್ನು ಬಳಸಬಹುದು ಅಥವಾ ನಿಮ್ಮ ಭಾವಕ್ಕೆ ತಕ್ಕಂತೆ ಮಂತ್ರಗಳನ್ನು ಬದಲಿಸಬಹುದು. ಪರಮಾತ್ಮನನ್ನು ನಿಮ್ಮದೇ ಆದ ರೀತಿಯಲ್ಲಿ ವ್ಯಾಖಿಸಬಹುದು ಬ್ರಹ್ಮಾಂಡದ ಶಕ್ತಿ ಅಥವಾ ಜೀವ ಶಕ್ತಿಯ ರೂಪವೆಂದೂ ಸಂಬೋಧಿಸಬಹುದು. ಇದು ನಿಮಗೆ ಹೊಂದಿಕೊಳ್ಳದಿದ್ದರೆ ನೀವು ಮಂತ್ರದಲ್ಲಿನ "ಓಂ ದೇವರು" ನುಡಿಗಟ್ಟನ್ನು ಬಿಟ್ಟುಬಿಡಲೂಬಹುದು. ಆದ್ದರಿಂದ, ಈ ಲೇಖನದ ಉಳಿದ ಭಾಗವನ್ನು ನಿಮ್ಮ ಮನಕ್ಕನುಗುಣವಾಗಿ ಓದಬೇಕೆಂದು ಸೂಚಿಸಲಾಗುತ್ತದೆ.
4. ಪ್ರಬುದ್ಧರ (ಸಂತರು) ಅಥವಾ ದೇವರ (ಯಾವುದೇ ಉನ್ನತ ಘಟಕ) ದೋಂದಿಗೆ ಸಂಪರ್ಕ ಸಾಧಿಸಿ "... ಓಂ ಎಲ್ಲಾ ಸಾಧಕ ಚೇತನರೇ ಓಂ ದೇವರೇ ನಾನು ಸಾಗುವ ಹಾದಿಯಲ್ಲಿ ನನಗೆ ಸಹಾಯ ಮತ್ತು ಮಾರ್ಗದರ್ಶನ ನೀಡಬೇಕೆಂದು ಕೋರುತ್ತೇನೆ". ಎಂದು ಉಚ್ಚರಿಸಿ.
5. ಆಂತರಿಕ ಶಾಂತಿ ಪಡೆಯಿರಿ. : ". ನಾನು ಎಲ್ಲ ವಿಷಯಗಳನ್ನು ಅವುಗಳ ನಿಜಸ್ಥಿತಿಯಲ್ಲೇ ಸ್ವೀಕರಿಸುತ್ತೇನೆ . ನನ್ನ ಜೀವನದಲ್ಲಿ ಧನಾತ್ಮಕತೆಯಿಂದ ಮುನ್ನುಗ್ಗುತ್ತೇನೆ."ಎಂದು ಮನದಟ್ಟು ಮಾಡಿಕೊಳ್ಳಿ.
6. ನಿಮ್ಮ ಮನಸ್ಸನ್ನು ಶಾಂತಗೊಳಿಸಲು. ಒಂದು ನಿಮಿಷ "ಓಂ ಶಾಂತಿ ಓಂ ಶಾಂತಿ..": ಎಂಬ ಮಂತ್ರವನ್ನು (ಮನಸ್ಸಿನಲ್ಲಿ) ಅಥವಾ ಜೋರಾಗಿ ಹೇಳಿಕೊಳ್ಳಿ.
7. ಒತ್ತಡದ ಆಲೋಚನೆಗಳಿಂದ ದೂರವಿರಲು ಶಾಂತಿಯುತ ಆಲೋಚನೆಗಳತ್ತ ಪ್ರಯತ್ನಪೂರ್ವಕವಾಗಿ ಮನಸ್ಸನ್ನು ಕೇಂದ್ರೀಕರಿಸಿ.
8.ಯಾವಾಗಲೂ ಧನಾತ್ಮಕವಾಗಿಯೇ ಮಾತನಾಡಿ .
9. ನಿಧಾನಗತಿ:. ಅಂತಿಮವಾಗಿ, ಇದು ವಿಶ್ರಾಂತಿಯಲ್ಲಿ ನಿಧಾನಗತಿ ತುಂಬಾ ಮುಖ್ಯ . ಈ ಅಂತಿಮ ಹಂತದಲ್ಲಿ, ವಿಶ್ರಾಂತಿಯ ಚಿಕಿತ್ಸಾ ಪರಿಣಾಮಗಳು ಮೆಲ್ಲನೆ ತೆರೆದುಕೊಳ್ಳುತ್ತವೆ .
ಬಿಡುವಿಲ್ಲದೆ ಕೆಲಸದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಈ ವ್ಯಾಯಮ ಮಾಡಿದರೆ ನಿಮ್ಮ ಆರೋಗ್ಯ ಹೆಚ್ಚುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications