Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೃದಯ ಸಮಸ್ಯೆ ಬಾರದಂತೆ ತಡೆಗಟ್ಟಲು ಪಾಲಿಸಬೇಕಾದ 6 ಟಿಪ್ಸ್
ಸೆಪ್ಟೆಂಬರ್ 29 ವಿಶ್ವ ಹೃದಯ ಆರೋಗ್ಯ ದಿನ. ನಮ್ಮ ಹೃದಯವನ್ನು ಜೋಪಾನ ಮಾಡಬೇಕೆಂದರೆ ಮೊದಲಿಗೆ ನಾವು ಮಾಡಬೇಕಾದ ಕಾರ್ಯ ತಿನ್ನುವ ಆಹಾರದ ಕಡೆಗೆ ಗಮನ ನೀಡಬೇಕು. ನಿಮ್ಮ ಆಹಾರಶೈಲಿ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ.
ಈ ಲೇಖನದಲ್ಲಿ ಹೃದಯ ಆರೋಗ್ಯವಾಗಿರಬೇಕೆಂದರೆ ನಿಮ್ಮ ಆಹಾರಶೈಲಿ ಹೇಗಿರಬೇಕೆಂಬ 8 ಟಿಪ್ಸ್ ನೀಡಿದ್ದೇವೆ. ನೀವು ಈ ಸಲಹೆಯನ್ನು ಪಾಲಿಸಿದ್ದೇ ಆದರೆ ಹೃದಯಾಘಾತದ ಅಪಾಯ, ಮತ್ತಿತರ ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು ನೋಡಿ:

1. ನೀವು ತಿನ್ನುವ ಆಹಾರದ ಪ್ರಮಾಣದ ಮೇಲೆ ಗಮನವಿರಲಿ
ನೀವು ಎಷ್ಟು ತಿನ್ನುತ್ತೀರ ಎನ್ನುವುದು ಕೂಡ ಮುಖ್ಯವಾದ ಅಂಶವಾಗಿದೆ. ನೀವು ಮಿತಿಯಲ್ಲಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುವುದು ಹಾಗೂ ಯಾವುದೇ ಕೊಲೆಸ್ಟ್ರಾಲ್ ಮುಂತಾದ ಸಮಸ್ಯೆ ಕಾಡುವುದಿಲ್ಲ. ಪ್ಲೇಟ್ ತುಂಬಾ ಹಾಕಿ ತಿನ್ನುವ ಅಭ್ಯಾಸ ನಿಮಗಿದ್ದರೆ ನೀವು ಚಿಕ್ಕ ಪ್ಲೇಟ್ ಬಳಸಿ ಆಹಾರ ತೆಗೆದುಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಿ.
ಈ ಟೆಕ್ನಿಕ್ ಬಳಸಿದರೆ ನಿಮ್ಮ ಸೊಂಟದ ಗಾತ್ರದ ಹೆಚ್ಚಾಗುವುದನ್ನು ತಡೆಯಬಹುದು ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

2. ನಿಮ್ಮ ಪ್ಲೇಟ್‌ನಲ್ಲಿ ತರಕಾರಿ ಹಾಗೂ ಹಣ್ಣುಗಳು ಅಧಿಕವಿರಲಿ
ಫಾಸ್ಟ್‌ಫುಡ್ಸ್ ನಾಲಗೆಗೆ ಮಾತ್ರ ರುಚಿ, ಆರೋಗ್ಯಕ್ಕೆ ಒಳ್ಳೆಯದಲ್ಲ, ನಿಮ್ಮ ಪ್ಲೇಟ್‌ನಲ್ಲಿ ಹಣ್ಣು ಹಾಗೂ ತರಕಾರಿಗಳು ಅಧಿಕವಿರಲಿ. ನೀವು ತಿನ್ನುವ ಆಹಾರದಲ್ಲಿ ಕಾರ್ಬ್ಸ್ ಮಿತಿಯಲ್ಲಿ ಇರಲಿ, ಆರೋಗ್ಯಕರ ಕೊಬ್ಬಿನಂಶವಿರಲಿ, ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.
ಸಕ್ಕರೆ ಹಾಕಿ ಒಣಗಿಸಿರುವ ಹಣ್ಣುಗಳನ್ನು ತಿನ್ನಲು ಹೋಗಬೇಡಿ.

3. ಅನಾರೋಗ್ಯಕರ ಕೊಬ್ಬಿನಂಶ ಕಡಿಮೆ ಮಾಡಿ
ನೀವು ತಿನ್ನುವ ಆಹಾರದಲ್ಲಿ 5-6% ಸ್ಯಾಚುರೇಟಡ್ ಕೊಬ್ಬಿನಂಶವಿದ್ದರೆ ತೊಂದರೆಯಿಲ್ಲ, ಆದರೆ 11ರಿಂದ 13ಗ್ರಾಂನಷ್ಟು ಸ್ಯಾಚುರೇಟಡ್ ಕೊಬ್ಬಿನಂಶವಿರುವ ಆಹಾರ ಬಳಕೆ ಕಡಿಮೆ ಮಾಡಿ. ನೀವು ದಿನದಲ್ಲಿ 2000ಕ್ಕಿಂತ ಅಧಿಕ ಕ್ಯಾಲೋರಿ ಇರುವ ಆಹಾರ ಸೇವಿಸಲು ಹೀಗಬೇಡಿ. ಇನ್ನು ಟ್ರಾನ್ಸ್‌ಫ್ಯಾಟ್ ಆಹಾರ ಬಳಕೆ ಮಾಡದಿರುವುದು ಒಳ್ಳೆಯದು.
ಯಾವ ಕೊಬ್ಬಿನಂಶ ಒಳ್ಳೆಯದು: ಆಲೀವ್ ಎಣ್ಣೆ, ನಟ್ಸ್, ಬೀಜಗಳು, ಬೆಣ್ನೆ ಹಣ್ಣು
ಯಾವ ಕೊಬ್ಬಿನಂಶ ಮಿತಿಯಲ್ಲಿ ತಿನ್ನಿ: ಬೆಣ್ಣೆ, ತುಪ್ಪ, ಕೋಕಾ ಬಟರ್, ತೆಂಗಿನೆಣ್ಣೆ

4. ಕಡಿಮೆ ಕೊಬ್ಬು ಅಧಿಕ ಪ್ರೊಟೀನ್ ಇರುವ ಆಹಾರ ಸೇವಿಸಿ
ಕೊಬ್ಬಿನಂಶ ಕಡಿಮೆ ಇರುವ ಮಾಂಸ, ಮೀನು, ಕಡಿಮೆ ಕೊಬ್ಬಿನಂಶವಿರುವ ಹಾಲಿನ ಪದಾರ್ಥಗಳು, ಮೊಟ್ಟೆ ಇವುಗಳಲ್ಲಿ ಪ್ರೊಟೀನ್ ಅಧಿವಿರುತ್ತದೆ. ಇದನ್ನು ಆಹಾರದಲ್ಲಿ ಬಳಸಿ. ಅಲ್ಲದೆ ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೂತಾಯಿ, ಬಂಗುಡೆ, ಅಗಸೆ ಬೀಜ, ವಾಲ್‌ನಟ್, ಸೋಯಾ ಬೀನ್ ಇವುಗಳನ್ನು ಬಳಸಿ.

5.ಸೋಡಿಯಂ ಕಡಿಮೆ ಬಳಸಿ
ಅಧಿಕ ಉಪ್ಪಿನಂಶವಿರುವ ಆಹಾರ ಸೇವಿಸಿದರೆ ರಕ್ತದೊತ್ತಡ ಅಧಿಕವಾಗುವುದು. ಆದ್ದರಿಂದ ಉಪ್ಪಿನಂಶ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ದಿನದಲ್ಲಿ ಒಬ್ಬ ವ್ಯಕ್ತಿ 2300 ಮಿಗ್ರಾಂನಷ್ಟು ಸೋಡಿಯಂ ತೆಗೆದುಕೊಳ್ಳಬಹುದು.

6.ನಿಮ್ಮ ಮೆನು ಹೇಗಿರಬೇಕೆಂಬ ಡಯಟ್ ಚಾರ್ಟ್ ಮಾಡಿ
ನೀವು ದಿನದಲ್ಲಿ ಯಾವ ಆಹಾರ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು, ಯಾವ ಆಹಾರ ಸೇವಿಸಬಾರದು ಅಥವಾ ಸೇವಿಸುವುದನ್ನು ಕಡಿಮೆ ಮಾಡಬೇಕೆಂಬ ಡಯಟ್ ಚಾರ್ಟ್ ಮಾಡಿ. ನಂತರ ತಪ್ಪದೆ ಪಾಲಿಸಿ. ಕೆಲವೊಂದು ದಿನ ನಿಮಗೆ ಇಷ್ಟದ ಆಹಾರ ಸೇವಿಸಿದರೆ ತೊಂದರೆಯಿಲ್ಲ, ಆದರೆ ಹೆಚ್ಚಿನ ದಿನಗಳಲ್ಲಿ ನಿಮ್ಮ ಡಯಟ್ ಚಾರ್ಟ್ ಫಾಲೋ ,ಆಡಿ.
ಹೀಗೆ ಮಾಡಿದ್ದೇ ಆದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ, ಮೈ ತೂಕ ಹೆಚ್ಚಾಗುತ್ತದೆ ಎಂಬ ಚಿಂತೆ ಇರುವುದಿಲ್ಲ, ಹೃದಯದ ಬಡಿತ ಕೂಡ ಆರೋಗ್ಯಕರವಾಗಿರುತ್ತದೆ.



Click it and Unblock the Notifications
