Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಇಲಿ ಕಚ್ಚಿದರೆ ಈ ಗಿಡವೇ ಮದ್ದು..! ಎಕ್ಕದ ಗಿಡದ ಲಾಭವೇನು ಗೊತ್ತಾ?
ನಾವು ಇತ್ತೀಚಿಗೆ ಇಲಿ ಜ್ವರದ ಕುರಿತು ಕೇಳಿದ್ದೇವೆ. ಇಲಿ ಜ್ವರ ಮಾರಾಣಾಂತಿಕವಾಗಿ ಕಾಡುತ್ತದೆ ಎಂಬುದು ಗೊತ್ತಿದೆ. ಹಲವು ಬಾರಿ ಭಾರತದಲ್ಲಿ ಇಲಿ ಜ್ವರದ ಭೀತಿ ಎದುರಾಗಿರುವುದು ಸಹ ನಾವು ನೋಡಿದ್ದೇವೆ. ಈಗಲೂ ಅಲ್ಲೊಂದು ಇಲ್ಲೊಂದು ಇಲಿ ಜ್ವರದ ಪ್ರಕರಣ ನೋಡುತ್ತಿರುತ್ತೇವೆ.
ಆದ್ರೆ ಈ ಇಲಿಗಳು ಕಚ್ಚಿದರೆ ಕೂಡ ಅನಾರೋಗ್ಯ ಕಾಡುತ್ತದೆ. ಇಲಿ ಜ್ವರ ವೈರಸ್ ಮೂಲಕ ಹರಡುತ್ತದೆ. ಆದ್ರೆ ಇಲಿಗಳು ಕಚ್ಚಿದರೆ ನಮಗೆ ಅನಾರೋಗ್ಯ ಉಂಟಾಗುತ್ತದೆ. ಇಲಿಗಳು ಅತ್ಯಂತ ಅಪಾಯಕಾರಿ ವೈರಸ್‌ಗಳ ಉಂಟುಮಾಡುತ್ತದೆ. ಇಲಿಗಳಿಂದ ಕಡಿತಕ್ಕೊಳಗಾದ ಅದೆಷ್ಟೊ ಮಂದಿ ಮೃತಪಟ್ಟಿರುವುದು ಸಹ ನಾವು ನೋಡಿದ್ದೇವೆ.

ಆದ್ರೆ ಈ ಇಲಿಗಳು ಕಚ್ಚಿದಾಗ ಅದಕ್ಕೆ ಚಿಕಿತ್ಸೆ ಯಾವುದು? ಇಲಿಗಳ ಕಡಿತದಿಂದ ದೂರ ಉಳಿಯುವುದು ಹೇಗೆ? ಇಲಿ ಕಚ್ಚಿದರೆ ಯಾವ ರೀತಿಯ ಲಕ್ಷಣ ಕಂಡುಬರಲಿದೆ. ಯಾವ ಚಿಕಿತ್ಸೆ ಮೂಲಕ ಇಲಿ ಕಚ್ಚಚುವಿಕೆಯ ಅಪಾಯ ಕಡಿಮೆ ಮಾಡಬಹುದು. ಆಯುರ್ವೇದದಲ್ಲಿ ಯಾವ ಚಿಕಿತ್ಸೆ ಹೇಳಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲಿಗೆ ಇಲಿ ಕಚ್ಚುವಾಗ ನಿಮಗೆ ಅದರ ಅರಿವಿಗೆ ಬರದೆ ಇರಬಹುದು. ಏಕೆಂದರೆ ಇಲಿಗಳು ಅತ್ಯಂತ ನಾಜೂಕಾಗಿ ಸಣ್ಣ ಇರುವೆಗಳಂತೆ ಕಚ್ಚುತ್ತವೆ. ಆದರೆ ಇರುವೆ ಕಚ್ಚಿದ ಒಂದೇ ದಿನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೀವು, ಅಂಗ ಊದಿಕೊಳ್ಳುವುದು, ಕೀಲು ನೋವು, ಜ್ವರ ಸಹ ಕಾಣಿಸಿಕೊಳ್ಳುತ್ತದೆ.
ಇಲಿ ಕಚ್ಚಿದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಇಲಿ ಕಚ್ಚಿದ 10 ದಿನಗಳ ಬಳಿಕ ಜ್ವರ ಕಾಣಿಸಿಕೊಳ್ಳಬಹುದು, ಗಾಯ ಒಣಗಿದ್ದರೂ ಜ್ವರ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ವೈದ್ಯರನ್ನು ಕಾಣುವುದು ಒಳ್ಳೆಯದು.
ಇಲಿ ಕಡಿತಕ್ಕೆ ಪ್ರಥಮ ಚಿಕಿತ್ಸೆ ಏನು?
ಇಲಿ ಕಡಿತದ ನಂತರ ಗಾಯವನ್ನು ಸ್ವಚ್ಛಗೊಳಿಸಿ, ಗಾಯವನ್ನು ಸೋಪಿನಿಂದ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ. ಈ ಗಾಯಕ್ಕೆ ಡ್ರೆಸ್ಸಿಂಗ್ ಮಾಡಿಕೊಳ್ಳಬೇಕು. ಮುಲಾಮುಗಳು, ಟಿಂಚರ್ ಯಾವುದಾದ್ರು ಇದ್ದರೆ ಹಚ್ಚಿಕೊಳ್ಳಬೇಕು. ನಂತರ
ಇಲಿಯಿಂದ ಸೋಂಕು ಹರಡುವ ಸಂಭವ ಹೆಚ್ಚಿರುವುದರಿಂದ ವೈದ್ಯರ ಭೇಟಿ ಮಾಡಬೇಕು. ಇಲಿ ಕಡಿತ ಪ್ರಾಣಕ್ಕೆ ಅಪಾಯವಾಗುತ್ತದೆ.
ಇಲಿ ಕಡಿತಕ್ಕೆ ಯಾವ ಗಿಡಮೂಲಿಕೆ ಔಷಧಿ?
ಎಲ್ಲಾ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇರುವಂತೆ ಈ ಇಲಿ ಕಡಿತಕ್ಕೂ ಗಿಡಮೂಲಿಕೆಯಲ್ಲಿ ಚಿಕಿತ್ಸೆ ಹೇಳಲಾಗಿದೆ. ಪರಿಹಾರವೇನು ನೋಡಿ
ಎಕ್ಕದ ಹಾಲು/ ಎಲೆ
ನೀವು ಎಕ್ಕದ ಗಿಡ ನೋಡಿರಬಹುದು. ಆ ಗಿಡದ ಎಲೆ ಮುರಿದರೆ ಬಿಳಿ ಬಣ್ಣದ ಹಾಲಿನ ರೀತಿಯ ಸೊನೆ ಬರುತ್ತದೆ. ಈ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಅರಿದುಕೊಂಡು ಅದನ್ನು ಇಲಿ ಗಾಯದ ಮೇಲೆ ಹಚ್ಚಿಕೊಂಡು ಬಟ್ಟೆ ಕಟ್ಟಬೇಕು. ಹೀಗೆ ಮಾಡೋದ್ರಿಂದ ಬ್ಯಾಕ್ಟೀರಿಯಾ ಹರಡದಂತೆ ತಡೆಯುತ್ತದೆ.
ಉಪ್ಪು ಮತ್ತು ಅರಶಿನ
ಇಲ್ಲಿ ಕಚ್ಚಿದ ಜಾಗಕ್ಕೆ ಉಪ್ಪು ಹಾಗೂ ಅರಶಿನ ಹಚ್ಚುವುದು ಉತ್ತಮವಂತೆ. ಅರಶಿಣ ಬ್ಯಾಕ್ಟೀರಿಯಾ ಹರಡದಂತೆ ಹಾಗೂ ನಂಜು ನಿವಾರಕವಾಗಿದ್ದು, ಪ್ರಥಮ ಚಿಕಿತ್ಸೆಯಾಗಿ ಇವುಗಳನ್ನು ಬಳಸಬಹುದು.
ಉತ್ತರಾಣಿ ಸೊಪ್ಪಿನ (Achyranthus aspera) ಐದು ಎಲೆಗಳನ್ನು ತಿನ್ನಬೇಕು, ಸೇವಿಸುವುದು ಇಲಿ ಕಡಿತದಿಂದ ಉಂಟಾಗುವ ವೈರಸ್ ಹರಡುವಿಕೆ ಹಾಗೂ ಅದರ ಪರಿಣಾಮವನ್ನು ಕಡಿಮೆ ಮಾಡಲಿದೆ. ಇದಿಷ್ಟೇ ಅಲ್ಲ ಈಶ್ವರಿ ಬೇರನ್ನು (Aristolochia indiaca) ನಿಂಬೆರಸದಲ್ಲಿ ತೇದು ಇಲಿ ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಬೇಕು. ಇದರಿಂದ ಕಚ್ಚಿದ ಜಾಗ ಬೇಗ ವಾಸಿಯಾಗುವುದಲ್ಲದೆ ನೋವು ಸಹ ನಿವಾರಣೆಯಾಗಲಿದೆ.
ಆದ್ರೆ ಇದೆಲ್ಲದಕ್ಕಿಂತಲೂ ನೀವು ವೈದ್ಯರ ಭೇಟಿ ಮಾಡುವುದೇ ಉತ್ತಮವಾದ ಕೆಲಸವಾಗುತ್ತದೆ. ಈ ಮೇಲಿನ ಎಲ್ಲಾ ಮಾದರಿಯೂ ಪ್ರಥಮ ಚಿಕಿತ್ಸೆಯಾಗಿ ಮಾತ್ರ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

